ಕನ್ನಡ ಸುದ್ದಿ  /  Astrology  /  Bhalachandra Sankashti Chaturthi Celebrating On 28th March 2024 Thursday Worship Of Lord Ganesha Rsm

Bhalachandra Sankashti Chaturthi: ಮಾರ್ಚ್‌ 28ಕ್ಕೆ ಬಾಲಚಂದ್ರ ಸಂಕಷ್ಟ ಚತುರ್ಥಿ; ಮುಹೂರ್ತ, ಪೂಜಾ ವಿಧಿಯ ಬಗ್ಗೆ ಇಲ್ಲಿದೆ ಮಾಹಿತಿ

Bhalachandra Sankashti Chaturthi: ಮಾರ್ಚ್‌ 28 ರಂದು ಬಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಭಕ್ತರು ಈ ದಿನ ಪೂಜೆ, ಪುನಸ್ಕಾರಗಳನ್ನು ಕೈಗೊಂಡು ರಾತ್ರಿ ಚಂದ್ರೋದಯದವರೆಗೂ ಉಪವಾಸವಿರುತ್ತಾರೆ. ಬಾಲಚಂದ್ರ ಸಂಕಷ್ಟ ಚತುರ್ಥಿಯ ಮುಹೂರ್ತ, ಪೂಜಾ ವಿಧಾನ ಹೀಗಿದೆ.

ಬಾಲಚಂದ್ರ ಸಂಕಷ್ಟಹರ ಗಣಪತಿ ವ್ರತ ವಿಧಾನ
ಬಾಲಚಂದ್ರ ಸಂಕಷ್ಟಹರ ಗಣಪತಿ ವ್ರತ ವಿಧಾನ (PC: unsplash)

ಬಾಲಚಂದ್ರ ಸಂಕಷ್ಟಹರ ಗಣಪತಿ ವ್ರತ: ಪ್ರತಿ ತಿಂಗಳು ಹುಣ್ಣಿಮೆ ಆದ 4 ದಿನಗಳ ನಂತರ ಸಂಕಷ್ಟಹರ ಚತುರ್ಥಿ ಬರುತ್ತದೆ. ಸಾಮಾನ್ಯವಾಗಿ ಚತುರ್ಥಿಯನ್ನು ಗಣೇಶನನ್ನು ಪೂಜಿಸಲು ಸಮರ್ಪಿಸಲಾಗಿದೆ.

ಒಂದು ತಿಂಗಳಲ್ಲಿ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಚತುರ್ಥಿ ಎರಡು ಬಾರಿ ಬರುತ್ತದೆ. ವಿನಾಯಕ ಚತುರ್ಥಿ ಶುಕ್ಲ ಪಕ್ಷದಲ್ಲಿ ಬರುತ್ತದೆ. ಮತ್ತು ಸಂಕಷ್ಟಿ ಚತುರ್ಥಿ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಪ್ರತಿ ಸಂಕಷ್ಟಿ ಚತುರ್ಥಿಗೂ ವಿಭಿನ್ನ ಹೆಸರು ಮತ್ತು ಕಥೆ ಇರುತ್ತದೆ. ಮಾರ್ಚ್‌ ತಿಂಗಳಲ್ಲಿ ಬಾಲಚಂದ್ರ ಸಂಕಷ್ಟಿ ಚತುರ್ಥಿಯನ್ನು ಆಚರಿಸಲಾಗುತ್ತದೆ.

ಚೈತ್ರ ಮಾಸದ ಕೃಷ್ಣ ಪಕ್ಷದ 4ನೇ ದಿನ ಅಂದರೆ 28 ಮಾರ್ಚ್ 2024 ರಂದು ಗಣೇಶನ ಭಕ್ತರು ವ್ರತ ಆಚರಿಸುತ್ತಾರೆ. ಈ ದಿನ ಭಕ್ತರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ವಿಘ್ನ ನಿವಾರಕ ಗಣೇಶನನ್ನು ಬುದ್ಧಿವಂತಿಕೆ, ಸಮೃದ್ಧಿಯ ದೇವರು ಎಂದು ಪೂಜಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಪೂಜಾ ವಿಧಿ ವಿಧಾನಗಳನ್ನು ಪ್ರಾರಂಭಿಸುವ ಮುನ್ನ, ಯಾವುದೇ ಶುಭ ಸಮಾರಂಭ ಮಾಡುವ ಮುನ್ನ ಗಣೇಶನನ್ನು ಪೂಜಿಸಲಾಗುತ್ತದೆ.

ಪೂಜಾ ಮುಹೂರ್ತ

28 ಮಾರ್ಚ್ ಸಂಜೆ 06:56 ರಿಂದ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ

29 ಮಾರ್ಚ್‌ ರಾತ್ರಿ 08:20ಕ್ಕೆ ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ.

ಚಂದ್ರೋದಯದ ಸಮಯ 29 ಮಾರ್ಚ್ ರಾತ್ರಿ 08:37

ಬಾಲಚಂದ್ರ ಸಂಕಷ್ಟಿ ಚತುರ್ಥಿಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಗಣೇಶನನ್ನು ವಿಘ್ನ ನಿವಾರಿಕ ಎಂದು ಕರೆಯುತ್ತೇವೆ. ತೊಂದರೆಗಳನ್ನು ನಿವಾರಿಸುವವನು ಎಂದು ಅರ್ಥ. ಸಂಕಷ್ಟ ಚತುರ್ಥಿ ದಿನದಂದು ಭಕ್ತರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಆಚರಿಸುತ್ತಾರೆ. ಜೀವನದಲ್ಲಿ ಒಂದಾದ ನಂತರ ಒಂದರಂತೆ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಅಡೆತಡೆಗಳನ್ನು ಎದುರಿಸುತ್ತಿರುವ ಭಕ್ತರು ಗಣೇಶನನ್ನು ಪೂಜಿಸಬೇಕು. ಈ ಚತುರ್ಥಿ ಪೂಜೆ ಕೈಗೊಳ್ಳುವವರಿಗೆ ಸಂಪತ್ತು, ಸಮೃದ್ಧಿ ದೊರೆಯುತ್ತದೆ.

ಪೂಜಾ ವಿಧಿ ವಿಧಾನ

  • ಬಾಲಚಂದ್ರ ಸಂಕಷ್ಟಹರ ಚತುರ್ಥಿಯ ಪೂಜಾ ವಿಧಿ ವಿಧಾನ
  • ಬೆಳಗ್ಗೆ ಬೇಗ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಪವಿತ್ರ ಸ್ನಾನ ಮಾಡಿ.
  • ಮನೆ ಮತ್ತು ವಿಶೇಷವಾಗಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.
  • ಮರದ ಹಲಗೆಯ ಮೇಲೆ ರಂಗೋಲಿ ಬಿಟ್ಟು ಅದರ ಮೇಲೆ ತಟ್ಟೆ ಇಟ್ಟು ನಂತರ ಗಣೇಶನ ವಿಗ್ರಹವನ್ನು ಇರಿಸಿ.
  • ತುಪ್ಪದಿಂದ ದೀಪವನ್ನು ಹಚ್ಚಿ, ಹಳದಿ ಹೂವಿನ ಹಾರವನ್ನು ಗಣಪತಿಗೆ ಅರ್ಪಿಸಿ.
  • ಗಣೇಶನಿಗೆ ತಿಲಕ ಹಚ್ಚಿ ಮನೆಯಲ್ಲಿ ತಯಾರಿಸಿದ ಮೋದಕ, ಲಡ್ಡು ಮತ್ತು ದರ್ಬೆಯನ್ನು ಅರ್ಪಿಸಿ
  • ಬಿಳಿ ಎಕ್ಕದ ಗಿಡದ ಹೂವಿನ ಹಾರ, ಗರಿಕೆಯನ್ನು ಸಮರ್ಪಿಸಿ
  • ಗಣೇಶನಿಗೆ ಇಷ್ಟವಾದ ಕಡುಬು ಅಥವಾ ಖೀರನ್ನು ನೈವೇದ್ಯವನ್ನಾಗಿ ಅರ್ಪಿಸಿ.
  • ಧೂಪ ದೀಪ ನೈವೇದ್ಯಗಳಿಂದ ಗಣೇಶನನ್ನು ಪೂಜಿಸಿದ ನಂತರ ಓಂ ಭಾಲಚಂದ್ರಯೇ ನಮಃ ಎಂದು 108 ಬಾರಿ ಜಪಿಸಿ.
  • ಬಾಲಚಂದ್ರ ಸಂಕಷ್ಟಿ ಚತುರ್ಥಿ ವ್ರತ ಕಥೆಯನ್ನು ಕೇಳಿ ಅಥವಾ ಪಠಿಸಿ

ಇದನ್ನೂ ಓದಿ: ಹಿಂದೂ ಧರ್ಮದ ಪ್ರಕಾರ ಮೂಗುತ್ತಿ ಧರಿಸುವ ಕಾರಣ ಏನು; ನೀವು ಯಾವ ರೀತಿ ಮೂಗುತ್ತಿ ಧರಿಸಿದ್ದೀರ?

ಈ ಮಂತ್ರಗಳನ್ನು ಪಠಿಸಿ

ಓಂ ಗಣ ಗಣಪತಯೇ ನಮಃ

ಓಂ ಶ್ರೀ ಗಣೇಶಯೇ ನಮಃ

ಓಂ ಬಾಲಚಂದ್ರಯೇ ನಮಃ