ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಬಿಡುವಿಲ್ಲದ ಕೆಲಸದಿಂದ ಅನಾರೋಗ್ಯ ಕಾಡಲಿದೆ, ಸಾಲದ ವ್ಯವಹಾರದಿಂದ ತೊಂದರೆ; ವಾರ ಭವಿಷ್ಯ

Weekly Horoscope: ಬಿಡುವಿಲ್ಲದ ಕೆಲಸದಿಂದ ಅನಾರೋಗ್ಯ ಕಾಡಲಿದೆ, ಸಾಲದ ವ್ಯವಹಾರದಿಂದ ತೊಂದರೆ; ವಾರ ಭವಿಷ್ಯ

ಜೂನ್‌ 9 ರಿಂದ 15 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ವಾರ ಭವಿಷ್ಯ ನೋಡಿ. (9th June 2024 to 15th June Weekly Horoscope)

ಬಿಡುವಿಲ್ಲದ ಕೆಲಸದಿಂದ ಅನಾರೋಗ್ಯ ಕಾಡಲಿದೆ, ಸಾಲದ ವ್ಯವಹಾರದಿಂದ ತೊಂದರೆ; ವಾರ ಭವಿಷ್ಯ
ಬಿಡುವಿಲ್ಲದ ಕೆಲಸದಿಂದ ಅನಾರೋಗ್ಯ ಕಾಡಲಿದೆ, ಸಾಲದ ವ್ಯವಹಾರದಿಂದ ತೊಂದರೆ; ವಾರ ಭವಿಷ್ಯ

ವಾರ ಭವಿಷ್ಯ:‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th June 2024 to 15th June Weekly Horoscope)

ರಾಶಿಫಲ

ಮೇಷ

ಈ ವಾರ ಕೆಲವೊಂದು ಧನಾತ್ಮಕ ಬದಲಾವಣೆಗಳು ಉಂಟಾಗಲಿವೆ. ಎದುರಾಗುವ ಅಡೆತಡೆಗಳನ್ನು ಲೆಕ್ಕಿಸದೆ ದೈನಂದಿನ ಕೆಲಸವನ್ನುಆರಂಭಿಸುವಿರಿ. ಆತುರದಿಂದ ಕೊಂಚ ಹಿನ್ನೆಡೆ ಎದುರಿಸುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಮೂಡಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲಿ. ಕುಟುಂಬದವರೊಡನೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಕುಟುಂಬಕ್ಕೆ ವಿಶೇಷ ಅತಿಥಿಗಳು ಆಗಮಿಸುತ್ತಾರೆ. ಸಾಲದ ವ್ಯವಹಾರದಿಂದ ದೂರ ಉಳಿಯುವಿರಿ. ಮಕ್ಕಳ ವಿಚಾರದಲ್ಲಿ ಶುಭ ವರ್ತಮಾನವೊಂದು ದೊರೆಯಲಿದೆ. ಹೊಸ ನಿರೀಕ್ಷೆಯೊಂದಿಗೆ ದಿನ ಕಳೆಯುವಿರಿ.

ವೃಷಭ

ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಮನರಂಜನಾ ಕೂಟದಲ್ಲಿ ಪಾಲ್ಗೊಳ್ಳುವಿರಿ. ಮನದಲ್ಲಿ ಯಾವುದೋ ಯೋಚನೆ ಕಾಡುತ್ತಿರುತ್ತದೆ. ವಾಹನ ಚಾಲನೆಯಲ್ಲಿ ಸಂತಸ ಕಾಣುವಿರಿ. ಬದಲಾದ ಉದ್ಯೋಗದ ಬಗ್ಗೆ ಸಕಾರಾತ್ಮಕ ಕಲ್ಪನೆಗಳನ್ನು ಮಾಡಿಕೊಳ್ಳುವಿರಿ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಮಕ್ಕಳ ವಿರೋಧದ ನಡುವೆಯೂ ಕಿರುಪ್ರವಾಸವನ್ನು ಆಯೋಜಿಸುವಿರಿ. ವಿದ್ಯಾರ್ಥಿಗಳು ಒತ್ತಡದಿಂದ ವ್ಯಾಸಂಗದಲ್ಲಿ ಮುಂದುವರೆಯುತ್ತಾರೆ. ಹೊಸ ವ್ಯಾಪಾರ ಆರಂಭಿಸುವ ಯೋಜನೆ ರೂಪಿಸುವಿರಿ. ಕುಟುಂಬದ ಹಿರಿಯರ ಜೊತೆ ವಾದ ವಿವಾದ ಉಂಟಾಗಲಿದೆ. ಎದುರಾಗುವ ಸಂದಿಗ್ದ ಸನ್ನಿವೇಶವನ್ನು ಸಹನೆಯಿಂದ ಎದುರಿಸುವಿರಿ.

ಮಿಥುನ

ಹೆಚ್ಚಿನ ವಿಶ್ರಾಂತಿ ಬಯಸುವಿರಿ. ಪರಿಚಿತರಿಂದ ಹಣದ ಸಹಾಯ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ಉದ್ಯೋಗದಲ್ಲಿ ಧನಾತ್ಮಕ ಬೆಳವಣಿಗೆ ಕಂಡುಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ತೋರುವುದಿಲ್ಲ. ಸಣ್ಣ ಬಂಡವಾಳದ ಉದ್ಧಿಮೆ ಆರಂಭಿಸುವ ಯೋಚನೆ ಮಾಡುವಿರಿ. ಬಂದು ಬಳಗದವರ ಒತ್ತಡಕ್ಕೆ ಮಣಿದು ಪ್ರವಾಸಕ್ಕೆ ತೆರಳುವಿರಿ. ಅವಿವಾಹಿತರು ಆತ್ಮೀಯರೊಬ್ಬರನ್ನು ಭೇಟಿ ಮಾಡಲಿದ್ದಾರೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವಿಶೇಷ ಅವಕಾಶ ದೊರೆಯಲಿದೆ. ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

ಕಟಕ

ಕಣ್ಣಿನ ತೊಂದರೆ ಎದುರಾಗಲಿದೆ. ಮಕ್ಕಳ ಜೊತೆ ಹುಟ್ಟೂರಿಗೆ ತೆರಳುವಿರಿ. ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಉದ್ಯೋಗದ ಒತ್ತಡವನ್ನು ಬದಿಗಿರಿಸಿ ಸ್ವಂತ ಕೆಲಸದಲ್ಲಿ ತೊಡಗುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಮಕ್ಕಳು, ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರುತ್ತಾರೆ. ಸಂಗಾತಿಯ ಕೆಲಸ ಕಾರ್ಯಗಳಿಗೆ ನೆರವಾಗುವಿರಿ. ಅರೋಗ್ಯದ ಸಮಸ್ಯೆ ಎದುರಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರ ಆರಂಭಿಸುವಲ್ಲಿ ಇನ್ನಷ್ಟು ತಡವಾಗಬಹುದು.

ಸಿಂಹ

ಹಣಕಾಸಿನ ತೊಂದರೆ ದೂರವಾಗುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಕುಟುಂಬದ ಐಕ್ಯತೆ ಮರಳುತ್ತದೆ. ಕುಟುಂಬದ ವಿವಾಹದ ಕಾರ್ಯವು ಮುಂದೆ ಹೋಗಲಿದೆ. ಹಿರಿಯ ಅಧಿಕಾರಿಗಳ ಆಗಮನ ಸಂತಸ ನೀಡುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರದು. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟ ತಲುಪಲಿದ್ದಾರೆ. ಹಣಕಾಸಿನ ಸಂಸ್ಥೆಯ ನಿರ್ವಹಣೆ ನಿಮ್ಮದಾಗುತ್ತದೆ. ಬಹಳ ಹಿಂದೆಯೇ ಆಯೋಜಿಸಿದ್ದ ಪ್ರವಾಸವನ್ನು ರದ್ದುಗೊಳಿಸುವಿರಿ. ಸಂಗಾತಿಗೆ ನಿಮ್ಮ ಬಗ್ಗೆ ಬೇಸರ ಮೂಡುತ್ತದೆ. ಅಧಿಕಾರದ ಆಸೆ ಇರುವುದಿಲ್ಲ. ಯಾರಿಗೂ ಬುದ್ಧಿವಾದ ಹೇಳದಿರಿ.

ಕನ್ಯಾ

ಸ್ಥಿರವಾದ ಮನಸ್ಸಿರುವುದಿಲ್ಲ. ಅರೆ ತಲೆಶೂಲೆ ನಿಮ್ಮನ್ನು ಕಾಡುತ್ತದೆ. ನಿಮ್ಮ ವಯಸ್ಸಿನ ಜನರ ನಡುವೆ ನಾಯಕತ್ವ ಒಪ್ಪಬೇಕಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಬುದ್ದಿವಂತಿಕೆಯಿಂದ ಜಯ ಸಾಧಿಸುವಿರಿ. ಕುಟುಂಬದಲ್ಲಿ ಹಿರಿಯರು ಆಯ್ಕೆ ಮಾಡಿದವರ ಜೊತೆ ವಿವಾಹವಾಗಲು ಒಪ್ಪುವಿರಿ. ಉದ್ಯೋಗದಲ್ಲಿ ಕಾರ್ಯದ ಒತ್ತಡ ಹೆಚ್ಚಾಗಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಾಣುವುದಿಲ್ಲ. ಆಯ್ಕೆ ವಿಚಾರದಲ್ಲಿ ವಿದ್ಯಾರ್ಥಿಗಳು ಸ್ವಂತ ನಿಲುವಿಗೆ ಬದ್ದರಾಗುತ್ತಾರೆ. ಅನಾವಶ್ಯಕ ಟೀಕೆಗಳಿಂದ ಎಲ್ಲರಿಗೂ ನೋವನ್ನು ಉಂಟುಮಾಡುವಿರಿ. ಸೋದರ ಮಾವನ ಜೊತೆಗೂಡಿ ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಸಂಗೀತ ನಾಟದಲ್ಲಿ ಆಸಕ್ತಿ ಉಂಟಾಗಲಿದೆ.

ತುಲಾ

ಯೋಚಿಸಿ ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಹಣದ ಸಮಸ್ಯೆ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಆತ್ಮೀಯರ ಜೊತೆ ಆರಂಭಿಸಿದ ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆ ಕುಲದ ಹಿರಿಯರನ್ನು ಭೇಟಿ ನೀಡುವಿರಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಈ ವಾರ ಬಿಡುವಿಲ್ಲದೆ ಕೆಲಸ ನಿರ್ವಹಿಸಬೇಕಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ.

ವೃಶ್ಚಿಕ

ಸ್ವಂತ ಕೆಲಸ ಕಾರ್ಯದಲ್ಲಿ ಆತಂಕಗಳು ಎದುರಾಗುತ್ತವೆ. ಆತ್ಮೀಯರ ಸಹಾಯದಿಂದ ಯಾವುದೇ ತೊಂದರೆ ಉಂಟಾಗದು. ವಿಚಾರ ಸಣ್ಣದಾದರೂ ಅಸಡ್ಡೆಯಿಂದ ನೋಡದಿರಿ. ಉತ್ತಮ ಯೋಜನೆಯಿಂದ ಮಾಡುವ ಕೆಲಸದಲ್ಲಿ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಸೋದರಿಯ ಸಹಯೋಗದಲ್ಲಿ ವ್ಯಾಪಾರವೊಂದನ್ನು ಆರಂಭಿಸುರಿವಿ. ಉದ್ಯೋಗದಲ್ಲಿ ನಿಮ್ಮ ಕಾರ್ಯತಂತ್ರವನ್ನು ಎಲ್ಲರೂ ಒಪ್ಪುತ್ತಾರೆ. ಅನೇಕರ ಜೀವನಕ್ಕೆ ದಾರಿದೀಪವಾಗುವಿರಿ. ಸಮಾಜಸೇವೆಯಲ್ಲಿ ಆಸಕ್ತಿ ಇರುತ್ತದೆ. ಹೊಗಳಿಕೆಯನ್ನು ನಿರೀಕ್ಷಿಸಿದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸುವಿರಿ. ಅನಾವಶ್ಯಕವಾದ ಖರ್ಚುಗಳನ್ನು ಕಡಿಮೆ ಮಾಡುವಿರಿ. ಮುಂಗೋಪದಿಂದ ತಪ್ಪನ್ನು ಖಂಡಿಸುವಿರಿ. ಈ ವಾರ ವಿಶ್ರಾಂತಿ ಮತ್ತು ಮನರಂಜನೆಯಿಂದ ನೀವು ದೂರ ಉಳಿಯಲಿದ್ದೀರಿ.

ಧನಸ್ಸು

ಹಿರಿಯರ ಆಶ್ರಯದಲ್ಲಿ ನೆಮ್ಮದಿಯ ಜೀವನ ನಡೆಸುವಿರಿ. ಮಕ್ಕಳ ಸಹಾಯದಿಂದ ಸ್ವಂತ ಉದ್ದಿಮೆ ಆರಂಭಿಸುವಿರಿ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲ ಪಡೆಯುವಿರಿ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಯಾವುದೇ ವಿಚಾರದಲ್ಲಿಯೂ ದೃಢವಾದ ತೀರ್ಮಾನ ತೆಗೆದುಕೊಳ್ಳಲು ಪ್ರಯತ್ನಿಸಿ. ಮುಂಗೋಪದ ಕಾರಣ ದೊರೆಯುವ ಅವಕಾಶವೊಂದನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳು ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ಗಳಿಸುತ್ತಾರೆ. ಅಜೀರ್ಣದ ತೊಂದರೆ ಇರುತ್ತದೆ. ಉಷ್ಣದ ಪದಾರ್ಥಗಳಿಂದ ದೂರ ಉಳಿದಷ್ಟೂ ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರೆಯುವುದಿಲ್ಲ. ಕೈಕಾಲಿಗೆ ಪೆಟ್ಟಾಗುವ ಸಂಭವವಿದೆ.

ಮಕರ

ಮನಸ್ಸು ಒಪ್ಪದೆ ಹೋದರು ಹಣಕಾಸಿನ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ತಪ್ಪನ್ನು ಒಪ್ಪಿ ಸರಿದಾರಿಯಲ್ಲಿ ನಡೆಯುವಿರಿ. ಉದ್ಯೋಗದಲ್ಲಿನ ನಿಮ್ಮ ಬೇಡಿಕೆಯನ್ನು ಹಿರಿಯ ಅಧಿಕಾರಿಗಳು ಒಪ್ಪುವುದಿಲ್ಲ. ಬೇಸರಗೊಂಡು ಉದ್ಯೋಗ ಬದಲಾಯಿಸುವಿರಿ. ಕುಟುಂಬದ ಹಿರಿಯರ ಮನ ನೋಯಿಸುವ ಘಟನೆಯೊಂದು ನಡೆಯಲಿದೆ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಬೇಸರಗೊಳ್ಳುವಿರಿ. ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ನಿಮ್ಮ ಸಹಪಾಠಿಯೊಬ್ಬರು ಕಷ್ಟದ ವೇಳೆ ನಿಮ್ಮ ಸಹಾಯಕ್ಕೆ ಬರುತ್ತಾರೆ. ಸ್ವಂತಭೂಮಿ ಅಥವಾ ಮನೆಯನ್ನು ಕೊಳ್ಳುವಿರಿ. ಸಾಧ್ಯವಾದಷ್ಟು ಚುರುಕುತನದಿಂದ ವರ್ತಿಸಿ. ಯಾರೊಂದಿಗೂ ವಾದ ಮಾಡದಿರಿ.

ಕುಂಭ

ಕುಟುಂಬದಲ್ಲಿನ ಒಮ್ಮತದಿಂದಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವೊಂದನ್ನು ಮಾಡುವಿರಿ. ಬಹಳ ದಿನಗಳಿಂದ ಕಾಡುತ್ತಿದ್ದ ನೋವೊಂದು ದೂರವಾಗಲಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವಿರಿ. ಹಿಡಿದ ಕೆಲಸ ಕಾರ್ಯಗಳನ್ನು ಹಟದಿಂದ ಪೂರ್ಣಗೊಳಿಸುವಿರಿ. ನಿರೀಕ್ಷೆ ಮೀರಿದ ಆದಾಯ ಇರುತ್ತದೆ. ಸೋದರರ ಸಹಾಯ ಸಹಕಾರ ಸದಾ ದೊರೆಯುತ್ತದೆ. ಉದ್ಯೋಗದಲ್ಲಿ ವಿಶಿಷ್ಟ ಕೊಡುಗೆ ನೀಡಿ ಅಧಿಕಾರಿಗಳ ಪ್ರಶಂಸೆ ಗಳಿಸುವಿರಿ. ಉತ್ತಮ ಅವಕಾಶ ದೊರೆತರೂ ಉದ್ಯೋಗವನ್ನು ಬದಲಿಸುವುದಿಲ್ಲ. ಸಾಲದ ವ್ಯವಹಾರದಿಂದ ತೊಂದರೆಗೆ ಸಿಲುಕುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ.

ಮೀನ

ಸುಲಭವಾದ ಕೆಲಸಗಳನ್ನು ಸಹ ಪೂರ್ಣಗೊಳಿಸಲಾರಿರಿ. ಮತ್ತೊಬ್ಬರ ಸಹಾಯದಿಂದಷ್ಟೇ ನಿಮ್ಮ ಕರ್ತವ್ಯವನ್ನು ನಿರ್ವಹಿಸುವಿರಿ. ಸ್ವಂತ ಉದ್ಯಮವಿದ್ದಲ್ಲಿ ವರಮಾನಕ್ಕೆ ತೊಂದರೆ ಇರುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಚನೆ ಮಾಡುವಿರಿ. ಸ್ಥಿರವಾದ ನಿರ್ಧಾರ ತೆಗೆದುಕೊಂಡಲ್ಲಿ ತೊಂದರೆಗಳಿಂದ ದೂರ ಉಳಿಯುವಿರಿ. ಕೊಟ್ಟ ಮಾತಿಗೆ ಬದ್ಧರಾದಲ್ಲಿ ಎಲ್ಲರ ಬೆಂಬಲ ದೊರೆಯುತ್ತದೆ. ಹೊಸ ವ್ಯಾಪಾರವೊಂದನ್ನು ಆರಂಭಿಸಿ ಉತ್ತಮ ಗಳಿಕೆ ಗಳಿಸುವಿರಿ. ಹಿತೈಷಿಗಳ ಸಹಾಯ ಸಹಕಾರದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಉತಮ ಫಲಿತಾಂಶಗಳು ದೊರೆಯುತ್ತವೆ. ಹಣದ ಕೊರತೆಯಿಂದ ಪಾರಾಗುವಿರಿ. ನಿಮ್ಮ ಭವಿಷ್ಯಕ್ಕೆ ಉತ್ತಮ ಯೋಜನೆ ರೂಪಿಸುವುದು ನಿಮ್ಮ ಕೈಯ್ಯಲ್ಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).