ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Budha Mahadasha: ಬುಧ ಮಹಾದಶಾ ಅವಧಿಯಲ್ಲಿ ಎದುರಾಗುವ ದೋಷಕ್ಕೆ ಏನು ಪರಿಹಾರ? ಇಲ್ಲಿದೆ ಮಾಹಿತಿ ಮಾಹಿತಿ

Budha Mahadasha: ಬುಧ ಮಹಾದಶಾ ಅವಧಿಯಲ್ಲಿ ಎದುರಾಗುವ ದೋಷಕ್ಕೆ ಏನು ಪರಿಹಾರ? ಇಲ್ಲಿದೆ ಮಾಹಿತಿ ಮಾಹಿತಿ

Budha Mahadasha: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ಬುದ್ಧಿ ಮತ್ತು ಜ್ಞಾನದ ಸಂಕೇತ ಎಂದು ಹೇಳಲಾಗಿದೆ. ಬುಧ ಮಹಾದಶಾವು 17 ವರ್ಷಗಳ ಅವಧಿಯಾಗಿದೆ. ಈ ಸಮಯದಲ್ಲಿ ವ್ಯಕ್ತಿಯು ಜೀವನದಲ್ಲಿ ಉನ್ನತಿಯನ್ನು ಕಂಡರೂ ಕೆಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದರ ಪರಿಹಾರಕ್ಕಾಗಿ ಏನು ಮಾಡಬೇಕು? ಯಾವ ದೇವರನ್ನು ಆರಾಧಿಸಬೇಕು ತಿಳಿಯಲು ಮುಂದೆ ಓದಿ.

ಬುಧ ಮಹಾದಶಾ ಅವಧಿಯಲ್ಲಿ ಎದುರಾಗುವ ದೋಷಕ್ಕೆ ಏನು ಪರಿಹಾರ? ಇಲ್ಲಿದೆ ಮಾಹಿತಿ  ಮಾಹಿತಿ
ಬುಧ ಮಹಾದಶಾ ಅವಧಿಯಲ್ಲಿ ಎದುರಾಗುವ ದೋಷಕ್ಕೆ ಏನು ಪರಿಹಾರ? ಇಲ್ಲಿದೆ ಮಾಹಿತಿ ಮಾಹಿತಿ

ಬುಧ, ನಮ್ಮ ಸೌರ ಮಂಡಲದ ಅತ್ಯಂತ ಚಿಕ್ಕ ಗ್ರಹ. ಸೂರ್ಯನಿಗೆ ಸಮೀಪದ ಗ್ರಹವೂ ಹೌದು. ಇದು ಸೌರ ಮಂಡಲದ ಮೊದಲ ಗ್ರಹ, ಜೊತೆಗೆ ಅಷ್ಟೇ ವೇಗವಾಗಿ ಚಲಿಸುವ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ಬುದ್ಧಿ ಮತ್ತು ಜ್ಞಾನದ ಸಂಕೇತ ಎಂದು ಪರಿಗಣಿಸಲಾಗಿದೆ. ವ್ಯಕ್ತಿಯ ಬುದ್ಧಿವಂತಿಕೆ, ಮಾತನಾಡುವ ಕಲೆ, ಬರವಣಿಗೆ, ಓದು ಎಲ್ಲವೂ ಜಾತಕದಲ್ಲಿ ಬುಧನ ಸ್ಥಾನವನ್ನು ಅವಲಂಬಿಸಿ ಹೇಳಲಾಗುತ್ತದೆ.

ಬುಧನು ತಾರಾ ಮತ್ತು ಚಂದ್ರನ ಮಗನಾಗಿದ್ದಾನೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಬುಧನನ್ನು ದೇವತೆಗಳ ಪರಿಪಾಲಕ ಎಂದು ಹೇಳಲಾಗುತ್ತದೆ. ಬುಧನ ಸ್ಥಾನ ಬಲವು ವ್ಯಕ್ತಿಯ ಸ್ಥಿತಿಯನ್ನು ವಿವರಿಸುತ್ತದೆ. ಇದು ಅವರಲ್ಲಿರುವ ಹೊಂದಾಣಿಕೆ, ಚತುರ ಬುದ್ಧಿ ಮುಂತಾದ ಗುಣಗಳನ್ನು ಹೇಳುತ್ತದೆ. ರಾಶಿಚಕ್ರದಲ್ಲಿ ಬುಧನು ಚಲಿಸುವ ಗತಿಯು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಮಹಾದಶಾ ಹೇಳುವುದು ಸಂಸ್ಕೃತ ಶಬ್ದವಾಗಿದೆ. ಅದರ ಅರ್ಥ ಪ್ರಮುಖವಾದ ಕಾಲ ಎಂದಾಗಿದೆ. ಈ ಅವಧಿಯಲ್ಲಿ ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಘಟನೆಗಳು ಸಂಭವಿಸುತ್ತದೆ. ಬುಧ ಮಹಾದಶವು 17 ವರ್ಷಗಳ ಅವಧಿಯಾಗಿದೆ. ಈ ಅವಧಿಯಲ್ಲಿ ವ್ಯಕ್ತಿಯ ಜೀವನದ ಅದೃಷ್ಟ ನಿರ್ಧರಿತವಾಗುತ್ತದೆ. ನಿಮ್ಮ ಜಾತಕದಲ್ಲಿ ಬುಧನು ಬಲಿಷ್ಠ ಸ್ಥಾನದಲ್ಲಿದ್ದರೆ, ಅದು ನಿಮ್ಮನ್ನು ಉತ್ತಮ ಮಾತುಗಾರ, ಚತುರನನ್ನಾಗಿಸುತ್ತದೆ.

ಬುಧ ಮಹಾದಶದಿಂದ ಉಂಟಾಗುವ ತೊಂದರೆಗಳು

* ಬುಧನು ಚತುರ ಮತ್ತು ಸಂವಹನ ಕಲೆಯಲ್ಲಿ ಉನ್ನತಿಯನ್ನು ನೀಡುತ್ತಾನೆ. ಆದರೆ ಅವನ ಈ ಪ್ರಭಾವದಿಂದ ಕೆಲವು ಅಡ್ಡ ಪರಿಣಾಮಗಳು ಸಂಭವಿಸುತ್ತದೆ. ಅದು ವ್ಯಕ್ತಿಯನ್ನು, ಆತಂಕ, ಅತಿಯೋಚನೆ ಮುಂತಾದ ಮಾನಸಿಕ ಕ್ಷೋಭೇಗೆ ದೂಡುತ್ತದೆ.

* ಸ್ಪರ್ಧೆಗೆ ಇಳಿಯುವ ಮನೋಭಾವ ಬೆಳೆಯುತ್ತದೆ.

* ಬುಧನ ಮಹಾದಶಾದಿಂದ ವ್ಯಕ್ತಿಯ ಅತಿ ಬುಧ್ದಿವಂತಿಕೆಯು ಅವನಲ್ಲಿ ಅಹಂಕಾರದ ಮನೋಭಾವವನ್ನು ಮೂಡಿಸುತ್ತದೆ. ಇದರಿಂದ ಅವನು ಒರಟು ಸ್ವಭಾವ ರೂಢಿಸಿಕೊಳ್ಳಬಹುದು.

* ವ್ಯಕ್ತಿಯು ಕೆಲವು ವಿಷಯಗಳನ್ನು ನಿರ್ಧರಿಸುವಾಗ ಗೊಂದಲಕ್ಕೀಡಾಗುವ ಸಂದರ್ಭ ಬರಬಹುದು.

* ಹಣಕಾಸಿನ ತೊಂದರೆಗಳು ಎದುರಾಗಬಹುದು.

* ಸಂಬಂಧಗಳಲ್ಲಿ ಬಿರುಕು, ಮನಸ್ತಾಪ ತಲೆದೂರಬಹುದು.

ಇವು ಬುಧ ಮಹಾದಶಾದಲ್ಲಿ ಎದುರಾಗಬಹುದಾದ ತೊಂದರೆಗಳು.

ಪರಿಹಾರಗಳು

* ಬುಧನ ಈ ಮಂತ್ರ ಪಠಿಸಿ: ಬುಧನನ್ನು ಸ್ತುತಿಸುವುದರಿಂದ ಬುಧ ಮಾಹಾದಶಾ ಅವಧಿಯಲ್ಲಿ ಎದುರಾಗುವ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಇದರಿಂದ ಬುಧನ ಆಶೀರ್ವಾದ ದೊರೆತು ಬುದ್ಧಿವಂತಿಕೆ ಮತ್ತು ಕೌಶಲ್ಯ ಸಾಮರ್ಥ್ಯ ಹೆಚ್ಚಾಗುವುದು. ಓಂ, ಬ್ರಾಂ ಬ್ರೀಂ, ಬ್ರೂಮ್‌ ಅಥವಾ ಓ ಬುಧಾಯ ನಮಃ ಈ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ 108 ಬಾರಿ ಪಠಿಸುವುದರಿಂದ ಉತ್ತಮ ಫಲ ದೊರೆಯುತ್ತದೆ.

* ಹಸಿರು ಬಟ್ಟೆ ಧರಿಸಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಸಿರು ಅಥವಾ ತಿಳಿ ಹಸಿರು ಬಣ್ಣದ ಬಟ್ಟೆಗಳನ್ನು ಬುಧ ಮಹಾದಶಾ ದೋಷ ಪರಿಹಾರಕ್ಕಾಗಿ ಧರಿಸಲಾಗುತ್ತದೆ. ವಿಶೇಷವಾಗಿ ಬುಧ ಗ್ರಹದ ಪ್ರಭಾವವದಿಂದ ಪಾರಾಗಲು ಬುಧವಾರದಂದು ಧರಿಸಿ. ಅದು ನಿಮ್ಮಲ್ಲಿ ಸಕಾರಾತ್ಮಕ ಗುಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

* ಉಪವಾಸ ಮಾಡಿ: ಬುಧವಾರವು ಬುಧಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ ಆ ದಿನ ಉಪವಾಸ ಕೈಗೊಳ್ಳುವುದರಿಂದ ದೇಹದಲ್ಲಿ ಧನಾತ್ಮಕ ಭಾವನೆ ಬೆಳೆಯುತ್ತದೆ.

* ಪಚ್ಚೆ ಮಣಿ ಧರಿಸಿ: ಭಾರತೀಯ ಸಂಸ್ಕೃತಿಯಲ್ಲಿ ಪಚ್ಚೆ ಮಣಿಯು ಬುಧಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ. ಬುಧನ ಸಕಾರಾತ್ಮಕ ಗುಣಗಳನ್ನು ಆಕರ್ಷಿಸಲು ನಿಮ್ಮ ಕಿರುಬೆರಳಿಗೆ ಚಿನ್ನ ಅಥವಾ ಬೆಳ್ಳಿಯ ಜೊತೆಗೆ ಪಚ್ಚೆ ಮಣಿಯಿದ ತಯಾರಿಸಿದ ಆಭರಣವನ್ನು ಧರಿಸಿ. ಹಾಗೆ ಧರಿಸುವ ಮೊದಲು ಜ್ಯೋತಿಷಿಗಳ ಜೊತೆ ಸಮಾಲೋಚಿಸಿ. ಏಕೆಂದರೆ ಅದು ಎಲ್ಲರಿಗೂ ಸರಿಹೊಂದುವುದಿಲ್ಲ.

* ಮಹಾವಿಷ್ಣುವನ್ನು ಆರಾಧಿಸಿ: ಬುಧ ಗ್ರಹದ ಅಧಿದೇವತೆ ಮಹಾವಿಷ್ಣು. ಅವನಿಗೆ ಹಳದಿ ಹೂವು, ಶ್ರೀಗಂಧ, ಧೂಪದ್ರವ್ಯಗಳನ್ನು ಅರ್ಪಿಸಿ. ಇದರಿಂದ ಬುಧನನ್ನು ಸಂತೃಪ್ತಿಗೊಳಿಸಬಹುದು.

* ದಾನ ಮಾಡಿ: ಹೆಸರುಬೇಳೆ, ಹಸಿರು ಬಟ್ಟೆ ಅಥವಾ ಹಸಿರು ತರಕಾರಿಗಳನ್ನು ನಿರ್ಗತಿಕರಿಗೆ ಮತ್ತು ಪಕ್ಷಿಗಳಿಗೆ ವಿಶೇಷವಾಗಿ ಗಿಳಿಗಳಿಗೆ ದಾನ ಮಾಡುವುದು ಉತ್ತಮ ಫಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.