ಚಾಣಕ್ಯ ನೀತಿ: ಮನೆಯಲ್ಲಿ ಈ ಪ್ರಮಾದಗಳು ಉಂಟಾದರೆ ಮುಂದೆ ಇನ್ನಷ್ಟು ಜಾಗ್ರತೆ ವಹಿಸಿ, ಇಲ್ಲದಿದ್ರೆ ಸಮಸ್ಯೆ
Chanakya Niti: ಆಚಾರ್ಯ ಚಾಣಕ್ಯರ ವಾಕ್ಯಗಳು ಇಂದಿಗೂ ಜನಜನಿತವಾಗಿದೆ. ಯಾರು ಚಾಣಕ್ಯನ ನೀತಿಗಳನ್ನು ಜೀವನದಲ್ಲಿ ಅನುಸರಿಸುವರೋ ಅವರ ಜೀವನ ಸಮೃದ್ಧವಾಗಿರುತ್ತದೆ. ಕೌಟಿಲ್ಯ ಹೇಳಿರುವಂತೆ ನಿಮ್ಮ ಮನೆಯಲ್ಲಿ ಇಲ್ಲಿ ತಿಳಿಸಿರುವ ಘಟನೆಗಳು ಎಂದಿಗೂ ನಡೆಯದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾದೀತು.

ಚಾಣಕ್ಯ ನೀತಿ: ಚಾಣಕ್ಯನು ಮೌರ್ಯ ಸಾಮ್ರಾಜ್ಯದಲ್ಲಿ ಚಂದ್ರಗುಪ್ತ ಮೌರ್ಯನ ಮುಖ್ಯ ಸಲಹೆಗಾರನಾಗಿದ್ದನು. ಈತನನ್ನು ಕೌಟಿಲ್ಯ ಎಂದೂ ಕರೆಯಲಾಗುತ್ತದೆ. ಚಾಣಕ್ಯನಿಗೆ ರಾಜಕೀಯ ಕ್ಷೇತ್ರದಲ್ಲಿ ಅಪಾರ ಜ್ಞಾನವಿತ್ತು. ಅವರು 4 ನೇ ಶತಮಾನಕ್ಕೆ ಸೇರಿದ ಶ್ರೇಷ್ಠ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದಾನೆ.
ಚಾಣಕ್ಯ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸುತ್ತಾನೆ. ಈ ಬಗ್ಗೆ ಆತ ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಸೇರಿಸಿದ್ದಾರೆ, ಅವರು ಜೀವನದಲ್ಲಿ ನಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಅನೇಕ ವಿಚಾರಗಳನ್ನು ಬರೆದಿದ್ದಾರೆ.ಇದೇ ಕಾರಣಕ್ಕೆ ಬಹಳ ಮಂದಿ ಚಾಣಕ್ಯನನ್ನು ಅನುಸರಿಸುತ್ತಾರೆ. ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಮುಂದೆ ಇನ್ನಷ್ಟು ಕೆಡುಗಳನ್ನು ಸೂಚಿಸುತ್ತವೆ, ಆದರೆ ನಾವು ಬಹಳ ಮುನ್ನೆಚರಿಕೆಯಿಂದ ಇದ್ದರೆ ಅದನ್ನು ತಡೆಯಬಹುದು. ಏನು ಆ ಘಟನೆಗಳು? ಇಲ್ಲಿದೆ ವಿವರ.
ಹಿರಿಯರನ್ನು ಅವಮಾನಿಸುವುದು
ಚಾಣಕ್ಯನ ಪ್ರಕಾರ, ಮನೆಯಲ್ಲಾಗಲೀ ಅಥವಾ ಹೊರಗಾಗಲಿ ಹಿರಿಯರನ್ನು ಅವಮಾನಿಸುವುದು ಬಹಳ ತಪ್ಪು. ನೀವು ಈ ಕೆಲಸ ಮಾಡುತ್ತಿದ್ದೀರಿ ಎಂದರೆ ಮುಂದೆ ನಿಮಗೆ ಏನಾದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸುತ್ತಾನೆ.
ಪೂಜಾ ಮಂದಿರ
ಮನೆ ಸದಾ ಸ್ವಚ್ಛವಾಗಿರಬೇಕು, ಅದರಲ್ಲೂ ಪೂಜಾ ಮಂದಿರದ ಶುಚಿತ್ವಕ್ಕೆ ಬಹಳ ಪ್ರಾಮುಖ್ಯತೆ ನೀಡಬೇಕು. ಒಂದು ವೇಳೆ ಪೂಜಾ ಮಂದಿರ ಕೊಳಕಾಗಿದ್ದರೆ ನೀವು ಮುಂದಿನ ದಿನಗಳಲ್ಲಿ ಏನೋ ಸಮಸ್ಯೆ ಎದುರಿಸುತ್ತೀರಿ ಎಂದು ಅರ್ಥ, ಆದ್ದರಿಂದ ಯಾವಾಗಲೂ ಪೂಜಾ ಮಂದಿರ ಶುಚಿಯಾಗಿರಬೇಕು.
ಜಗಳ
ಮನೆಯಲ್ಲಿ ಸದಾ ಜಗಳ, ಹೊಡೆದಾಟಗಳ ಸದ್ದು ಕೇಳಿ ಬರುತ್ತಿದ್ದರೆ ಅಲ್ಲಿ ಖಂಡಿತ ಲಕ್ಷ್ಮಿ ಇರುವುದಿಲ್ಲ. ಮನೆ ಯಾವಾಗಲೂ ಶಾಂತಿಯಿಂದ ಇರಬೇಕು, ಕುಟುಂಬದ ಸದಸ್ಯರ ನಡುವೆ ಸಂತೋಷ ತುಂಬಿರಬೇಕು. ಪರಸ್ಪರ ಗೌರವ ಇರಬೇಕು.ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಎದುರಾಗಬಹುದು.
ಮನೆಯಲ್ಲಿ ಒಡೆದ ಗಾಜು
ಕನ್ನಡಿಯನ್ನು ಲಕ್ಷ್ಮೀ ಸ್ವರೂಪ ಎಂದು ಕರೆಯಲಾಗುತ್ತದೆ. ಆದರೆ ಮನೆಯಲ್ಲಿ ಅಪ್ಪಿ ತಪ್ಪಿ ಕನ್ನಡಿ ಒಡೆದರೆ ಏನಾದರೂ ಸಮಸ್ಯೆ ಸಂಭವಿಸುತ್ತದೆ ಎಂದು ಅರ್ಥ. ಆದ್ದರಿಂದ ಎಂದಿಗೂ ಕನ್ನಡಿ ಒಡೆಯದಂತೆ ಜಾಗ್ರತೆಯಿಂದ ಇರಿ.
ತುಳಸಿ ಗಿಡ ಒಣಗುವುದು
ತುಳಸಿಯಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಪ್ರತಿದಿನ ತುಳಸಿ ಪೂಜೆ ಮಾಡುತ್ತೇವೆ. ಆದರೆ ಇದ್ದಕ್ಕಿದ್ದಂತೆ ತುಳಸಿಗಿಣ ಒಣಗಿದರೆ ಮನೆಯಲ್ಲಿ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮನೆಯಲ್ಲಿ ಎಂದಿಗೂ ತುಳಸಿಗಿಡವನ್ನು ಒಣಗದಂತೆ ನೋಡಿಕೊಳ್ಳಬೇಕು.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.

ವಿಭಾಗ