Bhadra Raja Yogam: ಬುಧನಿಂದ ಭದ್ರ ರಾಜಯೋಗ: ಜೂನ್ 14ರಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ನಿಮಗೆ ರಾಜಯೋಗವಿದೆಯೇ? ಇಲ್ಲಿದೆ ವಿವರ
Bhadra Raja Yogam: ಯಾರ ಅದೃಷ್ಟ ಯಾವಾಗ ಬದಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಇದೀಗ ಮೂರು ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವ ಯೋಗ ಒದಗಿಬಂದಿದೆ. ಇದಕ್ಕೆ ಕಾರಣ ಬುಧ ಸಂಕ್ರಮಣ ಹಾಗೂ ಇದರಿಂದ ರೂಪಗೊಳ್ಳುತ್ತಿರುವ ಭದ್ರ ರಾಜಯೋಗ. ಏನಿದು ಭದ್ರ ರಾಜಯೋಗ? ಈ ಯೋಗದಿಂದ ಯಾವ ರಾಶಿಯವರಿಗೆ ಲಾಭ ಎಂಬುದನ್ನು ತಿಳಿದುಕೊಳ್ಳೋಣ..

Bhadra Raja Yogam: ಜೂನ್ ತಿಂಗಳಿನಲ್ಲಿ ಬುಧ ಸಂಕ್ರಮಣ ಬಹಳ ನಿರ್ಣಾಯಕ. ಏಕೆಂದರೆ ಈ ತಿಂಗಳಲ್ಲಿ ಬುಧ ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸಲಿದ್ದಾನೆ. ಜ್ಯೋತಿಷದ ಪ್ರಕಾರ ಬುಧ ಗ್ರಹವು ಜೂನ್ 14 ರಂದು ತನ್ನದೇ ಆದ ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ನಂತರ ಜೂನ್ 29 ರಂದು ಕಟಕ ರಾಶಿಗೆ ಪ್ರವೇಶಿಸುತ್ತಾನೆ. ಬುಧನು ಬುದ್ಧಿವಂತಿಕೆ, ಜ್ಞಾನ, ಆರೋಗ್ಯ, ಪ್ರತಿಭೆ, ಉದ್ಯೋಗ-ವ್ಯವಹಾರದ ಸಂಕೇತವಾಗಿದ್ದು, ಈತನ ಒಲುಮೆ ತುಂಬಾನೆ ಮುಖ್ಯ.
ಭದ್ರ ರಾಜಯೋಗ ಎಂದರೇನು?
ಮಿಥುನ ರಾಶಿಯಲ್ಲಿ ಬುಧ ಸಂಕ್ರಮಣವು ಶಕ್ತಿಯುತ ಭದ್ರ ರಾಜಯೋಗವನ್ನು ಸೃಷ್ಟಿಸುತ್ತದೆ. ಬುಧನು ಜಾತಕದ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದಾಗ ಅಥವಾ ಬುಧ ತನ್ನದೇ ರಾಶಿಗಳಾದ ಮಿಥುನ ಅಥವಾ ಕನ್ಯಾ ರಾಶಿಯಲ್ಲಿದ್ದಾಗ ಭದ್ರ ರಾಜಯೋಗ ಉಂಟಾಗುತ್ತದೆ.
ಜ್ಯೋತಿಷ್ಯದಲ್ಲಿ ಭದ್ರ ರಾಜಯೋಗವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಭದ್ರ ರಾಜಯೋಗದ ಪ್ರಭಾವವು ಉದ್ಯೋಗ ಮತ್ತು ವ್ಯವಹಾರದಲ್ಲಿ ಅಗಾಧವಾದ ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುವ ಸಾಧ್ಯತೆಗಳಿವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯಲು ಹಲವು ಅವಕಾಶಗಳು ಸಿಗಲಿದೆ. ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಬುಧ ಗ್ರಹವು ಜೂನ್ 14 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಭದ್ರ ರಾಜಯೋಗ ರೂಪುಗೊಳ್ಳಲಿದೆ. ಭದ್ರ ರಾಜಯೋಗಯಿಂದ ಐಷಾರಾಮಿ ಜೀವನ ನಡೆಸುವ ಮೂರು ರಾಶಿಗಳು ಈ ಕೆಳಕಂಡಂತಿವೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧ ಸಂಕ್ರಮಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅವರಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಅಥವಾ ಸಂಬಳ ಹೆಚ್ಚಾಗುವ ಸಾಧ್ಯತೆಯಿದೆ. ಹಣದ ಹರಿವು ಹೆಚ್ಚಾಗುತ್ತದೆ. ಹಣಕಾಸಿನ ಅಡಚಣೆಗಳು ದೂರವಾಗುತ್ತವೆ. ವ್ಯಾಪಾರದಲ್ಲಿ ಲಾಭವಿರುತ್ತದೆ. ಹಠಾತ್ ಹಣ ಗಳಿಸುವ ಅವಕಾಶಳು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಶುಭ ಸುದ್ದಿಯನ್ನು ಕೇಳುವರು.
ಕನ್ಯಾ ರಾಶಿ
ಬುಧ ಸಂಕ್ರಮಣದಿಂದ ಕನ್ಯಾ ರಾಶಿಯವರ ಅದೃಷ್ಟ ಕೈ ಹಿಡಿಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗ ಹುಡುಕಾಟ ಪೂರ್ಣಗೊಂಡು ಒಳ್ಳೆಯ ಕೆಲಸ ಸಿಗಲಿದೆ. ಹೊಸ ಆದಾಯದ ಮೂಲಗಳ ಮೂಲಕ ಹಣ ಸಂಪಾದಿಸುವಿರಿ. ವೃತ್ತಿಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಯಾವುದೇ ಅಡೆತಡೆಯಿಲ್ಲದೆ ಪ್ರತಿಯೊಂದು ಕೆಲಸವೂ ಪೂರ್ಣಗೊಳ್ಳುತ್ತದೆ. ನೀವು ಅನಿರೀಕ್ಷಿತವಾಗಿ ಹಣವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಭದ್ರ ರಾಜಯೋಗ ಬಹಳ ಪ್ರಯೋಜನಕಾರಿ. ವಿದ್ಯಾರ್ಥಿಗಳಿಗಳಿಗೂ ಇದು ಅತ್ಯಂತ ಅದೃಷ್ಟದ ಸಮಯ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಸಮಾಜದಲ್ಲಿ ಗೌರವ ಸಿಗಲಿದೆ. ದತ್ತಿ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಅನೇಕ ಕೆಲಸ-ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.ನಿಮಗೆ ಬರಬೇಕಿದ್ದ ಬಾಕಿ ಹಣ ಮರಳಿ ಸಿಗಲಿದೆ.
