ಕನ್ನಡ ಸುದ್ದಿ  /  Astrology  /  Birth Date Astrology Characteristics Of People Who Born On 12 Numerology In Kannada Sts

Birth Date Astrology: ಹಿರಿಯರೆಂದರೆ ಗೌರವ, ಸಂಗಾತಿ ಎಂದರೆ ಅತಿಯಾದ ಪ್ರೀತಿ; 12ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು.

12ನೇ ತಾರೀಖಿನಂದು ಜನಿಸಿದವರ ಗುಣಧರ್ಮ
12ನೇ ತಾರೀಖಿನಂದು ಜನಿಸಿದವರ ಗುಣಧರ್ಮ (PC: Pixabay)

Birthday Date Astrology: 12ನೇ ದಿನಾಂಕದಲ್ಲಿ ಜನಿಸಿದವರು ಸಾಮಾನ್ಯವಾಗಿ ತಾವು ಕಷ್ಟದಲ್ಲಿದ್ದರೂ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಯಾವುದೇ ವಾದವಿವಾದಗಳನ್ನು ಬಹುಕಾಲ ಉಳಿಸುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ಸದಾಕಾಲ ಸುಖ ಸಂತೋಷದಿಂದ ಬಾಳುತ್ತಾರೆ. ಇವರು ಇರುವ ಕಡೆ ಹಾಸ್ಯಕ್ಕೆ ಮತ್ತು ಆತ್ಮೀಯತೆಗೆ ಬರ ಇರುವುದಿಲ್ಲ. ಕಷ್ಟ ನಷ್ಟಗಳು ಎದುರಾದಾಗ ಭಯ ಪಡದೆ ಸುಲಭದ ದಾರಿಯಲ್ಲಿ ಪರಿಹಾರವನ್ನು ಕಂಡುಹಿಡಿಯುತ್ತಾರೆ.

ಯಾರ ಮೇಲಾದರೂ ಸರಿ ಇವರಿಗೆ ಬರುವ ಕೋಪ ಕ್ಷಣ ಕಾಲ ಮಾತ್ರ. ವಿರೋಧಿಗಳನ್ನೂ ಆತ್ಮೀಯತೆಯಿಂದ ನೋಡುವ ಜನರಿವರು. ಯಂತ್ರ ಮಂತ್ರಗಳಲ್ಲಿ ಆಸಕ್ತಿ ಇರುತ್ತದೆ. ಹಿಂದಿನ ತಲೆಮಾರಿನವರು ನಡೆಸಿಕೊಂಡು ಬಂದ ಕೆಲಸ ಕಾರ್ಯಗಳನ್ನು ಮುಂದುವರೆಸುತ್ತಾರೆ. ಸದ್ದಿಲ್ಲದೆ ಯಾವುದಾದರೂ ಒಂದು ವಿಚಾರದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಇವರ ಜೀವನದಲ್ಲಿ ನಡೆಯುವ ಯಾವುದೇ ಕೆಲಸ ಕಾರ್ಯಗಳನ್ನು ಕರಾರುವಕ್ಕಾಗಿ ನಡೆಯುತ್ತದೆ, ಹೆಚ್ಚು ಕಡಿಮೆ ಆಗುವುದು ಇವರಿಗೆ ಸರಿ ಹೊಂದದ ವಿಚಾರ. 

ಹಿರಿಯರ ಬಗ್ಗೆ ವಿಶ್ವಾಸ, ಗೌರವ

ಹಿರಿಯರ ಬಗ್ಗೆ ವಿಶೇಷವಾದಂತಹ ಗೌರವ ಮತ್ತು ವಿಶ್ವಾಸವಿರುತ್ತದೆ. ಸೋಲು ಎದುರಾದಾಗ ಬುದ್ದಿವಂತರ ಸಹಾಯ ಸಹಕಾರದೊಂದಿಗೆ ಗೆಲುವು ಸಾಧಿಸುವರು. ಸದಾಕಾಲ ಸುಖ ಸಂತೋಷದಿಂದ ಜೀವನ ನಡೆಸಲು ಇಷ್ಟಪಡುವರು. ಕುಟುಂಬದಲ್ಲಿ ಆಗಲಿ ಬಂಧು ಬಳಗದವರಾಗಲಿ ಅಥವಾ ಸ್ನೇಹಿತರಲ್ಲಾಗಲಿ ಯಾವುದೇ ತೊಂದರೆ ಉಂಟಾದಾಗ ಅದನ್ನು ಪರಿಹರಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ಎಲ್ಲರ ನಂಬಿಕೆಯನ್ನು ಗಳಿಸುವಿರಿ.

ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದು. ಕೇವಲ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳುವರು. ಇವರಿಗೆ ತಿಳಿಯದ ವಿಚಾರ ಯಾವುದೂ ಇರುವುದಿಲ್ಲ. ಸದಾಕಾಲ ಹೊಸ ವಿಚಾರಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಜೀವನದ ಆರಂಭದಲ್ಲಿ ಸಾಮಾನ್ಯದಂತೆ ಕಾಣುತ್ತಾರೆ. ಬೇರೆಯವರು ಇವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಜೀವನದಲ್ಲಿ ಯಾವುದಾದರೂ ಒಂದು ಹೊಸ ಕೆಲಸ ಕಾರ್ಯಗಳನ್ನು ಮಾಡುವ ವಿಶೇಷ ವ್ಯಕ್ತಿಗಳು ಇವರು. ಜೀವನದಲ್ಲಿ ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ನಿರ್ಧರಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸದೆ ವಿಶ್ರಾಂತಿ ಪಡೆಯುವುದಿಲ್ಲ.

ಬರವಣಿಗೆಯಿಂದಲೇ ಇವರ ಜೀವನ ನಡೆಯುವ ಸಾಧ್ಯತೆ ಇದೆ. ಸ್ತ್ರೀಯರಾಗಲಿ ಪುರುಷರಾಗಲಿ ಸಂಗಾತಿ ಜೊತೆಯಲ್ಲಿ ಜಗಳವಾಡುವುದಿಲ್ಲ. ತಪ್ಪನ್ನು ಮನ್ನಿಸಿ ಸಂಗಾತಿಯೊಂದಿಗೆ ಸುಖ ಸಂತೋಷಗಳಿಂದ ಜೀವನ ನಡೆಸುತ್ತಾರೆ. ವಿವಾಹವಾದ ನಂತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣುತ್ತವೆ. ದಿನದಿಂದ ದಿನಕ್ಕೆ ಜೀವನದಲ್ಲಿ ಅಭಿವೃದ್ಧಿಯತ್ತ ಮುಂದುವರೆಯುತ್ತಾರೆ. ಸಾಮಾನ್ಯವಾಗಿ ಇವರ ವಿವಾಹವು ಸಂಬಂಧಿಕರಲ್ಲಿ ಅಥವಾ ಪರಿಚಯ ಇರುವವರ ಜೊತೆಯಲ್ಲಿ ನಡೆಯುತ್ತದೆ. ಒಮ್ಮೆ ತಿರಸ್ಕರಿಸಲ್ಪಟ್ಟವ ಜನರೊಂದಿಗೆ ವಿವಾಹವಾಗುತ್ತದೆ. ಕ್ಷಣ ಕಾಲವು ಬೇರೆ ಬೇರೆಯಾಗಲು ಇಷ್ಟಪಡದಂತಹ ಗುಣವೂ ಈ ದಿನಾಂಕದಲ್ಲಿ ಹುಟ್ಟಿದ ದಂಪತಿಗಳಲ್ಲಿ ಕಂಡು ಬರುತ್ತದೆ.

ಪದೇ ಪದೆ ತಾವು ಮಾಡುವ ಕೆಲಸ ಬದಲಿಸುವ ವ್ಯಕ್ತಿತ್ವದವರು

ಇವರಿಗೆ ಒಂದೇ ರೀತಿಯ ಕೆಲಸವನ್ನು ಮಾಡಲು ಇಷ್ಟವಾಗುವುದಿಲ್ಲ. ಪದೇ ಪದೇ ತಮ್ಮ ಕೆಲಸ ಕಾರ್ಯಗಳನ್ನು ಬದಲಾಯಿಸುತ್ತಾರೆ. ಇವರಿಗೆ ಒಳ್ಳೆಯ ಮಕ್ಕಳಿರುತ್ತಾರೆ. ಆದರೆ ದೊಡ್ಡ ಮಗ ಅಥವಾ ಮಗಳಿನಿಂದ ನಿರಾಸೆ ಉಂಟಾಗಬಹುದು. ಇವರ ಮನಸ್ಸಿನಲ್ಲಿ ಇರುವಂತೆ ಮಕ್ಕಳು ನಡೆದುಕೊಳ್ಳುವುದಿಲ್ಲ. ಆದರೆ ಮಕ್ಕಳನ್ನು ಶಿಕ್ಷಿಸುವುದು ಇವರ ಪಾಲಿಗೆ ದೊಡ್ಡ ಅಪರಾಧವಾಗುತ್ತದೆ. ಆದ್ದರಿಂದ ಮಕ್ಕಳು ಸರಿಯಾದ ಮಾರ್ಗದಲ್ಲಿ ಹೋಗಬೇಕು. ಮದುವೆ ಆಗುವವರೆಗೂ ಜೀವನವು ಸಾಮಾನ್ಯ ಗತಿಯಲ್ಲಿ ಸಾಗುತ್ತದೆ. ಆದರೆ ವಿವಾಹದಿಂದಲೇ ಇವರ ಅದೃಷ್ಟ ಬದಲಾಗುತ್ತದೆ. 

ಆತ್ಮೀಯರ ವಿವಾಹದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಮದುವೆಯ ನಂತರ ಹೆಚ್ಚಿನ ಜವಾಬ್ದಾರಿಯನ್ನು ದೊರೆಯುತ್ತದೆ. ಬೇರೆಯವರ ಮನೆಯ ಶುಭ ಕಾರ್ಯಕ್ರಮಗಳಿಗೆ ಇವರು ಸಹಾಯ ಸಹಕಾರ ನೀಡುತ್ತಾರೆ. ಸಮಾಜದಲ್ಲಿ ಉನ್ನತ ಗೌರವ ಸ್ಥಾನ ಮಾನವು ತಡವಾಗಿ ದೊರೆಯುತ್ತದೆ. ಅತಿಯಾದ ಪ್ರೀತಿ ನೆಮ್ಮದಿಯನ್ನು ಕೆಡಿಸುತ್ತದೆ. ಸದಾ ಕಾಲ ಇವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ನಡೆಯುತ್ತವೆ. ವಿದ್ಯಾಭ್ಯಾಸವು ಮಧ್ಯಮವಾದರೂ ಅಧಿಕವಾದ ಬುದ್ಧಿಶಕ್ತಿ ಇವರಲ್ಲಿ ಇರುತ್ತದೆ. ತಂದೆ ತಾಯಿ ಎಂದರೆ ಇವರಿಗೆ ದೇವರ ಸಮಾನ. ಹೆತ್ತವರ ಹೆಸರು ಉಳಿಯುವ ಕೆಲಸ ಮಾಡುತ್ತಾರೆ.