ಸೂರ್ಯ ಗ್ರಹದ ಪ್ರಾಮುಖ್ಯತೆ, ದೋಷಕ್ಕೆ ಪರಿಹಾರ (PC: Pixaby )
Surya Graha: ಸೂರ್ಯ ಗ್ರಹದ ಪ್ರಾಮುಖ್ಯತೆ ಏನು, ಜಾತಕದಲ್ಲಿ ರವಿಯಿಂದ ದೋಷ ಇದ್ದಲ್ಲಿ ಅದಕ್ಕೆ ಏನು ಪರಿಹಾರ: ಇಲ್ಲಿದೆ ಸಂಪೂರ್ಣ ಮಾಹಿತಿ
ಜಾತಕದಲ್ಲಿ ಸೂರ್ಯ ಗ್ರಹದಿಂದ ಯಾವುದೇ ತೊಂದರೆ ಇದ್ದಲ್ಲಿ ಹೆತ್ತ ತಂದೆಯ ಆಶೀರ್ವಾದ ಪಡೆದು ನೋಡಿ. ನಿಮಗೆ ಯಾವುದೇ ತೊಂದರೆ ಉಂಟಾಗದು. ತಂದೆಯ ಆಶೀರ್ವಾದವೇ ನಿಮಗೆ ಶ್ರೀರಕ್ಷೆ.
ಸೂರ್ಯ, ಚಂದ್ರ, ಮಂಗಳ, ಬುಧ, ಗುರು ಶುಕ್ರ, ಶನಿ, ರಾಹು, ಕೇತು ಗ್ರಹಗಳಲ್ಲಿ ಒಂದೊಂದು ಗ್ರಹಗಳು ಒಂದೊಂದು ಪ್ರಾಮುಖ್ಯತೆ ಪಡೆದಿರುತ್ತದೆ. ಅದರಲ್ಲಿ ಸೂರ್ಯದೇವನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಜಾತಕದಲ್ಲಿ ರವಿಗ್ರಹದ ಪ್ರಾಮುಖ್ಯತೆ ಏನು ಎಂಬುದನ್ನು ನೋಡೋಣ.
- ರವಿ/ಸೂರ್ಯಯನ್ನು ರಾಜ ಗ್ರಹ ಎಂದು ಕರೆಯುತ್ತೇವೆ. ರವಿಗೆ ಚಂದ್ರ, ಕುಜ ಮತ್ತು ಗುರು ಗ್ರಹಗಳು ಮಿತ್ರರಾಗುತ್ತಾರೆ. ಶುಕ್ರ ಮತ್ತು ಶನಿ ಗ್ರಹಗಳು ಶತ್ರುಗಳಾಗುತ್ತವೆ. ಬುಧನು ಸಮ ಗ್ರಹನಾಗುತ್ತಾನೆ.
- ರವಿಯು ಮೇಷರಾಶಿಯಲ್ಲಿ ಉಚ್ಛನಾಗುತ್ತಾನೆ. ತುಲಾ ರಾಶಿಯಲ್ಲಿ ನೀಚನಾಗುತ್ತಾನೆ. ಕಟಕ, ವೃಶ್ಚಿಕ, ಧನಸ್ಸು ಮತ್ತು ಮೀನ ರಾಶಿಗಳು ಮಿತ್ರಕ್ಷೇತ್ರಗಳಾಗುತ್ತವೆ. ಮಿಥುನ ಮತ್ತು ಕನ್ಯಾ ರಾಶಿಗಳು ಸಮಕ್ಷೇತ್ರಗಳಾಗುತ್ತವೆ. ಸಿಂಹವು ಸ್ವಕ್ಷೇತ್ರ ಮತ್ತು ಮೂಲ ತ್ರಿಕೋನ ರಾಶಿಗಳಾಗುತ್ತವೆ.
- ಕುಂಡಲಿಯಲ್ಲಿ ರವಿಯು ಯಾವ ವಿಷಯವನ್ನು ಸೂಚಿಸುತ್ತಾನೆ ಎಂಬುದು ಮುಖ್ಯವಾಗುತ್ತದೆ. ಮುಖ್ಯವಾಗಿ ರವಿಯು ತಂದೆಯನ್ನು ಸೂಚಿಸುತ್ತಾನೆ. ಸಂತಾನಕ್ಕೂ ಸೂರ್ಯ ಗ್ರಹ ಬಹಳ ಮುಖ್ಯ. ರಾಜಕೀಯ, ಸರ್ಕಾರ ಮತ್ತು ನಮ್ಮಲ್ಲಿನ್ನ ಆಧ್ಯಾತ್ಮಿಕ ಬಲಾಬಲಗಳನ್ನು ರವಿಯಿಂದ ತಿಳಿಯಬಹುದು.
- ಸಾಮಾನ್ಯವಾಗಿ ಮಾರ್ಚ್ 15 ರಿಂದ ಮೇ 14 ಜುಲೈ 15 ರಿಂದ ಸೆಪ್ಟೆಂಬರ್ 14 ಹಾಗೂ ನವೆಂಬರ್ 15 ರಿಂದ ಜನವರಿ 14 ಅವಧಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ಬಾಳುವರು. ಸೂರ್ಯನ ಅಧಿದೇವತೆ ಈಶ್ವರ. ಬಣ್ಣ ಕೇಸರಿ, ಹರಳು ಮಾಣಿಕ್ಯ ಲೋಹ ತಾಮ್ರ ಮತ್ತು ಚಿನ್ನ, ಧಾನ್ಯ ಗೋಧಿ ಮತ್ತು ಉಪ್ಪು ಬಜೆ. ಸೂರ್ಯನಿಗೆ ಬೆಲ್ಲವೂ ಇಷ್ಟವಾಗುತ್ತದೆ. ಪ್ರಾಣಿಗಳಲ್ಲಿ ಕೋತಿ ಮತ್ತು ಕಪ್ಪು ಹಸು ಮುಖ್ಯವಾಗುತ್ತವೆ. ಸೂರ್ಯನಿಂದ ಅತಿಯಾದ ಜ್ವರ, ಕಣ್ಣಿನ ದೋಷ ಮತ್ತು ತಲೆನೋವು ಉಂಟಾಗುತ್ತದೆ.
- ನಾವು ಯಾವುದೇ ದೇವರ ಪೂಜೆ ಮಾಡಿದರೂ ಅದು ದೇವರಿಗೆ ಒಪ್ಪಿಗೆ ಆಗಿರುತ್ತದೆಯೋ ಇಲ್ಲವೋ ತಿಳಿಯುವುದಿಲ್ಲ. ಕೆಲವರಿಗಂತೂ ಪೂಜೆ ಮಾಡಿಸಲು ಬೇಕಾದ ಹಣಕಾಸಿನ ಅನುಕೂಲತೆಗಳೂ ಇರುವುದಿಲ್ಲ. ಹಾಗಿದ್ದರೆ ಅಂತವರಿಗೆ ದೇವರು ಒಲಿಯುವುದಿಲ್ಲ? ಖಂಡಿತ ಒಲಿಯುತ್ತಾನೆ. ರವಿ ಎಂದರೆ ತಂದೆ, ಯಾವುದೇ ಹೊಸ ಕೆಲಸ ಮಾಡುವ ವೇಳೆ ಅಥವಾ ಪರೀಕ್ಷೆಗಳನ್ನು, ಸಂದರ್ಶನಕ್ಕೆ ಹಾಜರಾಗುವ ಮುನ್ನ ತಂದೆ ತಾಯಿ ಮತ್ತು ಹಿರಿಯರ ಆಶೀರ್ವಾದ ಪಡೆಯುತ್ತೇವೆ.
- ಅದೇ ರೀತಿ ಜಾತಕದಲ್ಲಿ ಸೂರ್ಯ ಗ್ರಹದಿಂದ ಯಾವುದೇ ತೊಂದರೆ ಇದ್ದಲ್ಲಿ ಹೆತ್ತ ತಂದೆಯ ಆಶೀರ್ವಾದ ಪಡೆದು ನೋಡಿ. ನಿಮಗೆ ಯಾವುದೇ ತೊಂದರೆ ಉಂಟಾಗದು. ತಂದೆಯ ಆಶೀರ್ವಾದವೇ ನಿಮಗೆ ಶ್ರೀರಕ್ಷೆ. ತಂದೆಯವರಿಗೆ ಗೋಧಿ, ಉಪ್ಪು, ಬಜೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ ತಿಂಡಿ ತಿನಿಸನ್ನು ನೀಡಿದರೆ ಸೂರ್ಯನಿಂದ ಉಂಟಾಗುವ ಎಲ್ಲಾ ತೊಂದರೆಗಳೂ ಮಾಯವಾಗಿ ಬಿಡುತ್ತವೆ.
- ಒಂದು ವೇಳೆ ತಂದೆ ಇಲ್ಲದೆ ಹೋದಲ್ಲಿ ಯಾರೇ ವಯೋವೃದ್ಧರ ಆಶೀರ್ವಾದವನ್ನು ಪಡೆಯಬಹುದು. ಲಾಲ್ ಕಿತಾಬ್ ಗ್ರಂಥದ ಪ್ರಕಾರ ಕೋತಿ ಅಥವಾ ಕಪ್ಪು ಹಸುವಿಗೆ ಗೋಧಿ ಮತ್ತು ಬೆಲ್ಲವನ್ನು ನೀಡಿದಲ್ಲಿ ಸೂರ್ಯನಿಂದ ಉಂಟಾಗುವ ದೋಷ ಪರಿಹಾರವಾಗುವುದು ಎಂದು ಹೇಳಲಾಗಿದೆ. ಒಟ್ಟಾರೆ ನಮ್ಮ ಸುತ್ತಮುತ್ತ ಇರುವ ಜನರು ಮತ್ತು ಕುಟುಂಬದ ಸದಸ್ಯರ ಜೊತೆಯಲ್ಲಿನ ಪ್ರೀತಿ ವಿಶ್ವಾಸ ಅನುಕಂಪಗಳು ನಮ್ಮನ್ನು ಸದಾ ಕಾಪಾಡುತ್ತವೆ.