ಕುಂಭರಾಶಿ ಭವಿಷ್ಯ ಆಗಸ್ಟ್ 9: ಕುಂಭರಾಶಿಯವರಿಗಿಂದು ಮಿಶ್ರಫಲ, ಆರೋಗ್ಯದ ಬಗ್ಗೆ ಗಮನವಿರಲಿ-aquarius daily horoscope today august 9 2024 predictions kumbha rashi dina bhavishya love relations money horoscope ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭರಾಶಿ ಭವಿಷ್ಯ ಆಗಸ್ಟ್ 9: ಕುಂಭರಾಶಿಯವರಿಗಿಂದು ಮಿಶ್ರಫಲ, ಆರೋಗ್ಯದ ಬಗ್ಗೆ ಗಮನವಿರಲಿ

ಕುಂಭರಾಶಿ ಭವಿಷ್ಯ ಆಗಸ್ಟ್ 9: ಕುಂಭರಾಶಿಯವರಿಗಿಂದು ಮಿಶ್ರಫಲ, ಆರೋಗ್ಯದ ಬಗ್ಗೆ ಗಮನವಿರಲಿ

Aquarius Daily Horoscope August 9, 2024: ರಾಶಿಚಕ್ರದ 11ನೇ ರಾಶಿಚಕ್ರ ಚಿಹ್ನೆಕುಂಭ. ಜನನದ ಸಮಯದಲ್ಲಿ ಚಂದ್ರನು ಕುಂಭ ರಾಶಿಯಲ್ಲಿ ಸಾಗುತ್ತಿರುವ ಜನರು ಕುಂಭ ರಾಶಿಯವರು. ಆಗಸ್ಟ್‌ 7ರ ಕುಂಭ ರಾಶಿಭವಿಷ್ಯದ ಪ್ರಕಾರ, ಈ ದಿನ ನಿಮಗೆ ಮಿಶ್ರಫಲ ದೊರೆಯಲಿದೆ. ಆರೋಗ್ಯದ ಬಗ್ಗೆ ಗಮನಕೊಡಬೇಕು.

ಕುಂಭ ರಾಶಿ ಭವಿಷ್ಯ ಆಗಸ್ಟ್ 9: ಈ ದಿನ ನಿಮಗೆ ಮಿಶ್ರಫಲ
ಕುಂಭ ರಾಶಿ ಭವಿಷ್ಯ ಆಗಸ್ಟ್ 9: ಈ ದಿನ ನಿಮಗೆ ಮಿಶ್ರಫಲ

ಕುಂಭರಾಶಿಯವರ ಇಂದಿನ (ಆಗಸ್ಟ್ 9, ಶುಕ್ರವಾರ) ದಿನಭವಿಷ್ಯದ ಪ್ರಕಾರ ಯಾವುದೇ ಪ್ರಮುಖ ಸಮಸ್ಯೆ ನಿಮ್ಮ ಪ್ರಣಯ ಸಂಬಂಧವನ್ನು ಹಾಳುಮಾಡಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ಬಯಕೆ ನಿಮ್ಮ ವೃತ್ತಿಜೀವನದಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಣಮತ್ತು ಆರೋಗ್ಯದ ವಿಷಯದಲ್ಲಿ ನೀವು ಉತ್ತಮ ದಿನವನ್ನುಹೊಂದಿರುತ್ತೀರಿ. ಅಂದ ಹಾಗೆ, ಎಲ್ಲರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕುಂಭ ರಾಶಿಯ ಪ್ರೇಮ ಜಾತಕ (Aquarius Love Horoscope)

ನಿಮ್ಮ ಲವ್ ಲೈಪ್ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಂದಿನ ದಿನ ನಿಮ್ಮ ಸಂಗಾತಿಯೊಡನೆ ಹೆಚ್ಚಿನ ಸಮಯ ಕಳೆಯಿರಿ. ಇಂದಿನ ದಿನ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಸಂಗಾತಿಯ ಮೇಲೆ ರೇಗಾಡುವುದನ್ನು ಮಾಡಬೇಡಿ. ಈ ದಿನ ಶುಭದಾಯಕವಾಗಿರಲಿದೆ.

ಕುಂಭ ರಾಶಿ ವೃತ್ತಿ ಭವಿಷ್ಯ (Aquarius Professional Horoscope)

ನಿಮ್ಮ ಕೆಲಸವನ್ನು ಪ್ರೀತಿಸಿ ಪ್ರಾಮಾಣಿಕತೆಯಿಂದ ಮುಂದುವರೆಯಿರಿ. ಆಗ ಮಾತ್ರ ನೀವು ಉತ್ತಮ ಫಲಿತಾಂಶವನ್ನು ಕಾಣಲು ಸಾಧ್ಯ. ಬೇರೆ ಬೇರೆ ಫ್ರೀಲಾನಿಂಗ್ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಅವರ ಕೆಲಸಗಳನ್ನು ಮಾಡಿಕೊಡುವಾಗ ನೀವು ನಿಮ್ಮ ಸೃಜನಶೀಲತೆಯನ್ನು ಮೆರೆಯುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತೀರಿ. ನಿಮ್ಮ ಕ್ಲೈಂಟ್ಗಳ ಮಸ್ಯೆಯನ್ನು ಸಮಾಧಾನದಿಂದ ಪರಿಹರಿಸಿ. ಮಧ್ಯಾಹ್ನದ ನಂತರ ಉದ್ಯಮಿಗಳಿಗೆ ಉತ್ತಮ ಪಾಲುದಾರರು ಸಿಗುವ ಸಾಧ್ಯತೆ ಇದೆ.

ಕುಂಭ ರಾಶಿ ಆರ್ಥಿಕ ಭವಿಷ್ಯ (Aquarius Money Horoscope)

ಇಂದು ಹಣ ನಿಮ್ಮನ್ನು ಹುಡುಕಿ ಬರುತ್ತದೆ. ಲಕ್ಷ್ಮೀದೇವಿ ನಿಮ್ಮ ಮನೆಯಲ್ಲೇ ನೆಲೆಸಿರುತ್ತಾಳೆ ಎಂದರೂ ತಪ್ಪಾಗದು. ಹೀಗೆ ಸಂಪತ್ತು ನಿಮ್ಮನ್ನು ಹುಡುಕಿ ಬರುವುದರಿಂದ ನಿಮ್ಮ ಆಯ್ಕೆಯ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ. ಸ್ಟಾಕ್ ಮಾರುಕಟ್ಟೆಯಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದರೆ ಬೇರೆ ಆರ್ಥಿಕ ಭರವಸೆಗಳು ಇರಲಿದೆ. ಒಡಹುಟ್ಟಿದವರೊಂದಿಗೆ ವಿತ್ತೀಯ ಅಥವಾ ಆಸ್ತಿ-ಸಂಬಂಧಿತ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಮಾತನಾಡಲಿದ್ದೀರಿ.

ಕುಂಭ ರಾಶಿ ಆರೋಗ್ಯ ಜಾತಕ (Aquarius Health Horoscope)

ಯಾವುದೇ ಪ್ರಮುಖ ವೈದ್ಯಕೀಯ ಸಮಸ್ಯೆಯು ನಿಮ್ಮ ದಿನನಿತ್ಯದ ಜೀವನವನ್ನು ಅಡ್ಡಿಪಡಿಸುವುದಿಲ್ಲ. ಜಾರು ಪ್ರದೇಶಗಳಲ್ಲಿ ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಬಳಸುವಾಗ ಜಾಗರೂಕರಾಗಿರಿ. ಕೆಲವು ಮಹಿಳೆಯರಿಗೆ ಉಸಿರಾಟದ ತೊಂದರೆಗಳು ಉಂಟಾಗಬಹುದು ಮತ್ತು ಇದಕ್ಕೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಆರೋಗ್ಯಕರವಾಗಿರಲು ಲಘು ವ್ಯಾಯಾಮ ಒಳ್ಳೆಯದು. ಎಣ್ಣೆಯುಕ್ತ ಪದಾರ್ಥಗಳನ್ನು ಕಡಿಮೆ ಮಾಡಿ. ತರಕಾರಿಗಳನ್ನು ಸೇವಿಸಿ.

ಕುಂಭರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕುಂಭರಾಶಿಯ ಅಧಿಪತಿ: ಶನಿ, ಕುಂಭ ರಾಶಿಯವರಿಗೆಶುಭ ದಿನಾಂಕಗಳು: 2, 3, 7 ಮತ್ತು 9. ಕುಂಭ ರಾಶಿಯವರಿಗೆ ಶುಭವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ, ಕುಂಭ ರಾಶಿಯವರಿಗೆ ಶುಭವರ್ಣ: ಹಿತ್ತಾಳೆ, ಹಸಿರು, ನೀಲಿ. ಕುಂಭ ರಾಶಿಯವರಿಗೆ ಅಶುಭವರ್ಣ: ಹಳದಿ, ಕ್ರೀಂ, ಬಿಳಿ ಮತ್ತು ಕೆಂಪು, ಕುಂಭ ರಾಶಿಯವರಿಗೆ ಶುಭ ದಿಕ್ಕು: ಉತ್ತರಮತ್ತು ಪಶ್ಚಿಮ, ಕುಂಭ ರಾಶಿಯವರಿಗೆ ಶುಭತಿಂಗಳು: ಜೂನ್ 15 ರಿಂದ ಜುಲೈ 14 ಮತ್ತುಡಿಸೆಂಬರ್ 15ರಿಂದ ಜನವರಿ14. ಕುಂಭರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ, ಕುಂಭ ರಾಶಿಯವರಿಗೆ ಹೊಂದಾಣಿಕೆಇರುವ ರಾಶಿಗಳು: ಕುಂಭ, ವೃಷಭ ಮತ್ತು ಕನ್ಯಾ. ಕುಂಭ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ ಮತ್ತು ಸಿಂಹ.

ಕುಂಭರಾಶಿಯವರಿಗೆ ಶುಭ ಫಲಕ್ಕಾಗಿ ಸರಳಪರಿಹಾರಗಳು

1) ನವನಾಗಸ್ತೋತ್ರ: ಪ್ರತಿದಿನ ನವನಾಗ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಣಕಾಸಿನತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕ ದೂರವಾಗುತ್ತದೆ.

2) ಈ ದಾನಗಳಿಂದ ಶುಭ ಫಲ: ಮಿಶ್ರವರ್ಣದಬಟ್ಟೆ ಮತ್ತು ಹುರುಳಿ ದಾನ ನೀಡುವುದರಿಂದ ಆರೋಗ್ಯದಲ್ಲಿಸ್ಥಿರತೆ ಲಭಿಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ವಿರೋಧಿಗಳಹಾವಳಿ ಕಡಿಮೆಯಾಗಲಿದೆ. ಮನದ ಆತಂಕ ದೂರವಾಗಲಿದೆ. ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣದಿಂದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.

4) ಈಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ಬಿಳಿ ಬಣ್ಣದ ಕರವಸ್ತ್ರಬಳಸುವುದು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆಪಡೆಯಬೇಕು. ಇದು ನಂಬಿಕೆ ಮತ್ತುಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.