ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಐಷಾರಾಮಿ ಜೀವನಕ್ಕೆ ಹೆಚ್ಚಿನ ಹಣ ಖರ್ಚು, ದಂಪತಿ ನಡುವಿನ ವಿವಾದ ಸುಖಾಂತ್ಯ; ವಾರ ಭವಿಷ್ಯ

Weekly Horoscope: ಐಷಾರಾಮಿ ಜೀವನಕ್ಕೆ ಹೆಚ್ಚಿನ ಹಣ ಖರ್ಚು, ದಂಪತಿ ನಡುವಿನ ವಿವಾದ ಸುಖಾಂತ್ಯ; ವಾರ ಭವಿಷ್ಯ

Weekly Horoscope: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (April 28th to May 4th Weekly Horoscope)

ವಾರ ಭವಿಷ್ಯ
ವಾರ ಭವಿಷ್ಯ

ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (April 28th to May 4th Weekly Horoscope in Kannada)

ಮೇಷ

ಸಂತಸದ ದಿನಗಳು ಬರಲಿವೆ. ಉದ್ಯೋಗದಲ್ಲಿನ ಯಶಸ್ಸಿನಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಲಾಭ ದೊರೆಯುತ್ತದೆ. ಮನೆಯ ಹಿರಿಯರ ಸಲಹೆಯಂತೆ ಕುಟುಂಬದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಟುಂಬ ಜೀವನದಲ್ಲಿ ಸುಖ ಸಂತೋಷ ಕೂಡಿರುತ್ತದೆ. ವೃತ್ತಿ ಜೀವನದಲ್ಲಿಅನುಭವಿಗಳ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಕಂಡು ಬರದು. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಆತ್ಮೀಯರ ಸಂಗಡ ಪ್ರವಾಸಕ್ಕೆ ತೆರಳುವಿರಿ. ದಾಂಪತ್ಯ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಎದುರಾಗಲಿವೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶ ಇರುತ್ತದೆ.

ವೃಷಭ

ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯೋಗ ಪ್ರಾಣಾಯಾಮದಲ್ಲಿ ಆಸಕ್ತಿ ಮೂಡಲಿದೆ. ಮನಸ್ಸಿನ ಶಾಂತಿಗಾಗಿ ದೇವರ ಮೊರೆ ಹೋಗುವಿರಿ. ಕೋಪ ತೊರೆದು ಸಹನೆಯಿಂದ ಎಲ್ಲರೊಡನೆ ಇರಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಸಬಲತೆ ಗಳಿಸುವ ಸಾಧ್ಯತೆಯಿದೆ. ಹಣದ ವಹಿವಾಟಿನ ಬಗ್ಗೆ ಸಾಧ್ಯವಾದಷ್ಟು ಜಾಗರೂಕರಾಗಿರಿ. ಮಕ್ಕಳ ಕಾರಣದಿಂದ ಕುಟುಂಬದಲ್ಲಿ ಸಂಭ್ರಮ ಮತ್ತು ಸಂತೋಷ ತುಂಬಿರುತ್ತದೆ. ಉದ್ಯೋಗದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದೊಂದಿಗೆ ದೀರ್ಘಕಾಲದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಆತ್ಮೀಯರೊಂದಿಗೆ ಸಮಯ ಕಳೆಯುವ ಅವಕಾಶ ದೊರೆಯುತ್ತದೆ. ಪರೀಕ್ಷೆಯಲ್ಲಿನ ಯಶಸ್ಸು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವಂಶಾಧಾರಿತ ಉದ್ಯೋಗವನ್ನು ಆರಂಭಿಸಿ ಯಶಸ್ಸನ್ನು ಗಳಿಸುವಿರಿ.

ಮಿಥುನ

ಕುಟುಂಬದ ಹಿರಿಯರ ಆರೋಗ್ಯದ ದೃಷ್ಟಿಯಿಂದ ಆಹಾರ ಪದ್ದತಿಯಲ್ಲಿ ಬದಲಾವಣೆ ತರುವಿರಿ. ಉತ್ತಮ ಗುಣವಿರುವ ಜನರೊಂದಿಗೆ ಸ್ನೇಹ ಬೆಳೆಸುವಿರಿ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಸೃಜನಶೀಲತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಹಣಕಾಸಿನ ಯೋಜನೆಗಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಉದ್ಯೋಗದಲ್ಲಿನ ಸಮಸ್ಯೆಯೊಂದನ್ನು ಮಾತುಕತೆಯ ಮೂಲಕ ಪರಿಹರಿಸುವಿರಿ. ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿಚಾರದಲ್ಲಿ ವಾದ ವಿವಾದ ಇರುತ್ತದೆ. ಒತ್ತಡದ ಸನ್ನಿವೇಶದಲ್ಲಿ ತಾಳ್ಮೆ ಕಳೆದುಕೊಳ್ಳದೆ ವರ್ತಿಸುವಿರಿ. ವೃತ್ತಿಜೀವನದಲ್ಲಿ ಉನ್ನತ ಮಟ್ಟ ತಲುಪುವಿರಿ.

ಕಟಕ

ಮಾನಸಿಕ ಒತ್ತಡದಿಂದ ದೂರವಾಗಿ ಆರೋಗ್ಯವಾಗಿ ಬಾಳುವಿರಿ. ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವಿರಿ. ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸುವಿರಿ. ಕುಟುಂಬದ ಎಲ್ಲರ ಪ್ರೀತಿ ವಿಶ್ವಾಸದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಿರಿ. ಕೌಟುಂಬಿಕ ಕಲಹ ಮರೆಯಾಗಿ ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗುವಿರಿ. ಹಿರಿಯ ಅಧಿಕಾರಿಗಳಿಂದ ಉತ್ತಮ ಉತ್ತೇಜನ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಬೇರೆಯವರು ಅರ್ಧಕ್ಕೆ ನಿಲ್ಲಿಸಿದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅವಿವಾಹಿತರಿಗೆ ವಿವಾಹವಾಗಲಿದೆ. ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವಿರಿ ಸಂಗಾತಿಯ ವ್ಯಾಪಾರ ವ್ಯವಹಾರಿಗಳಿಗೆ ಪೂರ್ಣ ಸಹಕಾರ ನೀಡುವಿರಿ.

ಸಿಂಹ

ಅಧಿಕಾರದ ಆಸೆಯ ಕಾರಣ ಮಾನಸಿಕ ಒತ್ತಡ ಉಂಟಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ಥಿರ ಅದಾಯ ದೊರೆಯುತ್ತದೆ. ಕಟುವಾದ ಮಾತಿನಿಂದ ಯಾರ ಮನಸ್ಸನ್ನೂ ನೋಯಿಸದಿರಿ. ಸಭ್ಯತೆಯ ಬಗ್ಗೆ ಬುದ್ದಿವಾದ ಕೇಳುವಿರಿ. ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ವಂತ ಉದ್ದಿಮೆ ಇದ್ದಲ್ಲಿ ನಿಮ್ಮ ಅಧೀನದಲ್ಲಿರುವ ಕಾರ್ಮಿಕರನ್ನುಗೌರವದಿಂದ ನೋಡಿಕೊಳ್ಳಬೇಕು. ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗಿ ಬಾಳುವಿರಿ. ಸುಲಭದ ಮಾರ್ಗದಲ್ಲಿ ಹಣ ಗಳಿಸಲು ಯೋಜನೆ ರೂಪಿಸುವಿರಿ. ಸ್ಪರ್ಧಾತ್ಮಕ ಮನೋಭಾವನೆಯಿಂದ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸುತ್ತಾರೆ. ಹೆಚ್ಚಿನ ಪ್ರಯತ್ನದಿಂದ ಉನ್ನತ ವಿದ್ಯಾಭ್ಯಾಸ ಕಲಿವ ಅವಕಾಶ ಪಡೆಯುತ್ತಾರೆ. ಹೊಸ ವಾಹನವನ್ನು ಕೊಳ್ಳುವಿರಿ.

ಕನ್ಯಾ

ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಕುಟುಂಬದ ಸದಸ್ಯರ ಹಣದ ವ್ಯವಹಾರ ನಿಮ್ಮ ಪಾಲಾಗುತ್ತದೆ. ಜೀವನದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ನಿಮ್ಮ ಜವಾಬ್ದಾರಿಯುತ ವ್ಯಕ್ತಿತ್ವದಿಂದ ಕಷ್ಟಕರವಾದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಆಪ್ತರಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಸ್ನೇಹಿತರೊಂದಿಗೆ ಸಂತೋಷಕೂಟ ಆಚರಿಸುತ್ತೀರಿ. ಆಸ್ತಿಯ ವಿಚಾರದ ಮಾತುಕತೆ ಕುಟುಂಬ ಸದಸ್ಯರನ್ನು ಅಸಮಾಧಾನಗೊಳಿಸುತ್ತದೆ. ಅನಿರೀಕ್ಷಿತವಾಗಿ ಭೇಟಿಯಾಗುವ ವ್ಯಕ್ತಿಯೊಬ್ಬರು ಜೀವನದ ಹಾದಿಯನ್ನು ಬದಲಿಸುತ್ತಾರೆ. ಎದುರಾಗುವ ಸವಾಲುಗಳನ್ನು ಜಯಿಸುವಿರಿ. ಅಧ್ಯಯನದ ಕಾರಣದಿಂದಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಾರೆ.

ತುಲಾ

ಅಜೀರ್ಣದ ತೊಂದರೆ ಕಾಡುತ್ತದೆ. ಉತ್ತಮ ಆರೋಗ್ಯ ಗಳಿಸಲು ನಿಯಮಿತ ಯೋಗ ಪ್ರಾಣಾಯಾಮವನ್ನು ಅವಲಂಬಿಸುವಿರಿ. ಮಕ್ಕಳಿಗೆ ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ. ಹಳೆಯ ಹಣಕಾಸಿನ ವ್ಯವಹಾರದಿಂದ ಉತ್ತಮ ಆದಾಯ ಗಳಿಸುವಿರಿ. ಯಾವುದೇ ಹೊಸ ಹಣಕಾಸಿನ ವ್ಯವಹಾರ ಆರಂಭಿಸದಿರಿ. ಸಮಾಜದ ಗಣ್ಯ ವ್ಯಕ್ತಿಯ ಸಲಹೆ ಸಹಕಾರ ದೊರೆಯುತ್ತದೆ. ವೃತ್ತಿಜೀವನದ ಉನ್ನತ ಮಟ್ಟ ತಲುಪುವಿರಿ. ಹಿರಿಯ ಅಧಿಕಾರಿಗಳ ಸಹಾಯ ನಿಮಗೆ ದೊರೆಯುತ್ತದೆ. ಕುಟುಂಬದ ಭೂವಿವಾದ ಪರಿಹಾರಗೊಳಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಸಂಗಾತಿ ಮತ್ತು ಮಕ್ಕಳ ಜೊತೆ ಕಿರು ಪ್ರವಾಸ ಕೈಗೊಳ್ಳುವಿರಿ.

ವೃಶ್ಚಿಕ

ಆತ್ಮವಿಶ್ವಾಸದಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಬಲ್ಲಿರಿ. ಕುಟುಂಬದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಕಿರಿಕಿರಿ ಉಂಟಾಗುತ್ತದೆ. ಆತಂಕದ ಪರಿಸ್ಥಿತಿ ಎದುರಾದಾಗ ಶಾಂತಿ ಸಂಯಮದಿಂದ ವರ್ತಿಸಬೇಕಾದ ಅವಶ್ಯಕತೆ ಇದೆ. ಅನಾವಶ್ಯಕವಾಗಿ ಹಣ ಖರ್ಚು ಮಾಡುತ್ತೀರಿ. ಕುಟುಂಬದ ಸದಸ್ಯರಿಗೆ ಹಣಕಾಸಿನ ಸಹಾಯ ಮಾಡುವಿರಿ. ಕೌಟುಂಬಿಕ ಸಂಬಂಧಗಳಲ್ಲಿ ಅಂತರ ಉಂಟಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತಂದುಕೊಳ್ಳಿ. ಕ್ರಮೇಣವಾಗಿ ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ. ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆಯುವಿರಿ. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುತ್ತೀರಿ.

ಧನಸ್ಸು

ಬಿಡುವಿಲ್ಲದ ಕೆಲಸ ಕಾರ್ಯದಿಂದ ದೈಹಿಕವಾಗಿ ಬಳಲುವಿರಿ. ಕೆಲಸದ ನಡುವೆ ವಿಶ್ರಾಂತಿ ಪಡೆಯುವಿರಿ. ಕುಟುಂಬದ ಹಣಕಾಸಿನ ವಿಚಾರದಲ್ಲಿ ಒತ್ತಡವಿರುತ್ತದೆ. ಒಂಟಿತನ ನಿಮ್ಮನ್ನು ಕಾಡುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನಿಮ್ಮ ಕರ್ತವ್ಯನಿಷ್ಠೆಯಿಂದ ಗಮನ ಸೆಳೆಯುವಿರಿ. ಹಣದ ಕೊರತೆಯಿಂದ ಪಾರಾಗುವಿರಿ. ಕಷ್ಟಕರ ಕೆಲಸ ಕಾರ್ಯಗಳಿಂದ ದೂರವಿರುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಮನೆಯನ್ನು ಆಧುನೀಕರಿಸಲು ಬೇಕಾದ ವಸ್ತುವನ್ನು ಖರೀದಿಸುವಿರಿ. ಕುಟುಂಬದ ಸದಸ್ಯರು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಕುಟುಂಬ ಸಂಬಂಧಿತ ಸಮಸ್ಯೆಗಳು ಕ್ರಮೇಣವಾಗಿ ಬಗೆ ಹರಿಯುತ್ತವೆ.

ಮಕರ

ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಿರಿ. ಕುಟುಂಬಕ್ಕೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳು ಕಡಿಮೆ ಆಗಲಿದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಧೈರ್ಯ ಗೆಡುವುದಿಲ್ಲ. ಸಂಪತ್ತನ್ನು ಹೆಚ್ಚಿಸಲು ದೊರೆವ ಅವಕಾಶವನ್ನು ಬಳಸಿಕೊಳ್ಳುವಿರಿ. ಮಾನಸಿಕ ಒತ್ತಡದಿಂದ ಮೌನವಾಗಿರಲು ಬಯಸುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳನ್ನು ಮಾಡುವಿರಿ. ಐಷಾರಾಮಿ ಜೀವನಕ್ಕೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ತಂದೆಯವರ ಸಲಹೆಯನ್ನು ಕೇಳುವಿರಿ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವಿರಿ. ವಿವಾಹ ಯೋಗವಿದೆ. ದಾಂಪತ್ಯದಲ್ಲಿದ್ದ ಸಮಸ್ಯೆ ಕ್ರಮೇಣವಾಗಿ ದೂರವಾಗಲಿದೆ.

ಕುಂಭ

ಅನಿರೀಕ್ಷಿತವಾಗಿ ಸಮಸ್ಯೆಗಳು ಎದುರಾದರೂ ಧೈರ್ಯಗೆಡುವುದಿಲ್ಲ. ಸಮಯ ಸಂದರ್ಭವನ್ನು ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಿರಿ. ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ದೊಡ್ಡ ಪ್ರಮಾಣದ ಹಣಕಾಸಿನ ಸಹಾಯ ದೊರೆಯುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಲಾಭದಾಯಕ. ಪಾಲುಗಾರಿಕೆ ವ್ಯಾಪಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವಿರಿ. ಸ್ನೇಹಿತರು ಮತ್ತು ಕುಟುಂಬದ ಬೆಂಬಲ ದೊರೆಯುತ್ತದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಮನ ಕೊಡದೆ ಕಲಿಕೆಯನ್ನು ಮುಂದುವರೆಸುತ್ತಾರೆ. ಕುಟುಂಬದ ನಿರ್ವಹಣೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ.

ಮೀನ

ಮಾನಸಿಕ ಖಿನ್ನತೆ ಅಥವಾ ಒತ್ತಡ ಬಹಳ ಕಾಡುತ್ತದೆ. ಮನಸ್ಸಿನಲ್ಲಿ ಒಂದು ರೀತಿಯ ಭಯ ಮನೆ ಮಾಡಿರುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಯೋಗ ಧ್ಯಾನದ ಮಾರ್ಗವನ್ನು ಅನುಸರಿಸುವಿರಿ. ಸದಾ ಕಾಲ ಕಾರ್ಯ ನಿರತರಾಗುವ ಕಾರಣ ಆತ್ಮಸ್ಥೈರ್ಯ ಹೆಚ್ಚುತ್ತದೆ. ದಂಪತಿಗಳು ಆರಂಭದಿಂದಲೇ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕುಟುಂಬದ ಹಿರಿಯರ ಆರೋಗ್ಯ ಕಾಪಾಡಲು ಹಣದ ಸಹಾಯ ನಿರೀಕ್ಷಿಸುವಿರಿ. ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಕಿರು ವ್ಯಾಪಾರವನ್ನು ಆರಂಭಿಸುವಿರಿ. ಕುಟುಂಬ ಸದಸ್ಯರು ಪ್ರೀತಿ ವಿಶ್ವಾಸ ತೋರುತ್ತಾರೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಸಂತಸ ನೀಡುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).