ಪ್ರೇಮಿಗಳ ದಿನ: ಈ ಬಾರಿ ಈ 5 ರಾಶಿಯವರಿಗೆ ಪ್ರೇಮಾಂಕುರವಾಗಬಹುದು; ನಿಮ್ಮ ರಾಶಿಯೂ ಇದೆಯಾ ನೋಡಿ
ಈ ಬಾರಿಯ ಪ್ರೇಮಿಗಳ ದಿನವು ಮೇಷ, ಮಿಥುನ, ಸಿಂಹ, ತುಲಾ ಮತ್ತು ಧನು ರಾಶಿಯವರಿಗೆ ಪ್ರೇಮಾಂಕುರವಾಗುವ ಸಾಧ್ಯತೆ ಇದೆ. ಜ್ಯೋತಿಷ್ಯದ ಪ್ರಕಾರ, ಯಾವ ರಾಶಿಯ ಜನರು ಪ್ರೀತಿಯ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಯಿರಿ.

ಈ ಬಾರಿಯ ಪ್ರೇಮಿಗಳ ದಿನಕ್ಕಾಗಿ ಹಲವು ಪ್ರೇಮಿಗಳು ಕಾಯುತ್ತಿದ್ದಾರೆ. ಪ್ರೇಮಿಗಳ ವಾರದ ಸಂಭ್ರಮ ಈಗಾಗಲೇ ಆರಂಭವಾಗಿದ್ದು, ಹಲವು ಜೋಡಿ ಹಕ್ಕಿಗಳು ಆಚರಣೆ ಶುರು ಮಾಡಿದ್ದಾರೆ. ಈ ನಡುವೆ ಹಲವು ಹೃದಯಗಳು ಪ್ರೀತಿಯ ಬಂಧಕ್ಕೆ ಒಳಗಾಗಿ ಒಂದೊಳ್ಳೆ ಮನಸ್ಸಿನ ಒಡನಾಟ ಬೆಳೆಸಲು ಸಂಗಾತಿಯನ್ನು ಹುಡುಕುತ್ತಿವೆ. ಜ್ಯೋತಿಷ್ಯದ ಪ್ರಕಾರ, ಈ ಬಾರಿಯ ಪ್ರೇಮಿಗಳ ದಿನದ ಸಮಯದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳ ಜನರು ಪ್ರೀತಿಯ ಬಂಧನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂಬುದರ ಕುರಿತು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಸುಂದೀಪ್ ಕೊಚಾರ್ ಭವಿಷ್ಯ ನುಡಿದಿದ್ದಾರೆ.
ಈ ಬಾರಿಯ ಪ್ರೇಮಿಗಳ ದಿನವು ಮೇಷ, ಮಿಥುನ, ಸಿಂಹ, ತುಲಾ ಮತ್ತು ಧನು ರಾಶಿಯವರಿಗೆ ಪ್ರೇಮಾಂಕುರವಾಗುವ ಸಾಧ್ಯತೆ ಇದೆ. ಅಂದ್ರೆ ಖಚಿತವಾಗಿ ಪ್ರೇಮಜೀವನ ಆರಂಭವಾಗುತ್ತದೆ ಎಂದಲ್ಲ. ಒಂದೊಳ್ಳೆ ಹೊಸ ಅನುಭವ, ಹೊಸತನದತ್ತ ತೆರೆದುಕೊಳ್ಳುವುದು ಕೂಡಾ ಆಗಿರಬಹುದು.
ಮೇಷ (ಮಾರ್ಚ್ 21 - ಏಪ್ರಿಲ್ 19)
ಸದಾ ಉತ್ಸಾಹದ ಚಿಲುಮೆಯಂತಿರುವ ಮೇಷ ರಾಶಿಯವರು, ದಿಟ್ಟ ನಡೆ ಮತ್ತು ಸಾಹಸಮಯ ಸ್ವಭಾವ ಹೊಂದಿದ್ದಾರೆ. ಪ್ರೇಮಿಗಳ ದಿನದ ಸಮಯದಲ್ಲಿ ಈ ರಾಶಿಯ ಆಳುವ ಗ್ರಹವಾದ ಮಂಗಳ, ವ್ಯಕ್ತಿಗಳ ಪ್ರೇಮ ಜೀವನದಲ್ಲಿ ಶಕ್ತಿ ತುಂಬುತ್ತದೆ. ಶುಕ್ರನು ಪ್ರಣಯದ ಮನೆಗೆ ಪ್ರವೇಶಿಸಿದಾಗ, ಮೇಷ ರಾಶಿಯ ವ್ಯಕ್ತಿಗಳು ತಮ್ಮ ಜೀವನದ ಪ್ರಮುಖ ಸಮಯವನ್ನು ಎದುರಿಸುತ್ತಾರೆ. ಭವಿಷ್ಯದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಭೇಟಿಯಾಗಬಹುದು. ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಸಂಬಂಧಗಳಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಲು ಇದು ಸೂಕ್ತ ಸಮಯ.
ಮಿಥುನ (ಮೇ 21 - ಜೂನ್ 20)
ಮಿಥುನ ರಾಶಿಯವರು ಕೂಡಾ ಈ ಪ್ರೇಮಿಗಳ ದಿನದ ಸಮಯದಲ್ಲಿ ಹೊಸತನದತ್ತ ಹೊರಳಬಹುದು. ಆಳುವ ಗ್ರಹವಾದ ಬುಧವು ಸೂಕ್ತ ಸ್ಥಾನದಲ್ಲಿರುವುದರಿಂದ, ಭವಿಷ್ಯದ ಜೊತೆಗಾರರತ್ತ ಆಕರ್ಷಿತರಾಗುತ್ತಾರೆ. ಸಾಮಾಜಿಕ ಚಟುವಟಿಕೆಗಳು ಅಥವಾ ಆನ್‌ಲೈನ್ ಮೂಲಕ ಸಂಪರ್ಕ ಸಾಧಿಸಬಹುದು.
ಸಿಂಹ (ಜುಲೈ 23 - ಆಗಸ್ಟ್ 22)
ಸಿಂಹ ರಾಶಿಯವರು ಈ ಪ್ರೇಮಿಗಳ ದಿನದಂದು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಾರೆ. ಪ್ರೀತಿಗೆ ಕಣ್ಣಿಲ್ಲ ಎನ್ನುವುದು ಸತ್ಯ. ಅಲ್ಲದೆ ಯಾವ ಸಮಯದಲ್ಲಾದರೂ ಅನಿರೀಕ್ಷಿತವಾಗಿ ಪ್ರೀತಿಯ ಬಲೆಯಲ್ಲಿ ಬೀಳಬಹುದು. ಅದು ಕೆಲವು ಸೃಜನಶೀಲ ಚಟುವಟಿಕೆ ಇರಬಹುದು ಅಥವಾ ಸಾಮಾಜಿಕ ಘಟನೆಗಳ ಮೂಲಕವೂ ಇರಬಹುದು. ಸಿಂಹ ರಾಶಿಯವರು ತಮ್ಮ ಪ್ರೀತಿಯನ್ನು ಸ್ವೀಕರಿಸುವ ಮತ್ತು ಸ್ವಾಗತಿಸುವ ಸಮಯ ಇದು.
ತುಲಾ (ಸೆಪ್ಟೆಂಬರ್ 23 - ಅಕ್ಟೋಬರ್ 22)
ಪ್ರೇಮಿಗಳ ದಿನದಂದು ತುಲಾ ರಾಶಿಯವರ ಪ್ರೇಮ ಜೀವನವು ಪ್ರವರ್ಧಮಾನಕ್ಕೆ ಬರಲಿದೆ. ಆಡಳಿತ ಗ್ರಹವಾದ ಶುಕ್ರನು ಅನುಕೂಲಕರ ಸ್ಥಾನದಲ್ಲಿರುವುದರಿಂದ, ಪಾಲುದಾರರನ್ನು ಆಕರ್ಷಿಸುತ್ತಾರೆ. ಅವರ ನೈಸರ್ಗಿಕ ಸಾಮರ್ಥ್ಯವು ಪ್ರೀತಿಯನ್ನು ಸಲೀಸಾಗಿ ಆಕರ್ಷಿಸುತ್ತದೆ. ತುಲಾ ರಾಶಿಯವರು ತಮ್ಮ ಬದುಕಿನ ಭಾಗವಾಗುವ ವ್ಯಕ್ತಿಯೊದಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಉತ್ತಮ ಸಮಯ.
ಧನು ರಾಶಿ (ನವೆಂಬರ್ 22 - ಡಿಸೆಂಬರ್ 21)
ಧನು ರಾಶಿಯವರು ಮುಕ್ತ ಮನೋಭಾವದವರು. ಈ ಬಾರಿಯ ಪ್ರೇಮಿಗಳ ದಿನದಂದು, ಅನಿರೀಕ್ಷಿತವಾಗಿ ಪ್ರೇಮಾಂಕುರವಾಗಬಹುದು. ಗುರು ಪ್ರಭಾವ ಬೀರುವುದರಿಂದ, ಈ ರಾಶಿಯವರು ಪ್ರೀತಿಯನ್ನು ಹಂಚಿಕೊಳ್ಳುವ ವ್ಯಕ್ತಿಗಳನ್ನು ಭೇಟಿಯಾಗಬಹುದು.
(ಗಮನಿಸಿ: ಇದು ಜನ್ಮದಿನಾಂಕ ಆಧರಿಸಿದ ಪದ್ಧತಿ. ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ