ವೃತ್ತಿ ಭವಿಷ್ಯ 2025: ಸ್ವಂತ ಉದ್ಯಮದಲ್ಲಿ ದುಡುಕಿನ ನಿರ್ಧಾರದಿಂದ ಸಮಸ್ಯೆ, ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃತ್ತಿ ಭವಿಷ್ಯ 2025: ಸ್ವಂತ ಉದ್ಯಮದಲ್ಲಿ ದುಡುಕಿನ ನಿರ್ಧಾರದಿಂದ ಸಮಸ್ಯೆ, ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು

ವೃತ್ತಿ ಭವಿಷ್ಯ 2025: ಸ್ವಂತ ಉದ್ಯಮದಲ್ಲಿ ದುಡುಕಿನ ನಿರ್ಧಾರದಿಂದ ಸಮಸ್ಯೆ, ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು

Career Horoscope 2025: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಎಲ್ಲೂ ಜೀವನದಲ್ಲೂ ಬದಲಾವಣೆ ಬದಲಿಸುತ್ತಾರೆ. ವೃತ್ತಿಯಲ್ಲಿರುವವರು ಪ್ರಮೋಷನ್‌, ವರ್ಗಾವಣಿ, ಸಂಬಳ ಹೆಚ್ಚಳಕ್ಕೆ ಕಾಯುತ್ತಿರುತ್ತಾರೆ. ಮುಂಬರುವ ವರ್ಷದಲ್ಲಿ ಕಟಕ, ಸಿಂಹ, ಕನ್ಯಾ ರಾಶಿಯವರ ವೃತ್ತಿ ಭವಿಷ್ಯ ಹೇಗಿದೆ? ಇಲ್ಲಿದೆ ಮಾಹಿತಿ.

ಕಟಕ, ಸಿಂಹ, ಕನ್ಯಾ ರಾಶಿಯವರ ವೃತ್ತಿ ಭವಿಷ್ಯ 2025
ಕಟಕ, ಸಿಂಹ, ಕನ್ಯಾ ರಾಶಿಯವರ ವೃತ್ತಿ ಭವಿಷ್ಯ 2025 (PC: Canva)

ವೃತ್ತಿ ಭವಿಷ್ಯ 2025: ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣದ ಅವಶ್ಯಕತೆ ಇದೆ. ಹಣ ಬೇಕಾದರೆ ಕೆಲಸ ಮಾಡಬೇಕು. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೆಲಸ ದೊರೆಯಬೇಕೆಂದರೆ ಬಹಳ ಕಷ್ಟಪಡಬೇಕು. ಅದರಲ್ಲೂ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಹೆಚ್ಚಿನ ಶ್ರಮ ಬೇಕು. ಆದರೆ ಅದೃಷ್ಟ ಜೊತೆಗಿದ್ದಲ್ಲಿ ಕೆಲಸ ದೊರೆಯುವುದು, ಅದರಲ್ಲಿ ಯಶಸ್ಸು ಕಾಣುವುದು ಕಷ್ಟದ ಮಾತಲ್ಲ. ಹೊಸ ವರ್ಷ ಬರುತ್ತಿದೆ, ಈಗಾಗಲೇ ಕೆಲಸದಲ್ಲಿ ಇರುವವರು ಮುಂದಿನ ವರ್ಷ ಬಡ್ತಿ ಪಡೆಯಲು ಕಾಯುತ್ತಿದ್ದಾರೆ, ಕೆಲಸ ಹುಡುಕುತ್ತಿರುವವರು ಒಂದು ಒಳ್ಳೆ ಕೆಲಸ ದೊರೆತರೆ ಸಾಕು ಎಂದು ಕಾಯುತ್ತಿದ್ದಾರೆ.

2025 ಹೊಸ ವರ್ಷದಲ್ಲಿ ಯಾವ ರಾಶಿಯವರಿಗೆ ಏನು ಫಲ? ವೃತ್ತಿ ಭವಿಷ್ಯ ಹೇಗಿರಲಿದೆ? ಯಾರಿಗೆ ಸರ್ಕಾರಿ ಕೆಲಸ, ಯಾರಿಗೆ ಬಡ್ತಿ ದೊರೆಯಲಿದೆ? ದ್ವಾದಶ ರಾಶಿಗಳ ವೃತ್ತಿ ಭವಿಷ್ಯ ಇಲ್ಲಿದೆ. ಕಟಕ, ಸಿಂಹ, ಕನ್ಯಾ ರಾಶಿಯವರಿಗೆ 2025ರಲ್ಲಿ ವೃತ್ತಿ ಜೀವನ ಹೇಗಿದೆ, ನೋಡೋಣ.

ಕಟಕ ರಾಶಿ

2024ಕ್ಕಿಂತ ಮುಂಬರುವ ವರ್ಷ ಈ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಈ ವರ್ಷ, ವೃತ್ತಿ-ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತದೆ. ವಿಶೇಷವಾಗಿ ಮಾರ್ಚ್ ನಂತರ ಬಹಳ ಒಳ್ಳೆಯದಾಗಲಿದೆ. ಹೊಸ ಕೆಲಸವನ್ನು ಹುಡುಕಲು ಉತ್ತಮ ಅವಧಿಯಾಗಿದೆ. ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ವರ್ಷ ಅಸಾಧಾರಣ ಯಶಸ್ಸನ್ನು ಪಡೆಯುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಮಗೆ ಇನ್ನಷ್ಟು ಅನುಕೂಲಕರವಾಗಿರುತ್ತದೆ. ಮೇ ಮಧ್ಯದಲ್ಲಿ ಗುರುವು ನಿಮ್ಮ12ನೇ ಮನೆಯಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ ಕೆಲಸದಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಆರೂ, ನೀವು ಸಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸುವಿರಿ. ನಿಮ್ಮ ಸಹೋದ್ಯೋಗಿಗಳು ಕೂಡಾ ನಿಮಗೆ ಪ್ರೋತ್ಸಾಹ ನೀಡಲಿದ್ದಾರೆ.

ಉದ್ಯಮಿಗಳೂ ಕೂಡಾ 2025 ರಲ್ಲಿ ಈ ವರ್ಷ ಹೆಚ್ಚು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಯೋಚಿಸದೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಶನಿಯು ನಿಮ್ಮ 8ನೇ ಮನೆಯಲ್ಲಿ ಜನವರಿಯಿಂದ ಮಾರ್ಚ್‌ವರೆಗೆ ಇರುತ್ತಾನೆ. ಇದರ ಪರಿಣಾಮವಾಗಿ ನೀವು ವ್ಯಾಪಾರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ನೀವು ಶ್ರಮದಿಂದ ಕೆಲಸ ಮಾಡಿದರೆ, ನಿಮ್ಮ ಸಂಸ್ಥೆ, ಬಿಸ್ನೆಸ್‌ ನಿಸ್ಸಂದೇಹವಾಗಿ ಯಶಸ್ವಿಯಾಗುತ್ತದೆ. ಆಮದು ಮತ್ತು ರಫ್ತಿನಲ್ಲಿ ತೊಡಗಿರುವ ಉದ್ಯಮಿಗಳಿಗೆ, ಈ ವರ್ಷವೂ ಧನಾತ್ಮಕವಾಗಿ ಕಾಣುತ್ತಿದೆ. ಆದರೆ ಹೆಚ್ಚಿನ ಪ್ರಯತ್ನ ಅಗತ್ಯ.

ಸಿಂಹ ರಾಶಿ

6ನೇ ಮನೆಯ ಅಧಿಪತಿ ಜನವರಿಯಿಂದ ಮಾರ್ಚ್‌ವರೆಗೆ ರಾಶಿಚಕ್ರದ ಎರಡನೇ ಚಿಹ್ನೆಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ವಲ್ಪ ಶ್ರಮ ವಹಿಸಿದರೆ ಈ ವರ್ಷ ನಿಮ್ಮ ಗುರಿಯನ್ನು ನೀವು ಖಚಿತವಾಗಿ ಸಾಧಿಸುವಿರಿ. ಈ ರಾಶಿಚಕ್ರ ಚಿಹ್ನೆಯವರು ಬಡ್ತಿ ಪಡೆಯುವ ಹೆಚ್ಚಿನ ಅವಕಾಶ ಹೊಂದಿದ್ದಾರೆ. ನಿಮ್ಮ ಶ್ರಮದಿಂದಲೇ ಕೆಲಸದಲ್ಲಿನ ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತದೆ. ಗುರು ಸಂಕ್ರಮಣದಿಂದ ಜನವರಿಯಿಂದ ಮೇ ಮಧ್ಯದವರೆಗೆ ಉದ್ಯೋಗದ ದೃಷ್ಟಿಯಿಂದ ಬಹಳ ಅನುಕೂಲಕರವಾಗಿದೆ.

ಸ್ವಂತ ಉದ್ಯೋಗಿಗಳಿಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಶನಿಯು ಜನವರಿಯಿಂದ ಮಾರ್ಚ್‌ವರೆಗೆ ಏಳನೇ ಮನೆಯಲ್ಲಿರುತ್ತಾನೆ. ಈ ರೀತಿಯ ಪರಿಸ್ಥಿತಿಯಲ್ಲಿ ನಿಮಗೆ ಕೆಲವೊಂದು ಸವಾಲುಗಳು ತಲೆದೋರಬಹುದು. ಆದರೂ ನಿಮ್ಮ ಚಾಣಾಕ್ಷತೆ, ನೀವು ಹಾಕುವ ಶ್ರಮ ಪ್ರತಿಫಲ ನೀಡುತ್ತದೆ. ಮೇ ತಿಂಗಳ ನಂತರ, ರಾಹು ಸಂಕ್ರಮಣವು 7ನೆ ಮನೆಯ ಮೇಲೂ ಪರಿಣಾಮ ಬೀರುತ್ತದೆ, ಇದರಿಂದ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಜಾಗರೂಕರಾಗಿರಬೇಕು.

ಕನ್ಯಾ ರಾಶಿ

ಈ ರಾಶಿಯವರಿಗೆ 2025 ವರ್ಷ ಸಾಮಾನ್ಯವಾಗಿದೆ. ನೀವು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಿದರೂ ನಂತರ ಅದರಿಂದ ಹೊರ ಬರುವಿರಿ. ಜನವರಿಯಿಂದ ಮಾರ್ಚ್‌ವರೆಗೆ ಶನಿಯು ನಿಮ್ಮ ಪರವಾಗಿರುತ್ತಾನೆ, ಇದು ನಿಮ್ಮ ವೃತ್ತಿ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಆದಾರೆ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸದ ವೈಖರಿಯನ್ನು ಗುರುತಿಸಿ ನಿಮಗೆ ವೇತನ ಹೆಚ್ಚಿಸಬಹುದು. ಮಾರ್ಚ್‌ನಿಂದ ಮೇ ವರೆಗೆ 6ನೇ ಮನೆಯಲ್ಲಿ ಯಾವುದೇ ನಕಾರಾತ್ಮಕ ಪರಿಣಾಮಗಳಿರುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಉದ್ಯೋಗದ ವಿಚಾರದಲ್ಲಿ ನೀವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತೀರಿ.

ಮೇ ಮಧ್ಯದಲ್ಲಿ, 10ನೇ ಮನೆಯಲ್ಲಿ ಗುರುವಿನ ಸಂಚಾರವು ವ್ಯಾಪಾರ ಜಗತ್ತಿನಲ್ಲಿ ಕೆಲಸ ಮಾಡುವ ಕನ್ಯಾ ರಾಶಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಶನಿ ಸಂಚಾರದ ಸಮಯದಲ್ಲಿ ಕೆಲವು ವ್ಯವಹಾರ ನಿಧಾನವಾಗಬಹುದು, 7ನೇ ಮನೆಯಲ್ಲಿ ರಾಹು ಕೇತುಗಳ ಪ್ರಭಾವವು ಈ ಸಮಸ್ಯೆಗಳನ್ನು ನಿವಾರಿಸುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.