ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಈ ರಾಶಿಯವರಿಗೆ ಯಶಸ್ಸಿನ ಜತೆಗೆ ವಿರೋಧಿಗಳೂ ಹೆಚ್ಚಲಿದ್ದಾರೆ, ನಿಮಗೆ ಮಾತೇ ಬಂಡವಾಳ; ಇಂದಿನ ದಿನ ಭವಿಷ್ಯ ಹೀಗಿದೆ

Horoscope Today: ಈ ರಾಶಿಯವರಿಗೆ ಯಶಸ್ಸಿನ ಜತೆಗೆ ವಿರೋಧಿಗಳೂ ಹೆಚ್ಚಲಿದ್ದಾರೆ, ನಿಮಗೆ ಮಾತೇ ಬಂಡವಾಳ; ಇಂದಿನ ದಿನ ಭವಿಷ್ಯ ಹೀಗಿದೆ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಗುರುವಾರದ ರಾಶಿಭವಿಷ್ಯ.

ಈ ರಾಶಿಯವರಿಗೆ ಯಶಸ್ಸಿನ ಜತೆಗೆ ವಿರೋಧಿಗಳೂ ಹೆಚ್ಚಲಿದ್ದಾರೆ, ನಿಮಗೆ ಮಾತೇ ಬಂಡವಾಳ; ಇಂದಿನ ದಿನ ಭವಿಷ್ಯ
ಈ ರಾಶಿಯವರಿಗೆ ಯಶಸ್ಸಿನ ಜತೆಗೆ ವಿರೋಧಿಗಳೂ ಹೆಚ್ಚಲಿದ್ದಾರೆ, ನಿಮಗೆ ಮಾತೇ ಬಂಡವಾಳ; ಇಂದಿನ ದಿನ ಭವಿಷ್ಯ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ಗ್ರೀಷ್ಮ ಋತು- ಜ್ಯೇಷ್ಠ ಮಾಸ- ಶುಕ್ಲ ಪಕ್ಷ- ಶುಕ್ರವಾರ

ತಿಥಿ: ತ್ರಯೋದಶಿ ಬೆ.10.44 ರವರೆಗೆ ಇದ್ದು ಆನಂತರ ಚತುರ್ದಶಿ ಆರಂಭವಾಗುತ್ತದೆ.

ನಕ್ಷತ್ರ: ವಿಶಾಖ ನಕ್ಷತ್ರವು ಬೆ.ಝಾ.05.16 ರವರೆಗೆ ಇದ್ದು ಆನಂತರ ಅನುರಾದ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ. 05.52

ಸೂರ್ಯಾಸ್ತ: ಸ.6.42

ರಾಹುಕಾಲ: ಬೆ.10.45 ರಿಂದ ಮ.12.21

ರಾಶಿ ಫಲಗಳು

ಮೇಷ

ಆತುರದಿಂದ ಆತಂಕದ ಪರಿಸ್ಥಿತಿಯನ್ನು ಎದುರಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿರಿ. ನಿಮ್ಮ ಮಾತಿನಿಂದ ಕುಟುಂಬದಲ್ಲಿ ಮಾತ್ರವಲ್ಲದೇ ಹೊರಗೂ ಬೇಸರವನ್ನು ಉಂಟು ಮಾಡಬಹುದು. ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪಿವಿರಿ. ಏಕಾಂಗಿಯಾಗಿ ಇರಲು ಬಯಸುವಿರಿ. ಶಾಂತಿ ಸಹನೆಯಿಂದ ವರ್ತಿಸಿ. ವಿದ್ಯಾರ್ಥಿಗಳು ಒಳ್ಳೆಯ ನಡವಳಿಕೆಯಿಂದ ಶಿಕ್ಷಕರ ಪ್ರೀತಿಯನ್ನು ಸಂಪಾದಿಸುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ. ಭೂ ವ್ಯವಹಾರದಲ್ಲಿ ಆತುರ ಬೇಡ. ದ್ರವವರೂಪದ ಆಹಾರದ ಮಾರಾಟದಲ್ಲಿ ಲಾಭವಿದೆ. ಹವಳವಿರುವ ಬೆಳ್ಳಿ ಸರವನ್ನು ಧರಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.

ವೃಷಭ

ಜೀವನದಲ್ಲಿ ಯಶಸ್ಸಿನ ಜೊತೆ ವಿರೋಧಿಗಳು ಹೆಚ್ಚುತ್ತಾರೆ. ಹಠ ಮತ್ತು ಛಲದ ಗುಣದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಮುನ್ನಡೆ ಇರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ತೆರಳ ಬೇಕಾಗುತ್ತದೆ. ಹೃದಯದ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡುವುದು ಒಳಿತು. ವಾಹನಗಳ ಬಿಡಿ ಭಾಗಗಳ ಮಾರಾಟದಲ್ಲಿ ಲಾಭ ಗಳಿಸುವಿರಿ. ಕುಟುಂಬದಲ್ಲಿನ ಹಿರಿಯರ ಒಡೆತನದಲ್ಲಿ ಇರುವ ಸಂಸ್ಥೆಯ ಜವಾಬ್ದಾರಿ ದೊರೆಯುತ್ತದೆ. ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ.

ಮಿಥುನ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ನಿಮ್ಮ ನೆರವಿನಿಂದ ಕುಟುಂಬದಲ್ಲಿ ಧಾರ್ಮಿಕ ಕಾರ್ಯವೊಂದು ನಡೆಯಲಿದೆ. ಉದ್ಯೋಗದಲ್ಲಿನ ಆತಂಕವೊಂದು ನಿವಾರಣೆಯಾಗುತ್ತದೆ. ಹಿರಿಯ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ಅನಾವಶ್ಯಕ ವಾದದಿಂದಾಗಿ ಸಹನೆ ಕಳೆದುಕೊಳ್ಳುವಿರಿ. ದಾಂಪತ್ಯದಲ್ಲಿ ಭಿನಾಭಿಪ್ರಾಯ ಇರುತ್ತದೆ. ವಿದ್ಯಾರ್ಥಿಗಳು ಹೊಣೆಯರಿತು ಅಧ್ಯಯನ ಮುಂದುವರಿಸುವರು. ವಿವಾಹದ ವಿಚಾರದಲ್ಲಿ ವಾದ ವಿವಾದಗಳು ಎದುರಾಗಲಿವೆ. ವ್ಯಾಪಾರ ಮತ್ತು ಹಣದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕಂತು ವ್ಯಾಪಾರದಲ್ಲಿ ಹಿನ್ನೆಡೆ ಇರುತ್ತದೆ. ಸುಟ್ಟ ಗಾಯದಿಂದ ಬಳಲುವ ಸಾಧ್ಯತೆಗಳಿವೆ. ದಂಪತಿಗಳಿಗೆ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಕಟಕ

ನ್ಯಾಯ ನೀತಿಯ ಬೋಧನೆಯಲ್ಲಿ ದಿನಗಳೆಯುವಿರಿ. ಜೀರ್ಣಾಂಗಕ್ಕೆ ಸಂಬಂಧಿಸಿದ ತೊಂದರೆ ಎದುರಾಗಲಿದೆ. ಯಾತ್ರಾ ಸ್ಥಳಕ್ಕೆ ಪ್ರವಾಸ ಏರ್ಪಡಿಸುವಿರಿ. ಹುಟ್ಟೂರಿನಲ್ಲಿ ಇರುವ ಧಾರ್ಮಿಕ ಕೇಂದ್ರವೊಂದರ ದುರಸ್ತಿಯ ಕಾರ್ಯಭಾರ ನಿಮದಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಇರುತ್ತದೆ. ಸೊಗಸಾದ ಮಾತಿನಿಂದ ಎಲ್ಲರ ಮನ ಗೆಲ್ಲುವಿರಿ. ವಿದ್ಯಾರ್ಥಿಗಳು ರಾಜತಾಂತ್ರಿಕ ವಿಚಾರದಲ್ಲಿ ಹೆಚ್ಚಿನ ಅಧ್ಯಯನ ಮಾಡುವರು. ಸಹಾಯವನ್ನು ಅರಸಿ ಬಂದವರಿಗೆ ನಿರಾಶೆ ಮಾಡುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ತಂದೆಯ ಆಶೀರ್ವಾದ ಪಡೆದ ನಂತರ ದಿನದ ಕೆಲಸ ಆರಂಭಿಸಿ.

ಸಿಂಹ

ಅಂತರ್ಜ್ಞಾನಶಕ್ತಿ ಇರುತ್ತದೆ. ಕೌಟುಂಬಿಕ ಜೀವನ ಸಂತಸದಾಯಕವಾಗಿರುತ್ತದೆ. ಅವಶ್ಯಕತೆ ಇದ್ದವರಿಗೆ ಮಾರ್ಗದರ್ಶನ ನೀಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಯುತ ಸ್ಥಾನ ಮಾನ ದೊರೆಯುತ್ತದೆ. ಸಮಾಜದ ಗಣ್ಯವ್ಯಕ್ತಿಗಳ ಸಹವಾಸ ದೊರೆಯುತ್ತದೆ. ರಾಜಕೀಯ ಸೇರುವ ಹಂಬಲವಿದ್ದಲ್ಲಿ ಅವಕಾಶವೊಂದು ದೊರೆಯುತ್ತದೆ. ವಿದ್ಯಾರ್ಥಿಗಳು ಗೌರವಯುತ ಮಟ್ಟ ತಲುಪಲಿದ್ದಾರೆ. ಕುಟುಂಬದ ಹಿರಿಯರೊಬ್ಬರ ಪಾಲುಗಾರಿಕೆಯಲ್ಲಿ ವ್ಯಾಪಾರವನ್ನು ಆರಂಭಿಸುವಿರಿ. ಸೋದರನ ದಾಂಪತ್ಯದ ತೊಂದರೆ ದೂರವಾಗಲು ಕಾರಣರಾಗುವಿರಿ. ವಂಶದಲ್ಲಿಯೇ ವಿಶೇಷವಾದ ಪ್ರತಿಷ್ಠಿತ ಸ್ಥಾನ ಮಾನ ದೊರೆಯುತ್ತದೆ. ಕೋತಿಗಳಿಗೆ ಆಹಾರ ನೀಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಕನ್ಯಾ

ಕುಟುಂಬದಲ್ಲಿ ಒತ್ತಡದ ವಾತಾವರಣ ಇರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಸಾಕು ಪ್ರಾಣಿಗಳಿಂದ ತೊಂದರೆ ಉಂಟಾಗಬಹುದು. ಉದ್ಯೋಗದ ವಿಚಾರದಲ್ಲಿ ಸಂತೃಪ್ತಿ ಇರುವುದಿಲ್ಲ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಆಗುತ್ತದೆ. ಕೃಷಿಯಾಧಾರಿತ ವೃತ್ತಿಯಲ್ಲಿ ನೆಮ್ಮದಿ ಇರುತ್ತದೆ. ಉದ್ಯೋಗ ಬದಲಾವಣೆಯ ಯೋಗವಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವರು. ಭೂವ್ಯವಹಾರಕ್ಕೆ ತಕ್ಕ ವೇಳೆಯಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಪರಸ್ಥಿತಿ ಎದುರಾಗುತ್ತದೆ. ಹೊಸ ವ್ಯಾಪಾರ ಆರಂಭಿಸದಿರಿ. ಈ ದಿನ ಹಸಿರು ಮತ್ತು ನೀಲಿ ಬಟ್ಟೆಗಳನ್ನು ಧರಿಸದಿರಿ.

ತುಲಾ

ಚುರುಕುತನದಿಂದ ಜೀವನದಲ್ಲಿ ಮುಂದುವರೆಯುವಿರಿ. ಬಂಧು ಬಳಗದಲ್ಲಿ ವಿಶೇಷ ಗೌರವ ಇರುತ್ತದೆ. ಕೃಷಿ ಭೂಮಿಯನ್ನು ಕೊಂಡು ಬೇಸಾಯವನ್ನು ಆರಂಭಿಸುವಿರಿ. ಹಣ್ಣುಗಳ ರಫ್ತು ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷವಾದ ಸ್ಥಾನ ಮಾನ ದೊರೆಯುತ್ತದೆ. ಭೂ ವಿವಾದವೊಂದು ಎದುರಾಗುತ್ತದೆ. ಪುಸ್ತಕ ಲೇಖಕರು ಮತ್ತು ಪ್ರಕಾಶಕರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕುಟುಂಬದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಮನಶಾಸ್ತ್ರಜ್ಞರಿಗೆ ವಿಶೇಷ ಉದ್ಯೋಗಾವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ.

ವೃಶ್ಚಿಕ

ಕುಟುಂಬಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡುವಿರಿ. ಸೋದರರಿಗೆ ಸೇರಿದ ಭೂ ವಿವಾದವನ್ನು ನಿಮ್ಮ ಸಂಧಾನದ ಫಲವಾಗಿ ಕೊನೆಗೊಳ್ಳುತ್ತದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ಆದಾಯಕ್ಕೆ ತಕ್ಕಂತೆ ಖರ್ಚು ವೆಚ್ಚಗಳು ಇರುತ್ತವೆ. ಸಂಗೀತ ನಾಟ್ಯ ಬಲ್ಲವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ರಕ್ತ ಸಂಬಂಧಿಕರ ಜೊತೆ ಉತ್ತಮ ಬಾಂಧವ್ಯ ಇರದು. ಆತ್ಮೀಯರೊಂದಿಗೆ ವಿವಾದ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಶುಭವರ್ತಮಾನವೊಂದು ಬರಲಿದೆ. ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಧನಸ್ಸು

ಕುಟುಂಬದಲ್ಲಿ ವಿವಾಹ ಕಾರ್ಯದ ಮಾತುಕತೆ ನಡೆಯುತ್ತದೆ. ಸುಲಭವಾಗಿ ಹಣವನ್ನು ಯಂತ್ರೋಪಕರಣಗಳ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಅತಿಯಾಗಿ ಖರ್ಚು ಮಾಡುವುದಿಲ್ಲ. ಸಂಗೀತ ನಾಟ್ಯದಲ್ಲಿ ಉತ್ತಮ ಅಭಿಋಚಿ ಇರುತ್ತದೆ. ಉದ್ಯೋಗದಲ್ಲಿ ಎದುರಾದ ಸಮಸ್ಯೆ ಬಗೆಹರಿಯುತ್ತದೆ. ಆತುರದ ನಿರ್ಧಾರಗಳಿಂದ ದೂರವಿರಿ. ಸಹಾಯ ಪಡೆದವರೊಬ್ಬರು ವಿರೋಧಿಗಳಾಗುತ್ತಾರೆ. ವಿದ್ಯಾರ್ಥಿಗಳಿಗೆ ಶುಭ ವರ್ತಮಾನವನ್ನು ದೊರೆಯಲಿದೆ. ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ದೊರೆಯುತ್ತದೆ. ವಿಶೇಷವಾದ ಗ್ರಹಣಶಕ್ತಿ ಇರುತ್ತದೆ. ಸೇಡಿನ ವ್ಯವಹಾರದಲ್ಲಿ ಲಾಭವಿದೆ. ಮನೆಯ ಮುಂಭಾಗದಲ್ಲಿರುವ ಹಳ್ಳಗಳನ್ನು ಸರಿಪಡಿಸಿ ದಿನದ ಕೆಲಸ ಆರಂಭಿಸಿ.

ಮಕರ

ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಸಹನೆ ಮತ್ತು ಬುದ್ದಿವಂತಿಕೆಯಿಂದ ವರ್ತಿಸಿದರೆ ಯಾವುದು ಅಸಾಧ್ಯವಲ್ಲ. ಕುಟುಂಬದ ಸದಸ್ಯರ ನಡುವೆ ಪರಸ್ಪರ ಅವಿಶ್ವಾಸ ಇರುತ್ತದೆ. ವಿದ್ಯಾರ್ಥಿಗಳು ಆರಂಭದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸಿದರೂ ತದನಂತರ ಶುಭಫಲಗಳನ್ನು ಪಡೆಯುತ್ತಾರೆ. ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವ ಕೇಂದ್ರಗಳ ನಿರ್ವಹಣೆಯಲ್ಲಿ ಆದಾಯ ಇರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾರಿಗೆ ವ್ಯವಸ್ಥೆಯ ಸಂಸ್ಠೆಯಲ್ಲಿ ಉದ್ಯೋಗ ದೊರೆಯುತ್ತದೆ. ಷ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಲಾಭವಿದೆ. ಹಿರಿಯ ಸೋದರಿಯ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿ.

ಕುಂಭ

ನಿಮ್ಮ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಅರಿಯಲು ಸಾಧ್ಯವಿಲ್ಲ. ಮೌನವಾಗಿದ್ದುಕೊಂಡು ಎಲ್ಲವನ್ನೂ ಸಾಧಿಸಬಲ್ಲಿರಿ. ಉದ್ಯೋಗದಲ್ಲಿ ಬೇಸರವುಂಟಾಗಿ ಉದ್ಯೋಗ ಬದಲಾವಣೆ ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಜನಸೇವೆಗೆ ಪೂರಕವಾದ ಉದ್ಯೋಗವನ್ನು ಮಾಡುವಿರಿ. ಮಾಹಿತಿ ತಂತ್ರಜ್ಞಾನದ ಅರಿವು ಉಳ್ಳವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುತ್ತದೆ. ವಂಶದಿಂದ ಬಂದಿರುವ ವ್ಯಾಪಾರದಲ್ಲಿ ನೆರವಾಗಿರುವಿರಿ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭಾಂಶ ದೊರೆಯುತ್ತದೆ. ಉಪ್ಪು ಮತ್ತು ಬೆಲ್ಲವನ್ನು ಧಾರ್ಮಿಕ ಕೇಂದ್ರಕ್ಕೆ ನೀಡಿ ದಿನದ ಕೆಲಸ ಆರಂಭಿಸಿ.

ಮೀನ

ಕಷ್ಟ ನಷ್ಟವನ್ನು ಲೆಕ್ಕಿಸದೆ ಕೆಲಸ ಕಾರ್ಯಗಳಲ್ಲಿ ಮುಂದುವರಿಯುವಿರಿ. ಹಣದ ಕೊರತೆಯನ್ನು ನೀಗಿಸಲು ಷ್ಟಾಕ್ ಮತ್ತು ಷೇರಿನ ವ್ಯವಹಾರವನ್ನು ಆರಂಭಿಸುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗದಲ್ಲಿ ಸ್ಥಿರತೆಯನ್ನು ಕಾಣುವಿರಿ. ವೃತ್ತಿ ಬದಲಾವಣೆಯ ಸೂಚನೆಗಳಿವೆ. ಚಿಕ್ಕ ಬಂಡವಾಳದ ಉಪಹಾರ ಮಂದಿರವನ್ನು ಆರಂಭಿಸುವಿರಿ. ಬೆಳ್ಳಿ ಮತ್ತು ಚಿನ್ನದ ಒಡವೆ ಮತ್ತು ಅಲಂಕಾರಿಕಾ ಪದಾರ್ಥಗಳ ವ್ಯಾಪಾರದಲ್ಲಿಹೆಚ್ಚಿನ ಲಾಭ ಗಳಿಸುವಿರಿ. ಗಣ್ಯವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಮನರಂಜನೆಗಾಗಿ ಪರಸ್ಥಳಕ್ಕೆ ತೆರಳುವಿರಿ. ಎದ್ದಾಕ್ಷಣ ಅರಳಿಮರಕ್ಕೆ ನೀರನ್ನು ಹಾಕಿ ದಿನದ ಕೆಲಸ ಆರಂಭಿಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.