ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿರೋಧಿಗಳ ವಿರುದ್ಧ ಯಶಸ್ಸು ಗಳಿಸುವಿರಿ, ಚಾಡಿಮಾತು ನಂಬಿದರೆ ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಲಿದೆ; ವಾರ ಭವಿಷ್ಯ

ವಿರೋಧಿಗಳ ವಿರುದ್ಧ ಯಶಸ್ಸು ಗಳಿಸುವಿರಿ, ಚಾಡಿಮಾತು ನಂಬಿದರೆ ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಲಿದೆ; ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ವಿರೋಧಿಗಳ ವಿರುದ್ಧ ಯಶಸ್ಸು ಗಳಿಸುವಿರಿ, ಚಾಡಿಮಾತು ನಂಬಿದರೆ ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಲಿದೆ; ವಾರ ಭವಿಷ್ಯ
ವಿರೋಧಿಗಳ ವಿರುದ್ಧ ಯಶಸ್ಸು ಗಳಿಸುವಿರಿ, ಚಾಡಿಮಾತು ನಂಬಿದರೆ ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಲಿದೆ; ವಾರ ಭವಿಷ್ಯ

ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (July 7th to July 13th)

ಮೇಷ

ಆರೋಗ್ಯ ಸುಧಾರಿಸಲಿದೆ. ದೈನಂದಿನ ಕೆಲಸ ಕಾರ್ಯಗಳೇ ವ್ಯಾಯಾಮದಂತಿರುತ್ತದೆ. ಜಾಗರೂಕತೆಯಿಂದ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿರ್ದಿಷ್ಟ ಯೋಜನೆಯ ಕಾರಣ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ವಿಫಲರಾಗುವಿರಿ. ಕುಟುಂಬದಲ್ಲಿ ಒಮ್ಮತ ಇರದ ಕಾರಣ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿಯಲ್ಲಿ ನಿಧಾನಗತಿಯ ಪ್ರಗತಿ ಕಂಡು ಬರುತ್ತದೆ. ಅವಶ್ಯಕತೆ ಇರುವಷ್ಟು ಮಾತ್ರ ಖರ್ಚು ಮಾಡುವಿರಿ. ವೈವಾಹಿಕ ಜೀವನದಲ್ಲಿ ಹೊರಗಿನವರ ಮಾತುಗಳನ್ನು ನಂಬಿದರೆ ತೊಂದರೆ ಅನುಭವಿಸುವಿರಿ. ಆತುರದಿಂದ ಹಣಕಾಸಿನ ವ್ಯವಹಾರಕ್ಕೆ ಕೈ ಹಾಕದಿರಿ. ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ. ಮನಸ್ಸಿನ ಹೊಸ ಆಸೆ ಆಕಾಂಕ್ಷಿಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ.

ವೃಷಭ

ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಎದುರಾಗುವ ಸಮಸ್ಯೆಗಳನ್ನು ಅರಿತು ಅದರಿಂದ ಪಾರಾಗುವಿರಿ. ದುಡುಕುವ ಮನಸ್ಸು ಇರುವುದಿಲ್ಲ. ಪ್ರತಿಯೊಂದು ವಿಚಾರದ ಮೇಲೂ ಹಿಡಿತ ಸಾಧಿಸುವಿರಿ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ತಾನಾಗಿಯೇ ಮರೆಯಾಗಲಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಮನರಂಜನೆಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಸಂಬಂಧಿಕರಿಂದ ನಿಮಗೆ ಉಪಯೋಗವಾಗುವಂತಹ ವರ್ತಮಾನ ಬರುತ್ತದೆ. ದೊರೆಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಿರಿ. ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ನಿಮ್ಮದಾಗಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಮಾತ್ರ ಹೆಚ್ಚಿನ ಪ್ರಯತ್ನದಿಂದ ತಮ್ಮ ಕಾರ್ಯ ಸಾಧಿಸಬೇಕು. ಪ್ರವಾಸವೆಂಬುದು ನಿಮ್ಮ ಜೀವನದಲ್ಲಿ ಮರೀಚಿಕೆ ಆಗಲಿದೆ.

ಮಿಥುನ

ಆರೋಗ್ಯದ ಬಗ್ಗೆ ಗಮನವಿರುವುದಿಲ್ಲ. ಮಧುಮೇಹ ಅಥವ ರಕ್ತದ ಒತ್ತಡದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆಹಾರ ಕ್ರಮದಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ವಂಶದ ಪುರಾತನ ಕಾಲದ ವಸ್ತುಗಳನ್ನು ವಿಲೇವಾರಿ ಮಾಡಿ ಹಣ ಗಳಿಸುವಿರಿ. ಆರಂಭಿಸುವ ಪ್ರತಿಯೊಂದು ಹಣಕಾಸಿನ ವ್ಯವಹಾರದಲ್ಲಿಯೂ ಲಾಭವಿರುತ್ತದೆ. ಆತ್ಮೀಯರ ಜೊತೆಯಲ್ಲಿ ಮನ ಬಿಚ್ಚಿ ಮಾತನಾಡುವುದಿಲ್ಲ. ಉದ್ಯೋಗದಲ್ಲಿನ ಅಡ್ಡಿ ಆತಂಕಗಳನ್ನು ನಿವಾರಿಸುವ ಕಾರಣ ವಿಶೇಷ ಗೌರವ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಸಲಹೆ ಸಹಕಾರ ದೊರೆಯುತ್ತದೆ. ಕಠಿಣವೆನಿಸಿದರೂ ದಿನನಿತ್ಯದ ಕೆಲಸ ಕಾರ್ಯಗಳು ಕಾರ್ಯಗತಗೊಳ್ಳುತ್ತವೆ. ವಿಶ್ರಾಂತಿಯನ್ನು ಅರಸಿ ಆತ್ಮೀಯರ ಮನೆಗೆ ಅತಿಥಿಯಾಗಿ ತೆರಳುವಿರಿ.

ಕಟಕ

ಜೀವನದಲ್ಲಿ ಶಿಸ್ತು ಸಂಯಮ ಅಳವಡಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕೈಕಾಲುಗಳಿಗೆ ಪೆಟ್ಟಾಗುವ ಸಂಭವವಿರುತ್ತದೆ. ಎಚ್ಚರಿಕೆ ಇರಲಿ ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ಆಪ್ತರೊಂದಿಗೆ ಹಣಕಾಸಿನ ವ್ಯವಹಾರದಲ್ಲಿ ಪಾಲ್ಗೊಳ್ಳುವಿರಿ. ಅವಸರದಲ್ಲಿ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ತೊಂದರೆ ಎದುರಾಗುತ್ತದೆ. ಭವಿಷ್ಯದಲ್ಲಿನ ಉತ್ತಮ ಜೀವನಕ್ಕಾಗಿ ಯೋಜನೆಯನ್ನು ರೂಪಿಸುವಿರಿ. ತಾಳ್ಮೆಯಿಂದ ಇದ್ದಷ್ಟು ಆತ್ಮೀಯರ ಸಹಾಯ ದೊರೆಯುತ್ತದೆ. ಉತ್ತಮ ಅವಕಾಶ ದೊರೆತು ಉದ್ಯೋಗ ಬದಲಿಸುವ ತೀರ್ಮಾನಕ್ಕೆ ಬರುವಿರಿ. ಕುಟುಂಬದಲ್ಲಿ ಹಣದ ಕೊರತೆ ಇದ್ದರೂ ಪರಸ್ಪರ ಸಹಕಾರದ ಮನೋಭಾವನೆ ಇರುತ್ತದೆ. ಕುಟುಂಬಕ್ಕೆ ಆಧಾರಸ್ತಂಭವಾಗಿ ಬಾಳುವಿರಿ. ಸಾಲದ ವ್ಯವಹಾರದಲ್ಲಿ ತೊಂದರೆ ಎದುರಾಗುತ್ತದೆ.

ಸಿಂಹ

ವಿದ್ಯಾರ್ಥಿಗಳು ಕಲಿಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಯಶಸ್ಸು ಗಳಿಸುತ್ತಾರೆ. ದೈಹಿಕವಾಗಿ ಸದೃಢಗೊಳ್ಳುವಿರಿ. ಸಂತೋಷದಿಂದ ಎಲ್ಲರೊಂದಿಗೆ ಬೆರೆತು ಬಾಳುವಿರಿ. ಲಾಭವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗುವುದಿಲ್ಲ. ಅನಾವಶ್ಯಕ ಖರ್ಚಿನಿಂದ ಬೇಸರ ವ್ಯಕ್ತಪಡಿಸುವಿರಿ. ಆಪತ್ಕಾಲದಲ್ಲಿ ಆತ್ಮೀಯರಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ಕೌಟುಂಬಿಕ ವಿವಾದ ಒಂದು ಎದುರಾಗಲಿದೆ. ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಉನ್ನತ ಪದವಿ ದೊರೆಯುತ್ತದೆ. ಎದುರಾಗುವ ತೊಂದರೆಗಳನ್ನು ಗೆಲ್ಲುವಿರಿ. ವಿದೇಶಕ್ಕೆ ತೆರಳುವ ಅವಕಾಶ ದೊರೆಯಲಿದೆ. ಕುಟುಂಬದ ಹಿರಿಯರ ಕೋಪವನ್ನು ಎದುರಿಸಬೇಕಾಗುತ್ತದೆ. ಇರುವ ಅನುಕೂಲದಲ್ಲಿಯೇ ತೃಪ್ತಿಕರ ಜೀವನವನ್ನು ನಡೆಸುವಿರಿ.

ಕನ್ಯಾ

ನಿಮ್ಮ ಕೆಲಸ ಕಾರ್ಯಗಳಲ್ಲಿ ಕಡಿಮೆ ಅವಧಿಯಲ್ಲಿ ದೊಡ್ಡ ಯಶಸ್ಸು ದೊರೆಯುತ್ತದೆ. ಕ್ರೀಡಾಸ್ಪರ್ಧಿಗಳಿಗೆ ವಿಶೇಷ ಅವಕಾಶ ದೊರೆಯುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಬೇಡದ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬುವುದಿಲ್ಲ. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸುವಿರಿ. ಅನಾವಶ್ಯಕವಾಗಿ ಯಾರಿಗೂ ಹಣದ ಸಹಾಯ ಮಾಡುವುದಿಲ್ಲ. ಬುದ್ಧಿವಂತಿಕೆಯಿಂದ ಸಮಯ ಸಾಧಿಸಿ ವಿರೋಧಿಗಳ ವಿರುದ್ಧ ಯಶಸ್ಸು ಗಳಿಸುವಿರಿ. ಧೈರ್ಯ ಸಾಹಸದಿಂದ ಯಾವುದೇ ತೊಂದರೆ ಎದುರಾದರೂ ಅದರಿಂದ ಪಾರಾಗುವಿರಿ. ವಿದ್ಯಾರ್ಥಿಗಳು ಒಳ್ಳೆಯ ಪ್ರಯತ್ನದ ಸಹಾಯದಿಂದ ವಿಶೇಷ ಫಲಗಳನ್ನು ಪಡೆಯುತ್ತಾರೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುವುದಿಲ್ಲ.

ತುಲಾ

ಕುಟುಂಬದ ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಹಣಕಾಸಿನ ತೊಂದರೆ ಎದುರಾದರೂ ಧೃತಿಗೆಡದೆ ಮುಂದುವರೆಯುವಿರಿ. ಆದಾಯ ಮತ್ತು ಖರ್ಚು ವೆಚ್ಚದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಹೆಚ್ಚು ಯೋಚನೆ ಮಾಡದೆ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಆತ್ಮೀಯರಿಂದ ಸಹಾಯ ದೊರೆಯುವ ಕಾರಣ ತೊಂದರೆ ಇರುವುದಿಲ್ಲ. ಕುಟುಂಬದ ಜವಾಬ್ದಾರಿಯನ್ನುಸ್ವಯಂ ಪ್ರೇರಣೆಯಿಂದ ಒಪ್ಪಿಕೊಳ್ಳುವಿರಿ. ಅನಾರೋಗ್ಯದಿಂದ ಬಳಲುವವರಿಗೆ ಹಣದ ಸಹಾಯ ಮಾಡುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರದ್ಧೆಯಿಂದ ತಮ್ಮ ಗುರಿ ತಲುಪುತ್ತಾರೆ. ಕುಟುಂಬಕ್ಕೆ ಸೇರಿದ ಹಣಕಾಸಿನಲ್ಲಿ ನಿಮಗೆ ನ್ಯಾಯಯುತ ಪಾಲು ದೊರೆಯುತ್ತದೆ.

ವೃಶ್ಚಿಕ

ಕುಟುಂಬದ ಹಿರಿಯರ ನಿರೀಕ್ಷೆಯಂತೆ ಯಶಸ್ಸಿನ ಜೀವನ ನಡೆಸುವಿರಿ. ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. ನೀರಿನಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಯೋಗ ಮತ್ತು ಇತರ ದೈಹಿಕ ವ್ಯಾಯಾಮಗಳಿಂದ ಆಹಾರದಲ್ಲಿ ಸುಧಾರಣೆ ಕಂಡು ಬರುತ್ತದೆ. ಆತುರದಿಂದ ಯಾವುದೇ ಕೆಲಸವನ್ನು ಆರಂಭಿಸದಿರಿ. ಆತ್ಮೀಯರೊಂದಿಗೆ ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸುವ ಯೋಚನೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ದೊಡ್ಡ ವಿವಾದವೊಂದು ಎದುರಾಗಲಿದೆ. ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಅನಾವಶ್ಯಕವಾದ ಯೋಚನೆಯ ಕಾರಣ ಉದ್ಯೋಗ ಬದಲಾಯಿಸುವ ನಿರ್ಧಾರ ಮಾಡುವಿರಿ. ಮಕ್ಕಳೊಂದಿಗೆ ಸಂತಸದಿಂದ ವೇಳೆ ಕಳೆಯುವಿರಿ.

ಧನಸ್ಸು

ಒತ್ತಡದ ನಡುವೆ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಿರಿ. ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ. ಉದ್ಯೋಗದಲ್ಲಿ ಅನುಕೂಲವೆನಿಸುವ ಮಾರ್ಪಾಡುಗಳು ಉಂಟಾಗುತ್ತವೆ. ಬಿಡುವಿನ ವೇಳೆ ಉಪವೃತ್ತಿಯೊಂದನ್ನು ಮಾಡುವಿರಿ. ಹಣಕಾಸಿನ ತೊಂದರೆ ಎದುರಾಗುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಅಭ್ಯಾಸದಲ್ಲಿ ನಿರತರಾಗುತ್ತಾರೆ. ಗುರು ಹಿರಿಯರ ಸೇವೆ ಮಾಡುವ ಅವಕಾಶ ದೊರೆಯುತ್ತದೆ. ಜೊತೆಗೆ ಆರೋಗ್ಯದಲ್ಲಿ ಚೇತರಿಕೆ ಕಾಣುವುದಿಲ್ಲ. ಹಿರಿಯ ಸೋದರ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಲಿವೆ. ಶಾಂತಿ ಸಂಧಾನಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಮಕರ

ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಪ್ರಗತಿ ಉಂಟಾಗಲಿದೆ. ನಿಮ್ಮ ಹವ್ಯಾಸವಾಗಿದ್ದ ಚಿತ್ರಕಲೆ , ಹಾಡುಗಾರಿಕೆ ಮತ್ತು ನಾಟ್ಯಕಲೆ ಜೀವನಾಧಾರವಾಗುತ್ತದೆ. ದೀರ್ಘಕಾಲದ ಪ್ರವಾಸಗಳಿಂದ ಸಂತೋಷ ಉಂಟಾಗುತ್ತದೆ. ಅನಗತ್ಯ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುವಿರಿ. ಆದಾಯದಲ್ಲಿ ನಿರಂತರ ಪ್ರಗತಿ ಕಂಡುಬರುತ್ತದೆ. ಮಕ್ಕಳ ಸಾಧನೆ ಕುಟುಂಬಕ್ಕೆ ಸಂತೋಷ ತರುತ್ತದೆ. ಆರಂಭದಲ್ಲಿ ತೊಂದರೆ ಆದರೂ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಫಲಿತಾಂಶ ಪಡೆಯುವಿರಿ. ವೃತ್ತಿಯಲ್ಲಿ ಉನ್ನತ ಮಟ್ಟ ತಲುಪುವಿರಿ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಉತ್ತಮಗೊಳಿಸಲು ಪ್ರಯತ್ನಿಸುವರು. ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಅನಿವಾರ್ಯವಾಗಿ ಆತ್ಮೀಯರಿಂದ ಹಣವನ್ನು ಪಡೆಯುವಿರಿ. ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ.

ಕುಂಭ

ಮಹಿಳೆಯರಿಗೆ ವಿಶೇಷ ಅನುಕೂಲತೆ ದೊರೆಯಲಿದೆ. ನಿಮ್ಮ ಆರೋಗ್ಯದಲ್ಲಿ ಪ್ರಗತಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ ಇರುತ್ತದೆ. ಕುಟುಂಬದ ಸಮಸ್ಯೆಯನ್ನು ಬಗೆಹರಿಸಲು ಆತ್ಮೀಯರ ಸಹಾಯ ದೊರೆಯುತ್ತದೆ. ನೀವು ಸಾಲ ನೀಡುವುದು ಅಥವಾ ಪಡೆಯುವುದನ್ನು ಒಪ್ಪುವುದಿಲ್ಲ. ಅಗತ್ಯದ ವಿಚಾರವೊಂದಕ್ಕೆ ಹಣದ ಕೊರತೆಯಾಗುತ್ತದೆ. ಅನಿರೀಕ್ಷಿತವಾಗಿ ನಿಮ್ಮ ಖರ್ಚು ವೆಚ್ಚಗಳು ಹೆಚ್ಚಾಗುವುದರಿಂದ ಆತಂಕಗೊಳ್ಳುವಿರಿ. ಭಯಗೊಳ್ಳುವಿರಿ. ಕುಟುಂಬದಲ್ಲಿ ಅಶಾಂತಿ ಕಾಣಿಸುತ್ತದೆ. ನೀವು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವಿರಿ. ಚಿಂತೆಯಿಂದ ಹೊರ ಬರಲು ಪ್ರಯತ್ನಿಸಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಲು ಯಶಸ್ವಿಯಾಗುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಕಾಣದು.

ಮೀನ

ಆತ್ಮೀಯರ ಅನಾರೋಗ್ಯಕ್ಕೆ ಸಂಬಂಧಿಸಿದ ಸುದ್ಧಿಯಿಂದ ಗಾಬರಿಗೊಳ್ಳುವಿರಿ. ಅನಾವಶಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರ್ಥಿಕ ವಿಷಯದಲ್ಲಿ ಉತ್ತಮ ತೀರ್ಮಾನ ತೆಗೆದುಕೊಳ್ಳುವಿರಿ. ನಿಮ್ಮ ಯೋಜನೆಗಳಿಗೆ ಎಲ್ಲರ ಸಹಕಾರ ದೊರೆಯುತ್ತದೆ. ತಾಳ್ಮೆ ಕಳೆದುಕೊಳ್ಳದಂತೆ ಕೆಲಸ ಕಾರ್ಯದಲ್ಲಿ ಮುಂದುವರೆಯಿರಿ. ಹಣಕಾಸಿನ ವಿಚಾರದಲ್ಲಿ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಎದುರಾಗಿದ್ದ ದೊಡ್ಡ ಸಮಸ್ಯೆಯೊಂದು ದೂರವಾಗಲಿದೆ. ಮಕ್ಕಳ ಜೀವನದಲ್ಲಿನ ಹಾದಿಯ ಅಡ್ಡಿ ಆತಂಕಗಳನ್ನು ಅವರೇ ಸ್ವತಃ ಪರಿಹರಿಸಿಕೊಳ್ಳುತ್ತಾರೆ. ನಿಮ್ಮಲ್ಲಿ ಅಭದ್ರತೆಯ ಭಾವನೆ ಮೂಡುತ್ತದೆ. ಮಹಿಳೆಯರು ಯಶಸ್ಸು ಗಳಿಸುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).