ಕನ್ನಡ ಸುದ್ದಿ  /  Astrology  /  Astrological Prediction For 31st March 2024 To 6th April Weekly Horoscope Kundali News In Kannada Sts

Weekly Horoscope: ಸ್ವಂತ ಮನೆ ಕೊಳ್ಳುವ ಸಾಧ್ಯತೆ, ಸಂಬಂಧಿಕರು ಅಥವಾ ಪರಿಚಿತರ ಜೊತೆ ವಿವಾಹ: ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (31st March 2024 to 6th April Weekly Horoscope)

ಮಾರ್ಚ್‌ 31 ರಿಂದ ಏಪ್ರಿಲ್‌ 6ವರೆಗಿನ ವಾರ ಭವಿಷ್ಯ
ಮಾರ್ಚ್‌ 31 ರಿಂದ ಏಪ್ರಿಲ್‌ 6ವರೆಗಿನ ವಾರ ಭವಿಷ್ಯ

ಮಾರ್ಚ್‌ 31 ರಿಂದ ಏಪ್ರಿಲ್‌ 6ವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (31st March 2024 to 6th April Weekly Horoscope)

ಮೇಷ

ಕುಟುಂಬದ ಕೆಲಸ ಕಾರ್ಯಗಳಲ್ಲಿ ಆತಂಕ ಎದುರಾಗಲಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಸಣ್ಣ ಪುಟ್ಟ ವಿಚಾರದಲ್ಲಿಯೂ ಹೆಚ್ಚಿನ ಪರಿಶ್ರಮ ವಹಿಸುವಿರಿ. ಸೋಲಿನ ವೇಳೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಾಮರ್ಥ್ಯ ಮೀರಿ ಹಣ ಖರ್ಚು ಮಾಡಬೇಕಾಗುವುದು. ಉದ್ಯೋಗದ ವಿಚಾರದಲ್ಲಿ ದುಡುಕದೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಿರಿ. ಕುಟುಂಬದಲ್ಲಿ ವಿವಾಹದ ವಿಚಾರದಲ್ಲಿ ಸಕಾರಾತ್ಮಕ ಮನೋಭಾವನೆ ಬರುತ್ತದೆ. ಹಿರಿಯರು ಮೆಚ್ಚುವಂತಹ ಕೆಲಸ ಮಾಡುವಿರಿ. ಮನೆಯು ಉತ್ಸಾಹದಿಂದ ಇರಲು ಕಾರಣರಾಗುವಿರಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ.

ವೃಷಭ

ತಪ್ಪು ನಿರ್ಧಾರಗಳು ಮನಸ್ಸಿನ ನೆಮ್ಮದಿ ಕಡಿಮೆ ಮಾಡುತ್ತದೆ. ಉದ್ಯೋಗದಲ್ಲಿ ಪ್ರಾಬಲ್ಯ ಸಾಧಿಸುವಿರಿ. ದುಡುಕಿನ ನಿರ್ಧಾರ ತೆಗೆದುಕೊಂಡರೂ ಎಚ್ಚೆತ್ತುಕೊಳ್ಳುವಿರಿ. ಲಾಭದಾಯಕ ಕೆಲಸಗಳನ್ನು ಆಯ್ದು ಮಾಡುವಿರಿ. ಸ್ವಭಾವತ: ಒಳ್ಳೆಯರಾದರೂ ಕಠುವಾದ ಮಾತಿನಿಂದ ತಪ್ಪು ಕಲ್ಪನೆ ಉಂಟಾಗುತ್ತದೆ. ಮತ್ತೊಬ್ಬರಿಗೆ ಯೋಗ ಮತ್ತು ಧ್ಯಾನ ಹೇಳಿಕೊಡಲಿದ್ದೀರಿ. ಸಂಗಾತಿಯಿಂದ ಪ್ರಮುಖ ಕೆಲಸಗಳಿಗಾಗಿ ಹಣವನ್ನು ಪಡೆಯುವಿರಿ. ಸಂಬಂಧಿಕರೊಂದಿಗೆ ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಯ ಗಳಿಸುವಿರಿ. ಕುಟುಂಬದ ಸದಸ್ಯರ ಜೊತೆಗೂಡಿ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಬೇರೆಯವರ ಸಲಹೆಗಳನ್ನು ಆಲಿಸುವುದಿಲ್ಲ.

ಮಿಥುನ

ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವಿರಿ. ಮಾನಸಿಕ ಒತ್ತಡದಿಂದ ಪಾರಾಗಲು ಪರಸ್ಥಳಕ್ಕೆ ತೆರಳುವಿರಿ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಹಣಕಾಸು ಯೋಜನೆಯಿಂದ ಹಣದ ಕೊರತೆಯಿಂದ ಪಾರಾಗುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತವೆ. ಆಕರ್ಷಕ ವಸ್ತುಗಳನ್ನು ಕೊಳ್ಳುವಿರಿ. ಸಮಾಜದ ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಉದ್ಯಮಿಗಳು ಕಾರ್ಮಿಕರ ಮನಗೆಲ್ಲುವ ಕೆಲಸವೊಂದನ್ನು ಮಾಡಲಿದ್ದಾರೆ. ವಿಶೇಷವಾದ ಆದಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಹೆಚ್ಚಿಸಿಳ್ಳುತ್ತಾರೆ. ಸ್ವಂತ ವಾಹನ ಕೊಳ್ಳುವಿರಿ.

ಕಟಕ

ಎಲ್ಲರ ಜೊತೆಗೂಡಿ ತೆಗೆದು ಕೊಳ್ಳುವ ನಿರ್ಧಾರಗಳು ಲಾಭದಾಯಕವಾಗಿರುತ್ತದೆ. ಮಕ್ಕಳ ಒಡನಾಟ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ. ಕೌಟುಂಬಿಕ ತೊಂದರೆಗಳು ದೂರವಾಗಲಿವೆ. ಅನಾವಾಶ್ಯಕ ಖರ್ಚು ವೆಚ್ಚಗಳು ಕಡಿಮೆ ಆಗಲಿದೆ. ಕಣ್ಣು ಮತ್ತು ಕಿವಿಗಳ ತೊಂದರೆ ಕಂಡುಬರುತ್ತದೆ. ಸುತ್ತಮುತ್ತಲಿನ ಜನರ ಮಧ್ಯೆ ನಾಯಕರಾಗಿ ಬಾಳುವಿರಿ. ಉತ್ತಮ ಪ್ರಯತ್ನದಿಂದಾಗಿ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಳಿಸಲು ಸಾಧ್ಯವಾಗುತ್ತದೆ. ಮೇಲಧಿಕಾರಿಗಳ ಜೊತೆಗಿನ ಬಾಂಧವ್ಯವು ಸುಧಾರಿಸುತ್ತದೆ. ವಿದ್ಯಾರ್ಥಿಗಳು ದೊರೆವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದಲ್ಲದೆ ಕುಟುಂಬದ ಆದಾಯವನ್ನು ಹೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ.

ಸಿಂಹ

ಕುಟುಂಬದ ಸದಸ್ಯರ ಜೊತೆಯಲ್ಲಿ ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ. ಆದಾಯವನ್ನು ಹೆಚ್ಚಿಸಿಕೊಳ್ಳಲು ಬಿಡುವಿನ ವೇಳೆ ಉಪವೃತ್ತಿಯನ್ನು ಮಾಡುವಿರಿ. ಹಣಕಾಸಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹಟ ಮತ್ತು ಆತ್ಮವಿಶ್ವಾಸ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ. ಕುಟುಂಬದ ಹಿರಿಯ ಸದಸ್ಯರಿಗೆ ಸೇರಿದ ಹಣ ಅಥವಾ ಆಸ್ತಿಯ ಸ್ವಲ್ಪ ಪಾಲು ದೊರೆಯುತ್ತದೆ. ಕೌಟುಂಬಿಕ ವಿವಾದವನ್ನು ಪರಿಹರಿಸುವಿರಿ. ಮಕ್ಕಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸಾರ್ವಜನಿಕ ಸೇವೆಯಲ್ಲಿ ಉನ್ನತ ಸ್ಥಾನ ದೊರೆಯುತ್ತದೆ.

ಕನ್ಯಾ

ಆರೋಗ್ಯ ಉತ್ತಮವಾಗಿರುತ್ತದೆ. ಮಾನಸಿಕ ಒತ್ತಡ ಸದಾ ಕಾಡಲಿದೆ. ಕುಟುಂಬದಲ್ಲಿ ಸಂತಸ ಉಂಟುಮಾಡುವ ಘಟನೆಯೊಂದು ನಡೆಯಲಿದೆ. ಹಣಕಾಸಿನ ವಿಚಾರದಲ್ಲಿ ಸ್ಥಿರವಾದ ಮನವಿರದ ಕಾರಣ ತೊಂದರೆ ಎದುರಾಗಬಹುದು. ಕುಟುಂಬದ ಜೊತೆಯಲ್ಲಿ ಸಾಕಷ್ಟು ಸಮಯ ಕಳೆಯುವಿರಿ. ವೃತ್ತಿಜೀವನದಲ್ಲಿ ಉನ್ನತಿ ಕಂಡುಬರುತ್ತದೆ. ಅಗತ್ಯವಿರುವ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸ್ವಯಂಪ್ರೇರಣೆಯಿಂದ ನಿಮಗೆ ಸೇರಿದ ಹಣವನ್ನು ಸೋದರಿಗೆ ನೀಡುವಿರಿ. ಹಿರಿಯರ ಸಹಾಯದಿಂದ ಹಣಕಾಸಿನ ವಿವಾದದಿಂದ ಪಾರಾಗುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಸಂಪೂರ್ಣ ನಿರತರಾಗಿರುತ್ತಾರೆ.

ತುಲಾ

ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಶ್ರಾಂತಿಯ ಅಗತ್ಯವಿದೆ. ಕುಟುಂಬದವರೊಂದಿಗೆ ಕಾಲಕಳೆಯಲು ಸಾಕಷ್ಟು ಸಮಯವನ್ನು ಮೀಸಲಿಡುವಿರಿ. ಸಮರ್ಪಣಾಮನೋಭಾವನೆ ಮತ್ತು ಕಠಿಣ ಪರಿಶ್ರಮದ ಕಾರಣ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ಅನಿರೀಕ್ಷಿತವಾಗಿ ಹಣದ ಸಹಾಯ ಪಡೆಯುತ್ತೀರಿ. ಜೀವನ ಸಂಗಾತಿಯು ಪೂರ್ಣ ಸಹಾಯ ಸಹಕಾರ ನೀಡುತ್ತಾರೆ. ಹಿರಿಯರ ಅನುಭವ ನಿಮ್ಮ ಪ್ರಗತಿಗೆ ಉತ್ತಮ ಪಾಠವಾಗುತ್ತದೆ. ಪರಿಸ್ಥಿತಿಯ ಲಾಭವನ್ನು ಪಡೆದು ಸ್ವಂತ ಕೆಲಸವನ್ನು ಪೂರೈಸಿಕೊಳ್ಳುವಿರಿ. ಉದ್ಯೋಗಸ್ಥರಿಗೆ ದೂರದ ಊರಿಗೆ ವರ್ಗವಾಗುವ ಸಾಧ್ಯತೆ ಇದೆ. ಮೇಲಧಿಕಾರಿಗಳೊಂದಿಗೆ ವಾದ ಮಾಡದಿರಿ.

ವೃಶ್ಚಿಕ

ಸ್ನೇಹಿತರೊಂದಿಗೆ ಬೇಸರ ಕಳೆಯಲು ಪ್ರವಾಸ ಕೈಗೊಳ್ಳುವಿರಿ. ಹಣಕಾಸಿಗೆ ಸಂಬಂಧಿಸಿದ ದೊಡ್ಡಮಟ್ಟದ ತೀರ್ಮಾನದಿಂದ ಯಶಸ್ಸು ಗಳಿಸುವಿರಿ. ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವನ್ನು ರೂಪಿಸಿಕೊಳ್ಳುವಿರಿ. ಕೌಟುಂಬಿಕ ವಿಷಯಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕಾಗಿ ತೆರಳುವಿರಿ. ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ಆತ್ಮೀಯರ ನಿರುದ್ಯೋಗದಿಂದ ಹೊರಬರಲು ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸುವಿರಿ.

ಧನಸ್ಸು

ನಿತ್ಯಜೀವನದ ಬದಲಾವಣೆಗಳು ನಿಮಗೆ ಸಹಕಾರಿಯಾಗಲಿದೆ. ಧನಾತ್ಮಕ ಚಿಂತನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನಿರೀಕ್ಷೆಯಂತೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಹಣ ಬೇಕಾಗುತ್ತದೆ. ಆತಂಕದ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರು ಬೆಂಬಲಕ್ಕೆ ನಿಲ್ಲುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುವಿರಿ. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ಸಿದ್ಧತೆ ನಡೆಸುತ್ತಾರೆ. ಮುಂದಾಲೋಚನೆ ಇಲ್ಲದೆ ಯಾವುದೇ ಕೆಲಸ ಮಾಡದಿರಿ. ತಾಯಿಯ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ.

ಮಕರ

ಉತ್ತಮ ಆರೋಗ್ಯಕ್ಕಾಗಿ ಕೊಲೆಸ್ಟ್ರಾಲ್ ಇರುವ ಆಹಾರಗಳಿಂದ ದೂರ ಉಳಿಯುವಿರಿ. ಪೋಷಕರ ಸಹಾಯದಿಂದ, ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಮಾನಸಿಕ ಒತ್ತಡದಿಂದ ಪಾರಾಗಲು ಸರಳ ವ್ಯಾಯಾಮವನ್ನು ಆಶ್ರಯಿಸುವಿರಿ. ಮಾಡುವ ಪ್ರಯ್ಕತ್ನಗಳಿಗೆ ಹಿರಿಯರ ಮಾರ್ಗದರ್ಶನ ದೊರೆಯುತ್ತದೆ. ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಯಶಸ್ಸು ದೊರೆಯುತ್ತದೆ. ಕುಟುಂಬ ಸದಸ್ಯರ ಪ್ರಾಮುಖ್ಯತೆಯ ಅರಿವು ಬರುತ್ತದೆ. ಸ್ನೇಹಿತರೊಬ್ಬರು ಆಪತ್ತಿನ ಸಮಯದಲ್ಲಿ ಸಹಾಯಕ್ಕೆ ಬರಲಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ವಿಶೇಷವಾದ ಯಶಸ್ಸು ದೊರೆಯುತ್ತದೆ. ಅನಾವಶ್ಯಕವಾಗಿ ಬಂಧುವೊಬ್ಬರನ್ನು ಹಣಕಾಸಿನ ವಿಚಾರದಲ್ಲಿ ಅನುಮಾನಿಸುವಿರಿ.

ಕುಂಭ

ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಎಲ್ಲರೊಂದಿಗೆ ಸಂತೋಷದಿಂದ ಜೀವನ ನಡೆಸುವಿರಿ. ಹಣದ ಕೊರತೆಯು ಕಡಿಮೆ ಆಗಲಿದೆ. ದಿನದಿಂದ ದಿನಕ್ಕೆ ಅರ್ಥಿಕ ಪ್ರಗತಿ ಇರುತ್ತದೆ. ಕುಟುಂಬದಲ್ಲಿ ಬೇಸರದ ವಾತಾವರಣ ಉಂಟಾಗುವ ಸಾಧ್ಯತೆಗಳಿವೆ. ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಕಷ್ಟ ನಷ್ಟವನ್ನು ಎದುರಿಸುವಿರಿ. ಮೊದಲು ಪರಿಸ್ಥಿಯ ಅವಲೋಕನ ಮಾಡಿ ನಂತರ ಹಣದ ವ್ಯವಹಾರ ಆರಂಭಿಸುವಿರಿ. ದುಡುಕಿನಿಂದ ತೆಗೆದುಕೊಂಡ ನಿರ್ಧಾರವು ವಿವಾದಕ್ಕೆ ಕಾರಣವಾಗಬಹುದು. ಅತಿ ಭಾವುಕರಾಗಿ ವರ್ತಿಸುವಿರಿ. ಉದ್ಯೋಗದಲ್ಲಿ ಬಡ್ತಿ ಪಡೆಯುವಿರಿ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಗೌರವ ಗಳಿಸುವಿರಿ.

ಮೀನ

ಸಂಬಂಧಿಕರ ಅಥವಾ ಪರಿಚಿತರ ಜೊತೆ ವಿವಾಹವಾಗುತ್ತದೆ. ನಿಯಮಿತ ಚಟುವಟಿಕೆಗಳು ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸುತ್ತದೆ. ಮನೆಯ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ ಪಾಲುಗಾರಿಕೆಯ ವ್ಯಾಪಾರದಲ್ಲಿ ಲಾಭವಿದೆ. ಮನೆ ಕೊಳ್ಳುವ ಪ್ರಯತ್ನವನ್ನು ಆರಂಭಿಸುವಿರಿ. ಕುಟುಂಬದೊಂದಿಗೆ ವಿಹಾರಕ್ಕೆ ಹೋಗಲು ಯೋಜನೆ ರೂಪಿಸುವಿರಿ. ವೃತ್ತಿಯನ್ನು ಬದಲಾಯಿಸುವಿರಿ. ವೈಯಕ್ತಿಕ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿಯಬಹುದು. ಶಾಂತಿ ಸಂಯಮದಿಂದ ಜೀವನದ ಕಷ್ಟ ನಷ್ಟಗಳಿಂದ ಪಾರಾಗುವಿರಿ. ಹೊಸ ವ್ಯಾಪಾರವನ್ನು ಆರಂಭಿಸುವಿರಿ. ನೀರಿನಿಂದ ತೊಂದರೆ ಉಂಟಾಗಬಹುದು ಜಾಗ್ರತೆ ಇರಲಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).