ವೃತ್ತಿ ಭವಿಷ್ಯ 2025: ಮಕರ ರಾಶಿಯವರಿಗೆ ವ್ಯವಹಾರದ ವಿಚಾರದಲ್ಲಿ ಶುಭಫಲ; ಮೀನ ರಾಶಿಯವರಿಗೆ ಸಹೋದ್ಯೋಗಿಗಳ ವರ್ತನೆಯಿಂದ ಬೇಸರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃತ್ತಿ ಭವಿಷ್ಯ 2025: ಮಕರ ರಾಶಿಯವರಿಗೆ ವ್ಯವಹಾರದ ವಿಚಾರದಲ್ಲಿ ಶುಭಫಲ; ಮೀನ ರಾಶಿಯವರಿಗೆ ಸಹೋದ್ಯೋಗಿಗಳ ವರ್ತನೆಯಿಂದ ಬೇಸರ

ವೃತ್ತಿ ಭವಿಷ್ಯ 2025: ಮಕರ ರಾಶಿಯವರಿಗೆ ವ್ಯವಹಾರದ ವಿಚಾರದಲ್ಲಿ ಶುಭಫಲ; ಮೀನ ರಾಶಿಯವರಿಗೆ ಸಹೋದ್ಯೋಗಿಗಳ ವರ್ತನೆಯಿಂದ ಬೇಸರ

Career Horoscope 2025: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಎಲ್ಲೂ ಜೀವನದಲ್ಲೂ ಬದಲಾವಣೆ ಬದಲಿಸುತ್ತಾರೆ. ವೃತ್ತಿಯಲ್ಲಿರುವವರು ಪ್ರಮೋಷನ್‌, ವರ್ಗಾವಣಿ, ಸಂಬಳ ಹೆಚ್ಚಳಕ್ಕೆ ಕಾಯುತ್ತಿರುತ್ತಾರೆ. ಮುಂಬರುವ ವರ್ಷದಲ್ಲಿ ಮಕರ, ಕುಂಭ, ಮೀನ ರಾಶಿಯವರ ವೃತ್ತಿ ಭವಿಷ್ಯ ಹೇಗಿದೆ? ಇಲ್ಲಿದೆ ಮಾಹಿತಿ.

ಮಕರ, ಕುಂಭ, ಮೀನ ರಾಶಿಯವರ ವೃತ್ತಿ ಭವಿಷ್ಯ 2025
ಮಕರ, ಕುಂಭ, ಮೀನ ರಾಶಿಯವರ ವೃತ್ತಿ ಭವಿಷ್ಯ 2025 (PC: Canva)

ವೃತ್ತಿ ಭವಿಷ್ಯ 2025: ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣದ ಅವಶ್ಯಕತೆ ಇದೆ. ಹಣ ಬೇಕಾದರೆ ಕೆಲಸ ಮಾಡಬೇಕು. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೆಲಸ ದೊರೆಯಬೇಕೆಂದರೆ ಬಹಳ ಕಷ್ಟಪಡಬೇಕು. ಅದರಲ್ಲೂ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಹೆಚ್ಚಿನ ಶ್ರಮ ಬೇಕು. ಆದರೆ ಅದೃಷ್ಟ ಜೊತೆಗಿದ್ದಲ್ಲಿ ಕೆಲಸ ದೊರೆಯುವುದು, ಅದರಲ್ಲಿ ಯಶಸ್ಸು ಕಾಣುವುದು ಕಷ್ಟದ ಮಾತಲ್ಲ. ಹೊಸ ವರ್ಷ ಬರುತ್ತಿದೆ, ಈಗಾಗಲೇ ಕೆಲಸದಲ್ಲಿ ಇರುವವರು ಮುಂದಿನ ವರ್ಷ ಬಡ್ತಿ ಪಡೆಯಲು ಕಾಯುತ್ತಿದ್ದಾರೆ, ಕೆಲಸ ಹುಡುಕುತ್ತಿರುವವರು ಒಂದು ಒಳ್ಳೆ ಕೆಲಸ ದೊರೆತರೆ ಸಾಕು ಎಂದು ಕಾಯುತ್ತಿದ್ದಾರೆ.

2025 ಹೊಸ ವರ್ಷದಲ್ಲಿ ಯಾವ ರಾಶಿಯವರಿಗೆ ಏನು ಫಲ? ವೃತ್ತಿ ಭವಿಷ್ಯ ಹೇಗಿರಲಿದೆ? ಯಾರಿಗೆ ಸರ್ಕಾರಿ ಕೆಲಸ, ಯಾರಿಗೆ ಬಡ್ತಿ ದೊರೆಯಲಿದೆ? ದ್ವಾದಶ ರಾಶಿಗಳ ವೃತ್ತಿ ಭವಿಷ್ಯ ಇಲ್ಲಿದೆ. ಮಕರ, ಕುಂಭ, ಮೀನ ರಾಶಿಯವರಿಗೆ 2025ರಲ್ಲಿ ವೃತ್ತಿ ಜೀವನ ಹೇಗಿದೆ, ನೋಡೋಣ.

ಮಕರ ರಾಶಿ

ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುವಿರಿ. ಈ ಸಮಯದಲ್ಲಿ ನೀವು ಮಾಡುವ ಯಾವುದೇ ಕೆಲಸಗಳು ನಿಮಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಮೇ ಮಧ್ಯದಿಂದ ಗುರುವು ನಿಮ್ಮ 5ನೇ ಮನೆಯ ಮೂಲಕ ಸಾಗುತ್ತದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮಗೆ ಉತ್ತಮ ಬಾಂಧವ್ಯ ಇರುತ್ತದೆ. ಕೆಲಸದಲ್ಲಿ ಹೆಚ್ಚು ಖುಷಿಯಾಗಿರುವಿರಿ. ನಿಮ್ಮ ಪಾಲಿಗೆ ಅದೃಷ್ಟ ಒಲಿದುಬರಲಿದೆ.

ವ್ಯಾಪಾರಸ್ಥರಿಗೆ ಸಣ್ಣ ಪುಟ್ಟ ಸವಾಲುಗಳು ಉಂಟಾಗಬಹುದು. ಆದರೆ ಒಟ್ಟಾರೆಯಾಗಿ, 2024ಕ್ಕಿಂತ ಮುಂದಿನ ವರ್ಷ ಉತ್ತಮವಾಗಿರುತ್ತದೆ. ಮಾರ್ಚ್ ನಂತರ ಶನಿಯು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಾನೆ, ಇದು ನಿಮ್ಮ ವ್ಯವಹಾರಕ್ಕೆ ಇನ್ನಷ್ಟು ಬಲ ನೀಡುತ್ತದೆ. ಗುರುವಿನ 5 ನೇ ಮನೆಯ ಪ್ರಭಾವವರು ಅನುಕೂಲಕರ ಫಲಿತಾಂಶಗಳನ್ನು ತಂದುಕೊಡುತ್ತದೆ. ಬುಧ ಸಂಕ್ರಮಣ ಕೂಡಾ ನಿಮಗೆ ಅನುಕೂಲಕರವಾಗಿದೆ. ಇದರಿಂದ ಮಕರ ರಾಶಿಯವರು ಸಾಮಾನ್ಯವಾಗಿ ಈ ವರ್ಷ ವ್ಯವಹಾರದ ವಿಷಯದಲ್ಲಿ ಶುಭಫಲಗಳನ್ನು ಪಡೆಯಲಿದ್ದಾರೆ.

ಕುಂಭ ರಾಶಿ

ಈ ರಾಶಿಯವರು 2025ರಲ್ಲಿ ಸಾಮಾನ್ಯ ಫಲಿತಾಂಶಗಳನ್ನು ಪಡೆಯುತ್ತಾರೆ. 6ನೇ ಮನೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದ ಕಾರಣ ನಿಮ್ಮ ಉದ್ಯೋಗ ಮುಂದುವರಿಯುತ್ತದೆ. ನಿಮ್ಮ ಕಠಿಣ ಪರಿಶ್ರಮವು ಫಲಿತಾಂಶದ ರೂಪದಲ್ಲಿ ಪ್ರತಿಫಲವನ್ನು ನೀಡುತ್ತದೆ. ಜನವರಿಯಿಂದ ಮೇ ವರೆಗೆ 2ನೇ ಮನೆಯ ಮೇಲೆ ರಾಹು ಪ್ರಭಾವ ಬೀರುತ್ತದೆ. ಶನಿಯ ಪ್ರಭಾವದಿಂದ ಕೂಡಾ ಉದ್ಯೋಗದ ವಿಚಾರದಲ್ಲಿ ಕೆಲವು ನಕಾರಾತ್ಮಕ ಅಂಶಗಳು ಕಾಣುತ್ತವೆ. ಆದರೆ ನಿಮ್ಮ ಜೀವನದಲ್ಲಿ ಯಾವುದೇ ಮಹತ್ವದ ಸವಾಲು ಅಥವಾ ಸಮಸ್ಯೆಗಳು ಎದುರಾಗುವುದಿಲ್ಲ. ಕೆಲಸದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳ ಜೊತೆ ವಾದ ವಿವಾದ ಮಾಡಬೇಡಿ. ಉದ್ಯೋಗ ಬದಲಾಯಿಸಲು ಬಯಸಿದರೆ ಈ ವರ್ಷ ಉತ್ತಮವಾಗಿರುತ್ತದೆ.

ಉದ್ಯಮಿಗಳ ಬಗ್ಗೆ ಹೇಳುವುದಾದರೆ ವ್ಯವಹಾರದಲ್ಲಿ ತೊಡಗಿರುವ ಕುಂಭ ರಾಶಿಯವರು ಈ ವರ್ಷ ಯಶಸ್ಸು ಗಳಿಸಲು ಸ್ವಲ್ಪ ಶ್ರಮ ವ್ಯಯಿಸಬೇಕಾಗುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ 10ನೇ ಮನೆಯಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಇದು ವ್ಯವಹಾರವು ನಿಧಾನವಾಗಿ ಚಲಿಸಲು ಕಾರಣವಾಗುತ್ತದೆ. ಆದರೆ ಇದರ ನಂತರ, ನಿಮ್ಮ ವ್ಯವಹಾರ ಬಹಳ ಸುಧಾರಿಸುತ್ತದೆ. ಇದರಿಂದ ನಿಮಗೆ ಲಾಭ ಹೆಚ್ಚಾಗುತ್ತದೆ.

ಮೀನ ರಾಶಿ

ಉದ್ಯೋಗದ ವಿಚಾರದಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಮೇ ನಂತರ, 6ನೇ ಮನೆಯಲ್ಲಿ ಕೇತುವಿನ ಸಂಚಾರವು ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಯೋಜನ ತಂದು ಕೊಡುತ್ತದೆ. ವರ್ಷದ ಮೊದಲಾರ್ಧವು ಕೆಲಸದಲ್ಲಿ ಉತ್ತಮವಾಗಿರದಿದ್ದರೂ, ವರ್ಷದ ದ್ವಿತೀಯಾರ್ಧ ಅದ್ಭುತವಾಗಿರುತ್ತದೆ. ಕೆಲಸದಲ್ಲಿ ಸಮಸ್ಯೆಗಳಿದ್ದು ಅದು ನಿಮ್ಮನ್ನು ಅತೃಪ್ತರನ್ನಾಗಿ ಮಾಡುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ಉಂಟು ಮಾಡುತ್ತದೆ. ನೀವು ತಾಳ್ಮೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ.

ವ್ಯಾಪಾರದಲ್ಲಿ ಆಸಕ್ತಿ ಹೊಂದಿರುವ ಮೀನ ರಾಶಿಯವರು, ಬುಧ ಸಂಕ್ರಮಣದಿಂದ ಲಾಭ ಪಡೆಯುತ್ತಾರೆ. ವರ್ಷದ ಬಹುಪಾಲು, ಬುಧ ಗ್ರಹವು ನಿಮ್ಮ ಪರವಾಗಿರುತ್ತದೆ. ಆದರೆ ಗುರು ಮತ್ತು ಶನಿ ಸಂಕ್ರಮಣವು ನಿಮ್ಮ ಪರವಾಗಿರುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ವ್ಯವಹಾರಕ್ಕೆ ಹೆಚ್ಚಿನ ಗಮನ ನೀಡಿದರೆ ಮಾತ್ರ ನೀವು ಅದೃಷ್ಟದಿಂದ ಉತ್ತಮ ಫಲಿತಾಂಶ ಪಡೆಯುವಿರಿ. 2025 ರಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣದಿರಬಹುದು, ಆದರೆ ಮೇ ನಂತರ, ಗುರುವು 10ನೇ ಮನೆಗೆ ಚಲಿಸಿದ ನಂತರ ಪ್ರಗತಿಯನ್ನು ನೀಡುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.