ಕಟಕ ರಾಶಿ ಭವಿಷ್ಯ ಆಗಸ್ಟ್‌ 16: ಕಚೇರಿ ಒತ್ತಡವನ್ನು ಮನೆಗೆ ತರದಿರಿ, ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಲು ಸೂಕ್ತ ದಿನ-cancer daily horoscope today august 16 2024 predictions kataka rashi dina bhavishya money love relationship horoscope ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಟಕ ರಾಶಿ ಭವಿಷ್ಯ ಆಗಸ್ಟ್‌ 16: ಕಚೇರಿ ಒತ್ತಡವನ್ನು ಮನೆಗೆ ತರದಿರಿ, ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಲು ಸೂಕ್ತ ದಿನ

ಕಟಕ ರಾಶಿ ಭವಿಷ್ಯ ಆಗಸ್ಟ್‌ 16: ಕಚೇರಿ ಒತ್ತಡವನ್ನು ಮನೆಗೆ ತರದಿರಿ, ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಲು ಸೂಕ್ತ ದಿನ

Cancer Daily Horoscope August 16, 2024: ರಾಶಿಚಕ್ರಗಳ ಪೈಕಿ ನಾಲ್ಕನೇಯದು ಕಟಕ. ಜನನದ ಸಮಯದಲ್ಲಿ ಚಂದ್ರನು ಕರ್ಕಾಟಕದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಕರ್ಕ. ಆಗಸ್ಟ್‌ 16ರ ಕಟಕ ರಾಶಿ ಭವಿಷ್ಯ ಪ್ರಕಾರ, ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಲು ಸೂಕ್ತ ದಿನ. ಆರೋಗ್ಯಕರ ಆಹಾರ ಸೇವನೆಯ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.

ಕಟಕ ರಾಶಿ ಭವಿಷ್ಯ ಆಗಸ್ಟ್‌ 16: ಕಚೇರಿ ಒತ್ತಡವನ್ನು ಮನೆಗೆ ಬರದಿರಿ, ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಲು ಸೂಕ್ತ ದಿನ
ಕಟಕ ರಾಶಿ ಭವಿಷ್ಯ ಆಗಸ್ಟ್‌ 16: ಕಚೇರಿ ಒತ್ತಡವನ್ನು ಮನೆಗೆ ಬರದಿರಿ, ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಲು ಸೂಕ್ತ ದಿನ

ಕಟಕ ರಾಶಿಯವರ ಇಂದಿನ (ಆಗಸ್ಟ್ 16, ಶುಕ್ರವಾರ) ಭವಿಷ್ಯದಲ್ಲಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಿ. ಆರೋಗ್ಯಕರ ಆಹಾರ ಸೇವನೆ ರೂಢಿಸಿಕೊಳ್ಳಿ. ಕರ್ಕಾಟಕ ರಾಶಿಯವರಿಗೆ ಇಂದು ಉತ್ತಮ ಅವಕಾಶಗಳ ದಿನವಾಗಿರುತ್ತದೆ. ಜೀವನದಲ್ಲಿ ಹೊಸ ಅನುಭವಗಳಿಗೆ ಸಿದ್ಧರಾಗಿರಿ. ಇಂದು ವೃತ್ತಿ ಮತ್ತು ಪ್ರೀತಿಯ ಜೀವನದಲ್ಲಿ ಉತ್ತೇಜಕ ಬದಲಾವಣೆಗಳು ಕಂಡುಬರುತ್ತವೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕಟಕ ರಾಶಿಯವರ ಪ್ರೇಮ ಭವಿಷ್ಯ (Cancer Love Horoscope)

ಪ್ರೀತಿಯ ಸಂಬಂಧಗಳನ್ನು ಬಲಪಡಿಸಲು ಇದು ಉತ್ತಮ ಸಮಯ. ನೀವು ಸಂಬಂಧದಲ್ಲಿದ್ದರೆ, ನಿಮ್ಮ ಪ್ರೀತಿಯ ಜೀವನವನ್ನು ರೊಮ್ಯಾಂಟಿಕ್ ಮಾಡಲು ಈ ದಿನ ಸೂಕ್ತ. ಪ್ರೀತಿ ಮತ್ತು ಪ್ರಣಯದ ವಿಷಯಗಳಲ್ಲಿ ನೀವು ತುಂಬಾ ಆತ್ಮವಿಶ್ವಾಸವನ್ನು ಅನುಭವಿಸುವಿರಿ. ನೀವು ಒಂಟಿಯಾಗಿದ್ದರೆ ಪ್ರೀತಿಗೆ ಅವಕಾಶವನ್ನು ನೀಡಲು ಹಿಂಜರಿಯಬೇಡಿ. ನೀವು ಇಷ್ಟಪಡುವವರ ಮುಂದೆ ನಿಮ್ಮ ಪ್ರೀತಿ ವ್ಯಕ್ತಪಡಿಸಲು ಇಂದು ಉತ್ತಮ ದಿನ.

ಕಟಕ ರಾಶಿಯವರ ವೃತ್ತಿ ಭವಿಷ್ಯ (Cancer Professional Horoscope)

ನೀವು ವ್ಯವಹಾರದಲ್ಲಿ ಇತರರಿಂದ ಬೆಂಬಲ ಪಡೆಯಬಹುದು. ಇದು ಜೀವನದಲ್ಲಿ ಪ್ರಗತಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಆದರೆ ನೀವು ನಿಮ್ಮ ಗುರಿಯ ಮೇಲೆ ಗಮನ ಹರಿಸುತ್ತೀರಿ ಮತ್ತು ಯಾವುದೇ ರೀತಿಯ ಗೊಂದಲಗಳಾದಂತೆ ನೋಡಿಕೊಳ್ಳುತ್ತೀರಿ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಕಟಕ ರಾಶಿಯವರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಮಾಡುವ ಕೆಲಸದಲ್ಲಿ ಸೃಜನಶೀಲತೆ ಮತ್ತು ನವೀನ ಆಲೋಚನೆಗಳಿಂದ ಅಪಾರ ಯಶಸ್ಸು ಗಳಿಸಬಹುದು. ಕಚೇರಿಯಲ್ಲಿ ಹೊಸ ಯೋಜನೆಯ ಜವಾಬ್ದಾರಿ ನಿಮ್ಮ ಹೆಗಲೇರಬಹುದು.

ಕಟಕ ರಾಶಿಯವರ ಹಣಕಾಸು ಭವಿಷ್ಯ (Cancer Money Horoscope)

ಹೂಡಿಕೆಯ ವಿಚಾರಗಳಲ್ಲಿ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಇದ್ದಕ್ಕಿದ್ದಂತೆ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಇಂದು ನೀವು ಆರ್ಥಿಕ ಸ್ಥಿರತೆ ಸಾಧಿಸಬಹುದು. ನಿಮ್ಮ ಖರ್ಚುಗಳನ್ನು ವಿಶ್ಲೇಷಿಸಲು ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಇಂದು ಉತ್ತಮ ದಿನ.

ಕಟಕ ರಾಶಿಯವರ ಆರೋಗ್ಯ ಭವಿಷ್ಯ (Cancer Health Horoscope)

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡಿ. ಹೆಚ್ಚು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಸ್ವ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಹೊಸ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ಕಚೇರಿಯ ಒತ್ತಡವನ್ನು ಮನೆಗೆ ತರಬೇಡಿ.

ಕಟಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.

ಕಟಕ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.

2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.