ಕನ್ನಡ ಸುದ್ದಿ  /  Astrology  /  Astrological Prediction For January 22 2023

Horoscope Today for January 22, 2023: ಪ್ರೇಮ ನಿವೇದನೆಗೆ ಈ ದಿನ ಸೂಕ್ತವಲ್ಲ, ಕೌಟುಂಬಿಕ ಜಗಳ ಸಾಧ್ಯತೆ; ದಿನಭವಿಷ್ಯ ಹೀಗಿದೆ

Daily horoscope: ಎಲ್ಲಾ ರಾಶಿಚಕ್ರ ಚಿಹ್ನೆಗಳು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ. ನೀವು ನಡೆಯುವ ದಾರಿಯಲ್ಲಿ ಏನಾಗಲಿದೆ ಎಂಬುದರ ಕುರಿತು ಮೊದಲೇ ತಿಳಿದಿರುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಅದು ಸಹಾಯಕವಾಗುವುದಿಲ್ಲವೇ? ಇಂದು ನಿಮ್ಮ ಪರವಾಗಿ ರಾಶಿಗಳು ಇವೆಯೇ ಎಂದು ತಿಳಿಯಲು ಮುಂದೆ ಓದಿ.

Horoscope Today: Astrological prediction for January 22, 2023
Horoscope Today: Astrological prediction for January 22, 2023 (Pixabay)
  • ಸೂರ್ಯೋದಯ: ಬೆಳಗ್ಗೆ 06:46
  • ಸೂರ್ಯಾಸ್ತ: ಸಂಜೆ 06:16
  • ತಿಥಿ: ಪ್ರತಿಪದ (ಸಂಜೆ 10:27ರವರೆಗೆ)
  • ನಕ್ಷತ್ರ: ಶ್ರವಣ (ಬೆಳಗ್ಗೆ 03:21ರವರೆಗೆ)

ಮೇಷ (ARIES) (ಮಾರ್ಚ್ 21-ಏಪ್ರಿಲ್ 20)

ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗೆ ಆಯುರ್ವೇದ ಔಷಧದಿಂದ ಪರಿಹಾರ ಕಾಣಬಹುದು. ಆದರೂ, ಕುತಂತ್ರದಿಂದ ದೂರವಿರಿ. ಸಾರಿಗೆ ವ್ಯವಹಾರವನ್ನು ಬಗ್ಗೆ ನಿಮಗೆ ತಿಳಿದಿದ್ದರೆ ಮತ್ತು ಅರ್ಥಮಾಡಿಕೊಂಡರೆ, ನಿಮ್ಮ ಕಾರು ಆದಾಯದ ಮೂಲವಾಗಬಹುದು. ನಿಮ್ಮಲ್ಲಿ ಕೆಲವರು ಇಂದು ದಿನಪೂರ್ತಿ ಕೆಲಸದಲ್ಲಿ ನಿರತರಾಗಿರಬಹುದು. ಕುಟುಂಬದಲ್ಲಿ ಹೊಸ ಸದಸ್ಯರು ಸಕಾರಾತ್ಮಕ ವಾತಾವವರಣ ತರಬಹುದು. ನಿಮ್ಮ ನೆಚ್ಚಿನ ಸ್ಥಳವನ್ನು ವೀಕ್ಷಿಸಲು ನಿಮಗೆ ಟ್ರಾಫಿಕ್ ಅವಕಾಶ ಕೊಡದಿರಬಹುದು. ಆಸ್ತಿಯಿಂದ ಸ್ವಲ್ಪ ಲಾಭವನ್ನು ನಿರೀಕ್ಷಿಸಬಹುದು.

ಲವ್ ಫೋಕಸ್ - ನಿಮ್ಮ ಕೆಲಸದ ಜೀವನದ ಒತ್ತಡವನ್ನು ಕಡಿಮೆ ಮಾಡಲು ನಿಮ್ಮ ಸಂಗಾತಿ ನಿಮಗೆ ಸಹಾಯ ಮಾಡಬಹುದು.

ಅದೃಷ್ಟ ಸಂಖ್ಯೆ: 11

ಅದೃಷ್ಟ ಬಣ್ಣ: ತಿಳಿ ನೀಲಿ

ವೃಷಭ ರಾಶಿ (TAURUS) (ಏಪ್ರಿಲ್ 21-ಮೇ20)

ನೀವು ಇಂದು ನಿಮ್ಮ ಆರೋಗ್ಯ ದಿನಚರಿಯಿಂದ ಹೊರಗುಳಿಯಬಹುದು. ನಿಮ್ಮ ವ್ಯಾಯಾಮವನ್ನು ಅನಗತ್ಯವಾಗಿ ವಿಳಂಬ ಮಾಡಬೇಡಿ. ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಲು ಕಲಿಯಿರಿ. ನಿಮ್ಮ ಬಾಸ್‌ನಿಂದ ಇಂದು ಮೆಚ್ಚುಗೆಯ ಮಾತುಗಳು ಸಿಗುವ ಸಾಧ್ಯತೆಯಿದೆ. ಕುಟುಂಬದ ಕಾರ್ಯಗಳು ನಿಮ್ಮ ನಿರೀಕ್ಷೆಯಂತೆ ನಡೆಯದಿರಬಹುದು. ನಿಮ್ಮ ರಜಾದಿನದ ಯೋಜನೆಗೆ ಕಡಿಮೆ ಬೆಲೆಯಲ್ಲಿ ಟಿಕೆಟ್‌ಗಳನ್ನು ನೀವು ನಿರೀಕ್ಷಿಸಬಹುದು. ನಿಮ್ಮ ಸುತ್ತಮುತ್ತಲಿನವರೊಂದಿಗೆ ಸಂಬಂಧಗಳನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು.

ಲವ್ ಫೋಕಸ್ - ನಿಮ್ಮ ಸಂಗಾತಿಗೆ ಸಂತೋಷವಾಗದಿರಬಹುದು ಮತ್ತು ಸ್ವಲ್ಪ ಸಮಯ ಬೇಕಾಗಬಹುದು.

ಅದೃಷ್ಟ ಸಂಖ್ಯೆ: 18

ಅದೃಷ್ಟ ಬಣ್ಣ: ಕಂದು

ಮಿಥುನ (GEMINI) (ಮೇ 21-ಜೂನ್ 21)

ಮನೆಯಲ್ಲೇ ಜಿಮ್ ಮಾಡುವಲ್ಲಿ ನೀವು ಒಂದು ಹೆಜ್ಜೆ ಮುಂದೆ ಹೋಗಬಹುದು. ಬೆಳ್ಳಿ ನಿಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಅದೃಷ್ಟವನ್ನು ತರುವ ಸಾಧ್ಯತೆಯಿದೆ. ಆನ್‌ಲೈನ್ ವಹಿವಾಟು ಮಾಡುವಾಗ ಜಾಗರೂಕರಾಗಿರಿ. ನಿಮ್ಮ ಕಂಪನಿಯನ್ನು ದೊಡ್ಡ ಸಂಸ್ಥೆ ಸ್ವಾಧೀನಪಡಿಸಿಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಸಂಬಳ ಹೆಚ್ಚಳವನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಮುಂದೆ ಕಷ್ಟಕರ ದಿನಗಳು ಬರಬಹುದು. ನೀವು ಯೋಜಿಸುತ್ತಿರುವ ಪ್ರವಾಸಕ್ಕೆ ಪೋಷಕರು ದುಡ್ಡು ಕೊಡದೆ ಇರಬಹುದು. ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವುದನ್ನು ಖಚಿತಪಡಿಸಿಕೊಳ್ಳಿ.

ಲವ್ ಫೋಕಸ್ - ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನೀವು ಹೊಂದಾಣಿಕೆಗಳನ್ನು ಕಾಣಬಹುದು. ಉತ್ತಮ ಸಂವಾದ ನಡೆಸಿ.

ಅದೃಷ್ಟ ಸಂಖ್ಯೆ: 7

ಅದೃಷ್ಟ ಬಣ್ಣ: ಕ್ರೀಂ

ಕರ್ಕಾಟಕ (CANCER) (ಜೂನ್ 22-ಜುಲೈ 22)

ಇಂದು ಧಾರ್ಮಿಕ ವಿದ್ವಾಂಸರೊಂದಿಗೆ ಸಭೆ ನಡೆಯುವ ಸಾಧ್ಯತೆ ಇದೆ. ನೀವು ಅವರಿಂದ ಬಹಳಷ್ಟು ಕಲಿಯುವ ನಿರೀಕ್ಷೆಯಿದೆ. ಆಸ್ತಿಯನ್ನು ಖರೀದಿಸುವ ಮೊದಲು, ಅದು ವ್ಯಾಜ್ಯಕ್ಕೆ ಒಳಪಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಭೇಟಿ ನೀಡಲು ಯೋಜಿಸುತ್ತಿರುವ ಸ್ಥಳವು ತೃಪ್ತಿಕರವಾಗಿಲ್ಲದಿರಬಹುದು. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ದೃಷ್ಟಿಕೋನವನ್ನು ನಿಮ್ಮ ಕುಟುಂಬದ ಸದಸ್ಯರು ಒಪ್ಪದಿರಬಹುದು. ನೀವು ಕಾರ್ಪೊರೇಟ್ ಕ್ಷೇತ್ರದತ್ತ ಒಂದು ಹೆಜ್ಜೆ ಮುಂದೆ ಇಡಬಹುದು. ಸಾಕಷ್ಟು ಪ್ರಮಾಣದ ಪ್ರೋಟೀನ್ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

ಲವ್ ಫೋಕಸ್ - ನಿಮ್ಮ ಸಂಗಾತಿಗೆ ಗುಲಾಬಿ ಹೂಗಳನ್ನು ನೀಡುವುದು ಅವರ ಮುಖದಲ್ಲಿ ನಗು ತರುತ್ತವೆ.

ಅದೃಷ್ಟ ಸಂಖ್ಯೆ: 15

ಅದೃಷ್ಟ ಬಣ್ಣ: ಗೋಲ್ಡನ್

ಸಿಂಹ (LEO) (ಜುಲೈ 23-ಆಗಸ್ಟ್ 23)

ಬದಲಾಗುತ್ತಿರುವ ಹವಾಮಾನದಿಂದಾಗಿ ನೀವು ಸ್ವಲ್ಪ ನೋವು ಅನುಭವಿಸಬಹುದು. ನೀವು ಇಂದು ಚೆಕ್ ಮೂಲಕ ಸ್ವಲ್ಪ ಹಣ ಸ್ವೀಕರಿಸುವ ಸಾಧ್ಯತೆಯಿದೆ. ಹೆಚ್ಚುವರಿ ಪದವಿ ಪಡೆಯುವಂತೆ ನಿಮ್ಮ ಕಚೇರಿಯಿಂದ ಒತ್ತಾಯ ಕೇಳಿಬರುತ್ತದೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಇರುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಕೌಟುಂಬಿಕ ಸಂಘರ್ಷ ಎದುರಾಗುವ ಸಾಧ್ಯತೆಯಿದೆ. ನಿಮ್ಮ ಟ್ರಾವೆಲ್ ಏಜೆಂಟ್ ನಿಮ್ಮ ಕನಸಿನ ಪ್ರಯಾಣಕ್ಕೆ ಉತ್ತಮ ಯೋಜನೆಯೊಂದಿಗೆ ಬರದೇ ಇರಬಹುದು. ನೀವು ನಿಜವಾಗಿಯೂ ಸಾಧಿಸಲು ಬಯಸುವ ವಿಷಯಗಳಲ್ಲಿ ನಿಮ್ಮ ಸ್ವಂತ ಪ್ರಯತ್ನವನ್ನು ಹಾಕಲು ಇದು ಸಮಯ.

ಲವ್ ಫೋಕಸ್ -ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ನಂಬಿಕೆಯ ವಾತಾವರಣವನ್ನು ನಿರ್ಮಿಸಲು ನೀವು ಕೆಲವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಅದೃಷ್ಟ ಸಂಖ್ಯೆ: 9

ಅದೃಷ್ಟದ ಬಣ್ಣ: ಪೀಚ್

ಕನ್ಯಾರಾಶಿ (VIRGO) (ಆಗಸ್ಟ್ 24-ಸೆಪ್ಟೆಂಬರ್ 23)

ನಿಮ್ಮ ಹೊಸ ಬಾಡಿಗೆದಾರರು ಸಕಾಲಿಕ ಬಾಡಿಗೆ ಪಾವತಿ ಮಾಡುತ್ತಾರೆ. ನೀವು ಎಲ್ಲಿಗೆ ಹೋದರೂ ಉಡುಗೊರೆಗಳನ್ನು ತನ್ನಿ. ಇದು ನಿಮ್ಮ ಪ್ರವಾಸಗಳನ್ನು ಸ್ಮರಣೀಯವಾಗಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಇದು ಉತ್ತಮ ದಿನವಾಗಿದೆ. ನಿಮ್ಮ ಸಂಸ್ಥೆಯ ಮಧ್ಯಸ್ಥಗಾರರನ್ನು ಒಂದೇ ಪುಟದಲ್ಲಿ ತರಲು ಕಷ್ಟವಾಗುತ್ತದೆ. ಉಸಿರಾಟದ ವ್ಯಾಯಾಮಗಳು ನಿಮ್ಮ ಶ್ವಾಸಕೋಶವನ್ನು ಆರೋಗ್ಯಕರವಾಗಿರಿಸುವ ಸಾಮರ್ಥ್ಯವನ್ನು ಹೊಂದಿವೆ.

ಲವ್ ಫೋಕಸ್ - ನಿಮ್ಮ ಸಂಗಾತಿಯ ಮನಸ್ಥಿತಿಗೆ ಅನುಸಾರವಾಗಿ ನೀವು ಇರಬೇಕಾಗುತ್ತದೆ.

ಅದೃಷ್ಟ ಸಂಖ್ಯೆ: 15

ಅದೃಷ್ಟದ ಬಣ್ಣ: ಗೋಲ್ಡನ್ ಬ್ರೌನ್

ತುಲಾ (LIBRA) (ಸೆಪ್ಟೆಂಬರ್ 24-ಅಕ್ಟೋಬರ್ 23)

ಬೀದಿಬದಿ ಆಹಾರವು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಣೆಯನ್ನು ನೀಡದಿರಬಹುದು. ನಿಮ್ಮ ಬಳಿ ಸ್ವಲ್ಪ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಪ್ಲಾಸ್ಟಿಕ್ ಹಣ(ಕಾರ್ಡ್‌) ಎಲ್ಲೆಡೆ ಉಪಯುಕ್ತವಾಗದಿರಬಹುದು. ಉತ್ತಮ ವ್ಯವಹಾರ ಕಲ್ಪನೆಯು ಶೀಘ್ರದಲ್ಲೇ ನಿಮಗೆ ಬರಬಹುದು. ನೀವು ದೀರ್ಘಕಾಲದಿಂದ ಕೇಳುತ್ತಿರುವ ಯಾವುದನ್ನಾದರೂ ಪಡೆಯಲು ನಿಮ್ಮ ಪೋಷಕರು ನಿಮಗೆ ಅನುಮತಿ ನೀಡಬಹುದು. ಇಂದು ರಸ್ತೆ ಪ್ರವಾಸದ ವೇಳೆ ಜಾಗರೂಕರಾಗಿರಿ. ನಿಮ್ಮ ಪೂರ್ವಜರ ಆಸ್ತಿಯನ್ನು ನವೀಕರಿಸುವುದು ನಿಮಗೆ ಆರ್ಥಿಕವಾಗಿ ಸಹಾಯಕವಾಗಬಹುದು.

ಲವ್ ಫೋಕಸ್ - ನಿಮ್ಮ ಸಂಗಾತಿ ನಿಮ್ಮ ಸತ್ಯ ಸ್ವಭಾವವನ್ನು ಮೆಚ್ಚುತ್ತಾರೆ. ಕ್ಷಮಿಸಿ ಎಂದು ಹೇಳಲು ಹಿಂಜರಿಯಬೇಡಿ.

ಅದೃಷ್ಟ ಸಂಖ್ಯೆ: 2

ಅದೃಷ್ಟದ ಬಣ್ಣ: ಗುಲಾಬಿ

ವೃಶ್ಚಿಕ ರಾಶಿ (SCORPIO) (ಅಕ್ಟೋಬರ್ 24-ನವೆಂಬರ್ 22)

ನೀವು ಪ್ರೇರಣಾದಾಯಕ ದಿನವನ್ನು ನಿರೀಕ್ಷಿಸಬಹುದು. ನಿಮ್ಮ ಗುರಿಗಳನ್ನು ಸಾಧಿಸುವ ಸಾಧ್ಯತೆಯಿದೆ. ನೀವು ಬಾಡಿಗೆಗೆ ಆಸ್ತಿಯನ್ನು ಪಡೆಯಲು ಹೆಣಗಾಡುತ್ತಿದ್ದರೆ, ಇಂದು ಸ್ವಲ್ಪ ಯಶಸ್ಸನ್ನು ನಿರೀಕ್ಷಿಸಬಹುದು. ಸಮುದ್ರಯಾನವು ನಿಮ್ಮಲ್ಲಿರುವ ಪ್ರಯಾಣಿಕನನ್ನು ತೃಪ್ತಿಪಡಿಸಬಹುದು. ನಿಮ್ಮ ಕಿರಿಯ ಸಹೋದರರೊಂದಿಗೆ ಜಗಳವಾಡುವುದನ್ನು ತಪ್ಪಿಸಿ. ಕಚೇರಿಯಲ್ಲಿರುವ ನಿಮ್ಮ ತಂಡದ ಸದಸ್ಯರು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದಿರಬಹುದು. ನೀವು ಇಂದು ಕೆಲವು ದೀರ್ಘಾವಧಿಯ ಆಸ್ತಿಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಚರ್ಮದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬಹುದು.

ಲವ್ ಫೋಕಸ್ - ಸಾಂದರ್ಭಿಕ ವ್ಯಾಮೋಹವನ್ನು ಪ್ರೀತಿಯೊಂದಿಗೆ ಹೋಲಿಸಿ ಗೊಂದಲಗೊಳಿಸಬೇಡಿ.

ಅದೃಷ್ಟ ಸಂಖ್ಯೆ: 6

ಅದೃಷ್ಟದ ಬಣ್ಣ: ಮಜೆಂಟಾ

ಧನು ರಾಶಿ (SAGITTARIUS) (ನವೆಂಬರ್ 23-ಡಿಸೆಂಬರ್ 21)

ನೀವು ಇಂದು ಸಕಾರಾತ್ಮಕ ಮನಸ್ಥಿತಿಯನ್ನು ಅನುಭವಿಸುವ ಸಾಧ್ಯತೆಯಿದೆ. ಬ್ಯಾಂಕ್ ಸಾಲವನ್ನು ಬಯಸುವವರು ಅಂತಿಮವಾಗಿ ಅದನ್ನು ಪಡೆಯಬಹುದು. ನಿಮ್ಮ ಕೌಶಲ್ಯಕ್ಕೆ ಸೂಕ್ತವಾದ ವೃತ್ತಿಯನ್ನು ಕಂಡುಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಪೋಷಕರ ಆರೋಗ್ಯವು ಈಗ ಸುಧಾರಿಸುವ ಸಾಧ್ಯತೆಯಿದೆ. ಪ್ರೇರಕ ಪುಸ್ತಕ ಅಥವಾ ವಿಡಿಯೋ ನಿಮ್ಮ ಜೀವನದಲ್ಲಿ ನಿಮ್ಮ ಗುರಿಗಳ ಕಡೆಗೆ ನಿಮ್ಮನ್ನು ಪ್ರೇರೇಪಿಸುವ ಸಾಧ್ಯತೆಯಿದೆ. ನೀವು ತೊಡಗಿಸಿಕೊಂಡಿರುವ ಆಸ್ತಿ ವಿವಾದವನ್ನು ಶೀಘ್ರದಲ್ಲೇ ಪರಿಹರಿಸಬಹುದು.

ಲವ್ ಫೋಕಸ್ - ನಿಮ್ಮ ದಿನ ನೀವು ಯೋಜಿಸಿದಂತೆ ನಡೆಯದಿರಬಹುದು.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ತಿಳಿ ನೀಲಿ

ಮಕರ (CAPRICORN) (ಡಿಸೆಂಬರ್ 22-ಜನವರಿ 21)

ನಿಮ್ಮ ಪ್ರೇರಣಾದಾಯಕ ಮನಸ್ಥಿತಿ ಇಂದು ಕುಸಿತ ಕಾಣಬಹುದು. ಆಪ್ತ ಸ್ನೇಹಿತನು ಸ್ವಲ್ಪ ಅಸೂಯೆ ಬೆಳೆಸಿಕೊಳ್ಳಬಹುದು. ನಿಮ್ಮ ನೆಚ್ಚಿನ ಗಮ್ಯಸ್ಥಾನದ ವೀಸಾವನ್ನು ಶೀಘ್ರದಲ್ಲೇ ಪಡೆಯಬಹುದು. ನಿಮ್ಮ ಕಿರಿಯ ಸಹೋದರರು ಕ್ರೀಡೆಯಲ್ಲಿ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಹೊಸ ವ್ಯವಹಾರ ಪಾಲುದಾರರು ನಿಮ್ಮ ವ್ಯಾಪಾರ ಯೋಜನೆಗಳನ್ನು ಅರ್ಥಮಾಡಿಕೊಳ್ಳದಿರಬಹುದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸುವಲ್ಲಿ ನೀವು ಉತ್ತಮರು. ನಿಮ್ಮ ನಿದ್ರೆಯನ್ನು ತ್ಯಾಗ ಮಾಡಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ.

ಲವ್ ಫೋಕಸ್ - ನಿಮ್ಮ ಸಂಗಾತಿ ಶೀಘ್ರದಲ್ಲೇ ತಮ್ಮ ತಪ್ಪನ್ನು ಅರಿತುಕೊಳ್ಳಬಹುದು.

ಅದೃಷ್ಟ ಸಂಖ್ಯೆ: 9

ಅದೃಷ್ಟ ಬಣ್ಣ: ಕೆಂಪು

ಕುಂಭ (AQUARIUS) (ಜನವರಿ 22-ಫೆಬ್ರವರಿ 19)

ತೂಕ ನಷ್ಟಕ್ಕೆ ಕೆಲವು ತಜ್ಞರ ಸಲಹೆಗಳು ನಿಮಗೆ ಸಹಾಯಕವಾಗಬಹುದು. ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಬೇಡಿ. ನಿಮ್ಮ ಬಾಸ್‌ನಿಂದ ಕೆಲಸದ ನಿರ್ವಹಣೆಯ ಬಗ್ಗೆ ನೀವು ಉತ್ತಮ ವಿಷಯಗಳನ್ನು ಕಲಿಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ವಿಹಾರವು ಅವರೊಂದಿಗಿನ ನಿಮ್ಮ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿಮ್ಮ ಟ್ರಾವೆಲ್ ಏಜೆಂಟ್ ನೀವು ನಿರಾಕರಿಸಲಾಗದ ಕೊಡುಗೆಯನ್ನು ನೀಡುವ ಸಾಧ್ಯತೆಯಿದೆ. ನಿಮ್ಮ ಆಸ್ತಿಗೆ ಶೀಘ್ರದಲ್ಲೇ ಖರೀದಿದಾರರನ್ನು ಕಾಣಬಹುದು.

ಲವ್ ಫೋಕಸ್ - ನಿಮ್ಮ ಕ್ರಷ್‌ಗೆ ಪ್ರಪೋಸ್ ಮಾಡಲು ಇದು ಉತ್ತಮ ಸಮಯವಲ್ಲ.

ಅದೃಷ್ಟ ಸಂಖ್ಯೆ: 8

ಅದೃಷ್ಟದ ಬಣ್ಣ: ಕೇಸರಿ

ಮೀನ ರಾಶಿ (PISCES) (ಫೆಬ್ರವರಿ 20-ಮಾರ್ಚ್ 20)

ನೀವು ಸ್ವಸಹಾಯ ಕುರಿತ ಉತ್ತಮ ಪುಸ್ತಕವನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಬಾಡಿಗೆ ಆಸ್ತಿಯಲ್ಲಿ ಬಾಡಿಗೆದಾರರನ್ನು ನೀವು ಅನುಮತಿಸುವ ಮೊದಲು ಸರಿಯಾದ ಹಿನ್ನೆಲೆ ಪರಿಶೀಲನೆ ಮಾಡುವುದು ಮುಖ್ಯವಾಗಿದೆ. ಶೈಕ್ಷಣಿಕ ಪ್ರವಾಸವು ನಿಮಗೆ ಹಲವು ವಿಧಗಳಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಪೋಷಕರು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗಬಹುದು. ನಿಮ್ಮ ಕುಟುಂಬ ಜೀವನವನ್ನು ನಿರ್ವಹಿಸಲು ಕಲಿಯಿರಿ. ನಿಮ್ಮ ಕಚೇರಿಯಲ್ಲಿನ ಸಭೆಗಳು ನಿಮ್ಮನ್ನು ಮಾನಸಿಕವಾಗಿ ದಣಿಯುವಂತೆ ಮಾಡಬಹುದು. ಸಂಬಳ ಹೆಚ್ಚಳದ ಸುದ್ದಿ ಬರಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಬೇಗ ಏಳುವುದು ಮತ್ತು ವ್ಯಾಯಾಮ ಮಾಡುವುದು ಒಳ್ಳೆಯದು.

ಲವ್ ಫೋಕಸ್ - ನಿಮ್ಮ ಮೊಂಡಾದ ಮಾತುಗಳು ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಅಭದ್ರತೆಯನ್ನು ಉಂಟುಮಾಡಬಹುದು.

ಅದೃಷ್ಟ ಸಂಖ್ಯೆ: 3

ಅದೃಷ್ಟ ಬಣ್ಣ: ಬಿಳಿ

(ಪ್ರೇಮ್ ಕುಮಾರ್ ಶರ್ಮಾ, ಮನಿಶಾ ಕೌಶಿಕ್ ಅವರನ್ನು +91 9216141456, +91 9716145644 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು; ಇಮೇಲ್: psharma@premastrologer.com, support@askmanisha.com)