Chinese Astrology: ನೀರು, ಬೆಂಕಿ ಸೇರಿದಂತೆ ಚೀನಿ ಜ್ಯೋತಿಷ್ಯದ ಈ 5 ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
Chinese Astrology: ಜಗತ್ತಿನ ಪ್ರಸಿದ್ಧ ಜ್ಯೋತಿಷ್ಯ ಪ್ರಕಾರಗಳಲ್ಲಿ ಚೀನಿ ಜ್ಯೋತಿಷ್ಯ ಕೂಡ ಒಂದಾಗಿದ್ದು ಇದರಲ್ಲಿ 5 ಪ್ರಮುಖ ಅಂಶಗಳು ಪಾತ್ರ ವಹಿಸುತ್ತವೆ. ಅವುಗಳನ್ನು ನೀರು, ಕಟ್ಟಿಗೆ, ಬೆಂಕಿ, ಭೂಮಿ ಹಾಗೂ ಲೋಹ ಎಂದು ವರ್ಗೀಕರಿಸಬಹುದಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಈ ಐದು ವಸ್ತುಗಳಲ್ಲಿರುವ ಗುಣಗಳಿಗೆ ಹೋಲಿಕೆಯನ್ನು ಹೊಂದಿರುತ್ತದೆ.
Chinese Astrology: 5 ಪ್ರಮುಖ ಗ್ರಹಗಳಾದ ಗುರು, ಶುಕ್ರ, ಶನಿ, ಮಂಗಳ ಹಾಗೂ ಬುಧ ಇವುಗಳು ಈ ಐದು ಅಂಶಗಳನ್ನು ಪ್ರತಿನಿಧಿಸುತ್ತವೆ, ಈ ಗ್ರಹಗಳು ಹಾಗೂ ಅವುಗಳಿಗೆ ಸಂಬಂಧಿಸಿದ ವಸ್ತುವನ್ನು ಆಧರಿಸಿ ಒಬ್ಬ ಪುರುಷ ಹಾಗೂ ಮಹಿಳೆಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.
ಕಟ್ಟಿಗೆಯು ಭೂಮಿಯ ಮೇಲೆ ಆಳ್ವಿಕೆ ನಡೆಸುತ್ತದೆ. ಭೂಮಿಯು ನೀರಿನ ಮೇಲೆ ಆಳ್ವಿಕೆ ನಡೆಸುತ್ತದೆ. ನೀರು ಬೆಂಕಿಯ ಮೇಲೆ ಆಳ್ವಿಕೆ ನಡೆಸುತ್ತದೆ ಹಾಗೂ ಬೆಂಕಿ ಲೋಹದ ಮೇಲೆ ಆಳ್ವಿಕೆ ನಡೆಸುತ್ತದೆ. ಹೀಗಾಗಿ ಒಂದೊಂದು ಅಂಶವು ಯಾವ ರೀತಿಯ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ನೀರು
ಮುಖ್ಯ ಗುಣಗಳು : ಉದಾರಿ ಹಾಗೂ ಬುದ್ಧಿವಂತ
ಬಣ್ಣ : ಕಪ್ಪು ಹಾಗೂ ಗಾಢ ನೀಲಿ
ದಿಕ್ಕು : ಉತ್ತರ
ಚಿತ್ರ : ಆಮೆ
ಇವರು ನೀರಿನ ಗುಣವನ್ನೇ ಹೊಂದಿರುತ್ತಾರೆ. ಎಲ್ಲವನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹಾಗೂ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ಜೊತೆಗೆ ಇರುವವರ ಮೇಲೆ ಪ್ರಭಾವ ಬೀರುವಲ್ಲಿ ಇವರು ಯಶಸ್ವಿಯಾಗುತ್ತಾರೆ. ಆರನೇ ಇಂದ್ರಿಯದ ಮಾತನ್ನು ಕೇಳುವ ಇವರು ಅದನ್ನು ಆಧರಿಸಿಯೇ ಕೆಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ತಮ್ಮ ಪ್ರತಿಭೆಯನ್ನು ಇನ್ನೊಬ್ಬರ ಎದುರು ಸುಲಭವಾಗಿ ಪ್ರದರ್ಶಿಸಬಲ್ಲರು. ಇವರು ಇನ್ನೊಬ್ಬರ ಕಠಿಣ ಶ್ರಮವನ್ನು ಗುರುತಿಸಿ ಪ್ರಶಂಸೆ ಮಾಡುವ ಗುಣವನ್ನು ಹೊಂದಿರುವದರಿಂದ ಇವರ ನಾಯಕತ್ವ ಎಲ್ಲರಿಗೂ ಇಷ್ಟವಾಗುತ್ತದೆ.
ಕಟ್ಟಿಗೆ
ಮುಖ್ಯ ಗುಣಗಳು : ಸೌಹಾರ್ದತೆ
ಬಣ್ಣ : ತಿಳಿ ನೀಲಿ ಹಾಗೂ ಹಸಿರು
ದಿಕ್ಕು : ಪೂರ್ವ ಹಾಗೂ ಆಗ್ನೇಯ
ಚಿತ್ರ :ಡ್ರ್ಯಾಗನ್
ಕಟ್ಟಿಗೆ ಶಕ್ತಿಶಾಲಿ ಕೂಡ ಹೌದು ಅಷ್ಟೇ ದುರ್ಬಲ ಮತ್ತು ಸೂಕ್ಷ್ಮ ಕೂಡ ಹೌದು. ಇವರು ಯಾವುದೇ ಉದ್ಯಮ ಅಥವಾ ಗುಂಪಿನ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಿಂತ ತಮ್ಮೊಡನೆ ಇರುವವರ ಅಭಿಪ್ರಾಯಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಇವರು ತುಂಬಾ ದಯಾಗುಣ ಹಾಗೂ ದಾನ ಮಾಡುವ ಗುಣ ಹೊಂದಿರುವ ಕಾರಣ ಎಲ್ಲರಿಗೂ ಇವರು ಇಷ್ಟವಾಗುತ್ತಾರೆ.
ಇವರ ಆಸಕ್ತಿಗಳು ಬಹಳ ಚೆನ್ನಾಗಿ ಇರುತ್ತದೆ. ಇವರು ಉತ್ತಮ ಸ್ನೇಹಿತರನ್ನು ಹೊಂದಿರುತ್ತಾರೆ. ಇವರಿಗೆ ನಾಯಕತ್ವದ ಗುಣ ತುಂಬಾ ಚೆನ್ನಾಗಿ ಇರುತ್ತದೆ. ತಮಗೆ ಅವಶ್ಯಕತೆಯಿದ್ದಾಗ ಇವರಿಗೆ ಎಲ್ಲಿಂದಾದರೂ ಆರ್ಥಿಕ ಸಹಾಯ ದೊರಕಿಬಿಡುತ್ತದೆ.
ಬೆಂಕಿ
ಮುಖ್ಯ ಗುಣಗಳು : ಪ್ರಕಾಶಮಾನ ಹಾಗೂ ವಿಷಯಗಳ ಮೇಲೆ ಆಸಕ್ತಿ
ಬಣ್ಣ : ಕೇಸರಿ, ಕೆಂಪು, ಗುಲಾಬಿ ಹಾಗೂ ನೇರಳೆ
ದಿಕ್ಕು : ದಕ್ಷಿಣ
ಚಿತ್ರ : ಫೀನಿಕ್ಸ್
ಇವರಿಗೆ ಇವರು ಮಾಡುವ ಕೆಲಸಗಳ ಮೇಲೆ ನಂಬಿಕೆ ಹಾಗೂ ನಿರ್ಣಾಯಕ ಪಾತ್ರಗಳನ್ನು ಹೊಂದುತ್ತಾರೆ. ಇವರು ಕ್ರಿಯಾತ್ಮಕವಾಗಿ ಯೋಚಿಸುತ್ತಾರೆ, ಧೈರ್ಯಶಾಲಿಗಳು ಅಲ್ಲದೇ ಹುಟ್ಟಿನಿಂದ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಯಾವಾಗಲೂ ಒಂದಿಲ್ಲೊಂದು ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ತುಂಬಾನೇ ಇಷ್ಟ. ತಮ್ಮ ಬುದ್ಧಿವಂತಿಕೆಯ ಮೂಲಕ ಇವರು ಯಾವಾಗಲೂ ಇತರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ. ಸವಾಲುಗಳನ್ನು ಎದುರಿಸುವುದನ್ನು ಇಷ್ಟ ಪಡುತ್ತಾರೆ. ಒಂದು ರೀತಿಯಲ್ಲಿ ಆಕ್ರಮಣಶೀಲರು. ಇದನ್ನು ಕಡಿಮೆ ಮಾಡಿಕೊಳ್ಳಲು ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ.
ಭೂಮಿ
ಮುಖ್ಯ ಗುಣಗಳು : ವಿಶ್ವಾಸಾರ್ಹ, ಸ್ಥಿರ ಮತ್ತು ಯಾವುದಕ್ಕೂ ಮಣಿಯಲಾರರು
ಬಣ್ಣ : ಕಂದು ಮತ್ತು ಹಳದಿ,
ದಿಕ್ಕು :ನೈಋತ್ಯ ಮತ್ತು ಈಶಾನ್ಯ
ಚಿಹ್ನೆ :ಸಾಮ್ರಾಟ
ಇವರು ಗಂಭೀರ ಹಾಗೂ ಅಚ್ಚುಕಟ್ಟು ಸ್ವಭಾವವನ್ನು ಹೊಂದಿರುತ್ತಾರೆ. ದೂರದೃಷ್ಟಿ ತುಂಬಾನೇ ಚೆನ್ನಾಗಿ ಇರುತ್ತದೆ. ಬುದ್ಧಿವಂತರೂ ಕೂಡ ಹೌದು.ಒಳ್ಳೆಯ ಫಲಿತಾಂಶಕ್ಕಾಗಿ ಯಾವ ಕೆಲಸದ ಮೇಲೆ ಗಮನಹರಿಸಬೇಕು ಎಂಬುದರ ಬಗ್ಗೆ ಇವರಿಗೆ ಯೋಚನೆ ಚೆನ್ನಾಗಿ ಇರುತ್ತದೆ. ಆರ್ಥಿಕತೆಯ ವಿಚಾರಕ್ಕೆ ಬರುವುದಾದರೆ ಸಮರ್ಥವಾಗಿ ನಿಭಾಯಿಸಬಲ್ಲರು ಹಾಗೂ ಅತಿಯಾದ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಎಲ್ಲಾ ವಿಷಯಗಳ ಮೇಲೆ ಅವರ ಸ್ಥಿರತೆ, ಶಿಸ್ತು, ತೀರ್ಪು ನೀಡುವ ರೀತಿ ಹಾಗೂ ವಿಶ್ವಾಸಾರ್ಹತೆ ಎಲ್ಲರಿಗೂ ಇಷ್ಟವೆನಿಸುತ್ತದೆ.
ಲೋಹ
ಮುಖ್ಯ ಗುಣಗಳು : ಚುರುಕು ಹಾಗೂ ಸ್ಥಿರ
ಬಣ್ಣ : ಬೆಳ್ಳಿ, ಬಂಗಾರ ಹಾಗೂ ಬಿಳಿ
ದಿಕ್ಕು : ವಾಯುವ್ಯ ಹಾಗೂ ಪಶ್ಚಿಮ
ಚಿಹ್ನೆ : ಹುಲಿ
ಲೋಹದ ಗುಣ ಹೇಗೆಂದರೆ ಇದು ಬಲಿಷ್ಠ, ಪ್ರಾಯೋಗಿಕ ಹಾಗೂ ಗುರಿಯ ಕಡೆಗೆ ಗಮನ ಇರುತ್ತದೆ . ಇವರು ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುವಲ್ಲಿ ನಿಸ್ಸೀಮರು. ನಿರಾಶೆಗಳು, ಅಡೆತಡೆಗಳು ಹಾಗೂ ದುರಾದೃಷ್ಟಗಳ ನಡುವೆಯೂ ತಮ್ಮ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ತಮಗೆ ಸರಿ ಎನಿಸಿಲ್ಲವೆಂದರೆ ಅದನ್ನು ಬದಲಾಯಿಸುತ್ತಾರೆ.