Makar Sankranti 2024: ಜೀವನದ ಯಶಸ್ಸಿಗಾಗಿ ಮಕರ ಸಂಕ್ರಾಂತಿ ದಿನ ಯಾರು ಯಾವ ಮಂತ್ರ ಪಠಿಸಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Makar Sankranti 2024: ಜೀವನದ ಯಶಸ್ಸಿಗಾಗಿ ಮಕರ ಸಂಕ್ರಾಂತಿ ದಿನ ಯಾರು ಯಾವ ಮಂತ್ರ ಪಠಿಸಬೇಕು

Makar Sankranti 2024: ಜೀವನದ ಯಶಸ್ಸಿಗಾಗಿ ಮಕರ ಸಂಕ್ರಾಂತಿ ದಿನ ಯಾರು ಯಾವ ಮಂತ್ರ ಪಠಿಸಬೇಕು

ಮಕರ ಸಂಕ್ರಾಂತಿ ಹಬ್ಬದ ದಿನದಂದು ಯಾವ ರಾಶಿಯವರು ಯಾವ ಪಠಣಗಳನ್ನು ಪಠಿಸಿದರೆ ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಅನ್ನೋದರ ವಿವರ ಇಲ್ಲಿದೆ.

ಸೂರ್ಯ ದೇವರು
ಸೂರ್ಯ ದೇವರು

ಬೆಂಗಳೂರು: ವರ್ಷದ ಮೊದಲ ತಿಂಗಳು ಹಿಂದೂಗಳಿಗೆ ತುಂಬಾ ವಿಶೇಷವಾಗಿದೆ. ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ (Makara Sankranti 2024) ಕೂಡ ಇದೇ ತಿಂಗಳಲ್ಲಿ ಬರುತ್ತದೆ. ಸಂಕ್ರಾಂತಿ ದಿನದಂದು ಸೂರ್ಯನು (Sun) ಮಕರ ರಾಶಿಯಲ್ಲಿ ಸಾಗುತ್ತಾನೆ. ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವೂ ಆಗಿದೆ.

ಇದರ ಪ್ರಕಾರ ಮೊದಲ ಆರು ತಿಂಗಳು ಕಾಲ ಉತ್ತರಾಯಣವಾಗಿದ್ದು, ಈ ಆರು ತಿಂಗಳ ಕಾಲ ಬೆಳಕು ಹೆಚ್ಚಾಗಿರುತ್ತದೆ. ಉಳಿದ ಆರು ತಿಂಗಳ ಕಾಲ ಅಂದರೆ ಜೂನ್‌ 15 ರಿಂದ ದಕ್ಷಿಣಾಯಣ ಆರಂಭವಾಗುತ್ತದೆ. ಆಗ ಬೆಳಕು ಕಡಿಮೆ ಇರುತ್ತದೆ. ಪುರಾಣದ ಪ್ರಕಾರ ಉತ್ತರಾಣಯದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಹಬ್ಬವು ಸೂರ್ಯ ದೇವರಿಗೆ ಸಂಬಂಧಿಸಿದ್ದಾಗಿದೆ. ನಿಮ್ಮ ಜೀವನದಲ್ಲಿ ಸೂರ್ಯನ ಪ್ರಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಏಕೆಂದರೆ ಇದು ಸಮಾಜದಲ್ಲಿ ನಿಮ್ಮ ಸ್ಥಾನಮಾನ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ನಿಮ್ಮ ತಂದೆಯ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ. ಮತ್ತೊಂದೆಡೆ ನಿಮ್ಮ ಜಾತಕದಲ್ಲಿ ಸೂರ್ಯನ ದುರ್ಬಲ ಸ್ಥಾನವು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ ಮಂಗಳಕರಕ್ಕಾಗಿ ಸೂರ್ಯ ದೇವರ ಮಂತ್ರಗಳನ್ನು ಪಠಿಸಬೇಕು ಎಂದು ಜ್ಯೋತಿಷ್ಯರು ಹೇಳುತ್ತಾರೆ. ಮಕರ ಸಂಕ್ರಾಂತಿ ಹಬ್ಬದಂದು ನೀವು ಯಾವ ಪಠಣಗಳನ್ನು ಪಠಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಅದಕ್ಕೂ ಮುನ್ನ ಸೂರ್ಯ ದೇವನಿಗೆ ಪೂಜೆ ಮಾಡುವ ವಿಧಾನಗಳನ್ನು ತಿಳಿಯಿರಿ.

ಸೂರ್ಯ ದೇವನಿಗೆ ಪೂಜಾ ಮಾಡುವ ವಿಧಾನ

ಮಕರ ಸಂಕ್ರಾಂತಿ ಹಬ್ಬದ ದಿನದಂದು ಬ್ರಹ್ಮ ಮುಹೂರ್ತದ ಸಮಯದಲ್ಲಿ ಮುಂಜಾನೆ ಸ್ನಾನ ಮಾಡಿ, ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಗಂಗಾಜಲ, ಅಕ್ಷತೆ, ಕೆಂಪು ಚಂದನ, ಹೂಗಳನ್ನು ಮತ್ತು ಬೆಲ್ಲದ ನೀರನ್ನು ಸೂರ್ಯನಿಗೆ ಅರ್ಪಿಸಿಬೇಕು. ಆ ನಂತರ 21 ಬಾರಿ 'ಓಂ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಜಪಿಸಬೇಕು. ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಇದೇ ದಿನ ಉಪವಾಸ ದಿಂದ ಪೂಜೆ ಮಾಡುವುದು ತುಂಬಾ ಮಂಗಳಕರವಾಗಿರುತ್ತದೆ ಎಂದು ಪಂಡಿತರು ಹೇಳುತ್ತಾರೆ.

ಸೂರ್ಯದೇವ ಮಂತ್ರ

ನಿಮ್ಮ ಜೀವನದಲ್ಲಿ ಎಲ್ಲಾ ದುಃಖ, ನೋವುಗಳನ್ನು ಹೆೋಗಲಾಡಿಸಬೇಕಾದರೆ 11 ಬಾರಿ 'ಓಂ ಹ್ರೀಂ ಹ್ರೀಂ ಸೂರ್ಯಃ ಸಹಸ್ತಕಿರಣರೈ ಮನೋವಂಚಿತ್ ಫಲಂ ದೇಹಿ ದೇಹಿ ಸ್ವಾಹಾ' ಎಂಬ ಮಂತ್ರವನ್ನು ಜಪಿಸಿ. ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವಾಗ 'ಓಂ ಹಾಂ ಹೀಂ ಹೋಂ ಸಃ ಸೂರ್ಯಾಯ ನಮಃ' ಎಂದು ಜಪಿಸಿರಿ.

21 ಬಾರಿ 'ಓಂ ಅಹಿ ಸೂರ್ಯ ಸಹಸ್ತ್ರಾಂಶೋಂ ತೇಜೋ ರಾಶಿ ಜಗತ್ಪತೇ, ಅನುಕಂಪಯೇಮ ಭಕ್ತ್ಯಾ, ಗೃಹಾಣಾರ್ಘಯ ದಿವಾಕರಃ' ಎಂದು ಪಠಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ರಾಶಿಗಳ ಆಧಾರದ ಮೇಲೆ ಸಂಕ್ರಾಂತಿ ಹಬ್ಬದಂದು ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕು ಅನ್ನೋದನ್ನ ತಿಳಿಯಿರಿ

ರಾಶಿ ಚಕ್ರಗಳ ಆಧಾರದ ಮೇಲೆ ಪಠಿಸಬೇಕಾದ ಮಂತ್ರಗಳು

ಮೇಷ ರಾಶಿ - ಓಂ ಅಚಿಂತಾಯ ನಮಃ

ವೃಷಭ ರಾಶಿ - ಓಂ ಅರುಣಾಯ ನಮಃ

ಮಿಥುನ ರಾಶಿ - ಓಂ ಆದಿಭೂತಾಯ ನಮಃ

ಕರ್ಕಾಟಕ ರಾಶಿ - ಓಂ ವಸುಪ್ರದಾಯ ನಮಃ

ಸಿಂಹ ರಾಶಿ - ಓಂ ಭನ್ವೇ ನಮಃ

ಕನ್ಯಾ ರಾಶಿ - ಓಂ ಶಾಂತಾಯ ನಮಃ

ತುಲಾ ರಾಶಿ - ಓಂ ಇಂದ್ರಾಯ ನಮಃ

ವೃಶ್ಚಿಕ ರಾಶಿ - ಓಂ ಆದಿತ್ಯಾಯ ನಮಃ

ಧನು ರಾಶಿ - ಓಂ ಶರ್ವಾಯ ನಮಃ

ಮಕರ ರಾಶಿ - ಓಂ ಸಹಸ್ತ್ರ ಕಿರಣಾಯ ನಮಃ

ಕುಂಭ ರಾಶಿ - ಓಂ ಬ್ರಹ್ಮಣೇ ದಿವಾಕರ ನಮಃ

ಮೀನ ರಾಶಿ - ಓಂ ಜಾಯೇನೇ ನಮಃ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.