ಆರ್ಥಿಕ ಬಿಕ್ಕಟ್ಟು ಸೇರಿ 2024ರ ಬಗ್ಗೆ ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗಿದೆ; 2025ರ ನಿರೀಕ್ಷೆಗಳೇನು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರ್ಥಿಕ ಬಿಕ್ಕಟ್ಟು ಸೇರಿ 2024ರ ಬಗ್ಗೆ ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗಿದೆ; 2025ರ ನಿರೀಕ್ಷೆಗಳೇನು

ಆರ್ಥಿಕ ಬಿಕ್ಕಟ್ಟು ಸೇರಿ 2024ರ ಬಗ್ಗೆ ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗಿದೆ; 2025ರ ನಿರೀಕ್ಷೆಗಳೇನು

2024 ರಲ್ಲಿ ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ವೈದ್ಯಕೀಯ ಪ್ರಗತಿ, ಯುರೋಪಿನಲ್ಲಿ ಉದ್ವಿಗ್ನತೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಬಾಬಾ ವಂಗಾ ಅವರು ಭವಿಷ್ಯ ನುಡಿದಿದ್ದರು. ಆದರೆ ವಾಂಗಾ ಅವರು ಕಳೆದ ವರ್ಷದ ಬಗ್ಗೆ ನುಡಿದಿದ್ದ ಬಹುತೇಕ ಭವಿಷ್ಯ ನಿಜವಾಗಿದೆ. ಹಾಗಿದ್ದರೆ 2025ರ ಬಗ್ಗೆ ನುಡಿದಿರುವ ಭವಿಷ್ಯದ ನಿರೀಕ್ಷೆಗಳೇನು ಎಂಬುದನ್ನು ತಿಳಿಯೋಣ.

ಬಾಬಾ ವಂಗಾ ಹೇಳಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿದೆ. ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ, ರಾಜಕುಮಾರಿ ಡಯಾನಾ ಸಾವು, ಬರಾಕ್‌ ಒಬಾಮಾ ಅಧ್ಯಕ್ಷರಾಗುವುದು, ಕೊರೊನಾ ವೈರಸ್‌ ಬಗ್ಗೆ ಕೂಡಾ ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅದೇ ರೀತಿ 2024ರ ಭವಿಷ್ಯವು ನಿಜವಾಗಿದೆ.
ಬಾಬಾ ವಂಗಾ ಹೇಳಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿದೆ. ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ, ರಾಜಕುಮಾರಿ ಡಯಾನಾ ಸಾವು, ಬರಾಕ್‌ ಒಬಾಮಾ ಅಧ್ಯಕ್ಷರಾಗುವುದು, ಕೊರೊನಾ ವೈರಸ್‌ ಬಗ್ಗೆ ಕೂಡಾ ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅದೇ ರೀತಿ 2024ರ ಭವಿಷ್ಯವು ನಿಜವಾಗಿದೆ.

ಬಲ್ಗೇರಿಯಾದ ಬಾಬಾ ವಂಗಾ ಅವರ ಭವಿಷ್ಯ ಸಾಮಾನ್ಯವಾಗಿ ಸುಳ್ಳಾಗುವುದಿಲ್ಲ. ಏಕೆಂದರೆ ಅವರು ಈವರೆಗೆ ಹೇಳಿರುವ ಎಲ್ಲಾ ಭವಿಷ್ಯವಾಣಿಗಳು ಬಹುತೇಕ ನಿಜವಾಗಿವೆ. ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ, ರಾಜಕುಮಾರಿ ಡಯಾನಾ ಸಾವು, ಬರಾಕ್‌ ಒಬಾಮಾ ಅಧ್ಯಕ್ಷರಾಗುವುದು, ಕೊರೊನಾ ವೈರಸ್‌ ಬಗ್ಗೆ ಕೂಡಾ ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅದೇ ರೀತಿಯಾಗಿ 2024ರ ವಿಷಯಕ್ಕೆ ಬಂದರೆ ಆರ್ಥಿಕ ಸಮಸ್ಯೆಗಳು, ಪರಿಸರ ವಿಕೋಪಗಳು, ಯುರೋಪಿನಲ್ಲಿ ಉದ್ವಿಗ್ನತೆಗಳು, ತಾಂತ್ರಿಕ ಪ್ರಗತಿಗಳು ಹೀಗೆ ಹಲವು ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2024 ರ ಬಗ್ಗೆ ಬಾಬಾ ವಂಗಾ ಅವರು ಹೇಳಿದ್ದ ಬಹುತೇಕ ಭವಿಷ್ಯ ವಾಣಿಗಳು ನಿಜವಾಗಿವೆ. ಹೀಗಾಗಿ 2025ರ ಬಗ್ಗೆ ಹೇಳಿರುವ ಭವಿಷ್ಯ ವಾಣಿಯ ಬಗ್ಗೆ ಜನರಲ್ಲಿ ನಿರೀಕ್ಷೆಗಳ ಜೊತೆಗೆ ಕುತೂಹಲವು ಹೆಚ್ಚಾಗಿದೆ.

2025ರ ಬಗ್ಗೆ ಹೇಳಿರುವಂತಹ ಪ್ರಮುಖ ಭವಿಷ್ಯ ವಾಣಿಗಳು

ಕ್ಷುದ್ರಗ್ರಹಗಳು ಮತ್ತು ನೈಸರ್ಗಿಕ ವಿಕೋಪಗಳು
2025 ರಲ್ಲಿ ದೊಡ್ಡ ಕ್ಷುದ್ರ ಗ್ರಹವೊಂದು ಭೂಮಿಯನ್ನು ಸಮೀಪಿಸುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದೆ. ಜ್ವಾಲಾಮುಖಿ ಸ್ಫೋಟಗಳು, ಪ್ರವಾಹಗಳಂತಹ ತೀವ್ರ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಹವಮಾನ ಬದಲಾವಣೆಯ ತೀವ್ರತೆಯನ್ನು ಕಾಣಲಾಗುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.

ರಷ್ಯಾ-ಉಕ್ರೇನ್ ಯುದ್ಧ ಅಂತ್ಯ

2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆರಂಭಿಸಿದ ಪೂರ್ಣ ಪ್ರಮಾಣದ ಯುದ್ಧ 2025 ರಲ್ಲಿ ಅಂತ್ಯಗೊಳ್ಳಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದರು. ಯುದ್ಧದ ಪರಿಣಾಮವಾಗಿ ಉಭಯ ದೇಶಗಳಲ್ಲಿ ಸಂಪನ್ಮೂಲಗಳು ಕಡಿಮೆಯಾಗುತ್ತಿವೆ. ಹೀಗಾಗಿ ಯುದ್ಧವನ್ನು ಅಂತ್ಯಗೊಳಿಸುವ ಮೂಲಕ ಶಾಂತಿ ಒಪ್ಪಂದಕ್ಕೆ ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ. 2025 ರಲ್ಲಿ ರಷ್ಯಾ ಜಗತ್ತಿನ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಅಂತಲೂ ಭವಿಷ್ಯ ನುಡಿದ್ದಾರೆ.

ಇಂಗ್ಲೆಂಡ್ ಆರ್ಥಿಕ ಬಿಕ್ಕಟ್ಟು ಮತ್ತು ಸೇನಾ ಯುದ್ದ

ಮಾರಕ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ 2025 ರಲ್ಲಿ ಮಿಲಿಟರಿ ಯುದ್ಧಕ್ಕೆ ಕಾರಣವಾಗಬಹುದು. ಬ್ರಿಟಿಷ್ ರಾಜಮನೆತನದೊಳಗೆ ಆಂತರಿಕ ಯುದ್ಧಗಳು ನಡೆಯುತ್ತಿವೆ. ಇವು ರಾಷ್ಟ್ರೀಯ ಅಸ್ಥಿರತೆಗೆ ಕಾರಣವಾಗಬಹುದು ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದ್ದಾರೆ.

ಚೀನಾದಲ್ಲಿ ಹೆಚ್ ಪಿವಿ ಸೋಂಕು, ಲಾಸ್ ಏಂಜಲೀಸ್ ಕಾಡ್ಗಿಚ್ಚು

2025ರ ಆರಂಭದಲ್ಲಿ ಹೆಚ್ ಪಿವಿ ಸೋಂಕು ಹಾಗೂ ಲಾಸ್ ಏಂಜಲೀಸ್ ಕಾಡ್ಗಿಚ್ಚಿನಂತಹ ದೊಡ್ಡ ಘಟನೆಗಳನ್ನು ಕಂಡಿದ್ದೇವೆ. ಇವು ಬಾಬಾ ವಂಗಾ ಅವರು ಭವಿಷ್ಯ ನುಡಿದಿರುವ ವೈರಸ್ ಮತ್ತು ಪ್ರಕೃತಿಯ ವಿಕೋಪದ ಭಾಗವೇ ಆಗಿವೆ. ವಂಗಾ ಅವರು ನೇರವಾಗಿ ವಿಷಯವನ್ನು ಹೇಳದಿದ್ದರು ಪ್ರಮುಖ ಭಾಗವನ್ನು ಉಲ್ಲೇಖಿಸಿರುತ್ತಾರೆ. ಹೀಗಾಗಿ 2025ರ ಆರಂಭದಲ್ಲೇ ಸಂಭವಿಸಿರುವ ಹೆಚ್ ಪಿವಿ ಸೋಂಕು ಮತ್ತು ಲಾಸ್ ಏಂಜಲೀಸ್ ಕಾಡ್ಗಿಚ್ಚು ಬಾಬಾ ವಂಗಾ ಅವರು ಹೇಳಿರುವಂಥ ಭವಿಷ್ಯ ವಾಣಿಯೇ ಆಗಿದೆ ಎಂದು ವಿಶ್ಲೇಷಿಸುತ್ತಿದ್ದಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.