Uttarabhadra Nakshatra: ಗುರು ಹಿರಿಯರಲ್ಲಿ ಗೌರವ, ಕೃಷಿಯಲ್ಲಿ ಬಹಳ ಆಸಕ್ತಿ; ಉತ್ತರಾಭಾದ್ರ ನಕ್ಷತ್ರದವರ ಗುಣ ಲಕ್ಷಣಗಳು ಹೀಗಿದೆ
ಉತ್ತರಾಭಾದ್ರ ನಕ್ಷತ್ರದವರು ಹೆದರುವುದಿಲ್ಲ. ಯಾರೇ ತಪ್ಪು ಮಾಡಿದರೂ ನೇರ ನಿಷ್ಠುರವಾಗಿ ತಿಳಿಸುವುದೇ ಇವರ ಗುಣ. ಇದರಿಂದ ಇವರಿಗೆ ವಿರೋಧಿಗಳು ಹೆಚ್ಚಾಗಿರುತ್ತಾರೆ. ಮಾತನಾಡಲು ಆರಂಭಿಸಿದರೆ ಕೊನೆ ಮೊದಲಿರುವುದಿಲ್ಲ. ಅನಾವಶ್ಯಕ ಮಾತಿನಿಂದಲೇ ವಿವಾದಕ್ಕೆ ಒಳಗಾಗುತ್ತಾರೆ.
ಉತ್ತರಾಭಾದ್ರ ನಕ್ಷತ್ರವು ಶನಿಯ ನಕ್ಷತ್ರವಾಗುತ್ತದೆ. ಆದ್ದರಿಂದ ಇದರ ದಶಾಕಾಲವು 19 ವರ್ಷಗಳಾಗಿವೆ. ಈ ನಕ್ಷತ್ರದ ದೇವತೆ ರುದ್ರನ ಪ್ರತಿರೂಪವಾದ ಆಹಿರ್ಬುಧ್ನ್ಯ ಆಗುತ್ತದೆ. ಉತ್ತರಾಭಾದ್ರ ನಕ್ಷತ್ರದ ಎಲ್ಲಾ ನಾಲ್ಕು ಪಾದಗಳು ಮೀನ ರಾಶಿಯಲ್ಲಿ ಬರುತ್ತವೆ. ಈ ನಕ್ಷತ್ರದಲ್ಲಿ ಎಲ್ಲಾ ಶುಭಕಾರ್ಯಗಳನ್ನು ಮಾಡಬಹುದಾಗಿದೆ.
ಶನಿಯ ನಕ್ಷತ್ರ
ಮೀನ ಜಲರಾಶಿಯಾಗುತ್ತದೆ. ಉತ್ತರಾಭಾದ್ರ ನಕ್ಷತ್ರವು ಶನಿಯ ನಕ್ಷತ್ರವಾಗುತ್ತದೆ. ಆದ್ದರಿಂದಾಗಿ ಈ ನಕ್ಷತ್ರದಲ್ಲಿ ಹುಟ್ಟಿದ ಕೃಷಿಕರು ಜೀವನದಲ್ಲಿ ಸದಾ ಸಂತಸದಿಂದ ಬಾಳುತ್ತಾರೆ. ಹಾಗೆಯೇ ನೀರಿಗೆ ಸಂಬಂಧಿಸಿದ ಯಾವುದೇ ವ್ಯಾಪಾರ ವ್ಯವಹಾರಗಳು ಹೆಚ್ಚಿನ ಲಾಭ ನೀಡುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ಬಹುತೇಕರು ಸಾಕು ಪ್ರಾಣಿಗಳ ಮಾರಾಟದಲ್ಲಿ ಉತ್ತಮ ಆದಾಯ ಗಳಿಸುತ್ತಾರೆ.
ಉತ್ತರಾಭಾದ್ರ ನಕ್ಷತ್ರದಲ್ಲಿ ಕೃಷಿ ಕಾರ್ಯವನ್ನು ಆರಂಭಿಸಿದರೆ, ಉತ್ತಮ ಫಸಲು ದೊರೆಯುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಒಳ್ಳೆ ಮಕ್ಕಳಿರುತ್ತಾರೆ್ ಬುದ್ಧಿವಂತಿಕೆಯ ಮಾತುಕತೆಯಿಂದ ವಿರೋಧಿಗಳನ್ನು ಗೆಲ್ಲುವರು. ಧಾರ್ಮಿಕತೆ ಮತ್ತು ಸಂಪ್ರದಾಯಗಳಲ್ಲಿ ವಿಶೇಷವಾದಂತಹ ಅಭಿವೃದ್ಧಿ ಇರುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತಿನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ವಂಶದಲ್ಲೇ ಇವರು ವಿಶೇಷ ಸ್ಥಾನಮಾನ ಮತ್ತು ಗೌರವ ಗಳಿಸುವ ಜನರು. ಕಷ್ಟ ನಷ್ಟದಲ್ಲಿ ಇರುವ ಜನ ಸಾಮಾನ್ಯರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ವಂತ ಸಂಘ ಸಂಸ್ಥೆಗಳನ್ನು ಆರಂಭಿಸುತ್ತಾರೆ.
ಒಂದಕ್ಕಿಂತಲೂ ಹೆಚ್ಚಿನ ವಾಹನಗಳಿರುತ್ತವೆ
ಆಕರ್ಷಕ ಮನೆಯನ್ನು ಕೊಳ್ಳುವಿರಿ. ಸ್ವಂತ ಬಳಕೆಗಾಗಿ ಒಂದಕ್ಕಿಂತಲೂ ಹೆಚ್ಚಿನ ವಾಹನವಿರುತ್ತದೆ. ಸದಾಕಾಲ ಒಳ್ಳೆಯ ಫಲಿತಾಂಶಗಳನ್ನು ನಿರೀಕ್ಷಿಸುವ ಕಾರಣ ತಪ್ಪನ್ನು ಮಾಡದೆ ಸರಿಯಾದ ಮಾರ್ಗದಲ್ಲಿ ನಡೆಯುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಾಮಾನ್ಯವಾಗಿ ಮೀನ ಲಗ್ನದಲ್ಲಿ ಜನಿಸಿದವರಿಗೆ ದೃಢವಾದ ಮನಸ್ಸಿರುವುದಿಲ್ಲ. ಆದರೆ ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ.
ವ್ಯವಸಾಯ ಮಾಡುವ ಆಸೆ ಇರುತ್ತದೆ. ಒಂದು ವೇಳೆ ಸಾಧ್ಯವಾಗದೇ ಹೋದ ಪಕ್ಷದಲ್ಲಿ ಬೇಸಾಯಗಾರರಿಗೆ ಸಹಾಯ ಮಾಡುತ್ತಾರೆ. ಕೃಷಿ ಕಾರ್ಯಕ್ಕೆ ಅಗತ್ಯವಾದಂತಹ ಉಪಕರಣಗಳನ್ನು ಒದಗಿಸುವ ಕೆಲಸ ಆರಂಭಿಸುತ್ತಾರೆ. ಇವರಿಗೆ ಸಾಮಾನ್ಯವಾಗಿ ತೋಟದ ಮನೆ ಇಷ್ಟವಾಗುತ್ತದೆ.
ಅನಾವಶ್ಯಕ ಹಣ ಖರ್ಚು ಮಾಡುವುದಿಲ್ಲ
ವಿನಾಕಾರಣ ಹಣ ಖರ್ಚು ಮಾಡುವುದಿಲ್ಲ. ಬೇರೆಯವರಿಂದ ಹಣ ಪಡೆಯುವುದು ಅಥವಾ ಸಾಲ ಮಾಡುವುದು ಇವರಿಗೆ ಇಷ್ಟವಾಗದ ವಿಚಾರ. ವಿದ್ಯೆ ಕಡಿಮೆ ಇದ್ದರೂ ಬುದ್ಧಿಶಕ್ತಿ ಅಪಾರವಾಗಿರುತ್ತದೆ. ಧಾರ್ಮಿಕ ಕ್ರಿಯಾವಿಧಿಗಳನ್ನು ಹೆಚ್ಚಾಗಿ ನಡೆಸುತ್ತಾರೆ. ಸ್ತ್ರೀಯರು ಸ್ವತ: ಸಂಗಾತಿಯ ಯೋಗಕ್ಷೇಮದ ಹೊಣೆ ಹೊರುತ್ತಾರೆ. ಗುರು ಹಿರಿಯರಲ್ಲಿ ವಿಶೇಷವಾದ ಭಯ ಗೌರವ ಭಕ್ತಿ ಇರುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಪ್ರೀತಿ ಮತ್ತು ಕನಿಕರವಿರುತ್ತದೆ. ತಂದೆಯೊಡನೆ ಅನಾವಶ್ಯಕ ವಾದ ವಿವಾದವಿರುತ್ತದೆ. ನೀರೆಂದರೆ ಇಷ್ಟ, ಇವರು ಈಜುವುದನ್ನು ಅಭ್ಯಾಸ ಮಾಡಿದಲ್ಲಿ ವಿಶೇಷ ಸಾಧನೆಗೆ ಪಾತ್ರರಾಗುತ್ತಾರೆ.
ಉತ್ತರಾಭಾದ್ರ ನಕ್ಷತ್ರದವರು ಹೆದರುವುದಿಲ್ಲ. ಯಾರೇ ತಪ್ಪು ಮಾಡಿದರೂ ನೇರ ನಿಷ್ಠುರವಾಗಿ ತಿಳಿಸುವುದೇ ಇವರ ಗುಣ. ಇದರಿಂದ ಇವರಿಗೆ ವಿರೋಧಿಗಳು ಹೆಚ್ಚಾಗಿರುತ್ತಾರೆ. ಮಾತನಾಡಲು ಆರಂಭಿಸಿದರೆ ಕೊನೆ ಮೊದಲಿರುವುದಿಲ್ಲ. ಅನಾವಶ್ಯಕ ಮಾತಿನಿಂದಲೇ ವಿವಾದಕ್ಕೆ ಒಳಗಾಗುತ್ತಾರೆ. ಉದ್ಯೋಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಾರೆ. ಒಂದಕ್ಕಿಂತಲೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಒಮ್ಮೆಲೇ ಮಾಡುವ ಚಾಣಾಕ್ಷರು. ಕುಟುಂಬದ ಬಗ್ಗೆ ಅಪಾರ ಪ್ರೀತಿ ಇರುತ್ತದೆ. ತಂದೆಯ ಜೊತೆ ಕಾಲ ಕಳೆಯುವುದೆಂದರೆ ಅತಿ ಪ್ರೀತಿ. ದೇಶದ ಬಗ್ಗೆ ವಿಶೇಷ ಗೌರವವಿರುತ್ತದೆ. ಜನಸೇವೆ ಮಾಡಲು ಸ್ವತ: ಸಂಘ ಸಂಸ್ಥೆಯನ್ನು ಆರಂಭಿಸುತ್ತಾರೆ. ಐಷಾರಾಮಿ ಜೀವನ ಇಷ್ಟಪಡದೆ ಹೋದರೂ ಕಷ್ಟಪಡಲು ಇಷ್ಟಪಡುವುದಿಲ್ಲ. ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ನೀಡುತ್ತಾರೆ.