ಮಕರ ರಾಶಿ ವಾರ ಭವಿಷ್ಯ; ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಉದ್ಯೋಗದಲ್ಲಿ ಉನ್ನತಿ, ಧನ ಲಾಭ ಉಂಟಾಗಬಹುದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ರಾಶಿ ವಾರ ಭವಿಷ್ಯ; ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಉದ್ಯೋಗದಲ್ಲಿ ಉನ್ನತಿ, ಧನ ಲಾಭ ಉಂಟಾಗಬಹುದು

ಮಕರ ರಾಶಿ ವಾರ ಭವಿಷ್ಯ; ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಉದ್ಯೋಗದಲ್ಲಿ ಉನ್ನತಿ, ಧನ ಲಾಭ ಉಂಟಾಗಬಹುದು

Capricorn Weekly Horoscope July 14 -20; ರಾಶಿಚಕ್ರಗಳ ಪೈಕಿ 10 ನೇ ಚಿಹ್ನೆ ಮಕರ ರಾಶಿಯದ್ದು. ಜನನದ ಸಮಯದಲ್ಲಿ ಚಂದ್ರನು ಮಕರದಲ್ಲಿ ಸಾಗುತ್ತಿರುವ ರಾಶಿಯ ಜನರು ಮಕರ ರಾಶಿಯವರು. ಮಕರ ರಾಶಿ ವಾರ ಭವಿಷ್ಯದ ಪ್ರಕಾರ ಈ ವಾರ ಈ ರಾಶಿಯವರಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಉದ್ಯೋಗದಲ್ಲಿ ಉನ್ನತಿ ಇದೆ. ಧನ ಲಾಭವೂ ಆಗಬಹುದು.

ಮಕರ ರಾಶಿ ವಾರ ಭವಿಷ್ಯ ಜುಲೈ 14- 20; ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಉದ್ಯೋಗದಲ್ಲಿ ಉನ್ನತಿ, ಧನ ಲಾಭ ಉಂಟಾಗಬಹುದು ಎನ್ನುತ್ತಿದೆ ರಾಶಿ ಭವಿಷ್ಯ.
ಮಕರ ರಾಶಿ ವಾರ ಭವಿಷ್ಯ ಜುಲೈ 14- 20; ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಉದ್ಯೋಗದಲ್ಲಿ ಉನ್ನತಿ, ಧನ ಲಾಭ ಉಂಟಾಗಬಹುದು ಎನ್ನುತ್ತಿದೆ ರಾಶಿ ಭವಿಷ್ಯ.

ಬಹುತೇಕ ಜನರು ತಮ್ಮ ದಿನಚರಿ ಆರಂಭಿಸುವ ಮೊದಲು, ಮಹತ್ವದ ಕೆಲಸ ಕೈಗೊಳ್ಳುವ ಮೊದಲು ತಮ್ಮ ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ನೀಡಿರುವ ವಾರ ಭವಿಷ್ಯವನ್ನು ಆಧರಿಸಿದ ಮಕರ ರಾಶಿಯ ವಾರ ಭವಿಷ್ಯ ಇಲ್ಲಿದೆ.

ಮಕರ ರಾಶಿ ವಾರ ಭವಿಷ್ಯ ಪ್ರಕಾರ, ಈ ವಾರ ಅಂದರೆ ಜುಲೈ 14 ರಿಂದ 20ರ ಅವಧಿಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಉನ್ನತಿಯ ಲಕ್ಷಣವಿದೆ. ಧನ ಲಾಭವಾಗುವ ಸಾಧ್ಯತೆಯೂ ಇದೆ. ಕುಟುಂಬ ನಿರ್ವಹಣೆಯ ಕ್ರಮ ಮಾದರಿಯೆನಿಸಲಿದೆ. ಉಳಿದಂತೆ, ಈ ರಾಶಿಯವರ ಪ್ರೇಮ ಜಾತಕ, ವೃತ್ತಿ ಜಾತಕ, ಆರ್ಥಿಕ ಭವಿಷ್ಯ, ಆರೋಗ್ಯ ಭವಿಷ್ಯಗಳ ವಿವರ ಹೀಗಿದೆ.

ಮಕರ ರಾಶಿ ಪ್ರೇಮ ಜಾತಕ (Capricorn Love Horoscope): ಸಂಗಾತಿಯ ಮಾತುಕತೆ ಭಾವನೆಗಳನ್ನು ಗೌರವಿಸುವಲ್ಲಿ ವಿಫಲರಾಗುವಿರಿ. ಆದಾಗ್ಯೂ, ನಿಮ್ಮ ಕುಟುಂಬದಲ್ಲಿನ ಕಾರ್ಯನಿರ್ವಹಿಸುವ ರೀತಿ ಎಲ್ಲರಿಗೂ ಮಾದರಿಯಾಗುತ್ತದೆ. ಕಷ್ಟ ನಷ್ಟಗಳು ಎದುರಾದರೂ ಭಯ ದೃತಿಗೆಡುವುದಿಲ್ಲ. ಸ್ನೇಹ ಸಂಬಂಧವನ್ನೂ ಲೆಕ್ಕಿಸದೆ ನ್ಯಾಯದ ಪಕ್ಷಪಾತಿಯಾಗಿ ಬಾಳುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವದಿಂದ ನೋಡುವಿರಿ. ಕುಟುಂಬದ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಿರ್ವಹಿಸುವಿರಿ.

ಮಕರ ರಾಶಿ ವಾರ ಭವಿಷ್ಯ ಜುಲೈ 14 - 20; ಉದ್ಯೋಗ, ಆದಾಯ, ಆರೋಗ್ಯ

ಮಕರ ರಾಶಿ ಉದ್ಯೋಗ ಜಾತಕ (Capricorn Professional Horoscope): ಈ ರಾಶಿಯವರ ಕೆಲಸದಲ್ಲಿನ ಸಮರ್ಪಣಾ ಮನೋಭಾವನೆ ಎಲ್ಲರಿಗೂ ಇಷ್ಟವೆನಿಸುತ್ತದೆ. ಉದ್ಯೋಗದಲ್ಲಿ ಉನ್ನತ ದರ್ಜೆಗೆ ಬಡ್ತಿ ಪಡೆಯಬಹುದು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕೊಂಚ ವಿವೇಚನೆಯಿಂದ ನಡೆದುಕೊಂಡರೆ ಒಳಿತಿದೆ. ನಿಮ್ಮ ಮಕ್ಕಳು ಆತ್ಮೀಯರ ಸಹಕಾರದಿಂದ ವಿದೇಶಕ್ಕೆ ತೆರಳಲಿದ್ದಾರೆ.

ಮಕರ ರಾಶಿ ಆರ್ಥಿಕ ಭವಿಷ್ಯ (Capricorn Money Horoscope): ಈ ವಾರ ಈ ರಾಶಿಯವರ ಆದಾಯಕ್ಕೆ ಕೊರತೆ ಇಲ್ಲ. ಹಣಕಾಸು ಸಾಕಷ್ಟು ಓಡಾಡಲಿದೆ. ಈ ನಡುವೆ, ಗುಟ್ಟಾಗಿ ಹಣವನ್ನು ಸಂಪಾದಿಸಿ ಉಳಿಸಲು ಯಶಸ್ವಿಯಾಗುವಿರಿ. ಖರ್ಚು ವೆಚ್ಚದ ಮೇಲೆ ಹಿಡಿತ ಸಾಧಿಸಿ, ವಿವೇಚನೆಯಿಂದ ಮತ್ತು ಸ್ಪಷ್ಟ ತಿಳಿವಳಿಕೆ ಪಡೆದು ಹೂಡಿಕೆ ಮಾಡುವ ಕಡೆಗೆ ಗಮನಹರಿಸಬಹುದು.

ಮಕರ ರಾಶಿ ಆರೋಗ್ಯ ಭವಿಷ್ಯ (Capricorn Health Horoscope): ಆರೋಗ್ಯದ ವಿಚಾರದಲ್ಲಿ ಸಂಕಷ್ಟವಿಲ್ಲ. ಆದಾಗ್ಯೂ, ಕೆಲವರಿಗೆ ಅನಾರೋಗ್ಯ ಕಾಡಬಹುದು. ಹೀಗಾಗಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳಿತು. ಶರೀರದ ನೀರಿನ ಮಟ್ಟ ಕಾಪಾಡಿಕೊಂಡು, ಸರಿಯಾದ ಆಹಾರ ಕ್ರಮ ಪಾಲಿಸುವುದು ಕೂಡ ಅವುಗಳ ಪೈಕಿ ಒಂದುಕ್ರಮ.

ಮಕರ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮಕರ ರಾಶಿಯ ಅಧಿಪತಿ: ಶನಿ, ಮಕರ ರಾಶಿಯವರಿಗೆ ಶುಭ ದಿನಾಂಕಗಳು: 6, 8 ಮತ್ತು 9. ಮಕರ ರಾಶಿಯವರಿಗೆ ಶುಭ ವಾರಗಳು: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಮಕರ ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ ಮತ್ತು ಕೆಂಪು. ಮಕರ ರಾಶಿಯವರಿಗೆ ಅಶುಭ ವರ್ಣ: ಹಳದಿ ಮತ್ತು ಬಾದಾಮಿ ಬಣ್ಣ. ಮಕರ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ. ಮಕರ ರಾಶಿಯವರಿಗೆ ಶುಭ ತಿಂಗಳು: ಸೆಪ್ಟೆಂಬರ್ 15ರಿಂದ ಅಕ್ಟೋಬರ್ 14. ಮಕರ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ. ಮಕರ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿ: ಕುಂಭ, ವೃಷಭ ಮತ್ತು ಕನ್ಯಾ. ಮಕರ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ, ಸಿಂಹ ಮತ್ತು ಧನು.

ಮಕರ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1)ಮಹಾ ಮೃತ್ಯುಂಜಯ ಮಂತ್ರ:ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.

2)ಈ ದಾನಗಳಿಂದ ಶುಭ ಫಲ: ಕಡಲೆ ಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.

3)ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ. ದಂಪತಿ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.

4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.