Mercury Transit: ಮಿಥುನ ರಾಶಿಯಲ್ಲಿ ಗ್ರಹಗಳ ರಾಜಕುಮಾರ ಬುಧನ ಉದಯ; ಈ ರಾಶಿಯವರ ಮೇಲೆ ಬೀಳಲಿದೆ ಅದೃಷ್ಟದ ಬೆಳಕು
ಗ್ರಹಗಳ ರಾಜಕುಮಾರ ಬುಧನು ಮಿಥುನ ರಾಶಿಯಲ್ಲಿ ಜೂನ್ 25, 2024 ರಂದು ಉದಯಿಸುತ್ತಾನೆ. ಇದು ಕೆಲವು ರಾಶಿಗಳ ಮೇಲೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಸಂತೋಷ ಮತ್ತು ಸಂಪತ್ತು ನೀಡುವ ಬುಧ, ಸುಮಾರು 24 ದಿನಗಳ ನಂತರ ಮಂಗಳವಾರ ರಾತ್ರಿ 08:20 ಕ್ಕೆ ಉದಯಿಸುತ್ತಿದ್ದು ಕೆಲವು ರಾಶಿಯವರಿಗೆ ಶುಭ ಫಲಿತಾಂಶವನ್ನು ನೀಡುತ್ತದೆ. (ಬರಹ: ಅರ್ಚನಾ ವಿ ಭಟ್)

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಅಸ್ತ ಮತ್ತು ಉದಯವಾಗುತ್ತವೆ. ಇದರ ಪ್ರಭಾವ ವ್ಯಕ್ತಿಯ ಜೀವನದ ಮೇಲೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಗ್ರಹಗಳು ಅಸ್ತಂಗತವಾದಾಗ ಒಂದಿಷ್ಟು ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದೇ ರೀತಿ ಗ್ರಹಗಳ ಉದಯದಿಂದ ಕೆಲವು ರಾಶಿಯವರ ಅದೃಷ್ಟವು ಬೆಳಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಅವನು ಬುದ್ಧಿವಂತಿಕೆಯ ಅಧಿಪತಿ.
ಜಾತಕದಲ್ಲಿ ಬುಧನ ಸ್ಥಾನವು ಬಲವಾಗಿದ್ದಾಗ, ವ್ಯಕ್ತಿಯು ಜಾಣತನ ಮತ್ತು ಬುದ್ಧಿವಂತಿಕೆಯನ್ನು ಹೊಂದುತ್ತಾನೆ ಎಂದು ನಂಬಲಾಗಿದೆ. ಅದೇ ಬುಧನು ದುರ್ಬಲಗೊಂಡಾಗ, ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಜೂನ್ 25 ರಿಂದ ಬುಧ ಉದಯವಾಗುವುದರಿಂದ ಕೆಲವು ರಾಶಿಯವರಿಗೆ ಸಂತೋಷ ಮತ್ತು ಅದೃಷ್ಟ ಉಂಟಾಗುವ ಸಾಧ್ಯತೆಗಳಿವೆ. ಹಣದ ಹರಿವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸವು ಸಂತೋಷದ ಫಲಿತಾಂಶವನ್ನು ನೀಡುತ್ತದೆ. ಬುಧ ಉದಯವಾಗುವುದರಿಂದ ಯಾವ ರಾಶಿಯವರಿಗೆ ಅದೃಷ್ಟವು ಬೆಳಗಲಿದೆ ಎಂದು ತಿಳಿಯೋಣ.
ವೃಷಭ ರಾಶಿ
ಬುಧ ಗ್ರಹದ ಉದಯವು ವೃಷಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಯಶಸ್ಸಿನ ಹಾದಿಯಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಉದ್ಯೋಗ ದೊರೆಯಲಿದೆ. ಉತ್ತಮ ಪ್ಯಾಕೇಜ್‌ನೊಂದಿಗೆ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯುತ್ತೀರಿ. ವೃತ್ತಿ ಮತ್ತು ವ್ಯವಹಾರದಲ್ಲಿ ಉದ್ಭವಿಸಿದ್ದ ಸಮಸ್ಯೆಗಳು ಪರಿಹಾರವಾಗುತ್ತವೆ. ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಸೌಕರ್ಯ ಸಾಧನಗಳ ಖರೀದಿ ಹೆಚ್ಚಾಗುತ್ತದೆ. ಹಣದ ಕೊರತೆ ಉಂಟಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಬುಧನ ಉದಯವು ಬಹಳ ಲಾಭದಾಯಕ. ಈ ಸಮಯದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರ ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಣದ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ಸುಧಾರಿಸುತ್ತದೆ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ಜೀವನದಲ್ಲಿ ಏನು ಬೇಕೋ ಅದು ಸಿಗುತ್ತದೆ.
ಕನ್ಯಾ ರಾಶಿ
ಗ್ರಹಗಳ ರಾಜಕುಮಾರ ಬುಧನು ತನ್ನ ಹಾದಿಯನ್ನು ಬದಲಾಯಿಸುವುದರಿಂದ, ಕನ್ಯಾ ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗಲಿದೆ. ಇದು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವೃತ್ತಿಜೀವನದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಪ್ರಮುಖ ಕಾರ್ಯಗಳಲ್ಲಿ ಬಯಸಿದ ಯಶಸ್ಸನ್ನು ನೀವು ಪಡೆಯುತ್ತೀರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ಅವಕಾಶಗಳು ಹೆಚ್ಚಾಗಲಿವೆ.
ಮಕರ ರಾಶಿ
ಬುಧ ಉದಯವಾಗುವುದು ಮಕರ ರಾಶಿಯವರಿಗೆ ಶುಭಕರವಾಗಿರುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಸಂಬಂಧಗಳ ನಡುವೆ ಸಂತೋಷ ಹೆಚ್ಚುತ್ತದೆ. ಹಣ ಉಳಿಸಲು ಹಲವು ಅವಕಾಶಗಳಿವೆ. ಪಾಲುದಾರಿಕೆಯೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಬರಹ: ಅರ್ಚನಾ ವಿ ಭಟ್)
