ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ; ಬೀದರ್ ಜಿಲ್ಲೆ ಚಳಕಾಪುರದಿಂದ ಆರೂಢ ಜ್ಯೋತಿ ರಥ ಯಾತ್ರೆಗೆ ಚಾಲನೆ
Arudha Jyoti Rath Yatra: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಆಚರಣೆ ನಿಮಿತ್ತ ಬೀದರ್ ಜಿಲ್ಲೆ ಚಳಕಾಪುರದಿಂದ ಆರೂಢ ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಲಾಯಿತು. ಇದು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಮತ್ತು ಸ್ಥಳಗಳಲ್ಲಿ ಸಂಚರಿಸಿ 2025ರ ಫೆಬ್ರವರಿ 19ರಂದು ಹುಬ್ಬಳಿ ಸಿದ್ಧಾರೂಢ ಮಠಕ್ಕೆ ತಲುಪಲಿದೆ.
ಹುಬ್ಬಳ್ಳಿ: ನಡೆದಾಡುವ ದೇವರು ಎಂದು ಖ್ಯಾತರಾಗಿದ್ದ ಶ್ರೀ ಸಿದ್ಧಾರೂಢರ 190ನೇ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ ಆರೂಢ ಜ್ಯೋತಿ ಯಾತ್ರೆಯು ಸಿದ್ಧಾರೂಢರ ಜನ್ಮ ಸ್ಥಳವಾದ ಬೀದರ ಜಿಲ್ಲೆಯ ಚಳಕಾಪುರದಲ್ಲಿ ಸೋಮವಾರ (ಡಿಸೆಂಬರ್ 23) ಸಂಜೆ ಆರಂಭಗೊಂಡಿತು. ಚಳಕಾಪೂರದಿಂದ ಹೊರಟ ಯಾತ್ರೆಯು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಮತ್ತು ಸ್ಥಳಗಳಲ್ಲಿ ಸಂಚರಿಸಿ 2025ರ ಫೆಬ್ರವರಿ 19ರಂದು ಹುಬ್ಬಳಿ ಸಿದ್ಧಾರೂಢ ಮಠಕ್ಕೆ ಬಂದು ತಲುಪಲಿದೆ.
ಹುಬ್ಬಳ್ಳಿಯ ಸಿದ್ಧಾರೂಢಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟರ್,ಮಾಜಿ ಶಾಸಕ ಡಿ.ಆರ್.ಪಾಟೀಲ, ವೈಸ್ ಚೇರಮನ್ ಮಂಜುನಾಥ ಮುನವಳ್ಳಿ, ಯಾತ್ರೆ ಸಮಿತಿ ಅಧ್ಯಕ್ಷ ಉದಯಕುಮಾರ ನಾಯ್ಕ, ಯಾತ್ರೆ ಕಾರ್ಯಾಧ್ಯಕ್ಷ ಶಾಮಾನಂದ ಪೂಜಾರಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿ ಬಾಳು ಮಗಜಿಕೊಂಡಿ, ವಿ.ವಿ. ಮಲ್ಲಾಪೂರ, ಡಾ.ಗೋವಿಂದ ಮಣ್ಣೂರ, ಚನ್ನವೀರ ಮುಂಗುರವಾಡಿ, ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಸಾವಿರಾರು ಭಕ್ತರು ಇದ್ದರು.