Kannada News  /  Astrology  /  Astrological Prediction For January 23 2023
ದಿನಭವಿಷ್ಯ
ದಿನಭವಿಷ್ಯ (File Photo)

Horoscope Today for January 23, 2023: ಕೆಲಸದಲ್ಲಿ ಬಾಸ್‌ನಿಂದ ಮೆಚ್ಚುಗೆ, ಈ ಬಾರಿ ಪ್ರಮೋಷನ್ ಖಚಿತ

23 January 2023, 6:19 ISTHT Kannada Desk
23 January 2023, 6:19 IST

Daily horoscope: ದ್ವಾದಶ ರಾಶಿಚಕ್ರ ಚಿಹ್ನೆಗಳು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ. ನೀವು ನಡೆಯುವ ದಾರಿಯಲ್ಲಿ ಏನಾಗಲಿದೆ ಎಂಬುದರ ಕುರಿತು ಮೊದಲೇ ತಿಳಿದಿರುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಒಳ್ಳೆಯದು. ಇಂದು ನಿಮ್ಮ ಪರವಾಗಿ ರಾಶಿಗಳು ಇವೆಯೇ ಎಂದು ತಿಳಿಯಲು ಮುಂದೆ ಓದಿ.

  • ಸೂರ್ಯೋದಯ: ಬೆಳಗ್ಗೆ 06:46
  • ಸೂರ್ಯಾಸ್ತ: ಸಂಜೆ 06:16
  • ತಿಥಿ: ದ್ವಿತೀಯ (ಸಂಜೆ 06:43ರವರೆಗೆ)
  • ನಕ್ಷತ್ರ: ಧನಿಷ್ಠ (ಮಧ್ಯರಾತ್ರಿ 12:26ರವರೆಗೆ)

ಮೇಷ (ARIES) (ಮಾರ್ಚ್ 21-ಏಪ್ರಿಲ್ 20)

ಟ್ರೆಂಡಿಂಗ್​ ಸುದ್ದಿ

ಮುಂದೆ ಆರೋಗ್ಯಕರ ದಿನವನ್ನು ನಿರೀಕ್ಷಿಸಬಹುದು. ಧ್ಯಾನವನ್ನು ನಿಮ್ಮ ದಿನಚರಿಯ ಭಾಗವಾಗಿ ಮಾಡುವುದರಿಂದ ಆರೋಗ್ಯವನ್ನು ಮತ್ತಷ್ಟು ಸುಧಾರಿಸಬಹುದು. ವೃತ್ತಿಪರ ಪ್ರವಾಸವು ಅನಿರೀಕ್ಷಿತವಾಗಿ ಮಾಡಬೇಕಾಗುವ ಸಾಧ್ಯತೆಯಿದೆ. ನಿಮ್ಮಲ್ಲಿ ಕೆಲವರು ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ದಿನದ ನಿಮ್ಮ ಹಣಕಾಸಿನ ವ್ಯವಹಾರವು ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ. ಆನ್‌ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಇಂದು ಕಠಿಣ ಸಮಯವನ್ನು ಹೊಂದಿರಬಹುದು. ಸಣ್ಣ ವಾದಗಳು ದೊಡ್ಡದಾಗದಂತೆ ನೋಡಿಕೊಳ್ಳಿ.

ಲವ್ ಫೋಕಸ್ - ಇಂದು ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ನೀವು ನಿರೀಕ್ಷಿಸಬಹುದು.

ಅದೃಷ್ಟ ಸಂಖ್ಯೆ - 4

ಅದೃಷ್ಟ ಬಣ್ಣ - ಗುಲಾಬಿ

ವೃಷಭ ರಾಶಿ (TAURUS) (ಏಪ್ರಿಲ್ 21-ಮೇ 20)

ಇಂದು ಪ್ರೇರಣಾದಾಯಕ ದಿನ ನಿಮ್ಮದಾಗಲಿದೆ. ನೀವು ಇಂದು ಭಾವಪರವಶರಾಗುವ ಆಧ್ಯಾತ್ಮಿಕ ಅನುಭವವನ್ನು ಪಡೆಯಬಹುದು. ನಿಮ್ಮ ಕೆಲಸದ ವಾತಾವರಣದಲ್ಲಿನ ನಕಾರಾತ್ಮಕ ಅಂಶಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಐಟಿ ಅಥವಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಿಮ್ಮ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ನಿರೀಕ್ಷಿಸಬಹುದು. ಕೇವಲ ಕ್ಯಾಲರಿಯುಕ್ತ ಆಹಾರ ಸೇವಿಸುವ ಬದಲು ಪೋಷಣೆಯತ್ತ ಗಮನಹರಿಸಿ. ಆರೋಗ್ಯ ತಪಾಸಣೆ ಮಾಡಿಸುವುದು ಒಳ್ಳೆಯದು. ದಿನದ ನಿಮ್ಮ ಹಣಕಾಸು ಹೆಚ್ಚಾಗಿ ಸಮತೋಲಿತವಾಗಿರುತ್ತದೆ.

ಲವ್ ಫೋಕಸ್ - ನಿಮ್ಮ ಸಂಗಾತಿಗೆ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ದಿನಕ್ಕೆ ಒಳ್ಳೆಯದು.

ಅದೃಷ್ಟ ಸಂಖ್ಯೆ - 5

ಅದೃಷ್ಟದ ಬಣ್ಣ - ತಿಳಿ ನೀಲಿ

ಮಿಥುನ (GEMINI) (ಮೇ 21-ಜೂನ್ 21)

ಪ್ರಯಾಣಕ್ಕೆ ಈ ದಿನ ಉತ್ತಮವಾಗಿದೆ. ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ಪ್ರವಾಸಕ್ಕೆ ಸಿದ್ಧರಾಗಿ. ವೃತ್ತಿಪರ ಜೀವನದಲ್ಲೂ ಈ ದಿನ ನಿಮಗೆ ಒಳ್ಳೆಯದಾಗಲಿದೆ. ನೀವು ಮಾಡಿದ ಹೂಡಿಕೆಯಿಂದ ಸ್ವಲ್ಪ ಲಾಭವನ್ನು ನೀವು ನಿರೀಕ್ಷಿಸಬಹುದು. ನಿಮ್ಮ ಆರೋಗ್ಯವನ್ನು ಲಘುವಾಗಿ ಪರಿಗಣಿಸಬೇಡಿ. ನೀವು ತೊಂದರೆಗೊಳಗಾಗಿರುವ ಸಮಸ್ಯೆಗಳಿಗೆ ತಜ್ಞರೊಂದಿಗೆ ಮಾತನಾಡುವುದು ಒಳಿತು. ವಸತಿ ಸಂಬಂಧಿತ ಆಸ್ತಿ ಮೇಲಿನ ಹೂಡಿಕೆ ಲಾಭ ನೀಡುವ ಸಾಧ್ಯತೆಯಿದೆ. ಹಳೆಯ ಸ್ನೇಹಿತರೊಂದಿಗಿನ ಸಂಪರ್ಕವು ಹಳೆ ನೆನಪುಗಳ ಮೆಲುಕು ಹಾಕಲು ಕಾರಣವಾಗುತ್ತದೆ.

ಲವ್ ಫೋಕಸ್ - ನಿಮ್ಮ ಸಂಬಂಧ ಬಲಪಡಿಸಲು ನೀವು ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಾದದಲ್ಲಿ ಪಾಲ್ಗೊಳ್ಳಬೇಡಿ.

ಅದೃಷ್ಟ ಸಂಖ್ಯೆ - 11

ಅದೃಷ್ಟದ ಬಣ್ಣ - ನೇರಳೆ

ಕರ್ಕಾಟಕ (CANCER) (ಜೂನ್ 22-ಜುಲೈ 22)

ನೀವು ಇಂದು ಉತ್ತಮ ಕೌಟುಂಬಿಕ ಸಮಯವನ್ನು ನಿರೀಕ್ಷಿಸಬಹುದು. ಹಿಂದಿನ ಯಾವುದೇ ತಪ್ಪುಗ್ರಹಿಕೆಗಳು ಶೀಘ್ರದಲ್ಲೇ ಪರಿಹರಿಸಲ್ಪಡುತ್ತವೆ. ಇಂದು ಪ್ರಯಾಣ ಮಾಡುವುದು ಉತ್ತಮವಲ್ಲ. ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ಮಾಡಿದ ಹೂಡಿಕೆಯು ಇಂದು ನಿಮಗೆ ಸ್ವಲ್ಪ ಲಾಭವನ್ನು ನೀಡುತ್ತದೆ. ಹೂಡಿಕೆಗೆ ಆಸ್ತಿಯನ್ನು ಸಹ ಒಂದು ಆಯ್ಕೆಯಾಗಿ ಪರಿಗಣಿಸಬಹುದು. ಆರೋಗ್ಯಕರ ದಿನ ನಿಮ್ಮದಾಗಲಿದೆ. ಮನೆಯಲ್ಲಿ ತುಂಬಾ ಸೋಮಾರಿಯಾಗಿ ವರ್ತಿಸುವ ಕುಟುಂಬದ ಸದಸ್ಯರಿಗೆ ನೀವು ಆರೋಗ್ಯ ತರಬೇತುದಾರರಾಗಬಹುದು.

ಲವ್ ಫೋಕಸ್ - ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲು ಕಲಿಯಿರಿ.

ಅದೃಷ್ಟ ಸಂಖ್ಯೆ - 6

ಅದೃಷ್ಟದ ಬಣ್ಣ - ಮೆಜೆಂಟಾ

ಸಿಂಹ (LEO) (ಜುಲೈ 23-ಆಗಸ್ಟ್ 23)

ನಿಮ್ಮ ಮುಂದೆ ಬಹಳ ಸಂತೋಷದ ದಿನವಿದೆ. ನಿಮ್ಮ ವೃತ್ತಿಪರ ಜೀವನದಲ್ಲಿ ಮತ್ತು ನಿಮ್ಮ ವೈಯಕ್ತಿಕ ಜೀವನದಲ್ಲಿ, ನೀವು ಇಂದು ತುಂಬಾ ಸಂತೋಷದ ಕ್ಷಣಗಳನ್ನು ನಿರೀಕ್ಷಿಸಬಹುದು. ನಿಮ್ಮ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ, ಅವುಗಳಿಂದ ಸ್ವಲ್ಪ ಲಾಭವನ್ನು ನಿರೀಕ್ಷಿಸಬಹುದು. ಆಸ್ತಿ ಇಂದು ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಪ್ರಯಾಣವು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಸರಿಯಾದ ಪ್ರೋಟೀನ್ ಸೇವನೆಯ ಮೇಲೆ ಕೇಂದ್ರೀಕರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ನವೀಕರಣ(renovation) ಅಥವಾ ನಿರ್ಮಾಣ ಕಾರ್ಯವನ್ನು ಕೆಲವರು ಇಂದು ಕೈಗೆತ್ತಿಕೊಳ್ಳಬಹುದು.

ಲವ್ ಫೋಕಸ್ - ನಿಮ್ಮ ಸಂಗಾತಿಯೊಂದಿಗೆ ನೆಚ್ಚಿನ ವೆಬ್ ಸರಣಿಯನ್ನು ವೀಕ್ಷಿಸುವ ಮೂಲಕ ದಿನವನ್ನು ಸಂತೋಷವಾಗಿ ಕಳೆಯಬಹುದು.

ಅದೃಷ್ಟ ಸಂಖ್ಯೆ - 15

ಅದೃಷ್ಟ ಬಣ್ಣ - ಕೆನೆ

ಕನ್ಯಾರಾಶಿ (VIRGO) (ಆಗಸ್ಟ್ 24-ಸೆಪ್ಟೆಂಬರ್ 23)

ನಿಮ್ಮ ಮುಂದೆ ತುಂಬಾ ಆರೋಗ್ಯಕರ ದಿನವಿದೆ. ನೀವು ಇಂದು ಕೆಲವು ಹೊಸ ಸ್ನೇಹಿತರನ್ನು ಪಡೆಯುವ ಸಾಧ್ಯತೆಯಿದೆ. ಯಾವುದೇ ಆನ್‌ಲೈನ್ ವಹಿವಾಟು ಮಾಡುವಾಗ ಜಾಗರೂಕರಾಗಿರಿ. ನಿಮ್ಮ ನೆಚ್ಚಿನ ಸ್ಟಾಕ್ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ನಿಮ್ಮದೇ ಸಾಮರ್ಥ್ಯದಲ್ಲಿ ನೀವು ಮಾಡಿದ ಕೆಲಸಕ್ಕೆ ಮೆಚ್ಚುಗೆಯನ್ನು ನಿರೀಕ್ಷಿಸಬಹುದು. ಆಸ್ತಿ ಇಂದು ಉತ್ತಮ ಆದಾಯದ ಮೂಲವಾಗಿರಬಹುದು. ನಿಮ್ಮ ಕುಟುಂಬದೊಂದಿಗೆ ನಿಮಗೆ ಸ್ವಲ್ಪ ಅನಾನುಕೂಲತೆ ಉಂಟಾಗಬಹುದು. ಅವರೊಂದಿಗೆ ಅನಾವಶ್ಯಕ ವಾದ ವಿವಾದಗಳಿಗೆ ಒಳಗಾಗದಂತೆ ನೋಡಿಕೊಳ್ಳಿ.

ಲವ್ ಫೋಕಸ್ - ನಿಮ್ಮ ಸಂಗಾತಿಗೆ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದರ ಕುರಿತು ಪತ್ರಗಳನ್ನು ಬರೆಯುವುದು ರೂಢಿಯಲ್ಲಿರಲಿ.

ಅದೃಷ್ಟ ಸಂಖ್ಯೆ - 2

ಅದೃಷ್ಟದ ಬಣ್ಣ - ಹಸಿರು

ತುಲಾ (LIBRA) (ಸೆಪ್ಟೆಂಬರ್ 24-ಅಕ್ಟೋಬರ್ 23)

ನೀವು ಮಾಡಿದ ಹೂಡಿಕೆಯಿಂದ ಸ್ವಲ್ಪ ಆರ್ಥಿಕ ಲಾಭವನ್ನು ಪಡೆಯುವ ಹೆಚ್ಚಿನ ಅವಕಾಶವಿದೆ. ನೀವು ಆಸ್ತಿಯಿಂದ ಕೆಲವು ಪ್ರಯೋಜನಗಳನ್ನು ನಿರೀಕ್ಷಿಸಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆಹಾರದಿಂದ ನೀವು ಪಡೆಯಲು ವಿಫಲವಾದ ಸೂಕ್ಷ್ಮ ಪೋಷಕಾಂಶಗಳಿಗೆ ನೀವು ಪೂರಕ ಆಹಾರ(supplements)ಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದಷ್ಟು ಧನಾತ್ಮಕವಾಗಿರಲು ಕಲಿಯಿರಿ. ನೀವು ಇಂದು ಉತ್ತಮ ಕೌಟುಂಬಿಕ ಸಮಯವನ್ನು ಹೊಂದುವ ನಿರೀಕ್ಷೆಯಿದೆ.

ಲವ್ ಫೋಕಸ್ - ನಿಮ್ಮ ಸಂಗಾತಿಗೆ ವಿಶೇಷ ಭಾವನೆ ಮೂಡಿಸುವುದು ಉತ್ತಮ. ಅತಿಯಾಗಿ ಸ್ವಾಮ್ಯಸೂಚಕವಾಗಿರುವುದನ್ನು ತಪ್ಪಿಸಿ.

ಅದೃಷ್ಟ ಸಂಖ್ಯೆ: 15

ಅದೃಷ್ಟದ ಬಣ್ಣ: ಪೀಚ್

ವೃಶ್ಚಿಕ ರಾಶಿ (SCORPIO) (ಅಕ್ಟೋಬರ್ 24-ನವೆಂಬರ್ 22)

ನೀವು ಸಮತೋಲಿತ ದಿನವನ್ನು ಎದುರುನೋಡಬಹುದು. ನಿಮ್ಮ ನೆಚ್ಚಿನ ಹೂಡಿಕೆಗಳಿಂದ ಲಾಭವನ್ನು ನಿರೀಕ್ಷಿಸಬಹುದು. ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ. ನಿಮ್ಮ ಬಾಸ್‌ಗೆ ನೀವು ನೀಡುವ ಆಲೋಚನೆಗಳಿಗೆ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ನಿಮ್ಮ ಚರ್ಮದ ಆರೈಕೆಯ ಮೇಲೆ ನೀವು ಗಮನ ಹರಿಸಬೇಕು. ನಿಮ್ಮ ಮಾನಸಿಕ ಯೋಗಕ್ಷೇಮಕ್ಕೆ ಸಮಾನ ಪ್ರಾಮುಖ್ಯತೆ ನೀಡಿ. ನಿಮ್ಮ ಕಿರಿಯ ಸಹೋದರರು ನಿಮಗೆ ದೇವರ ಆಶೀರ್ವಾದ. ಅವರಿಗೆ ಸಣ್ಣ ಉಡುಗೊರೆಗಳನ್ನು ನೀಡಿ.

ಲವ್ ಫೋಕಸ್ - ನಿಮ್ಮ ಸಂಗಾತಿಯೊಂದಿಗೆ ನೀವು ಕಠಿಣ ದಿನವನ್ನು ಹೊಂದಿರಬಹುದು. ನಿಮ್ಮ ಅಹಂ ನಿಮ್ಮ ಸಂಗಾತಿಯ ಮೇಲಿನ ನಿಮ್ಮ ಪ್ರೀತಿಗೆ ಅಡ್ಡಿಯಾಗದಂತೆ ನೋಡಿ.

ಅದೃಷ್ಟ ಸಂಖ್ಯೆ - 9

ಅದೃಷ್ಟದ ಬಣ್ಣ - ಮರೂನ್

ಧನು ರಾಶಿ (SAGITTARIUS) (ನವೆಂಬರ್ 23-ಡಿಸೆಂಬರ್ 21)

ದಿನವು ನಿಮಗೆ ಪ್ರಯಾಣಿಸಲು ಉತ್ತಮ ಅವಕಾಶವನ್ನು ತರುತ್ತದೆ. ನಿಮ್ಮ ಕ್ಯಾಮರಾವನ್ನು ನಿಮ್ಮೊಂದಿಗೆ ತೆಗೆದುಕೊಳ್ಳಲು ಮರೆಯಬೇಡಿ. ನೀವು ಇಂದು ಆಧ್ಯಾತ್ಮಿಕ ಅನುಭವವನ್ನು ನಿರೀಕ್ಷಿಸಬಹುದು. ನಿಮ್ಮ ಹಣಕಾಸು ಈ ದಿನ ನಿಮಗೆ ಉತ್ತಮ ಲಾಭವನ್ನು ನೀಡಲು ಸಾಧ್ಯವಾಗದಿರಬಹುದು. ನಿಮ್ಮ ಪೋಷಕಾಂಶಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವ ಸಾಧ್ಯತೆಗಳಿವೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವತ್ತ ಗಮನಹರಿಸಿ.

ಲವ್ ಫೋಕಸ್ - ನೀವು ಅವರನ್ನು ಇನ್ನಷ್ಟು ಮುದ್ದಿಸಿದರೆ ನಿಮ್ಮ ಸಂಗಾತಿ ಅದನ್ನು ಮೆಚ್ಚುತ್ತಾರೆ.

ಅದೃಷ್ಟ ಸಂಖ್ಯೆ - 8

ಅದೃಷ್ಟ ಬಣ್ಣ - ಬಿಳಿ

ಮಕರ (CAPRICORN) (ಡಿಸೆಂಬರ್ 22-ಜನವರಿ 21)

ನೀವು ಇಂದು ಉತ್ತಮ ಕುಟುಂಬ ಸಮಯವನ್ನು ನಿರೀಕ್ಷಿಸಬಹುದು. ನಿಮ್ಮ ಕುಟುಂಬದ ಸದಸ್ಯರು ಮನೆಗೆ ಭೇಟಿ ನೀಡುವ ಮೂಲಕ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ನಿಮ್ಮ ನೆಚ್ಚಿನ ತಾಣಕ್ಕೆ ಭೇಟಿ ನೀಡುವ ಮೂಲಕ ಈ ದಿನ ಉತ್ತಮವಾಗಿರಲಿದೆ. ನಿಮ್ಮ ವೃತ್ತಿಪರ ಜೀವನದಲ್ಲಿ ಇಂದು ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಹಣಕಾಸು ವಿಚಾರ ಈ ದಿನಕ್ಕೆ ಸಮತೋಲಿತವಾಗಿರುತ್ತದೆ. ಇಂದು ಹಣದ ವಿಷಯದಲ್ಲಿ ನಿಮ್ಮನ್ನು ಚಿಂತೆಗೀಡುಮಾಡುವಂತಹ ಅಂಶಗಳೇನೂ ಇಲ್ಲ.

ಲವ್ ಫೋಕಸ್ - ಇಂದು ನಿಮ್ಮ ಸಂಗಾತಿಯೊಂದಿಗೆ ನೀವು ಹಂಚಿಕೊಳ್ಳುವ ಗುಣಮಟ್ಟದ ಸಮಯದೊಂದಿಗೆ ಯಾವುದೇ ಉಡುಗೊರೆಯನ್ನು ಸರಿದೂಗಿಸಲು ಸಾಧ್ಯವಿಲ್ಲ.

ಅದೃಷ್ಟ ಸಂಖ್ಯೆ - 5

ಅದೃಷ್ಟದ ಬಣ್ಣ - ತಿಳಿ ನೀಲಿ

ಕುಂಭ (AQUARIUS) (ಜನವರಿ 22-ಫೆಬ್ರವರಿ 19)

ಈ ದಿನ ನೀವು ಉತ್ತಮ ಆರ್ಥಿಕ ಸ್ಥಿತಿಯಲ್ಲಿರುತ್ತೀರಿ. ನಿಮಗೆ ಹಣವನ್ನು ನೀಡಬೇಕಾದ ಯಾರಾದರೂ ಇದ್ದರೆ, ಶೀಘ್ರದಲ್ಲೇ ಅದನ್ನು ಹಿಂತಿರುಗಿಸಬಹುದು. ನೀವು ಇಂದು ಉತ್ತಮ ಆರೋಗ್ಯವನ್ನು ನಿರೀಕ್ಷಿಸಬಹುದು. ನಿಯಮಿತವಾಗಿ ಜಂಕ್ ಫುಡ್ ಸೇವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ವೃತ್ತಿಪರ ಜೀವನ ಇಂದು ಸುಗಮವಾಗಿರಬಹುದು. ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ನೀವು ನಿರೀಕ್ಷಿಸಬಹುದು. ನಿಮ್ಮ ಪೋಷಕರನ್ನು ನೀವು ಎಷ್ಟು ಪ್ರೀತಿಸುತ್ತೀರಿ ಎಂದು ಹೇಳಲು ಮರೆಯದಿರಿ.

ಲವ್ ಫೋಕಸ್ - ನಿಮ್ಮ ಪ್ರೀತಿಯ ಜೀವನಕ್ಕೆ ಈ ದಿನ ತುಂಬಾ ಒಳ್ಳೆಯದು.

ಅದೃಷ್ಟ ಸಂಖ್ಯೆ - 11

ಅದೃಷ್ಟದ ಬಣ್ಣ - ಕೇಸರಿ

ಮೀನ ರಾಶಿ (PISCES) (ಫೆಬ್ರವರಿ 20-ಮಾರ್ಚ್ 20)

ನಿಮ್ಮ ವೃತ್ತಿಪರ ಜೀವನ ಇಂದು ಉತ್ತಮವಾಗಿರುತ್ತದೆ. ನೀವು ಕಾಯುತ್ತಿದ್ದ ಪ್ರಮೋಷನ್‌ ಇದೀಗ ನಿಮ್ಮ ಸಮೀಪ ಬರಬಹುದು. ನೀವು ದಿನವಿಡೀ ಪ್ರೇರಣೆಯನ್ನು ಅನುಭವಿಸುವ ಸಾಧ್ಯತೆಯಿದೆ. ಆದರೆ, ನಿಮ್ಮ ಆರೋಗ್ಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನೀವು ಅದರ ಅಗತ್ಯವನ್ನು ಅನುಭವಿಸಿದರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಇಂದು ಉತ್ತಮ ಕುಟುಂಬ ಸಮಯವನ್ನು ನಿರೀಕ್ಷಿಸಲಾಗಿದೆ. ಆಸ್ತಿ ಇಂದು ನಿಮಗೆ ಸ್ವಲ್ಪ ಲಾಭದಾಯಕವಾಗಬಹುದು.

ಲವ್ ಫೋಕಸ್ - ಕೆಲವು ತಪ್ಪುಗ್ರಹಿಕೆಗಳು ಇಂದು ಸಮಸ್ಯೆಯನ್ನು ಉಂಟುಮಾಡಬಹುದು. ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಕಲಿಯಿರಿ.

ಅದೃಷ್ಟ ಸಂಖ್ಯೆ - 9

ಅದೃಷ್ಟದ ಬಣ್ಣ - ಗೋಲ್ಡನ್