ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಜೀವನಶೈಲಿ ಬದಲಿಸಿಕೊಳ್ಳುವಿರಿ, ಸಣ್ಣ ಪುಟ್ಟ ಕೆಲಸಗಳಿಗೂ ಕಠಿಣ ಶ್ರಮ ಅಗತ್ಯ; ದ್ವಾದಶ ರಾಶಿಗಳ ವಾರ ಭವಿಷ್ಯ

Weekly Horoscope: ಜೀವನಶೈಲಿ ಬದಲಿಸಿಕೊಳ್ಳುವಿರಿ, ಸಣ್ಣ ಪುಟ್ಟ ಕೆಲಸಗಳಿಗೂ ಕಠಿಣ ಶ್ರಮ ಅಗತ್ಯ; ದ್ವಾದಶ ರಾಶಿಗಳ ವಾರ ಭವಿಷ್ಯ

ಜೂನ್‌ 2 ರಿಂದ ಜೂನ್‌ 8 ವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (2nd June to 8th June)

ದ್ವಾದಶ ರಾಶಿಗಳ ವಾರ ಭವಿಷ್ಯ
ದ್ವಾದಶ ರಾಶಿಗಳ ವಾರ ಭವಿಷ್ಯ

ಜೂನ್‌ 2 ರಿಂದ ಜೂನ್‌ 8 ವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd June to 8th June)

ಮೇಷ

ಆರೋಗ್ಯದಲ್ಲಿ ಸಣ್ಣ ಪುಟ್ಟ ದೋಷಗಳು ಕಂಡು ಬಂದರೂ ತೊಂದರೆ ಇರುವುದಿಲ್ಲ. ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನೆರವೇರುತ್ತವೆ. ದೈನಂದಿನ ಚಟುವಟಿಕೆಗಳಲ್ಲಿ ಎದುರಾಗುವ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉತ್ತಮ ಸಂಪಾದನೆ ಇದ್ದರೂ ಸಾಲದೆಂಬ ಭಾವನೆ ಮತ್ತು ಒತ್ತಡ ಇರುತ್ತದೆ. ಕುಟುಂಬದ ಹೊರಗೆ ಯಾವುದೇ ಬದಲಾವಣೆ ಇರದು. ಉದ್ಯೋಗದಲ್ಲಿ ನಿಮ್ಮ ಬೇಡಿಕೆಗಳು ಭಾಗಶ: ದೊರೆಯುತ್ತವೆ. ವ್ಯಾಪಾರದಲ್ಲಿ ತೊಂದರೆ ಇರದು. ನಿಮ್ಮಲ್ಲಿನ ಆತ್ಮವಿಶ್ವಾಸ ಜಯಶೀಲರನ್ನಾಗಿ ಮಾಡುತ್ತದೆ. ಬೇಡದ ವಿಚಾರಗಳಿಗೆ ಹಣ ಖರ್ಚುಮಾಡುವಿರಿ. ಕುಟುಂಬದ ಸದಸ್ಯರ ಬೆಂಬಲ ನಿಮಗಿರುತ್ತದೆ. ವಾರವಿಡೀ ಸಂತೋಷ ಮನೆ ಮಾಡಿರುತ್ತದೆ. ಮಕ್ಕಳ ಜೊತೆ ಬೆರೆಯಲು ಸಮಯ ಹೊಂದಿಸುವಿರಿ. ದೊಡ್ಡ ಮಟ್ಟದ ಜವಾಬ್ದಾರಿಯೊಂದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ವಿಧಿ ಇಲ್ಲದೆ ಬೇರೆಯವರ ಪ್ರಭಾವಕ್ಕೆ ಮಣಿಯಬೇಕಾಗುತ್ತದೆ. ಆದರೆ ನಿಮ್ಮ ಮನೋಭಾವನೆಗಳಿಗೆ ಧಕ್ಕೆ ಆಗದು.

ವೃಷಭ

ಉತ್ತಮ ಆರೋಗ್ಯದ ಕಾರಣ ಸಂತೋಷದಿಂದ ಬಾಳುವಿರಿ. ದೈಹಿಕ ಸದೃಢತೆ ಮರುಕಳಿಸುತ್ತದೆ. ಮಾನಸಿಕ ಬಲವು ತೊಂದರೆಯಿಂದ ಪಾರು ಮಾಡುತ್ತದೆ. ಕಟ್ಟು ನಿಟ್ಟಿನ ಜೀವನ ಇತರರಿಗೆ ಮಾದರಿ ಆಗುತ್ತದೆ. ಸಭೆ ಸಮಾರಂಭಗಳಲ್ಲಿ ಮುಖ್ಯಸ್ಥಾನ ನಿಮ್ಮದಾಗಲಿದೆ. ನಿಮ್ಮ ಖರ್ಚು ವೆಚ್ಚಗಳು ಹೆಚ್ಚಿದರೂ ಧೃತುಗೆಡದೆ ಮುನ್ನಡೆಯುವಿರಿ. ಸಮಾಜದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಸಕಾರಾತ್ಮಕ ಧೋರಣೆ ಹೊಸ ಅವಕಾಶಗಳನ್ನು ನೀಡುತ್ತದೆ. ಕೆಲವೊಂದು ಸಮಸ್ಯೆಗಳು ಎದುರಾದರೂ ಯಾವುದೇ ಬದಲಾವಣೆ ಉಂಟಾಗದು. ದೂರವಾಗಿದ್ದ ಬಂಧು ಬಳಗದವರು ಕ್ಷಮೆ ಯಾಚಿಸುತ್ತಾರೆ. ಅಪೂರ್ಣಗೊಂಡಿದ್ದ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ಆತುರದಿಂದ ಯಾವುದೇ ಒಪ್ಪಂದವನ್ನು ಒಪ್ಪುವುದಿಲ್ಲ. ಧಾರ್ಮಿಕತೆಯತ್ತ ನಿಮ್ಮ ಮನಸ್ಸನ್ನು ಕೇಂದ್ರೀಕರಿಸುವಿರಿ. ನಿಮ್ಮ ಸಹಚರರ ಬದುಕು ಹಸನಾಗಲು ಸಹಾಯ ಮಾಡುವಿರಿ.

ಮಿಥುನ

ಅತಿ ಸರಳವಾದ ಕೆಲಸಗಳನ್ನೂ ಒತ್ತಡದಲ್ಲಿಯೇ ಮಾಡುವಿರಿ. ಅತಿಯಾಗಿ ಯೋಚಿಸುವುದರಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಯೋಗ ಮತ್ತು ಧ್ಯಾನದ ಮಾರ್ಗವನ್ನು ಅನುಸರಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ. ಬಿಡುವಿಲ್ಲದ ಕೆಲಸ ನಿಮ್ಮದಾಗಿರುತ್ತದೆ. ಕುಟುಂಬದ ಜವಾಬ್ದಾರಿಗಳು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಕುಟುಂಬದ ಸ್ತ್ರೀಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹಣಕಾಸಿನ ಕೊರತೆ ನಿಮ್ಮನ್ನು ಕಾಡುತ್ತದೆ. ಮನಸ್ಸಿಲ್ಲದೇ ಹೋದರೂ ಆತ್ಮೀಯರಿಂದ ಹಣದ ಸಹಾಯ ಪಡೆಯುವಿರಿ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ಪಾಲಿಸುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಮನಸ್ಸಿಗೆ ಬೇಸರವಾಗುವ ಘಟನೆ ನಡೆಯಲಿದೆ. ಸಂಗಾತಿಯ ಸಹಾಯ ಸಹಕಾರ ನಿಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆ. ಆತಂಕವಿಲ್ಲದೆ ನಿಮ್ಮ ಪಾಲಿನ ಕರ್ತವ್ಯವನ್ನು ಪಾಲಿಸಲು ಪ್ರಯತ್ನಿಸಿ. ಹಣಕಾಸಿನ ವ್ಯವಹಾರದಲ್ಲಿ ಪರಿಣಿತರ ಸಲಹೆಯನ್ನು ಪಡೆಯುವುದು ಒಳ್ಳೆಯದು.

ಕಟಕ

ದೊಡ್ಡ ಜವಾಬ್ದಾರಿಗಳಿಂದ ದೂರ ಉಳಿಯುವಿರಿ. ಅತಿಯಾದ ಕೆಲಸದ ಕಾರಣ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ವಿಶ್ರಾಂತಿ ಪಡೆದರೆ ಯಾವುದೇ ತೊಂದರೆ ಎದುರಾಗದು. ಬಹುದಿನದ ಆಸೆಯೊಂದು ನೆರವೇರಲಿದೆ. ಇರುವ ಮನೆಯನ್ನು ನವೀಕರಿಸುವ ಯೋಜನೆ ರೂಪಿಸುವಿರಿ. ಅನಿರೀಕ್ಷಿತ ಧನಲಾಭದಿಂದ ಕಷ್ಟ ನಷ್ಟಗಳು ದೂರವಾಗಲಿವೆ. ಕುಟುಂಬದ ಹಿರಿಯರ ಸಲಹೆ ದೊಡ್ಡ ಆಪತ್ತನ್ನು ದೂರ ಮಾಡಲಿದೆ. ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅನೇಕ ಬದಲಾವಣೆಗಳು ಉಂಟಾಗಲಿವೆ. ಆತುರ ಪಡದೆ ಹೋದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ವಿದ್ಯಾರ್ಥಿಗಳು ಹೊಸ ನಿರೀಕ್ಷೆಯಿಂದ ಮುಂದುವರೆಯುತ್ತಾರೆ. ಪಾಲುದಾರಿಕೆ ವ್ಯಾಪಾರ ಆರಂಭಿಸುವ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ. ಸಾಲವಾಗಿ ನೀಡಿದ್ದ ದೊಡ್ಡ ಪ್ರಮಾಣದ ಹಣ ಮರಳಿ ನಿಮ್ಮ ಕೈ ಸೇರಲಿದೆ.

ಸಿಂಹ

ಈ ವಾರ ಅಧಿಕಾರ ಚಲಾಯಿಸಲು ಪ್ರಯತ್ನಿಸಿದಲ್ಲಿ ತೊಂದರೆ ಖಚಿತ. ವಾರದ ಆರಂಭದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಜೀವನವನ್ನು ರೂಪಿಸಲಿದೆ. ಆತ್ಮಶಕ್ತಿಯಿಂದ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎಂಬ ಅನುಭವವಾಗಲಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಡೆದರೆ ಯಾವುದೇ ತೊಂದರೆ ಇರುವುದಿಲ್ಲ. ಬೇರೆಯವನ್ನು ಟೀಕಿಸದೆ ನಿಮ್ಮ ಪಾಡಿಗೆ ಇದ್ದರೆ ನೆಮ್ಮದಿ ಇರುತ್ತದೆ. ಅವಶ್ಯಕತೆ ಇರುವಾಗ ಮಕ್ಕಳ ಬುದ್ಧಿಮಾತನ್ನೂ ಒಪ್ಪಲೇಬೇಕಾಗುತ್ತದೆ. ಆದಾಯವನ್ನು ಮೀರಿದ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ವಿಫಲರಾಗುವಿರಿ. ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮವನ್ನು ಅವಲಂಬಿಸುವಿರಿ. ಸಮಾಜದಲ್ಲಿ ನಿಮ್ಮ ವರ್ಚಸ್ಸು ಕಡಿಮೆ ಆಗದಂತೆ ನೋಡಿಕೊಳ್ಳಿ. ಸರಿಯಾದ ಯೋಜನೆ ಇಲ್ಲದೆ ಯಾವುದೇ ಯೋಜನೆಗಳಲ್ಲಿ ಹಣ ಹೂಡದಿರಿ. ವಿದೇಶ ಪ್ರಯಾಣ ಯೋಗವಿರುತ್ತದೆ. ಸರಳವಾಗಿ ನಡೆಯುವ ಕೆಲಸ ಕಾರ್ಯಗಳಗೂ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ.

ಕನ್ಯಾ

ಎದುರಾಗಿದ್ದ ಅಡ್ಡಿ ಆತಂಕಗಳು ಕ್ರಮೇಣ ದೂರವಾಗಲಿವೆ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ಮುಖ್ಯವಾದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಯೋಗದಂತಹ ದೈಹಿಕ ವ್ಯಾಯಾಮದಲ್ಲಿ ನಿರತರಾಗುವಿರಿ. ಬೇರೆಯವರ ಕೆಲಸಗಳನ್ನು ಅನಾವಶ್ಯಕವಾಗಿ ಟೀಕಿಸುವ ಕಾರಣ ತೊಂದರೆಗೆ ಸಿಲುಕುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟದ ಬದಲಾವಣೆಗಳು ನಿಮಗೆ ಸಹಕಾರಿ ಆಗಲಿದೆ ಸಹೋದ್ಯೋಗಿಗಳ ಸಹಕಾರ ದೊರೆವ ಕಾರಣ ಒತ್ತಡ ದೂರವಾಗಲಿದೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಕಂಡುಬರುತ್ತದೆ. ಪಾಲುದಾರಿಕೆ ವ್ಯಾಪಾರ ವ್ಯವಹಾರದಲ್ಲಿ ವರಮಾನದಲ್ಲಿ ತೊಂದರೆ ಇರದು. ಹೊಸ ಹಣಕಾಸಿನ ಯೋಜನೆಯನ್ನು ರೂಪಿಸುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಬದಲಾವಣೆ ಕಂಡುಬರುತ್ತದೆ. ಗುರು ಹಿರಿಯರ ಸಲಹೆ ಪಾಲಿಸಿದಲ್ಲಿ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಕೆಲಸದಿಂದ ದೂರ ಉಳಿಯುವಿರಿ.

ತುಲಾ

ತಪ್ಪು ನಿರ್ಧಾರದಿಂದ ತೊಂದರೆಗೆ ಒಳಗಾಗುವಿರಿ. ಉಪಯೋಗವಿಲ್ಲದ ಹವ್ಯಾಸಗಳಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ವಿಶೇಷ ಎನಿಸುವ ಕೆಲಸಗಳನ್ನು ಆಯ್ಕೆ ಮಾಡುವಿರಿ. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ಆಹಾರ ಸೇವನೆಯ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳುವಿರಿ. ಉತ್ತಮ ಆದಾಯವಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ಮಾನಸಿಕ ಒತ್ತಡದಿಂದ ಹೊರ ಬರಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರದಲ್ಲಿ ಹೂಡಿದ ಬಂಡವಾಳಕ್ಕೆ ಮೋಸವಾಗದು. ಅತಿಯಾದ ಆಸೆ ಇರದ ಕಾರಣ ಒತ್ತಡಕ್ಕೆ ಒಳಗಾಗುವುದಿಲ್ಲ. ಆರ್ಥಿಕ ಸುಭದ್ರತೆಗಾಗಿ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆತಂಕದ ಪರಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ ವರ್ತಿಸುವಿರಿ.

ವೃಶ್ಚಿಕ

ಬಹುದಿನದಿಂದ ಕಾಡುತ್ತಿದ್ದ ಮಾನಸಿಕ ಒತ್ತಡ ದೂರವಾಗಲಿದೆ. ಹಣಕಾಸಿನ ವಿಚಾರದಲ್ಲಿ ದಿಟ್ಟತನದ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಕುಟುಂಬದೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ದಂಪತಿ ನಡುವಿನ ಮನಸ್ತಾಪ ದೂರವಾಗಲಿದೆ. ಶುಚಿಯಾದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಗಳಿಸಬಹುದು. ಉತ್ತಮ ಭವಿಷ್ಯಕ್ಕಾಗಿ ವಿವಿಧ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಿರಿ. ಅನಾವಶ್ಯಕ ಯೊಚನೆಯಿಂದ ದೂರವಿರುವಿರಿ. ಸಾಮಾನ್ಯವಾದ ಕೆಲಸಕಾರ್ಯಗಳಲ್ಲಿ ಅದ್ಭುತ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ವೈಯಕ್ತಿಕ ವಿಚಾರಗಳನ್ನು ಮೊದಲು ಪೂರ್ಣಗೊಳಿಸುವಿರಿ. ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಏಕಾಂಗಿತನವನ್ನು ಇಷ್ಟಪಡುವಿರಿ. ವಿದ್ಯಾರ್ಥಿಗಳಿಗೆ ವಿಶೇಷ ಫಲಗಳು ದೊರೆಯಲಿವೆ.

ಧನಸ್ಸು

ಈ ವಾರ ಅನಿರ್ವಾಯವಾಗಿ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳುವಿರಿ. ಧೈರ್ಯದಿಂದ ಯಶಸ್ಸಿನತ್ತ ಮುನ್ನುಗುವಿರಿ. ಯಾವುದೇ ಒತ್ತಡ ಇರುವುದಿಲ್ಲ. ಮಕ್ಕಳ ಜೀವನವನ್ನು ಸರಿಯಾದ ಹಾದಿಯಲ್ಲಿ ಸಾಗಲು ಪ್ರಯತ್ನಿಸುವಿರಿ. ಅಜೀರ್ಣದ ತೊಂದರೆ ನಿಮ್ಮನ್ನು ಕಾಡುತ್ತದೆ. ಸುದೀರ್ಘ ಪ್ರವಾಸಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿ ಇರದಂತಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತಪ್ಪು ಮಾಡಿದ ನಂತರ ಪಶ್ಚಾತ್ತಾಪ ಪಡುವಿರಿ. ಅತಿಯಾದ ವಾದ ವಿವಾದಗಳು ಕುಟುಂಬದ ಒಗ್ಗಟ್ಟನ್ನು ಕಡಿಮೆ ಮಾಡುತ್ತದೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.

ಮಕರ

ಕುಟುಂಬದ ಸದಸ್ಯರ ಕಾಳಜಿಯಿಂದ ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಅನುಕೂಲಕರ ಸನ್ನಿವೇಶ ಎದುರಾಗುತ್ತದೆ. ತಂದೆ ಮತ್ತು ಸೋದರನ ನಡುವಿನ ಮನಸ್ತಾಪ ದೂರವಾಗಲಿದೆ. ಯೋಚಿಸದೆ ಯಾವುದೇ ಕೆಲಸ ಆರಂಭಿಸದ ಕಾರಣ ತೊಂದರೆ ಇರುವುದಿಲ್ಲ. ಹಣ ಸಂಗ್ರಹಿಸುವ ಆಲೋಚನೆಯು ಸಫಲವಾಗಲಿದೆ. ಕುಟುಂಬದಲ್ಲಿ ಅನ್ಯೋನ್ಯತೆ ಕಂಡು ಬರುತ್ತದೆ. ಸಮಾಜದಲ್ಲಿ ಉನ್ನತ ಗೌರವ ದೊರೆಯುವ ಕೆಲಸ ಮಾಡುವಿರಿ. ವಿದ್ಯಾರ್ಥಿಗಳು ಉತ್ತಮ ಫಲಗಳನ್ನು ಗಳಿಸಲು ಯಶಸ್ವಿಯಾಗುತ್ತಾರೆ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವಿರಿ. ಮಕ್ಕಳ ಜೊತೆಯಲ್ಲಿ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಅತಿಯಾದ ನಿದ್ರೆ ಮತ್ತು ರುಚಿಯಾದ ಭೋಜನ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ.

ಕುಂಭ

ಸಣ್ಣ ಪುಟ್ಟ ಕೆಲಸಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗಬಹುದು. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಸೂಕ್ತ ಯೋಜನೆ ರೂಪಿಸಿ ಆರಂಭಿಸುವ ಕೆಲಸ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನೆರವೇರಲಿದೆ. ಸಂಗಾತಿ ಜೊತೆ ಅನಾವಶ್ಯಕವಾದ ವಾದ ವಿವಾದಗಳು ಇರಲಿವೆ. ಸದಾಕಾಲ ಉತ್ಸಾಹದಿಂದ ಜೀವನದಲ್ಲಿ ಮುಂದುವರೆಯುವಿರಿ. ಲಾಭ ದೊರೆಯುವ ಕೆಲಸಗಳಲ್ಲಿ ನಿರತರಾಗುವಿರಿ. ಮನೆಗೆ ಹೆಚ್ಚಿನ ಹಣ ವೆಚ್ಚವಾಗಲಿದೆ. ಕಷ್ಟ ಎನಿಸಿದರೂ ಹಣ ಉಳಿಸಲಿದ್ದೀರಿ. ಕುಟುಂಬದಲ್ಲಿನ ಸಮಸ್ಯೆಗಳನ್ನು ದೂರ ಮಾಡುವಿರಿ. ಮಕ್ಕಳು ಹೆಮ್ಮೆ ಪಡುವ ಕೆಲಸವನ್ನು ಮಾಡಲಿದ್ದಾರೆ. ಉದ್ಯೋಗ ಬದಲಿಸುವ ನಿರ್ಧಾರ ಮಾಡುವಿರಿ. ವಾಸ ಸ್ಥಳವನ್ನು ಬದಲಿಸುವಿರಿ. ಸೋದರಿಯ ಜೀವನದಲ್ಲಿ ಶಾಂತಿ ನೆಮ್ಮದಿ ಮೂಡಲು ಪ್ರಮುಖ ಪಾತ್ರ ವಹಿಸುವಿರಿ.

ಮೀನ

ಸಣ್ಣ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡದಿಂದ ಬಳಲುವಿರಿ. ಆತ್ಮೀಯ ಸ್ನೇಹಿತರ ಜೊತೆ ಮನಸ್ತಾಪ ಉಂಟಾಗಲಿದೆ. ದೈಹಿಕ ವ್ಯಾಯಾಮದಿಂದ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಕುಟುಂಬದ ಸದಸ್ಯರ ನಡುವೆ ಒಮ್ಮತ ಮೂಡಲು ಕಾರಣರಾಗುವಿರಿ. ಆತ್ಮ ವಿಶ್ವಾಸ ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ನಿಮ್ಮೆಲ್ಲರ ಪ್ರೋತ್ಸಾಹದಿಂದ ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಲಿದ್ದಾರೆ. ಸದಾಕಾಲ ಒಳ್ಳೆಯದನ್ನೇ ಯೋಚಿಸುವ ಕಾರಣ ಎಲ್ಲರ ಪ್ರಶಂಸೆ ಗಳಿಸುವಿರಿ. ನಿಮ್ಮ ಬುದ್ಧಿ ಚಾತುರ್ಯದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಕುಟುಂಬದ ಮಿತಿ ಮೀರಿದ ಜವಾಬ್ದಾರಿಗಳನ್ನು ಸ್ವೀಕರಿಸಬೇಕಾಗುತ್ತದೆ. ಸಂಗಾತಿಯ ಸಹಾಯದಿಂದ ಕೊಂಚ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಆತ್ಮೀಯರಿಂದ ಹಣದ ಸಹಾಯ ದೊರೆಯಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).