ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏರುಪೇರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ; ಇಂದಿನ ದಿನ ಭವಿಷ್ಯ

Horoscope Today: ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏರುಪೇರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ; ಇಂದಿನ ದಿನ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಗುರುವಾರದ ರಾಶಿಭವಿಷ್ಯ.

ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏರುಪೇರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ; ಇಂದಿನ ದಿನ ಭವಿಷ್ಯ
ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏರುಪೇರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ; ಇಂದಿನ ದಿನ ಭವಿಷ್ಯ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ಗ್ರೀಷ್ಮ ಋತು - ಜ್ಯೇಷ್ಠ ಮಾಸ- ಶುಕ್ಲ ಪಕ್ಷ -ಗುರುವಾರ

ತಿಥಿ : ದ್ವಾದಶಿ ಬೆ.10.56 ರವರೆಗೆ ಇದ್ದು ಆನಂತರ ತ್ರಯೋದಶಿ ಆರಂಭವಾಗುತ್ತದೆ.

ನಕ್ಷತ್ರ : ಸ್ವಾತಿ ನಕ್ಷತ್ರವು ಬೆ.ಝಾ.05.06 ರವರೆಗೆ ಇದ್ದು ಆನಂತರ ವಿಶಾಖ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ. 05.52

ಸೂರ್ಯಾಸ್ತ: ಸ.6.42

ರಾಹುಕಾಲ: ಮ.01.56 ರಿಂದ ಮ.03.32

ರಾಶಿ ಫಲಗಳು

ಮೇಷ

ವಿವಾಹಕ್ಕೆ ಸಂಬಂಧಿಸಿದ ಅಡೆತಡೆ ನಿವಾರಣೆಯಾಗುವುದು. ಉದ್ಯೋಗದಲ್ಲಿ ನಿರಾಸಕ್ತಿ ಇರುತ್ತದೆ. ಆಧ್ಯಾತ್ಮಿಕತೆಗೆ ಮಾರುಹೋಗುವಿರಿ. ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವಿರಿ. ಕಿರಿಯ ಅಧಿಕಾರಿಗಳ ಬೆಂಬಲವಿರುತ್ತದೆ. ವಿದ್ಯಾರ್ಥಿಗಳು ಸಹಜವಾಗಿ ಕಲಿಕೆಯಲ್ಲಿ ಮುಂದಿರುತ್ತಾರೆ. ದೈಹಿಕವಾಗಿ ಸದೃಢತೆ ಇರುವುದಿಲ್ಲ. ಭೂ ಸಂಬಂಧಿತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಹಳೆಯ ಕಾಲದ ಮನೆಯನ್ನು ಕೊಳ್ಳುವಿರಿ. ಕೃಷಿ ಆಧಾರಿತ ವ್ಯಾಪಾರದಲ್ಲಿ ಲಾಭವಿದೆ. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವ್ಯವಹಾರವನ್ನು ಆರಂಭಿಸುವ ಸಾಧ್ಯತೆ ಇದೆ ಬೇವಿನ ಮರಕ್ಕೆ ನೀರು ಹಾಕಿದ ನಂತರ ದಿನದ ಕೆಲಸ ಆರಂಭಿಸಿ.

ವೃಷಭ

ಭೂ ವಿವಾದ ಒಂದು ಎದುರಾಗುತ್ತದೆ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಬಾರದು. ಕೆಲಸ ಕಾರ್ಯಗಳು ನೀವು ಊಹಿಸಿದಂತೆ ನಡೆಯುತ್ತವೆ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ಪರಸ್ಪರಕ್ಕೆ ತೆರಳಬೇಕಾಗುತ್ತದೆ. ಮಹಿಳೆಯರಿಗೆ ಬೇಕಾದ ಸೌಂದರ್ಯ ಸಾಧನಗಳ ವ್ಯಾಪಾರದಲ್ಲಿ ಲಾಭವಿದೆ. ಮಹಿಳೆಯರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡುವಿರಿ. ಅನಿರೀಕ್ಷಿತ ಧನ ಲಾಭ ಇರುತ್ತದೆ. ಕಾನೂನು ರೀತ್ಯ ತಂದೆಯವರ ಭೂವಿವಾದದಲ್ಲಿ ಜಯ ಲಭಿಸುತ್ತದೆ. ಜೇನು ಸೇವಿಸಿ ನೀರು ಕುಡಿದು ದಿನದ ಕೆಲಸ ಆರಂಭಿಸಿ .

ಮಿಥುನ

ಅನಿರೀಕ್ಷಿತ ಧನಲಾಭದಿಂದ ಕುಟುಂಬದ ಹಣದ ಕೊರತೆ ಕಡಿಮೆಯಾಗುತ್ತದೆ. ಸೋದರಿಯ ಕೌಟುಂಬಿಕ ಸಮಸ್ಯೆ ನಿವಾರಣೆ ಆಗುತ್ತದೆ. ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಹಣವನ್ನು ನಿರೀಕ್ಷಿಸಬಹುದು. ಮನೆಯಲ್ಲಿ ವೈರಾಗ್ಯದ ಭಾವನೆ ಉಂಟಾಗುತ್ತದೆ. ಆತ್ಮೀಯರೊಂದಿಗೆ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ತಂದೆಯವರ ವ್ಯಾಪಾರ ವ್ಯವಹಾರದಲ್ಲಿ ಸಹಾಯ ಮಾಡುವಿರಿ. ವಯಸ್ಸು ಚಿಕ್ಕದಾದರೂ ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಮಗೆ ದೊರೆಯುತ್ತದೆ. ಹೈನುಗಾರಿಕೆಯ ವ್ಯಾಪಾರ ಮಧ್ಯಮ ಗತಿಯಲ್ಲಿ ಸಾಗುತ್ತದೆ ಸೋದರದ ಮಕ್ಕಳಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಕಟಕ

ಸಮಾಜದಲ್ಲಿ ಅತ್ಯುನ್ನತ ಗೌರವಾದರಗಳು ದೊರೆಯುತ್ತವೆ. ಸಹನೆಯ ಕೊರತೆ ಉಂಟಾಗಿ ವಿವಾದಕ್ಕೆ ಕಾರಣರಾಗುವಿರಿ. ಆತ್ಮೀಯರ ಜೊತೆ ಹಣಕಾಸಿನ ವ್ಯವಹಾರ ಬೇಡ. ಉದ್ಯೋಗದಿಂದ ವರ್ತಿಸುವುದು. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಾಯವಿರುತ್ತದೆ. ಸೋದರನ ಮನಸ್ಸನ್ನು ಅರಿಯದೆ ಅಪಾರ್ಥ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ನಿರೀಕ್ಷಿಸಿದ ಫಲಿತಾಂಶ ಪಡೆಯುತ್ತಾರೆ. ಕಲಾವಿದರಿಗೆ ವಿಶೇಷ ಅವಕಾಶ ದೊರೆಯುತ್ತದೆ. ಆರೋಗ್ಯದ ಕಡೆ ಗಮನವಿರಲಿ. ಬೇಕರಿ ಅಥವಾ ಹೋಟೆಲ್ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ಸತ್ಪುರುಷರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳನ್ನು ಮುಂದುವರೆಸಿ

ಸಿಂಹ

ಮಾನಸಿಕ ಒತ್ತಡವಿದ್ದರು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಉನ್ನತ ಶ್ರೇಣಿಯನ್ನು ಗಳಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡುವವರು. ಮನಸಿದ್ದಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬಹುದು. ನಿಮ್ಮ ತಾಯಿಯವರಿಗೆ ವಿಚಾರವೊಂದರಲ್ಲಿ ಮಾನಸಿಕ ಒತ್ತಡವಿರುತ್ತದೆ. ಕೃಷಿ ಆಧಾರಿತ ಕೆಲಸವನ್ನು ಮಾಡುವಿರಿ. ಆರೋಗ್ಯದಲ್ಲಿ ಏರಿಳಿತಗಳು ಕಂಡು ಬರುತ್ತವೆ. ಆತ್ಮೀಯರೊಂದಿಗೆ ಹಣಕಾಸಿನ ವ್ಯವಹಾರವನ್ನು ಮಾಡಬೇಕಾಗಬಹುದು. ಪೂರ್ವ ದಿಕ್ಕಿನಲ್ಲಿರುವ ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿದ ನಂತರ ದಿನದ ಕೆಲಸ ಆರಂಭಿಸಿ.

ಕನ್ಯಾ

ಕುಟುಂಬದ ಸದಸ್ಯರ ಜೊತೆಯಲ್ಲಿ ವಿದೇಶಕ್ಕೆ ತೆರಳುವಿರಿ. ಕುಟುಂಬದಲ್ಲಿ ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ನೀರಿನೊಂದಿಗೆ ಚೆಲ್ಲಾಟ ಆಡದಿರಿ. ತಾಯಿಯವರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಕಷ್ಟದಲ್ಲಿ ಇದ್ದವರಿಗೆ ಅನ್ನದಾನದ ವ್ಯವಸ್ಥೆ ಮಾಡುವಿರಿ. ನಿಮಗೆ ನರದ ನಿಶ್ಚಕ್ತಿ ಉಂಟಾಗಬಹುದು. ವಿದ್ಯಾರ್ಥಿಗಳು ಉನ್ನತ ಮಟ್ಟವನ್ನು ತಲುಪುತ್ತಾರೆ. ಕಾನೂನು ಸಲಹೆ ನೀಡುವ ಕೇಂದ್ರವನ್ನು ಆರಂಭಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಕುಟುಂಬದ ಹಿರಿಯರ ಆಶೀರ್ವಾದ ಪಡೆದು ದೈನಂದಿನ ಕೆಲಸ ಆರಂಭಿಸಿ.

ತುಲಾ

ರಕ್ತ ಪರಿಚಲನೆಯಲ್ಲಿ ಏರಿಳಿತ ಇರುತ್ತದೆ. ಹಠ ಮತ್ತು ಛಲದ ಬುದ್ಧಿಯಿಂದ ವಿವಾದಕ್ಕೆ ಒಳಗಾಗುವಿರಿ. ಕೊಂಚವೂ ಯೋಚಿಸದೆ ಉದ್ವೇಗದಿಂದ ಮಾತನಾಡುವಿರಿ. ಕೇವಲ ದೊಡ್ಡ ಮಟ್ಟದ ವ್ಯಕ್ತಿಗಳ ಜೊತೆ ಸ್ನೇಹವನ್ನು ಬೆಳೆಸುವಿರಿ. ಉದ್ಯೋಗದಲ್ಲಿ ಸಹನೆಯಿಂದ ಎಲ್ಲರೊಂದಿಗೆ ವರ್ತಿಸಿ. ವಿದ್ಯಾಭ್ಯಾಸದಲ್ಲಿ ಆತಂಕವಿದ್ದರೂ ತೊಂದರೆಯಾಗದು. ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸುವಿರಿ . ತಂದೆಯವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಸಹಾಯ ಮಾಡುವಿರಿ. ತಾಯಿಯವರಿಂದ ಹಣವನ್ನು ಪಡೆದು ಬಳಿಯಲಿಟ್ಟುಕೊಂಡಲ್ಲಿ ಶುಭ ಉಂಟಾಗುತ್ತದೆ.

ವೃಶ್ಚಿಕ

ಪರಿಚಯದವರೊಂದಿಗೆ ವಿವಾಹದ ಮಾತುಕತೆ ನಡೆಯುತ್ತದೆ. ಕೆಲವೊಮ್ಮೆ ವಿವೇಚನೆ ಇಲ್ಲದೆ ಮಾತನಾಡುವಿರಿ. ಆತುರದ ಬುದ್ದಿಯಿಂದ ಕುಟುಂಬದ ಶಾಂತಿ ಕಡಿಮೆಯಾಗುತ್ತದೆ. ಸ್ವಲ್ಪವೂ ಯೋಚನೆ ಮಾಡದೆ ಬೇರೆಯವರ ಮಾತನ್ನು ಕೇಳುವುದರಿಂದ ತೊಂದರೆಗೆ ಸಿಲುಕುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಸೋದರನ ಜೊತೆಗೂಡಿ ಜನಸಾರಿಗೆಯ ವ್ಯವಸ್ಥೆಯ ಉದ್ಯಮವನ್ನು ಆರಂಭಿಸುವಿರಿ. ಸೋದರಿಗೆ ವಿವಾಹ ಯೋಗವಿದೆ. ಭೂ ವಿವಾದದ ಮಧ್ಯಸ್ಥಿಕೆಯಿಂದ ವಿವಾದವನ್ನು ಎದುರಿಸಬೇಕಾಗುತ್ತದೆ. ನೀಲಿ ಬಟ್ಟೆಯನ್ನು ಧರಿಸಿದರೆ ಇಂದು ಶುಭ ಉಂಟಾಗುತ್ತದೆ.

ಧನಸ್ಸು

ಹಣಕಾಸಿನ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ವಿದ್ಯಾಭ್ಯಾಸದಲ್ಲಿ ಆತಂಕದ ಕ್ಷಣಗಳು ಎದುರಾಗಲಿವೆ. ಜನಸಾಮಾನ್ಯರಿಗೆ ಬೇಕಾದ ಆಪ್ತ ಸಲಹಾ ಕೇಂದ್ರವನ್ನು ಆರಂಭಿಸುವಿರಿ. ದೊಡ್ಡ ವಾಣಿಜ್ಯ ಸಂಸ್ಥೆಯ ಅಧಿಪತ್ಯ ದೊರೆಯುತ್ತದೆ. ಕೃಷಿ ಕಾರ್ಮಿಕರಿಗೆ ಶುಭವಿದೆ. ಸಿಡುಕುತನ ತೋರದೆ ಶಾಂತಿಯಿಂದ ಕೆಲಸ ಸಾಧಿಸುವಿರಿ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ದಿನಸಿ ಪದಾರ್ಥಗಳ ವ್ಯಾಪಾರವನ್ನು ಆರಂಭಿಸಿ ಯಶಸ್ಸನ್ನು ಗಳಿಸುವಿರಿ. ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿ ದಿನದ ಕೆಲಸ ಆರಂಭಿಸಿ.

ಮಕರ

ಎಲ್ಲರನ್ನೂ ಸಮಾನ ಮನಸ್ಸಿನಿಂದ ನೋಡುವ ಕಾರಣ ಸಮಾಜದ ಕೇಂದ್ರ ಬಿಂದುವಾಗುವಿರಿ. ವಿಶ್ರಾಂತಿ ಇಲ್ಲದೆ ಕಷ್ಟಪಟ್ಟು ಕೆಲಸ ನಿರ್ವಹಿಸಿ ಉದ್ಯೋಗದಲ್ಲಿ ಉತ್ತಮ ಹೆಸರನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಅದೃಷ್ಟವಿದೆ. ವಿದ್ಯುತ್ ಉಪಕರಣಗಳ ದುರಸ್ತಿ ಮತ್ತು ಸರಬರಾಜಿನ ವೃತ್ತಿಯಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಅತಿಯಾದ ಮಾತಿನಿಂದ ಮನಸ್ತಾಪ ಉಂಟಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಅವಶ್ಯವಾದ ಲೋಹದ ಪದಾರ್ಥಗಳ ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಕರಿ ಎಳ್ಳಿನಿಂದ ಮಾಡಿದ ಸಿಹಿ ತಿಂಡಿಯನ್ನು ಮಕ್ಕಳಿಗೆ ನೀಡಿ ದಿನದ ಕೆಲಸ ಆರಂಭಿಸಿ

ಕುಂಭ

ಜಗಳ ಕದನಗಳಿಗೆ ಆಸ್ಪದ ನೀಡದೆ ಬುದ್ಧಿವಂತಿಕೆಯಿಂದ ಕೆಲಸ ಸಾಧಿಸುವಿರಿ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ವಾಹನ ತಯಾರಿಕಾ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಉದ್ಯೋಗವು ಸುಗಮವಾಗಿ ನಡೆಯುತ್ತದೆ. ಕುಟುಂಬದಲ್ಲಿ ಅಶಾಂತಿಯ ಸನ್ನಿವೇಶ ಎದುರಾಗುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದಾಗಿ ಕಲಿಕೆಯಲ್ಲಿ ಮುಂದಿರುತ್ತಾರೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕಮಿಷನ್ ಆಧಾರಿತ ವ್ಯಾಪಾರ ದಿಂದ ಲಾಭವಿದೆ. ಬಿಳಿಯ ಬಟ್ಟೆಯನ್ನು ಧರಿಸಿ.

ಮೀನ

ಶಾಂತಿ ಸಂಯಮದಿಂದ ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಸುವ. ನಿಮ್ಮ ಮಾತುಗಳಿಂದ ಬೇರೆಯವರಿಗೆ ಬೇಸರವಾಗುತ್ತದೆ. ದೊಡ್ಡ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯ ಹುದ್ದೆ ದೊರೆಯುತ್ತದೆ. ಕುಟುಂಬದ ಸದಸ್ಯರೊಬ್ಬರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ನಿಮ್ಮ ಮಾತಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತದೆ. ಬಂಧು ಬಳಗದವರಿಂದ ದೂರವಿರುವಿರಿ. ಎದೆ ನೋವಿನಂತಹ ತೊಂದರೆ ನಿಮ್ಮನ್ನು ಕಾಡಬಹುದು. ಪಾಲುಗಾರಿಕೆ ವ್ಯಾಪಾರಬೇಡ. ಬೆಳ್ಳಿ ಲೋಟದಲ್ಲಿ ನೀರನ್ನು ಕುಡಿದಲ್ಲಿ ಶುಭ ಫಲಗಳು ದೊರೆಯುತ್ತವೆ.

ವಿಭಾಗ