ಓಂ ನಮಃ ಶಿವಾಯ, ಗಾಯತ್ರಿ ಮಂತ್ರ ಸೇರಿದಂತೆ ಕಷ್ಟಗಳಿಂದ ಹೊರ ಬರಲು ಸಹಕಾರಿ ಈ ಶಕ್ತಿಶಾಲಿ ಮಂತ್ರಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಓಂ ನಮಃ ಶಿವಾಯ, ಗಾಯತ್ರಿ ಮಂತ್ರ ಸೇರಿದಂತೆ ಕಷ್ಟಗಳಿಂದ ಹೊರ ಬರಲು ಸಹಕಾರಿ ಈ ಶಕ್ತಿಶಾಲಿ ಮಂತ್ರಗಳು

ಓಂ ನಮಃ ಶಿವಾಯ, ಗಾಯತ್ರಿ ಮಂತ್ರ ಸೇರಿದಂತೆ ಕಷ್ಟಗಳಿಂದ ಹೊರ ಬರಲು ಸಹಕಾರಿ ಈ ಶಕ್ತಿಶಾಲಿ ಮಂತ್ರಗಳು

ಜೀವನದ ಪ್ರತಿ ಹಂತದಲ್ಲೂ ಗ್ರಹಗತಿಗಳು ಪ್ರಮುಖ ಪಾತ್ರ ವಹಿಸುತ್ತದೆ. ನಾವು ಜೀವನದಲ್ಲಿ ಶಾಂತಿಯಿಂದ ಇರಬೇಕಾದರೆ, ನೆಮ್ಮದಿಯಿಂದ ಇರಬೇಕಾದರೆ ಕೆಲವೊಂದು ಮಂತ್ರಗಳು ಬಹಳ ಸಹಕಾರಿಯಾಗಿದೆ. ಓಂ ನಮಃ ಶಿವಾಯ, ಗಾಯತ್ರಿ ಮಂತ್ರ ಸೇರಿದಂತೆ ಕಷ್ಟಗಳಿಂದ ಹೊರ ಬರಲು ಶಕ್ತಿಶಾಲಿ ಮಂತ್ರಗಳು ಸಹಾಯಕಾರಿಯಾಗಿದೆ.

ಕಷ್ಟಗಳಿಂದ ಪರಿಹಾರ ನೀಡುವ ಶಕ್ತಿಶಾಲಿ ಮಂತ್ರಗಳು
ಕಷ್ಟಗಳಿಂದ ಪರಿಹಾರ ನೀಡುವ ಶಕ್ತಿಶಾಲಿ ಮಂತ್ರಗಳು

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ನಮ್ಮ ಕಷ್ಟ ಸುಖಗಳಲ್ಲಿ ಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಹಗಳ ಸಂಚಾರವು ಪ್ರತಿ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಶಾಂತವಾಗಿರಲು ಮತ್ತು ಸಂತೋಷದ ಜೀವನ ನಡೆಸಲು ಪ್ರತಿದಿನ ಪೂಜೆ ಮಾಡುತ್ತೇವೆ. ಕಷ್ಟಗಳನ್ನು ಪರಿಹರಿಸುವಂತೆ ಪ್ರಾರ್ಥಿಸುತ್ತೇವೆ.

ಆದರೆ ಜೀವನದಲ್ಲಿ ಸಂತೋಷವಾಗಿರಲು, ನೆಮ್ಮದಿಯ ಜೀವನ ನಡೆಸಲು ಪ್ರಭಾವಶಾಲಿ ಮಂತ್ರಗಳನ್ನು ಪಠಿಸುವುದು ಉತ್ತಮ. ಈ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿಯು ಹರಿಯುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಗಳಿದ್ದರೆ ಅದರಿಂದ ವಿಮುಕ್ತಿ ಹೊಂದಬಹುದು.

ಓಂ ನಮ:ಶಿವಾಯ

ಶಿವನಿಗೆ ಸಮರ್ಪಿತವಾದ ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಓಂ ಎಂಬುದು ಬಹಳ ಶಕ್ತಿಶಾಲಿ ಮಂತ್ರ. ಈ ಮಂತ್ರಕ್ಕೆ ಗ್ರಹಗಳ ಪ್ರಭಾವವವನ್ನು ಹೋಗಲಾಡಿಸುವ ಶಕ್ತಿಯೂ ಇದೆ. ಆದ್ದರಿಂದ ಓಂ ನಮ: ಶಿವಾಯ ಮಂತ್ರವನ್ನು ಪ್ರತಿದಿನ ಪಠಿಸಿದರೆ ಒಳ್ಳೆಯದು. 

ಗಾಯತ್ರಿ ಮಂತ್ರ

ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಬಹಳಷ್ಟು ಒಳ್ಳೆಯ ಬದಲಾವಣೆ ಉಂಟಾಗುತ್ತದೆ. ನೀವು ಶಾಂತಿಯುತ ಜೀವನವನ್ನು ನಡೆಸಬಹುದು. ನೆಮ್ಮದಿಯಿಂದ ಬದುಕಬಹುದು. ಜ್ಞಾನ ಮತ್ತು ಬೆಳಕನ್ನು ಪ್ರೇರೇಪಿಸುತ್ತದೆ. ಪ್ರತಿಕೂಲ ಪರಿಣಾಮಗಳನ್ನು ನಿಯಂತ್ರಿಸುತ್ತದೆ.

ಹನುಮಾನ್ ಚಾಲೀಸಾ

ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಕೂಡ ಉತ್ತಮ ಧನಾತ್ಮಕ ಶಕ್ತಿಯು ಹರಿಯುತ್ತದೆ. ಹನುಮಾನ್ ಚಾಲೀಸಾವನ್ನು ಓದುವುದರಿಂದ ನೀವು ಯಾವುದೇ ತೊಂದರೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಹನುಮಾನ್ ಚಾಲೀಸಾ ಶನಿ ಸಾಡೇಸಾತಿ, ಮಂಗಳ ಗ್ರಹದ ದುಷ್ಪರಿಣಾಮಗಳ ವಿರುದ್ಧ ಕೆಲಸ ಮಾಡುತ್ತದೆ. ಇದು ನಮ್ಮಲ್ಲಿ ಧೈರ್ಯ ತುಂಬುತ್ತದೆ.

ಶನಿ ಮಹಾ ಮಂತ್ರ

ಶನಿ ಮಹಾ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಬಹಳಷ್ಟು ಉತ್ತಮ ಬದಲಾವಣೆಗಳನ್ನು ತರುತ್ತದೆ. ನೀವು ಶಾಂತಿಯುತ ಜೀವನ ನಡೆಸಬಹುದು. ಸಂತೋಷವಾಗಿರಬಹುದು. ಈ ಮಂತ್ರವನ್ನು ಪಠಿಸುವುದರಿಂದ ಶನಿಯ ಕೋಪವನ್ನು ಹೋಗಲಾಡಿಸಬಹುದು ಮತ್ತು ಅವನನ್ನು ಶಾಂತಗೊಳಿಸಬಹುದು. ಶನಿ ದೋಷವನ್ನು ಕಡಿಮೆ ಮಾಡಲು ಈ ಮಂತ್ರವನ್ನು ಪಠಿಸುವುದು ಒಳ್ಳೆಯದು.

ಓಂ ನಮೋ ಭಗವತೇ ವಾಸುದೇವಾಯ ನಮಃ

ಇದು ವಿಷ್ಣುವಿಗೆ ಸಂಬಂಧಿಸಿದ ಮಂತ್ರ, ಇದನ್ನು ಪಠಿಸುವುದರಿಂದ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ. ಈ ಶಕ್ತಿಶಾಲಿ ವಿಷ್ಣು ಮಂತ್ರವನ್ನು ಪಠಿಸುವುದರಿಂದ ರಾಹು ಮತ್ತು ಕೇತುಗಳ ನಕಾರಾತ್ಮಕ ಪ್ರಭಾವವನ್ನು ನಿಲ್ಲಿಸಬಹುದು. ಜೀವನ ಸುಂದರವಾಗಿರುತ್ತದೆ.

ಮಹಾ ಮೃತ್ಯುಂಜಯ ಮಂತ್ರ

ಮಹಾ ಮೃತ್ಯುಂಜಯ ಮಂತ್ರ ಶಿವನಿಗೆ ಸಂಬಂಧಿಸಿದ್ದು. ಈ ಶಕ್ತಿಶಾಲಿ ಮಂತ್ರವನ್ನು ಪಠಿಸುವುದರಿಂದ ಭಯ, ಅನಾರೋಗ್ಯ ಮತ್ತು ಗ್ರಹ ಬಾಧೆಗಳಿಂದ ಮುಕ್ತಿ ಪಡೆಯಬಹುದು.

ಓಂ ಸೂರ್ಯಾಯ ನಮಃ

'ಓಂ ಸೂರ್ಯನಮಃ' ಮಂತ್ರವನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಇದು ಸೂರ್ಯನಿಗೆ ಸಮರ್ಪಿಸಲಾಗಿದೆ. ಆತ್ಮವಿಶ್ವಾಸ, ಚೈತನ್ಯ, ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಸೂರ್ಯ ದೋಷ ಇರುವವರು ಉತ್ತಮ ಫಲಿತಾಂಶಕ್ಕಾಗಿ ಈ ಮಂತ್ರವನ್ನು ಪಠಿಸಬಹುದು.

ಓಂ ರಾಹವೇ ನಮಃ

ರಾಹುವಿನ ಆಶೀರ್ವಾದ ಪಡೆಯಲು, ರಾಹುವಿನ ದುಷ್ಪರಿಣಾಮಗಳನ್ನು ತಡೆಯಲು ಈ ಮಂತ್ರವನ್ನು ಪಠಿಸುವುದು ಒಳ್ಳೆಯದು.

ಓಂ ಕೇತವೇ ನಮಃ

ನೆರಳು ಗ್ರಹಗಳಲ್ಲಿ ಒಂದಾದ ಕೇತುವಿನ ಪರಿಣಾಮಗಳನ್ನು ತಡೆಯಲು ಓಂ ಕೇತವೇ ನಮಃ ಎಂಬ ಮಂತ್ರ ಬಹಳ ಸಹಕಾರಿಯಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.