Birth Date Astrology: ಜನ್ಮ ದಿನಾಂಕ 15, ಹತೋಟಿಯಲ್ಲಿರುತ್ತೆ ಮನಸ್ಸು, ನೇರ ನಿಷ್ಠುರ ಮಾತು, ಪ್ರತೀಕಾರವಿಲ್ಲದ ಗುಣವಂತರ ವ್ಯಕ್ತಿ ಗುಣಧರ್ಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date Astrology: ಜನ್ಮ ದಿನಾಂಕ 15, ಹತೋಟಿಯಲ್ಲಿರುತ್ತೆ ಮನಸ್ಸು, ನೇರ ನಿಷ್ಠುರ ಮಾತು, ಪ್ರತೀಕಾರವಿಲ್ಲದ ಗುಣವಂತರ ವ್ಯಕ್ತಿ ಗುಣಧರ್ಮ

Birth Date Astrology: ಜನ್ಮ ದಿನಾಂಕ 15, ಹತೋಟಿಯಲ್ಲಿರುತ್ತೆ ಮನಸ್ಸು, ನೇರ ನಿಷ್ಠುರ ಮಾತು, ಪ್ರತೀಕಾರವಿಲ್ಲದ ಗುಣವಂತರ ವ್ಯಕ್ತಿ ಗುಣಧರ್ಮ

Birth Date Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ವ್ಯಕ್ತಿ ಯ ಜಾತಕ ಬರೆಯಬೇಕಾದರೂ, ರಾಶಿಫಲ ನೋಡಬೇಕಾದರೂ ಜನ್ಮದಿನಾಂಕ ಪರಿಗಣಿಸುವುದು ಸಹಜ. ಇದರ ಆಧಾರದ ಮೇಲೆ ಆ ವ್ಯಕ್ತಿ ಗುಣಧರ್ಮವನ್ನೂ ಅಂದಾಜಿಸಲಾಗುತ್ತದೆ. ಇಲ್ಲಿ 15ರಂದು ಜನಿಸಿದವರ ಗುಣಧರ್ಮವನ್ನು ತಿಳಿಯೋಣ. (ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು)

ಜನ್ಮ ದಿನಾಂಕ 15 ರಂದು ಜನಿಸಿದವರಲ್ಲಿ ಹತೋಟಿಯಲ್ಲಿರುತ್ತೆ ಮನಸ್ಸು. ನೇರ ನಿಷ್ಠುರ ಮಾತುಗಾರರಾದ ಇವರು ಪ್ರತೀಕಾರವಿಲ್ಲದ ಗುಣವಂತರು.
ಜನ್ಮ ದಿನಾಂಕ 15 ರಂದು ಜನಿಸಿದವರಲ್ಲಿ ಹತೋಟಿಯಲ್ಲಿರುತ್ತೆ ಮನಸ್ಸು. ನೇರ ನಿಷ್ಠುರ ಮಾತುಗಾರರಾದ ಇವರು ಪ್ರತೀಕಾರವಿಲ್ಲದ ಗುಣವಂತರು.

Birth Date Astrology: ಜನ್ಮದಿನಾಂಕ 15. ಈ ದಿನಾಂಕದಲ್ಲಿ ಜನಿಸಿದವರ ಜೀವನದಲ್ಲಿ ನಿರೀಕ್ಷೆಗೆ ತಕ್ಕಂತಹ ಬದಲಾವಣೆಗಳು ಕಂಡು ಬರುತ್ತವೆ. ಯಾವುದೇ ತಪ್ಪನ್ನು ಮಾಡುವುದಿಲ್ಲ. ಒಂದು ವೇಳೆ ತಪ್ಪು ಮಾಡಿದರೆ ಒಪ್ಪಿಕೊಳ್ಳುವ ಧೈರ್ಯ ಇವರಿಗಿರುತ್ತದೆ. ಮಂತ್ರ ತಂತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಕೆಲವರು ಎಲ್ಲರ ಗಮನ ಸೆಳೆಯುವ ಸಾಧನೆಯನ್ನು ಮಾಡಬಲ್ಲರು. ಒಮ್ಮೆ ಇವರ ಮನಸ್ಸಿಗೆ ಒಪ್ಪಿಗೆ ಯಾದರೆ ಆ ಕೆಲಸವನ್ನು ಸಾಧಿಸುವವರೆಗೂ ಮನಸ್ಸು ಬದಲಿಸುವುದಿಲ್ಲ. ಸಾಮಾನ್ಯವಾಗಿ ಇವರನ್ನು ನಂಬಿದವರಿಗೆ ಮೋಸವಾಗುವುದಿಲ್ಲ. ಹೆತ್ತ ತಾಯಿಯ ಮೇಲೆ ಇವರಿಗೆ ಬಹು ಪ್ರೀತಿ. ಹಾಗೆಯೇ ಇವರಿಗೆ ವರ ನೀಡುವ ದೇವತೆಯು ಹೆಣ್ಣು. ದೋಷವೇ ಇಲ್ಲದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇವರಿಗೆ ಮೋಸ ಮಾಡುವ ಅಥವಾ ಅವಮಾನ ಮಾಡುವ ಜನರಿಂದ ದೂರ ಉಳಿಯುತ್ತಾರೆ. ಇವರ ಮುಖದಲ್ಲಿ ವಿಶೇಷವಾದ ಕಳೆ ಇರುತ್ತದೆ.

ಇವರನ್ನು ಪ್ರೀತಿಸುವ ಜನ ಸುತ್ತಮುತ್ತಲಿರುತ್ತಾರೆ. ಎಲ್ಲರ ವಿಶೇಷವಾದ ಪ್ರೀತಿ ಇವರಿಗೆ ಇರುತ್ತದೆ. ಸಾಮಾನ್ಯವಾಗಿ ನಿದ್ದೆ ಎಂದರೆ ಇವರಿಗೆ ಪ್ರೀತಿ. ವಿಶೇಷವೆಂದರೆ ಹಗಲಿನಷ್ಟೇ ರಾತ್ರಿಯ ವೇಳೆಯೂ ಚುರುಕುತನದಿಂದ ಮುಂದುವರೆಯುತ್ತಾರೆ. ಭೋಜನ ರುಚಿಕರವಾಗಿದ್ದರೆ ಸಂತೋಷಪಡುತ್ತಾರೆ.ಇವರಿಗೆ ಇಷ್ಟವಾಗದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಬೇರೊಬ್ಬರ ಒತ್ತಡಕ್ಕೆ ಮರೆತು ತಮ್ಮ ಗುರಿಯನ್ನುಬದಲಿಸುವುದಿಲ್ಲ. ಇವರ ಬುದ್ಧಿಶಕ್ತಿ ವಿಶೇಷ ಮಟ್ಟದಲ್ಲಿ ಇರುತ್ತದೆ. ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಕೆ ಇರುವುದಿಲ್ಲ. ಆದರೆ ಅವರಿಂದಲೂ ಇವರಿಗೆ ಪ್ರತ್ಯುಪಕಾರ ದೊರೆಯಬೇಕು.

ನೇರ ನಿಷ್ಠುರ ಮಾತು, ಹಗಲುಗನಸು ಪ್ರಿಯರು

ಇವರ ನೇರ ನಿಷ್ಠುರ ಮಾತುಕತೆ ಕೆಲವರಲ್ಲಿ ಬೇಸರ ಉಂಟುಮಾಡುತ್ತದೆ. ಆದರೆ ಇವರು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವರು ಹಗಲುಗನಸು ಕಾಣುತ್ತಾರೆ. ಯೋಚಿಸುವುದು ಇವರ ಸಾಮಾನ್ಯ ಗುಣ. ನಿರೀಕ್ಷಿಸಿದ ಕೆಲಸ ಕಾರ್ಯಗಳು ನಡೆಯಿದೆ ಹೋದಲ್ಲಿ ನಿರಾಸೆಗೆ ಒಳಗಾಗುತ್ತಾರೆ. ಆದರೆ ಇದಕ್ಕೆ ಕಾರಣರಾದವರನ್ನು ದೂಷಿಸುತ್ತಾರೆ. ಇವರಲ್ಲಿ ವಿಶೇಷವಾದ ಕ್ಷಮಾ ಗುಣವಿರುತ್ತದೆ. ಹಾಗೆಯೇ ಇವರು ಮಾಡುವ ತಪ್ಪುಗಳನ್ನು ಸಹ ಬೇರೆಯವರು ಕ್ಷಮಿಸುತ್ತಾರೆ. ಒಟ್ಟಾರೆ ಶಾಂತಿ ನೆಮ್ಮದಿಯ ಜೀವನ ಇವರಿಗಿರುತ್ತದೆ. ಜೀವನದಲಿ ಎದುರಾಗುವ ಏಳುಬೀಳುಗಳನ್ನು ಸಹಿಸುವುದಿಲ್ಲ. ಕೆಲಸಕಾರ್ಯಗಳನ್ನು ಒಂದೇ ರೀತಿಯಲ್ಲಿ ಪರಿಪೂರ್ಣಗೊಳಿಸುತ್ತಾರೆ. ಸ್ತ್ರೀ ಆಗಲಿ ಪುರುಷರಾಗಲಿ ರುಚಿಕರವಾದ ಆಹಾರ ತಯಾರಿಸುವುದೆಂದರೆ ಬಲು ಇಷ್ಟ.

ಸಾಮಾನ್ಯವಾಗಿ ಇವರ ಕೆಲಸ ಕಾರ್ಯಗಳಿಗೆ ಬೇರೆಯವರನ್ನು ಆಶ್ರಯಿಸುವುದಿಲ್ಲ. ಅತಿ ನಿಧಾನದ ನಡಿಗೆ ಬೇರೆಯವರಿಗೆ ಬೇಸರ ಉಂಟು ಮಾಡುತ್ತದೆ. ಇವರಿಗೆ ಕೋಮಲವಾದ ಮನಸ್ಸಿರುತ್ತದೆ. ಇವರ ಮನಸ್ಸಿಗೆ ಬೇಸರ ಬರುವಂತೆ ಮಾತನಾಡಿದರೆ ಕಣ್ಣೀರ ಧಾರೆಯೇ ಉಂಟಾಗುತ್ತದೆ. ವಾದ ವಿವಾದಗಳಲ್ಲಿ ಗೆಲ್ಲಲು ಸಾಧ್ಯವಾಗದೆ ಹೋದದ್ದನ್ನು ಕಣ್ಣೀರಿನಿಂದ ಗೆಲ್ಲುತ್ತಾರೆ. ಸಮ ವಯಸ್ಸಿನವರಿಗಿಂತ ಕಿರಿ ವಯಸ್ಸಿನವರ ಜೊತೆಯಲ್ಲಿ ಸ್ನೇಹ ಬೆಳೆಸುವುದೆಂದರೆ ಇವರಿಗೆ ಬಲು ಇಷ್ಟ .

ಪ್ರತೀಕಾರವಿಲ್ಲದ ಗುಣವಂತರು

ಕೊಂಚವೂ ಯೋಚಿಸದೆ ಎಲ್ಲರ ಸ್ನೇಹ ಬೆಳಸಲು ಬಯಸುತ್ತಾರೆ. ಸುಲಭವಾಗಿ ಹೊಸಬರ ವಿಶ್ವಾಸವನ್ನು ಗಳಿಸುತ್ತಾರೆ. ರುಚಿಕರವಾದ ಅಡುಗೆಯನ್ನು ಮಾಡುವುದೆಂದರೆ ಇವರಿಗೆ ಪ್ರಿಯ. ಸದಾಕಾಲ ಮನೆಯಲ್ಲಿ ತಿನ್ನುವ ಬದಲು ಹೊರಗಡೆ ದೊರೆಯುವ ವಿವಿಧ ರೀತಿಯ ಆಹಾರದ ಮೇಲೆ ಆಸೆ ಇರುತ್ತದೆ. ತಣ್ಣನೆಯ ಸಿದ್ಧಪಡಿಸಿದ ಆಹಾರಗಳು ಇಷ್ಟವಾಗುತ್ತವೆ. ಕರಿದ ಪದಾರ್ಥಗಳನ್ನು ಆರೋಗ್ಯ ಕೆಡುವವರೆಗೂ ತಿನ್ನುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರುವುದಿಲ್ಲ. ಪುರುಷರಿಗೆ ಹೆಣ್ಣು ಮಕ್ಕಳ ಮನಸ್ಸು ಇರುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ಮಗುವಿನ ಮನಸ್ಸಿರುತ್ತದೆ.

ವಿದ್ಯಾರ್ಥಿಗಳು ಯಾವುದೇ ನಿರೀಕ್ಷೆಯಿಲ್ಲದೆ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಕೇವಲ ಅಂಕಪಟ್ಟಿಗಾಗಿ ಓದುತ್ತಾರೆ. ಆದರೆ ಇವರ ಮನಸ್ಸಿನಲ್ಲಿರುವ ವಿಚಾರಗಳು ಎಲ್ಲವನ್ನು ಮೀರಿಸುತ್ತದೆ. ಒಮ್ಮೆನೋಡಿದ ಕೆಲಸಗಳನ್ನು ಕಾರ್ಯಗತಗೊಳಿಸುತ್ತಾರೆ. ಇವರಿಗಿಂತ ಹೆಚ್ಚಿನ ವಿದ್ಯೆ ಇದ್ದವರು, ವಯಸ್ಸಿನಲ್ಲಿ ಇವರಿಗಿಂತ ಹಿರಿಯವರು, ಇವರಿಗಿಂತ ಅನುಭವಸ್ಥರು ಎಲ್ಲರೂ ಒಂದಲ್ಲ ಒಂದು ವಿಚಾರದಲ್ಲಿಇವರ ಮೇಲೆ ಅವಲಂಬಿತವಾಗುತ್ತಾರೆ. ಇವರಿಗೆ ನಿದ್ದೆ ಮಾಡುವುದೆಂದರೆ ಎಲ್ಲಿಲ್ಲದ ಖುಷಿ. ತಾಯಿಯ ಆಶೀರ್ವಾದದಿಂದ ಎದುರಾಗುವ ಸಂಕಷ್ಟಗಳನ್ನು ಗೆಲ್ಲುತ್ತಾರೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಡಕು ಬಾರದಂತೆ ನೋಡಿಕೊಳ್ಳುತ್ತಾರೆ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆಯ ಗುಣ ಇರುತ್ತದೆ. ಇವರಲ್ಲಿ ಸೇಡಿನ ಮನೋಭಾವನೆ ಇರುವುದಿಲ್ಲ. ಮೌನವಾಗಿದ್ದು ವಿರೋಧಿಗಳಿಂದ ದೂರ ಉಳಿಯುವಲ್ಲಿ ಯಶಸ್ವಿಯಾಗುತ್ತಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

-------------------------------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.