Blood Moon 2025: ಕೆಂಪು ರಕ್ತ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ, ದಿನಾಂಕ, ಸಮಯದ ಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Blood Moon 2025: ಕೆಂಪು ರಕ್ತ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ, ದಿನಾಂಕ, ಸಮಯದ ಪೂರ್ಣ ಮಾಹಿತಿ ಇಲ್ಲಿದೆ

Blood Moon 2025: ಕೆಂಪು ರಕ್ತ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ, ದಿನಾಂಕ, ಸಮಯದ ಪೂರ್ಣ ಮಾಹಿತಿ ಇಲ್ಲಿದೆ

ಕೆಂಪು ರಕ್ತ ಚಂದ್ರ ಗ್ರಹಣ ಎಂದು ಕರೆಯಲಾಗುವ ಸಂಪೂರ್ಣ ಚಂದ್ರ ಗ್ರಹಣವು ಮಾರ್ಚ್ 13ರ ರಾತ್ರಿ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಗ್ರಹಣವಾಗಿದೆ. ಅಪರೂಪದ ಬ್ಲಡ್ ಮೂನ್ ಭಾರತದಲ್ಲಿ ಗೋಚರಿಸುವುದಿಲ್ಲ.

ಮಾರ್ಚ್ 13-14ರ ರಾತ್ರಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದನ್ನು ಕೆಂಪು ರಕ್ತ ಚಂದ್ರ ಗ್ರಹಣ ಅಂತಲೂ ಕರೆಯಲಾಗುತ್ತದೆ. ಚಂದ್ರ ಕೆಂಪು ಬಣ್ಣಕ್ಕೆ ತಿರುಗುವ ಅಪರೂಪದ ಗ್ರಹಣ ಇದಾಗಿದೆ. (ಚಿತ್ರ-ಸಂಗ್ರಹ)
ಮಾರ್ಚ್ 13-14ರ ರಾತ್ರಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದನ್ನು ಕೆಂಪು ರಕ್ತ ಚಂದ್ರ ಗ್ರಹಣ ಅಂತಲೂ ಕರೆಯಲಾಗುತ್ತದೆ. ಚಂದ್ರ ಕೆಂಪು ಬಣ್ಣಕ್ಕೆ ತಿರುಗುವ ಅಪರೂಪದ ಗ್ರಹಣ ಇದಾಗಿದೆ. (ಚಿತ್ರ-ಸಂಗ್ರಹ)

Blood Moon 2025: ಜಗತ್ತು ವರ್ಷದ ಮೊದಲ ವಿಸ್ಮಯಕ್ಕೆ ಸಾಕ್ಷಿಯಾಗುತ್ತಿದೆ. ಮಾರ್ಚ್ 13ರ ಗುರುವಾರ ರಾತ್ರಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದನ್ನು ಕೆಂಪು ರಕ್ತ ಚಂದ್ರ ಗ್ರಹಣ ಅಂತಲೂ ಕರೆಯಲಾಗುತ್ತದೆ. ಏಕೆಂದರೆ ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರ ಗಾಢ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಬದಲಾವಣೆ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್ ಹಾಗೂ ಆಫ್ರಿಕಾ ದೇಶಗಳ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ. ಬ್ಲಡ್ ಮೂನ್ ಎಂದರೇನು ಎಂಬುದು ಸೇರಿದಂತೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಎಷ್ಟು ಗಂಟೆಗೆ ಬ್ಲಡ್ ಮೂನ್ ಗೋಚರಿಸುತ್ತೆ

ಯುಎಸ್ ನಲ್ಲಿರುವವರಿಗೆ ಮಾರ್ಚ್ 13ರ ರಾತ್ರಿ ಸುಮಾರು 11.57ಕ್ಕೆ ಸಂಪೂರ್ಣ ಚಂದ್ರ ಗ್ರಹಣ ಗೋಚರ ಪ್ರಾರಂಭವಾಗುತ್ತದೆ. ಭಾಗಶಃ ಗ್ರಹವು ಮಾರ್ಚ್ 14ರ ಶುಕ್ರವಾರ ಬೆಳಗ್ಗೆ 1.09ಕ್ಕೆ ಗೋಚರಿಸುತ್ತದೆ. ಒಟ್ಟಾರೆಯಾಗಿ ಗ್ರಹಣವು ಇಎಸ್ ಟಿ ಸಮಯದ ಪ್ರಕಾರ, ಬೆಳಗಿನ ಜಾವ 2.26ಕ್ಕೆ ಗರಿಷ್ಠ ಮಟ್ಟಕ್ಕೆ ತಲುಪಿ ಬೆಳಗ್ಗೆ 3.31ಕ್ಕೆ ಕೊನೆಗೊಳ್ಳುತ್ತದೆ.

ಬರಿಗಣ್ಣಿನಿಂದ ಕೆಂಪು ರಕ್ತ ಚಂದ್ರ ಗ್ರಹಣ ನೋಡಬಹುದೇ

ಇನ್ನೂ ಈ ಕೆಂಪು ರಕ್ತ ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದರಿಂದ ಕಣ್ಣಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಂದರೆ ಈ ಗೋಚರವನ್ನು ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳನ್ನು ಬಳಸುವ ಅಗತ್ಯವಿಲ್ಲ. ಬರಿಗಣ್ಣಿನಿಂದ ನೋಡುವುದು ಸುರಕ್ಷಿತವಾಗಿದೆ. ಆದರೆ ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಿ ಈ ಸಂಪೂರ್ಣ ಚಂದ್ರ ಗ್ರಹಣವನ್ನು ನೋಡುವುದರಿಂದ ಚಂದ್ರನ ಮೇಲ್ಮೈ ಮತ್ತು ಸೂಕ್ಷ್ಮ ಬದಲಾವಣೆಗಳನ್ನು ಹತ್ತಿರದ ನೋಡಿದರೆ ಹೊಸ ಅನುಭವ ನಿಮ್ಮದಾಗುತ್ತದೆ.

ಬ್ಲಡ್ ಮೂನ್ ಎಂದರೇನು?

ಚಂದ್ರ ಗ್ರಹಣದಂದು, ಚಂದ್ರ ಪೂರ್ಣ ಗ್ರಹಣವಾದಾಗ, ರಕ್ತ ಚಂದ್ರ ಕಾಣಿಸಿಕೊಳ್ಳುತ್ತಾನೆ. ಖಗೋಳಶಾಸ್ತ್ರಜ್ಞರ ಪ್ರಕಾರ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಚಂದ್ರ ಗ್ರಹಣದ ವಿದ್ಯಮಾನ ಸಂಭವಿಸುತ್ತದೆ. ಈ ಪರಿಸ್ಥಿತಿಯಲ್ಲಿ, ಭೂಮಿಯ ನೆರಳು ಚಂದ್ರನ ಬೆಳಕನ್ನು ಆವರಿಸುತ್ತದೆ. ಈ ಕಾರಣದಿಂದಾಗಿ ಸೂರ್ಯನ ಬೆಳಕು ಭೂಮಿಗೆ ಅಪ್ಪಳಿಸಿ ಚಂದ್ರನ ಮೇಲೆ ಬಿದ್ದಾಗ, ಅದು ಪ್ರಕಾಶಮಾನವಾಗುತ್ತದೆ. ಚಂದ್ರನು ಭೂಮಿಯನ್ನು ತಲುಪಿದಾಗ, ಅದರ ಬಣ್ಣವು ತುಂಬಾ ಪ್ರಕಾಶಮಾನವಾಗುತ್ತದೆ, ಅಂದರೆ ಗಾಢ ಕೆಂಪು. ಈ ವಿದ್ಯಮಾನವನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.