ಕುಂಭ ರಾಶಿ ಭವಿಷ್ಯ ಆಗಸ್ಟ್ 13: ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ಅನಿರೀಕ್ಷಿತ ಧನಲಾಭ ಸಾಧ್ಯತೆ-aquarius sign daily horoscope 13th august 2024 dhanassu rashi finance love health job horoscope for today smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿ ಭವಿಷ್ಯ ಆಗಸ್ಟ್ 13: ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ಅನಿರೀಕ್ಷಿತ ಧನಲಾಭ ಸಾಧ್ಯತೆ

ಕುಂಭ ರಾಶಿ ಭವಿಷ್ಯ ಆಗಸ್ಟ್ 13: ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ಅನಿರೀಕ್ಷಿತ ಧನಲಾಭ ಸಾಧ್ಯತೆ

Aquarius Daily Horoscope August 13, 2024: ರಾಶಿಚಕ್ರದ 11ನೇ ರಾಶಿಚಕ್ರ ಚಿಹ್ನೆ ಕುಂಭ. ಜನನದ ಸಮಯದಲ್ಲಿ ಚಂದ್ರನು ಕುಂಭ ರಾಶಿಯಲ್ಲಿ ಸಾಗುತ್ತಿರುವ ಜನರು ಕುಂಭ ರಾಶಿಯವರು. ಆಗಸ್ಟ್‌ 13ರ ಕುಂಭ ರಾಶಿ ಭವಿಷ್ಯದ ಪ್ರಕಾರ, ನೀವು ನವಗ್ರಹ ಸ್ತೋತ್ರ ಪಠಿಸಬೇಕು.

ಕುಂಭ ರಾಶಿ ಭವಿಷ್ಯ ಆಗಸ್ಟ್ 13
ಕುಂಭ ರಾಶಿ ಭವಿಷ್ಯ ಆಗಸ್ಟ್ 13 (Canva)

ಕುಂಭ ರಾಶಿಯವರ ಇಂದಿನ (ಆಗಸ್ಟ್ 13, ಮಂಗಳವಾರ) ದಿನಭವಿಷ್ಯದಲ್ಲಿ ಯಾವುದೇ ಪ್ರಮುಖ ಸಮಸ್ಯೆ ನಿಮ್ಮ ಪ್ರಣಯ ಸಂಬಂಧವನ್ನು ಹಾಳುಮಾಡಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ಬಯಕೆ ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಣ ಮತ್ತು ಆರೋಗ್ಯದ ವಿಷಯದಲ್ಲಿ ನೀವು ಉತ್ತಮ ದಿನವನ್ನು ಹೊಂದಿರುತ್ತೀರಿ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕುಂಭ ರಾಶಿಯ ಪ್ರೇಮ ಜಾತಕ (Aquarius Love Horoscope):
ಇಂದು ನಿಮ್ಮ ಪ್ರೀತಿಗೊಂದು ಗಾಢವಾದ ಸಂಬಂಧ ಬೆಳೆಸಿಕೊಳ್ಳಲು ಉತ್ತಮ ದಿನ. ನೀವು ಒಂಟಿಯಾಗಿದ್ದರೆ ಇಂದು ಯಾರಾದರೂ ಒಬ್ಬರು ನಿಮ್ಮತ್ತ ಗಮನಹರಿಸಬಹುದು. ಆ ಕಾರಣಕ್ಕಾಗಿ ನೀವು ಮುಕ್ತವಾಗಿರಿ. ಸರಿಯಾದ ರೀತಿಯಲ್ಲಿ ಸಂವಹನ ಮಾಡಿ. ನೀವು ಈಗಾಗಲೇ ಯಾರನ್ನಾದರೂ ಪ್ರೀತಿಸುತ್ತ ಇದ್ದರೆ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂವಹನ ನಡೆಸುವ ಸಮಯ ಇದು. ಹಂಚಿಕೊಂಡ ಅನುಭವಗಳು ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ.

ಕುಂಭ ರಾಶಿ ವೃತ್ತಿ ಭವಿಷ್ಯ (Aquarius Professional Horoscope):

ಕುಂಭ ರಾಶಿಯವರು ಇಂದು ವೃತ್ತಿ ಪ್ರಗತಿಗೆ ಅನುಕೂಲಕರವಾಗಿದ್ದರೆ ಉತ್ತಮ. ನೀವು ಮೇಲಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಿದ್ದೀರಿ. ನಿಮ್ಮ ಕಠಿಣ ಪರಿಶ್ರಮವನ್ನು ಯಾರೋ ಒಬ್ಬರು ಗುರುತಿಸಿ ನಿಮ್ಮನ್ನು ಮೆಚ್ಚಿಕೊಳ್ಳಲಿದ್ದಾರೆ.ನಿಮ್ಮ ನವೀನ ಮತ್ತು ಸೃಜನಶೀಲ ವಿಧಾನವು ನಿಮ್ಮ ಸಹೋದ್ಯೋಗಿಗಳಿಂದ ಮೆಚ್ಚುಗೆ ಪಡೆಯಲಿದೆ. ಗಮನದಲ್ಲಿರಿ ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸಿ. ನಿಮ್ಮ ಪ್ರಯತ್ನವೇ ನಿಮಗೆ ನಿಮ್ಮ ವೃತ್ತಿಯಲ್ಲಿ ಯಶಸ್ಸನ್ನು ತಂದುಕೊಡುತ್ತದೆ. 

ಕುಂಭ ರಾಶಿ ಆರ್ಥಿಕ ಭವಿಷ್ಯ (Aquarius Money Horoscope):
ನೀವು ಅನಿರೀಕ್ಷಿತ ಲಾಭಗಳನ್ನು ಪಡೆಯಬಹುದು ಅಥವಾ ನಿಮಗೆ ಧನ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಆದಾಯವನ್ನು ಇನ್ನಷ್ಟು ಹೆಚ್ಚಿಸಲು ನೀವು ಹೊಸ ಮಾರ್ಗ ಕಂಡುಕೊಳ್ಳಲಿದ್ದೀರಿ. ಆದರೆ ಈ ಮಾರ್ಗ ಉತ್ತಮವಾಗಿರಲಿ. ವೀವೇಕಯುತವಾಗಿ ಖರ್ಚು ಮಾಡಿ. ನಿಮ್ಮ ಆದಾಯ ಎಷ್ಟಿದೆ ಎಂಬುದನ್ನು ಗಮನದಲ್ಲಿಡಿ. ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ದೀರ್ಘಾವಧಿಯ ಹಣಕಾಸು ಯೋಜನೆಯನ್ನು ಆರಂಭಿಸಿ. ಬೇಡವಾದ ವಸ್ತುಗಳ ಖರೀದಿಯನ್ನು ನಿಲ್ಲಿಸಿ.

ಕುಂಭ ರಾಶಿ ಆರೋಗ್ಯ ಜಾತಕ (Aquarius Health Horoscope):
ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ನಿಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆ, ಪೌಷ್ಟಿಕ ಆಹಾರ ಮತ್ತು ಸಾಕಷ್ಟು ವಿಶ್ರಾಂತಿಯ ಅವಶ್ಯಕತೆ ಇದೆ. ಅತಿಯಾದ ಒತ್ತಡವನ್ನು ತಪ್ಪಿಸಿ. ಯಾವುದೇ ಸಣ್ಣ ನೋವು ಕಾಣಿಸಿಕೊಂಡರೂ ನಿರ್ಲಕ್ಷಿಸಬೇಡಿ. ಇಂದು ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ ಹೊಸ ಅವಕಾಶಗಳನ್ನು ಪಡೆಯುತ್ತೀರಿ. 

ಕುಂಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕುಂಭ ರಾಶಿಯ ಅಧಿಪತಿ: ಶನಿ, ಕುಂಭ ರಾಶಿಯವರಿಗೆ ಶುಭ ದಿನಾಂಕಗಳು: 2, 3, 7 ಮತ್ತು 9. ಕುಂಭ ರಾಶಿಯವರಿಗೆ ಶುಭ ವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ, ಕುಂಭ ರಾಶಿಯವರಿಗೆ ಶುಭ ವರ್ಣ: ಹಿತ್ತಾಳೆ, ಹಸಿರು, ನೀಲಿ. ಕುಂಭ ರಾಶಿಯವರಿಗೆ ಅಶುಭ ವರ್ಣ: ಹಳದಿ, ಕ್ರೀಂ, ಬಿಳಿ ಮತ್ತು ಕೆಂಪು, ಕುಂಭ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಕುಂಭ ರಾಶಿಯವರಿಗೆ ಶುಭ ತಿಂಗಳು: ಜೂನ್ 15 ರಿಂದ ಜುಲೈ 14 ಮತ್ತು ಡಿಸೆಂಬರ್ 15ರಿಂದ ಜನವರಿ14. ಕುಂಭ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ, ಕುಂಭ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿಗಳು: ಕುಂಭ, ವೃಷಭ ಮತ್ತು ಕನ್ಯಾ. ಕುಂಭ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ ಮತ್ತು ಸಿಂಹ.

ಕುಂಭ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ನವನಾಗ ಸ್ತೋತ್ರ: ಪ್ರತಿದಿನ ನವನಾಗ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕ ದೂರವಾಗುತ್ತದೆ.

2) ಈ ದಾನಗಳಿಂದ ಶುಭ ಫಲ: ಮಿಶ್ರವರ್ಣದ ಬಟ್ಟೆ ಮತ್ತು ಹುರುಳಿ ದಾನ ನೀಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ವಿರೋಧಿಗಳ ಹಾವಳಿ ಕಡಿಮೆಯಾಗಲಿದೆ. ಮನದ ಆತಂಕ ದೂರವಾಗಲಿದೆ. ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣದಿಂದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸುವುದು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.