ಪ್ರಯಾಗ್‌ರಾಜ್ ಕೋಟೆ ಆವರಣದ ಬಡೇ ಹನುಮಾನ್ ಮಂದಿರದಲ್ಲಿ ಎಣ್ಣೆ,ಬತ್ತಿ, ಹಣತೆ ವ್ಯಾಪಾರ ಸ್ಥಳೀಯರ ಆರ್ಥಿಕ ಮೂಲ; ಹರ್ಷವರ್ಧನ ಶೀಲವಂತ ಬರಹ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರಯಾಗ್‌ರಾಜ್ ಕೋಟೆ ಆವರಣದ ಬಡೇ ಹನುಮಾನ್ ಮಂದಿರದಲ್ಲಿ ಎಣ್ಣೆ,ಬತ್ತಿ, ಹಣತೆ ವ್ಯಾಪಾರ ಸ್ಥಳೀಯರ ಆರ್ಥಿಕ ಮೂಲ; ಹರ್ಷವರ್ಧನ ಶೀಲವಂತ ಬರಹ

ಪ್ರಯಾಗ್‌ರಾಜ್ ಕೋಟೆ ಆವರಣದ ಬಡೇ ಹನುಮಾನ್ ಮಂದಿರದಲ್ಲಿ ಎಣ್ಣೆ,ಬತ್ತಿ, ಹಣತೆ ವ್ಯಾಪಾರ ಸ್ಥಳೀಯರ ಆರ್ಥಿಕ ಮೂಲ; ಹರ್ಷವರ್ಧನ ಶೀಲವಂತ ಬರಹ

ಮಹಾ ಕುಂಭಮೇಳಕ್ಕಾಗಿ ಜನ ಪ್ರಯಾಗ್‌ರಾಜ್ ಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಕೋಟೆ ಆವರಣದಲ್ಲಿನ ಬಡೇ ಹನುಮಾನ್ ದೇವರಿಗೆ ದೀಪ ಬೆಳಗುತ್ತಾರೆ. ಇದು ಸ್ಥಳೀಯರ ಆರ್ಥಿಕ ಮೂಲ. ಹರ್ಷವರ್ಧನ ಶೀಲವಂತ ಬರಹ ಓದಿ.

ಪ್ರಯಾಗ್‌ರಾಜ್ ಕೋಟೆ ಆವರಣದ ಬಡೇ ಹನುಮಾನ್ ಮಂದಿರದಲ್ಲಿ ಎಣ್ಣೆ, ಬತ್ತಿ, ಹಣತೆ ವ್ಯಾಪಾರ ಸ್ಥಳೀಯರ ಆರ್ಥಿಕ ಮೂಲವಾಗಿದೆ. ಹರ್ಷವರ್ಧನ ಶೀಲವಂತ ಬರಹ ಓದಿ.
ಪ್ರಯಾಗ್‌ರಾಜ್ ಕೋಟೆ ಆವರಣದ ಬಡೇ ಹನುಮಾನ್ ಮಂದಿರದಲ್ಲಿ ಎಣ್ಣೆ, ಬತ್ತಿ, ಹಣತೆ ವ್ಯಾಪಾರ ಸ್ಥಳೀಯರ ಆರ್ಥಿಕ ಮೂಲವಾಗಿದೆ. ಹರ್ಷವರ್ಧನ ಶೀಲವಂತ ಬರಹ ಓದಿ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳದ ಕೇಂದ್ರ ಬಿಂದುವಾಗಿದೆ. ಪವಿತ್ರ ಸ್ನಾನಕ್ಕಾಗಿ ಇಲ್ಲಿಗೆ ಕೋಟ್ಯಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರಯಾಗ್‌ರಾಜ್ ಕೋಟೆ ಆವರಣದ ಬಳಿ ಇರುವ ಬಡೇ ಹುನುಮಾನ್ ಮಂದಿರ ಹಾಗೂ ಅಲ್ಲಿನ ಸ್ಥಳೀಯ ಆರ್ಥಿಕ ಮೂಲದ ಬಗ್ಗೆ ಪತ್ರಕರ್ತರಾದ ಹರ್ಷವರ್ಧನ ಶೀಲವಂತ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಪ್ರಯಾಗ್‌ರಾಜ್ ಕೋಟೆ ಆವರಣದ, ಬಲ ಬದಿಗೆ ಬಡೇ ಹನುಮಾನ್ ಮಂದಿರವಿದೆ. ಕೋಟೆ ಪ್ರವೇಶ ದ್ವಾರದ ಬಳಿ, ಎಡ ಬದಿಗೆ ಸಹಸ್ರ ವರ್ಷಗಳ, ಎಂದಿಗೂ ಬಾಡದ ವಟ ವೃಕ್ಷವೂ ಇದೆ. ತ್ರಿವೇಣಿ ಸಂಗಮದ ಬಳಿಯೇ ಇರುವುದರಿಂದ, ಎಲ್ಲರೂ ದರ್ಶನ ಆಕಾಂಕ್ಷಿಗಳೇ. ಹೀಗಾಗಿ, ಇಲ್ಲಿಯೂ ಸದೈವ ಜನ ಜಂಗುಳಿ, ದಿನದ 24 ತಾಸೂ ಸಾಮಾನ್ಯ!

ಬಡೇ ಹನುಮಾನ್ ಮಂದಿರದ ಪಕ್ಕದಲ್ಲಿ, ಹನುಮಂತನ ಶಿರೋ ಭಾಗದಲ್ಲಿ, ದೊಡ್ಡ ಅರಳಿ ಮರವಿದೆ. ಬುಡದಲ್ಲಿ ಶ್ರೀ ಶನಿ ದೇವ. ದೀಪ ಹಚ್ಚಿ, ಬೆಳಗಿ, ಮರದ ಬೃಹತ್ ಕಟ್ಟೆಯ ಮೇಲೆ ಇಟ್ಟು, ನಮಸ್ಕರಿಸುವುದು ರೂಢಿಯಲ್ಲಿದೆ. ವಿಶೇಷವಾಗಿ ಹೆಣ್ಣು ಮಕ್ಕಳು, ಹರಕೆ ತೀರಿಸುವುದು.

ಚಿತ್ರ ನೋಡಿ. ಪಣತಿ, ಎಣ್ಣೆ ಬತ್ತಿ ಹೇಗೆ ಜೋಡಿಸಿಟ್ಟು, ಕೊಳ್ಳುವವರಿಗೆ ಅನುವು ಮಾಡಲಾಗಿದೆ?!ತಾಸಿನಲ್ಲಿ, ಇಷ್ಟೆಲ್ಲಾ ಖಾಲಿ! ಮತ್ತೊಂದು ಬ್ಯಾಚ್ ಟ್ರೇ ಈ ಜಾಗವನ್ನು ತುಂಬುತ್ತದೆ. ಒಂದು ದೀಪಕ್ಕೆ 10 ರೂಪಾಯಿ. ತುಪ್ಪದ ದೀಪಕ್ಕೆ 20. ಒಂದು ಗಂಟೆಯಲ್ಲಿ, ಸರಾಸರಿ 500 ದೀಪಗಳ ಮಾರಾಟ. 8-12 ತಾಸು ನಿರಂತರ. ಶನಿವಾರ ಈ ಮಾರಾಟ ದುಪ್ಪಟ್ಟು!

ಬತ್ತಿ ದೀಪವಾಗಿ ಬೆಳಗಿ, ಕರಗಿ ಸುಟ್ಟು ಹೋಗುತ್ತದೆ. ಮಣ್ಣಿನ ಹಣತೆ?! ಚೂರು ಕುಡಿ ಹಾಯ್ದು ಕಪ್ಪಗಾಗುತ್ತದೆ. ತಾಸಿಗೊಮ್ಮೆ ಹೀಗೆ ಖಾಲಿಯಾದ ಪ್ರಣತೆ ಎತ್ತಿ, ಪಕ್ಕಕ್ಕೆ ಪೇರಿಸಲಾಗುತ್ತದೆ. ಒಂದು ಟ್ರ್ಯಾಕ್ಟರ್ ಟ್ರಾಲಿಯಷ್ಟು ಕೂಡುತ್ತಲೇ, ಸಾಗಣೆಗೆ ವ್ಯವಸ್ಥೆ. ಎರಡೂ ಮೂರು ದಿನಗಳಿಗೆ ಒಮ್ಮೆ ಅಷ್ಟು ಕೂಡುತ್ತದೆ. ಈಗಂತೂ ದಿನವೊಂದಕ್ಕೆ ಅಷ್ಟು!

ಎಣ್ಣೆ, ಬತ್ತಿ, ತುಪ್ಪದ ದೀಪ, ಮಣ್ಣಿನ ಹಣತೆ, ಸಾಗಣೆ, ಒಪ್ಪೋರಣ, ಮಾರಾಟ, ಮರಳಿ ಸಂಗ್ರಹ ಮತ್ತು ಸಾಗಣೆ.. ರೀಸೈಕ್ಲಿಂಗ್.. ಸುಟ್ಟ ಹಣತೆ ಆದ್ದರಿಂದ ಕರಗಿಸಿಯೇ ಮತ್ತೆ ಮರು ರೂಪ ಕೊಡುವುದು, ಅನಿವಾರ್ಯ. ಜೊತೆಗೆ ಎಣ್ಣೆ 20 ರೂಪಾಯಿ ಮತ್ತು ಕರಿ ಎಳ್ಳು 20 ರೂಪಾಯಿ.

ಇಲ್ಲಿರುವ 'ಲೋಕಲ್ ಎಕನಾಮಿಕ್ಸ್' ನಾವು ಅರ್ಥ ಮಾಡಿಕೊಳ್ಳಬೇಕು!

8-10 ಜನರಿಗೆ ವರ್ಷದುದ್ದಕ್ಕೂ ಉದ್ಯೋಗ. ತಲಾ, ನಿಗದಿತ ಆದಾಯ ಹಂಚಿಕೆ. ಸಾವಿರಾರು ಭಕ್ತರಿಗೆ, ದೈವಕ್ಕೆ ಅನಾಯಾಸ, ಹೊರೆಯಾಗದಂತೆ ಸಮರ್ಪಿಸಿದ ಸಂತುಷ್ಟಿ. ಉಪಜೀವನಕೆ ಆಧಾರ. ಸಮರ್ಪಣೆ, ಸೇವೆ, ಸದ್ಭಾವದ ಜೊತೆಗೆ, ಶ್ರೀಸಾಮಾನ್ಯನ ಸದ್ವಿಕಾಸ.

ಹಣ, ಯಾವ ಯಾವ ರೂಪದಲ್ಲಿ, ಎಷ್ಟೊಂದು ಕೈಗಳಲ್ಲಿ ದಾಟಿ, ಬದಲಾಗಿ, ಆಸರೆ ಆಗಿದೆ ಯೋಚಿಸಿ. ಮನೆಯಿಂದಲೇ ಇದನ್ನೆಲ್ಲ ನಾವು ಹೊತ್ತೊಯ್ದರೆ ಪಡಬಹುದಾದ ಪಡಿಪಾಟಲು ಎಂಥದ್ದು!? ಹುಂಡಿಗೆ ಹಾಕುವವರು ಬಹಳ. ಅವರ ಭಕ್ತಿ. ಬದಲಾಗಿ, ಹೀಗೆ ನಾವು ಪ್ರವಾಸಿಗರು, ನಮ್ಮ ಭಾವವನ್ನು ಹತ್ತಾರು ಸ್ಥಳೀಯರೊಂದಿಗೆ ವ್ಯವಹರಿಸಿ, ನಮ್ಮ ದುಡಿಮೆ ಹಂಚಿಕೊಂಡರೆ.. ಒಳ್ಳೆಯತನದಲ್ಲಿ ನಂಬಿಕೆ ಬಾಳಿಸಿದಂತೆ! ಇಮ್ಮಡಿಸಿದಂತೆ! ನೂರ್ಮಡಿ ಆದಂತೆ! ನಮ್ಮ ಕೈಲಾದ ಮಟ್ಟಿಗೆ, ಅವರ ದುಡಿಮೆಗೆ ಕೈ ಜೋಡಿಸಿದಂತೆ!

ಫಿಲ್ ಗುಡ್ ಗುಟ್ಟು! ಕೊಡುವುದೇನು? ಕೊಂಬುದೇನು!
ವ್ಯಾಪಾರಂ, (ನಿಜಾರ್ಥದಲ್ಲಿ) ದ್ರವ್ಯ ಚಿಂತನಮ್!
ದ್ರೋಹ ಚಿಂತನಮ್, ನಾವು ಎಲ್ಲೆಡೆ, ವಿತರ್ಕದಡಿ, ಬುದ್ಧ್ಯಾ ಪೂರ್ವಕ ಬಗೆಯುವುದು!

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.