ಕನ್ನಡ ಸುದ್ದಿ  /  Astrology  /  Astrology News Details About Ardra Nakshatra People Kundali News Spiritual News Horoscope Zodiac Signs Rsm

Ardra Nakshatra: ಇಳಿ ವಯಸ್ಸಿನಲ್ಲೂ ಯುವಕರಂತೆ ಬಲಿಷ್ಠರಾಗಿ ಕೆಲಸ ಕಾರ್ಯ ಮಾಡುವ ಆರ್ದ್ರಾ ನಕ್ಷತ್ರದವರ ಬಗ್ಗೆ ಒಂದಷ್ಟು ವಿವರ

ಕಷ್ಟದಲ್ಲಿ ಬೆಳೆದವರಿಗೆ ಸಹಾಯ ಹಸ್ತ ನೀಡುವುದೇ ಆರ್ದ್ರಾ ನಕ್ಷತ್ರದವರ ಜನ್ಮಗುಣ. ಓಡಾಡಲು ಸಣ್ಣ ಮಟ್ಟದ ವಾಹನ ಇವರ ಬಳಿ ಇರುತ್ತದೆ . ಅತ್ಯಂತ ಸ್ವಾಭಿಮಾನಿಗಳು. ಯಾರು ಬೇರೆಯವರನ್ನು ಏನೇ ಅಂದರು ತಮ್ಮನ್ನೇ ಎಂದು ಭಾವಿಸುವುದು ಇವರ ಹುಟ್ಟುಗುಣ.

ಆರ್ದ್ರಾ ನಕ್ಷತ್ರದವರ ಬಗ್ಗೆ ಮಾಹಿತಿ
ಆರ್ದ್ರಾ ನಕ್ಷತ್ರದವರ ಬಗ್ಗೆ ಮಾಹಿತಿ (PC: Unsplash)

ಆರ್ದ್ರಾ ನಕ್ಷತ್ರವನ್ನು ರುದ್ರ ನಕ್ಷತ್ರ ಎಂದು ಕರೆಯುತ್ತೇವೆ. ಇದು ಮಿಥುನ ರಾಶಿಯಲ್ಲಿ ಬರುತ್ತದೆ.ಇವರಿಗೆ ಮಾಡುವ ಕೆಲಸ ಕಾರ್ಯಗಳಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಇಳಿ ವಯಸಿನಲ್ಲಿಯೂ ಕೂಡಾ ಇವರು ಯುವಕರಷ್ಟೇ ಬಲಿಷ್ಠವಾಗಿ ಕೆಲಸ ಕಾರ್ಯದಲ್ಲಿ ತೊಡಗುತ್ತಾರೆ. ಇವರು ತಮ್ಮ ಕ್ಷೇಮವನ್ನು ಮಾತ್ರವಲ್ಲದೆ ಬೇರೆಯವರ ಜೀವನದಲ್ಲಿಯೂ ಮುಖ್ಯ ಪಾತ್ರವನ್ನು ವಹಿಸುತ್ತಾರೆ.

ಆದಾಯಕ್ಕಿಂತಲೂ ಖರ್ಚು ವೆಚ್ಚ ಹೆಚ್ಚು

ಆರ್ದ್ರಾ ನಕ್ಷತ್ರದವರಿಗೆ ಕೋಪ ಬೇಗನೆ ಬರುತ್ತದೆ ಆದರೆ ಅದರಿಂದ ಯಾರಿಗೂ ತೊಂದರೆಯಾಗದು. ಹಣಕಾಸಿನ ವಿಚಾರದಲ್ಲಿ ಬುದ್ದಿವಂತಿಕೆಯಿಂದ ವರ್ತಿಸುತ್ತಾರೆ. ಇವರ ವಿದ್ಯಾಭ್ಯಾಸ ಇತರ ಜನರಿಗೆ ಉಪಯೋಗವಾಗುವಂತಿರುತ್ತದೆ. ಇವರು ಮನದಲ್ಲಿರುವ ಎಲ್ಲಾ ವಿಚಾರವನ್ನು ಸುಲಭವಾಗಿ ಯಾರಿಗೂ ಹೇಳುವುದಿಲ್ಲ. ದೇವರಲ್ಲಿ ನಂಬಿಕೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಆತ್ಮೀಯರ ವಿಯೋಗವಿರುತ್ತದೆ. ಇವರಿಗೆ ಸಾಮಾನ್ಯವಾಗಿ ಸಂಬಂಧದಲ್ಲಿ ವಿವಾಹವಾಗುತ್ತದೆ. ವೃತ್ತಿಯಲ್ಲಿ ಹಲವು ಬಾರಿ ಕೆಲವು ಅಪಾಯದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಹೆಚ್ಚಾಗಿರುತ್ತವೆ. ಉತ್ತಮ ಆರೋಗ್ಯ ವಿರುತ್ತದೆ. ತಮ್ಮೆಲ್ಲಾ ಕನಸುಗಳು ನನಸಾಗಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಸಾಮಾನ್ಯವಾಗಿ ಇವರಿಗೆ ಕಣ್ಣಿನ ತೊಂದರೆ ಇರುತ್ತದೆ. ಹಣಕಾಸಿನ ವ್ಯವಹಾರವನ್ನು ಎಂದಿಗೂ ಮಾಡುವುದಿಲ್ಲ.

ಸಹಾಯ ಹಸ್ತ ಚಾಚುವುದರಲ್ಲಿ ಎತ್ತಿದ ಕೈ

ಕಷ್ಟದಲ್ಲಿ ಬೆಳೆದವರಿಗೆ ಸಹಾಯ ಹಸ್ತ ನೀಡುವುದೇ ಆರ್ದ್ರಾ ನಕ್ಷತ್ರದವರ ಜನ್ಮಗುಣ. ಓಡಾಡಲು ಸಣ್ಣ ಮಟ್ಟದ ವಾಹನ ಇವರ ಬಳಿ ಇರುತ್ತದೆ . ಅತ್ಯಂತ ಸ್ವಾಭಿಮಾನಿಗಳು. ಯಾರು ಬೇರೆಯವರನ್ನು ಏನೇ ಅಂದರು ತಮ್ಮನ್ನೇ ಎಂದು ಭಾವಿಸುವುದು ಇವರ ಹುಟ್ಟುಗುಣ. ಜನಸೇವೆ ಮಾಡುವ ಅವಕಾಶ ದೊರೆತಾಗ ಅದನ್ನು ಸದ್ವಿನಿಯೋಗ ಮಾಡಿಕೊಳ್ಳುತ್ತಾರೆ . ಐಷಾರಾಮಿ ಜೀವನ ಇಷ್ಟಪಡುವುದಿಲ್ಲ. ಹಣ ಮತ್ತು ಆಸ್ತಿಯ ವಿಚಾರದಲ್ಲಿ ಸಂಬಂಧಿಕರಿಂದ ಸುಲಭವಾಗಿ ಮೋಸ ಹೋಗುತ್ತಾರೆ.

ಬರವಣಿಗೆಯಲ್ಲಿ ಆಸಕ್ತಿ ಇರುತ್ತದೆ, ಆದರೆ ಬರವಣಿಗೆಯನ್ನು ವೃತ್ತಿಯಾಗಿ ಸ್ವೀಕರಿಸುವುದಿಲ್ಲ. ಒಳ್ಳೆಯ ಮಕ್ಕಳಿರುತ್ತಾರೆ. ತಮ್ಮ ಜೀವಿತಾವಧಿಯ ಕಾಲದಲ್ಲಿಯೇ ಮಕ್ಕಳು ಜೀವನದ ಉತ್ತುಂಗ ಶ್ರೇಣಿ ತಲುಪುತ್ತಾರೆ. ಅನೇಕ ಯಾತ್ರಾಸ್ಥಳಗಳಿಗೆ ಭೇಟಿ ನೀಡುತ್ತಾರೆ. ಒಟ್ಟಾರೆ ಇವರದ್ದು ಜನ ಮೆಚ್ಚುವ ವ್ಯಕ್ತಿತ್ವ. ಸ್ವಂತ ವ್ಯಾಪಾರ ವ್ಯವಹಾರಗಳನ್ನು ಮಾಡುವುದಿಲ್ಲ. ಈ ನಕ್ಷತ್ರದ ಅನೇಕ ಜನರು ಹಣವನ್ನು ಉಳಿಸುವ ಮನಸ್ಸು ಮಾಡುವುದಿಲ್ಲ.

ಐಷಾರಾಮಿ ಜೀವನ ಇಷ್ಟಪಡುವುದಿಲ್ಲ, ಅಡುಗೆಯಲ್ಲಿ ಬಹಳ ಆಸಕ್ತಿ; ಮೃಗಶಿರಾ ನಕ್ಷತ್ರದವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

ಮೃಗಶಿರಾ ನಕ್ಷತ್ರವು ಧೈರ್ಯಕ್ಕೆ ಆಗರ. ಈ ನಕ್ಷತ್ರದ ಒಂದು ಮತ್ತು ಎರಡನೇ ಪಾದಗಳು ವೃಷಭ ರಾಶಿಯಲ್ಲಿ ಬಂದರೆ, ಮೂರು ನಾಲ್ಕನೇ ಪಾದಗಳು ಮಿಥುನ ರಾಶಿಯಲ್ಲಿ ಬರುತ್ತದೆ. ಈ ಕಾರಣದಿಂದ ಮಿಥುನ ಮತ್ತು ವೃಷಭ ರಾಶಿಯ ಒಟ್ಟಾರೆ ಗುಣ ಧರ್ಮಗಳು ಈ ನಕ್ಷತ್ರದಲ್ಲಿ ಜನಿಸಿದವರಿಗೆ ದೊರೆಯುತ್ತದೆ. ಮೃಗಶಿರಾ ನಕ್ಷತ್ರದವರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ಶಾಂತರಾದರೂ ಕೋಪ ಬಂದಾಗ ಉಗ್ರವಾಗಿ ವರ್ತಿಸುತ್ತಾರೆ; ಕೃತ್ತಿಕಾ ನಕ್ಷತ್ರದವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಅಶ್ವಿನಿ ಮತ್ತು ಭರಣಿ ನಕ್ಷತ್ರಗಳ ನಾಲ್ಕೂ ಪಾದಗಳು ಮೇಷ ರಾಶಿಯಲ್ಲಿ ಬರುತ್ತವೆ. ಆದರೆ ಕೃತ್ತಿಕ ನಕ್ಷತ್ರದ ಒಂದನೇ ಪಾದ ಮೇಷದಲ್ಲಿಯೂ, ಉಳಿದ ಮೂರೂ ಪಾದಗಳು ವೃಷಭದಲ್ಲಿಯೂ ಬರುತ್ತದೆ. ಆದ್ದರಿಂದ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ಫಲವು ಎರಡೂ ರಾಶಿಯನ್ನು ಅವಲಂಬಿಸಿರುತ್ತದೆ. ಕೃತ್ತಿಕಾ ನಕ್ಷತ್ರದವರ ಬಗ್ಗೆ ತಿಳಿಯಲು ಈ ಲಿಂಕ್‌ ಒತ್ತಿ.

ವಿಭಾಗ