ಕುಂಭ ರಾಶಿ ಭವಿಷ್ಯ ಆಗಸ್ಟ್ 15: ಇಂದು ನಿಮಗೆ ಉತ್ತಮ ದಿನ, ಹಿಂದೆ ಅಂದುಕೊಂಡದ್ದನ್ನು ಇಂದು ಮಾಡಿ-aquarius daily horoscope today august 15 2024 predictions kumbha rashi dina bhavishya love relations money smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿ ಭವಿಷ್ಯ ಆಗಸ್ಟ್ 15: ಇಂದು ನಿಮಗೆ ಉತ್ತಮ ದಿನ, ಹಿಂದೆ ಅಂದುಕೊಂಡದ್ದನ್ನು ಇಂದು ಮಾಡಿ

ಕುಂಭ ರಾಶಿ ಭವಿಷ್ಯ ಆಗಸ್ಟ್ 15: ಇಂದು ನಿಮಗೆ ಉತ್ತಮ ದಿನ, ಹಿಂದೆ ಅಂದುಕೊಂಡದ್ದನ್ನು ಇಂದು ಮಾಡಿ

Aquarius Daily Horoscope August 15, 2024: ರಾಶಿಚಕ್ರದ 11ನೇ ರಾಶಿಚಕ್ರ ಚಿಹ್ನೆ ಕುಂಭ. ಜನನದ ಸಮಯದಲ್ಲಿ ಚಂದ್ರನು ಕುಂಭ ರಾಶಿಯಲ್ಲಿ ಸಾಗುತ್ತಿರುವ ಜನರು ಕುಂಭ ರಾಶಿಯವರು. ಆಗಸ್ಟ್‌ 15ರ ಕುಂಭ ರಾಶಿ ಭವಿಷ್ಯದ ಪ್ರಕಾರ, ಸಂಗಾತಿಯ ಜೊತೆ ಅನಗತ್ಯ ವಿಚಾರಗಳಿಗೆ ವಾದ ಮಾಡುವುದನ್ನು ತಪ್ಪಿಸಿ. ಇಂದು ನಿಮಗೆ ಉತ್ತಮ ದಿನವಾಗಿದೆ.

ಕುಂಭರಾಶಿ ದಿನ ಭವಿಷ್ಯ ಆಗಸ್ಟ್ 15
ಕುಂಭರಾಶಿ ದಿನ ಭವಿಷ್ಯ ಆಗಸ್ಟ್ 15

ಕುಂಭ ರಾಶಿಯವರ ಇಂದಿನ (ಆಗಸ್ಟ್ 15, ಗುರುವಾರ) ದಿನಭವಿಷ್ಯದಲ್ಲಿ ಯಾವುದೇ ಪ್ರಮುಖ ಸಮಸ್ಯೆ ನಿಮ್ಮ ಪ್ರಣಯ ಸಂಬಂಧವನ್ನು ಹಾಳುಮಾಡಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ಬಯಕೆ ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಣ ಮತ್ತು ಆರೋಗ್ಯದ ವಿಷಯದಲ್ಲಿ ನೀವು ಉತ್ತಮ ದಿನವನ್ನು ಹೊಂದಿರುತ್ತೀರಿ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕುಂಭ ರಾಶಿಯ ಪ್ರೇಮ ಜಾತಕ (Aquarius Love Horoscope) ಇಂದು ನಿಮ್ಮ ಪ್ರೇಮ ಜೀವನ ಉತ್ತಮವಾಗಿರಲಿದೆ. ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಕುಂಭ ರಾಶಿಯವರು ಸಾಮಾನ್ಯವಾಗಿ ಉತ್ತಮ ಸಂಚಹನ ಕೌಶಲ್ಯ ಹೊಂದಿರುತ್ತಾರೆ. ನಿಮ್ಮ ಭಾವನಾತ್ಮಕ ದಿನವನ್ನು ಬಲಪಡಿಸಲು ಇಂದು ಒಂದು ಉತ್ತಮ ದಿನವಾಗಿದೆ. ಒಟ್ಟಿನಲ್ಲಿ ಇಂದು ನಿಮಗೆ ನಿಮ್ಮ ಸಂಗಾತಿ ಜೊತೆ ಉತ್ತಮ ಸಮಯ ಕಳೆಯುವ ಅವಕಾಶ ಇದೆ.

ಕುಂಭ ರಾಶಿ ವೃತ್ತಿ ಭವಿಷ್ಯ (Aquarius Professional Horoscope) ಹೊಸ ಯೋಜನೆ ಹಾಗೂ ಅವಕಾಶ ನಿಮ್ಮದಾಗಲಿದೆ. ಇಂದು ನಿಮ್ಮ ವೃತ್ತಿ ಜೀವನದಲ್ಲೂ ಉತ್ತಮ ಬೆಳವಣಿಗೆಯೇ ಆಗುತ್ತದೆ. ನಿಮ್ಮ ಜೀವನದಲ್ಲಿ ಸಾಮಾಜಿಕ ಸಂಬಂಧ ತುಂಬಾ ಮುಖ್ಯ ಆದ ಕಾರಣ ಹೆಚ್ಚಿನ ಜನರ ಜೊತೆ ಮಾತನಾಡಿ. ನಿಮ್ಮ ಕೌಶಲ್ಯಗಳನ್ನು ಯಾವಾಗಲು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿ.

ಕುಂಭ ರಾಶಿ ಆರ್ಥಿಕ ಭವಿಷ್ಯ (Aquarius Money Horoscope) ಇಂದು ನಿಮಗೆ ಉತ್ತಮ ದಿನ. ನಿಮ್ಮ ಆದಾಯ ಹೆಚ್ಚಬಹುದು. ನಿಮಗೆ ಇನ್ನಷ್ಟು ಹಣ ಮಾಡುವ ಮಾರ್ಗವೊಂದು ತಿಳಿಯುವ ಸಾಧ್ಯತೆ ಇದೆ. ದೀರ್ಘ ಯೋಜನೆಗಳಲ್ಲಿ ಹಣವನ್ನು ಇನ್ವೆಸ್ಟ್‌ ಮಾಡಿ. ಉತ್ತಮ ಫಲ ದೊರೆಯಲಿದೆ. ಹಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾ ಇನ್ನೊಬ್ಬರೊಂದಿಗೆ ಮಾತನಾಡಿ ಅವರ ನಿರ್ಧಾರವನ್ನೂ ತಿಳಿದುಕೊಳ್ಳಿ. ಅವರ ಅಭಿಪ್ರಾಯದ ಮೇರೆಗೆ ನೀವು ನಿರ್ಧರಿಸಿ.

ಕುಂಭ ರಾಶಿ ಆರೋಗ್ಯ ಜಾತಕ (Aquarius Health Horoscope) ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಿದೆ. ಇಂದು ಆರೋಗ್ಯದಲ್ಲಿ ಅಷ್ಟೇನೂ ಸಮಸ್ಯೆ ಕಾಣಿಸುವುದಿಲ್ಲ. ಆದರೆ ನಿತ್ಯ ಉತ್ತಮ ಆಹಾರ ಹಾಗೂ ನೀರು ಸೇವಿಸಿ. ನಿಯಮಿತ ವ್ಯಾಯಾಮ ಮಾಡಿ. ದೂರ ಪ್ರಯಾಣ ಮಾಡುವಾಗ ಎಚ್ಚರವಿರಲಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ ಎನ್ನುವುದನ್ನು ಮರೆಯದಿರಿ.

ಕುಂಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕುಂಭ ರಾಶಿಯ ಅಧಿಪತಿ: ಶನಿ, ಕುಂಭ ರಾಶಿಯವರಿಗೆ ಶುಭ ದಿನಾಂಕಗಳು: 2, 3, 7 ಮತ್ತು 9. ಕುಂಭ ರಾಶಿಯವರಿಗೆ ಶುಭ ವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ, ಕುಂಭ ರಾಶಿಯವರಿಗೆ ಶುಭ ವರ್ಣ: ಹಿತ್ತಾಳೆ, ಹಸಿರು, ನೀಲಿ. ಕುಂಭ ರಾಶಿಯವರಿಗೆ ಅಶುಭ ವರ್ಣ: ಹಳದಿ, ಕ್ರೀಂ, ಬಿಳಿ ಮತ್ತು ಕೆಂಪು, ಕುಂಭ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಕುಂಭ ರಾಶಿಯವರಿಗೆ ಶುಭ ತಿಂಗಳು: ಜೂನ್ 15 ರಿಂದ ಜುಲೈ 14 ಮತ್ತು ಡಿಸೆಂಬರ್ 15ರಿಂದ ಜನವರಿ14. ಕುಂಭ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ, ಕುಂಭ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿಗಳು: ಕುಂಭ, ವೃಷಭ ಮತ್ತು ಕನ್ಯಾ. ಕುಂಭ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ ಮತ್ತು ಸಿಂಹ.

ಕುಂಭ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ನವನಾಗ ಸ್ತೋತ್ರ: ಪ್ರತಿದಿನ ನವನಾಗ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕ ದೂರವಾಗುತ್ತದೆ.

2) ಈ ದಾನಗಳಿಂದ ಶುಭ ಫಲ: ಮಿಶ್ರವರ್ಣದ ಬಟ್ಟೆ ಮತ್ತು ಹುರುಳಿ ದಾನ ನೀಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ವಿರೋಧಿಗಳ ಹಾವಳಿ ಕಡಿಮೆಯಾಗಲಿದೆ. ಮನದ ಆತಂಕ ದೂರವಾಗಲಿದೆ. ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣದಿಂದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸುವುದು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.