Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ

Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ

Business Numerology: ಮನುಷ್ಯನ ರಹಸ್ಯ ಗುಣಗಳು, ಪ್ರತಿಭೆ, ವೃತ್ತಿ ಜೀವನ, ವೈವಾಹಿಕ ಜೀವನದ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ತಿಳಿಯಬಹುದು. ಯಾವ ದಿನಾಂಕಗಳಲ್ಲಿ ಜನಿಸಿದವರು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ತಿಳಿಯಿರಿ.

ಸಂಖ್ಯಾಶಾಸ್ತ್ರದ ಪ್ರಕಾರ ಯಾವ ದಿನಾಂಕಗಳಲ್ಲಿ ಜನಿಸಿದವರು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಸಂಖ್ಯಾಶಾಸ್ತ್ರದ ಪ್ರಕಾರ ಯಾವ ದಿನಾಂಕಗಳಲ್ಲಿ ಜನಿಸಿದವರು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Business Numerology: ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ಬಗ್ಗೆ ಮಾತ್ರವಲ್ಲದೆ, ವ್ಯಕ್ತಿಯ ಸ್ವಭಾವ ಮತ್ತು ವಿಧಾನದ ಬಗ್ಗೆಯೂ ತಿಳಿಯಬಹುದು. ಮನುಷ್ಯನ ರಹಸ್ಯ ಗುಣಗಳು, ಪ್ರತಿಭೆಗಳು, ವೃತ್ತಿ ಜೀವನ, ವೈವಾಹಿಕ ಜೀವನ ಇತ್ಯಾದಿಗಳ ಬಗ್ಗೆಯೂ ಸಂಖ್ಯಾಶಾಸ್ತ್ರ ತಿಳಿಸಿಕೂಡುತ್ತದೆ. ರಾಡಿಕ್ಸ್ ಸಂಖ್ಯೆಯ ಆಧಾರದ ಮೇಲೆ ನೀವು ಕೂಡ ಉತ್ತಮ ಉದ್ಯಮಿಯಾಗಬಹುದೇ ಎಂಬುದನ್ನು ತಿಳಿದುಕೊಳ್ಳಿ. ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುತ್ತಾರೆ. ಆದಾಯ ಕೋಟಿರೂಪಾಯಿಗಳ ಲೆಕ್ಕದಲ್ಲಿ ಇರುತ್ತದೆ.

ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 5 ಹೊಂದಿರುವವರು ಉತ್ತಮ ಉದ್ಯಮಿಗಳಾಗುತ್ತಾರೆ. ತಮ್ಮ ವ್ಯವಹಾರವನ್ನು ದೇಶ ಮತ್ತು ವಿದೇಶಗಳಿಗೆ ಕೊಂಡೊಯ್ಯುತ್ತಾರೆ. ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದವರು ರಾಡಿಕ್ಸ್ ನಂ 5 ಆಗುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ತಮ್ಮ ಆಲೋಚನೆಗಳು ಮತ್ತು ಯೋಜನೆಗಳೊಂದಿಗೆ ವ್ಯವಹಾರವನ್ನು ವಿಸ್ತರಿಸುತ್ತಾರೆ. ಸಾಕಷ್ಟು ಹಣವನ್ನು ಗಳಿಸುತ್ತಾರೆ.

ರಾಡಿಕ್ಸ್ ಸಂಖ್ಯೆ 5ಕ್ಕೆ ಬುಧ ಅಧಿಪತಿ

ಬುಧನು ಸಂಖ್ಯೆ 5 ರ ಅಧಿಪತಿ. ಬುಧನು ಬುದ್ಧಿವಂತಿಕೆ ಮತ್ತು ವ್ಯವಹಾರಕ್ಕೆ ಕಾರಣವಾಗಿರುತ್ತಾನೆ. ರಾಡಿಕ್ಸ್ ಸಂಖ್ಯೆ 5 ಹೊಂದಿರುವವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಉತ್ತಮ ಉದ್ಯಮಿ ಹೊಂದಿರಬೇಕಾದ ಗುಣಗಳು ಇರುತ್ತವೆ. ಅಲ್ಪಾವಧಿಯಲ್ಲಿ ವ್ಯವಹಾರವನ್ನು ವಿಸ್ತರಿಸುತ್ತಾರೆ.

ಭಾರಿ ಲಾಭವನ್ನು ಗಳಿಸುತ್ತಾರೆ. ತ್ವರಿತವಾಗಿ ಯಶಸ್ವಿಯಾಗುತ್ತಾರೆ. ತಮ್ಮ ವ್ಯವಹಾರವನ್ನು ವಿವಿಧ ದೇಶಗಳಿಗೆ ಸುಲಭವಾಗಿ ಕೊಂಡೊಯ್ಯುತ್ತಾರೆ. ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಸುಲಭವಾಗಿ ಯಶಸ್ಸನ್ನು ಪಡೆಯುತ್ತಾರೆ. ಸಮತೋಲನವನ್ನು ಹೊಂದಿರುತ್ತಾರೆ.

ಕೋಟ್ಯಾಧಿಪತಿಗಳಾಗುತ್ತಾರೆ

ಈ ಸಂಖ್ಯೆಯವರು ತೊಂದರೆ ಅನುಭವಿಸುವುದಿಲ್ಲ, ಹಾಗೆಂದು ತುಂಬಾ ಸಂತೋಷವನ್ನು ಅನುಭವಿಸುವುದಿಲ್ಲ. ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳಬಹುದು. ಅಧ್ಯಯನದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಬೇಗನೆ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಹೆಚ್ಚು ಖ್ಯಾತಿಯನ್ನು ಗಳಿಸುತ್ತಾರೆ. ಹಣಕ್ಕಾಗಿ ಕೆಲಸ ಮಾಡುವುದಿಲ್ಲ, ಕೆಲಸ ಮಾಡುತ್ತಾರೆ ಹಣ ತಾನಾಗಿಯೇ ಬರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.