ಕನ್ನಡ ಸುದ್ದಿ  /  Astrology  /  Astrology Truth Myth About Kuja Dosha Horoscope Anuradha Nakshatra Remedies For Kuja Dosha Ashwini Nakshatra Rsm

Kuja Dosha: ಕುಜದೋಷ ಇರುವವರನ್ನು ಮದುವೆ ಆದ್ರೆ ಮರಣ ಹೊಂದುತ್ತಾರಾ; ಜನ್ಮ ನಕ್ಷತ್ರ ಮತ್ತು ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಅನುರಾಧ ನಕ್ಷತ್ರವು ಶನಿಯ ನಕ್ಷತ್ರವಾದರೂ ಮಹಾ ನಕ್ಷತ್ರ ಎಂದು ಪರಿಗಣಿಸಲಾಗಿದೆ. ಈ ರಾಶಿಯು ಕುಜನ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲ.

ಕುಜ ದೋಷದ ಸತ್ಯ ಮಿಥ್ಯಗಳು
ಕುಜ ದೋಷದ ಸತ್ಯ ಮಿಥ್ಯಗಳು (PC: Freepik)

ಯಾರಿಗಾದರೂ ಕುಜದೋಷ ಇದೆ ಎಂದರೆ ಜನರು ಅವರನ್ನು ನೋಡುವ ರೀತಿ ಬೇರೆ ಇರುತ್ತದೆ. ಇದು ನಿಜಕ್ಕೂ ಸಮಾಜದ ದುರಂತ. ಕುಜ ದೋಷ ಇದ್ದಲ್ಲಿ ವರ ಅಥವಾ ವಧು ಮರಣ ಹೊಂದುತ್ತಾರೆ ಎಂಬ ಕಲ್ಪನೆ ಬಹಳ ಜನರಲ್ಲಿ ಮನೆ ಮಾಡಿದೆ. ಆದರೆ ಈ ವಿಚಾರದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಬಹಳ ಅಗತ್ಯ.

ಎಲ್ಲಾ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಅದೇ ರೀತಿ ಕುಜದೋಷಕ್ಕೆ ಪರಿಹಾರ ಇದೆ. ಮತ್ತೊಂದು ಮುಖ್ಯ ವಿಚಾರ ಎಂದರೆ ಪ್ರತಿಯೊಂದು ಜಾತಕಕ್ಕೂ ಇದು ಅನ್ವಯಿಸುವುದಿಲ್ಲ.

ಕುಜದೋಷ ಅಥವಾ ಅಂಗಾರಕ ದೋಷದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು.

  • ಅಶ್ವಿನಿ ನಕ್ಷತ್ರದ ನಾಲ್ಕೂ ಪಾದಗಳೂ ಮೇಷ ರಾಶಿಗೆ ಸೇರುತ್ತವೆ. ಮೇಷವು ಕುಜನಿಗೆ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಹುಡುಗಿಗೆ ಆಗಲೀ ಹುಡುಗನಿಗೆ ಆಗಲಿಕುಜದೋಷದ ತೊಂದರೆ ಇರದು.
  • ಮೃಗಶಿರ ನಕ್ಷತ್ರವನ್ನು ಕೆಲವು ಜೋತಿಷ್ಯ ಗ್ರಂಥಗಳಲ್ಲಿ ಮಹಾ ನಕ್ಷತ್ರ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಇವರಿಗೆ ಕುಜದೋಷ ಇರುವುದಿಲ್ಲ.
  • ಪುನರ್ವಸುವು ಗುರುವಿನ ನಕ್ಷತ್ರವಾಗಿರುತ್ತದೆ. ಆದ್ದರಿಂದ ಇವರಿಗೆ ಕುಜದೋಷ ಇರುವುದಿಲ್ಲ.
  • ಪುಷ್ಯ ನಕ್ಷತ್ರವು ಶನಿಯ ನಕ್ಷತ್ರವಾಗುತ್ತದೆ. ಚಂದ್ರನು ಸ್ವಕ್ಷೇತ್ರದಲ್ಲಿ ಇರುತ್ತಾನೆ . ಈ ಕಾರಣದಿಂದ ಕುಜದೋಷದ ತೊಂದರೆ ಇವರಿಗೆ ಬಾರದು. ಪುಷ್ಯ ನಕ್ಷತ್ರವನ್ನು ಶುಭ ನಕ್ಷತ್ರವೆಂದು ಪರಿಗಣಿಸಲಾಗಿದೆ.
  • ಆಶ್ಲೇಷ ನಕ್ಷತ್ರವು ಬುಧನ ನಕ್ಷತ್ರವಾಗುತ್ತದೆ. ಚಂದ್ರನ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಕುಜ ದೋಷದ ಭಯಬೇಡ.
  • ಉತ್ತರಾ ನಕ್ಷತ್ರವು ರವಿಯ ನಕ್ಷತ್ರವಾಗುತ್ತದೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲ.
  • ಸ್ವಾತಿ ನಕ್ಷತ್ರವನ್ನು ಮಹಾನಕ್ಷತ್ರ ಎಂದು ಪರಿಗಣಿಸಲಾಗಿದೆ. ಅದ್ದರಿಂದ ಸ್ವಾತಿ ನಕ್ಷತ್ರ ಸಂಜಾತರಿಗೆ ಕುಜದೋಷ ಇರುವುದಿಲ್ಲ.
  • ಅನುರಾಧ ನಕ್ಷತ್ರವು ಶನಿಯ ನಕ್ಷತ್ರವಾದರೂ ಮಹಾ ನಕ್ಷತ್ರ ಎಂದು ಪರಿಗಣಿಸಲಾಗಿದೆ. ಈ ರಾಶಿಯು ಕುಜನ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲ.
  • ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷದ ತೊಂದರೆ ಇರುವುದಿಲ್ಲ.
  • ಉತ್ತಾರಾಷಾಢ ನಕ್ಷತ್ರವು ರವಿಯ ನಕ್ಷತ್ರವಾಗುತ್ತದೆ. ಆದ್ದರಿಂದ ಇವರಿಗೆ ಕುಜದೋಷ ಇರದು. ಮಕರ ರಾಶಿಯು ಕುಜನಿಗೆ ಉಚ್ಛಕ್ಷೇತ್ರ ಆಗುತ್ತದೆ.
  • ಶ್ರವಣ ನಕ್ಷತ್ರವಾದಲ್ಲಿ ಮಕರ ರಾಶಿ ಆಗುತ್ತದೆ ಮತ್ತುಉಚ್ಛ ಕ್ಷೇತ್ರವಾಗುತ್ತದೆ. ಆದ್ದರಿಂದ ಕುಜದೋಷದ ತೊಂದರೆ ಇರದು.
  • ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೂ ಕುಜದೋಷ ಇರುವುದಿಲ್ಲ.
  • ಮುಖ್ಯ ವಿಚಾರ ಎಂದರೆ ಎಲ್ಲಾ ರಾಶಿಗಳೂ ಶುಭ ಗ್ರಹಗಳ ರಾಶಿಗಳಾಗಿವೆ. ಮಕರದಲ್ಲಿ ಕುಜನು ಉಚ್ಛನಾಗುತ್ತಾನೆ.

ಕುಜ ದೋಷ ಇರುವವರನ್ನು ಮದುವೆ ಆದವರು ಮರಣ ಹೊಂದುತ್ತಾರೆ ಎನ್ನುವುದು ಖಂಡಿತ ತಪ್ಪು ಕಲ್ಪನೆ. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಕುಜ ದೋಷವನ್ನು ನಿವಾರಿಸಲು ಜ್ಯೋತಿಷ್ಯದಲ್ಲಿ ಸೂಕ್ತ ಪೂಜೆ ಪುನಸ್ಕಾರಗಳಿವೆ. ಅನೇಕ ದೇವಸ್ಥಾನಗಳಿವೆ. ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ ಕುಜದೋಷಕ್ಕೆ ತಕ್ಕ ಪರಿಹಾರ ಮಾಡಿಸಿಕೊಂಡಲ್ಲಿ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುವುದು ನಿಶ್ಚಿತ.

ವಿಭಾಗ