ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಈ ರಾಶಿಯವರು ಸಹಾಯಕ್ಕೂ ಸಿದ್ಧ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಹೀಗಿದೆ ಇಂದಿನ ದಿನ ಭವಿಷ್ಯ

Horoscope Today: ಈ ರಾಶಿಯವರು ಸಹಾಯಕ್ಕೂ ಸಿದ್ಧ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಹೀಗಿದೆ ಇಂದಿನ ದಿನ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

ಈ ರಾಶಿಯವರು ಸಹಾಯಕ್ಕೂ ಸಿದ್ಧ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಹೀಗಿದೆ ಇಂದಿನ ದಿನ ಭವಿಷ್ಯ
ಈ ರಾಶಿಯವರು ಸಹಾಯಕ್ಕೂ ಸಿದ್ಧ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಹೀಗಿದೆ ಇಂದಿನ ದಿನ ಭವಿಷ್ಯ

ಇಂದಿನ ಪಂಚಾಂಗ

ಸಂವತ್ಸರ ಶೋಭಕೃತು ನಾಮ ಸಂವತ್ಸರ- ಆಯನ -ಉತ್ತರಾಯಣ- ಋತು ಗ್ರೀಷ್ಮ ಋತು- ಮಾಸ ಜ್ಯೇಷ್ಠ ಮಾಸ- ಪಕ್ಷ ಶುಕ್ಲ ಪಕ್ಷ- ದಿನ ಭಾನುವಾರ

ತಿಥಿ: ಹುಣ್ಣಿಮೆ ಬೆ.08.56 ರವರೆಗೆ ಇದ್ದು- ಆನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ: ಜ್ಯೇಷ್ಠ ನಕ್ಷತ್ರವು ರಾ.04.16 ರವರೆಗೆ ಇದ್ದು ಆನಂತರ ಮೂಲ ನಕ್ಷತ್ರ ಆರಂಭವಾಗುತ್ತವೆ.

ರಾಹುಕಾಲ: ಸ.05.10ರಿಂದ ಸ.06.46

ಸೂರ್ಯೋದಯ: ಬೆ.05.52

ಸೂರ್ಯಾಸ್ತ ಸಂ: 06.44

ರಾಶಿಫಲ

ಮೇಷ

ಸಂತಸದಿಂದ ದಿನವನ್ನು ಆರಂಭಿಸುವಿರಿ. ಆದರೆ ಅನಿರೀಕ್ಷಿತ ಜವಾಬ್ದಾರಿಯನ್ನು ಪೂರೈಸಬೇಕಾಗುತ್ತದೆ. ಗಾಂಭೀರ್ಯತೆಯಿಂದ ವರ್ತಿಸುವಿರಿ. ಯಾರೊಂದಿಗೂ ಮಾತನಾಡಲಿಚ್ಚಿಸುವುದಿಲ್ಲ. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುವಿರಿ. ವಿದ್ಯಾರ್ಥಿಗಳು ಏಕಾಗ್ರಚಿತ್ತತೆಯಿಂದ ಅಧ್ಯಯನದಲ್ಲಿ ತೊಡಗುತ್ತಾರೆ. ವ್ಯಾಪಾರದಲ್ಲಿ ಆತಂತಕದ ಕ್ಷಣಗಳು ಎದುರಾಗುತ್ತವೆ. ಬೇರೆಯವರಿಗೆ ಹಣಕಾಸಿನ ಸಹಾಯವನ್ನು ಮಾಡುವಿರಿ. ಅಜೀರ್ಣದ ತೊಂದರೆ ಇರುತ್ತದೆ. ವಾಹನಗಳನ್ನು ಬಾಡಿಗೆಗೆ ನೀಡುವ ವ್ಯಾಪಾರದಲ್ಲಿ ಲಾಭವಿರುತ್ತದೆ. ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸದಿರಿ. ಮಗಳಿಗೆ ಜೇನು ಮತ್ತು ಸಿಹಿ ತಿನಿಸಿ, ನೀರನ್ನು ಕೊಟ್ಟ ನಂತರ ದಿನದ ಕೆಲಸ ಆರಂಭಿಸಿರಿ.

ವೃಷಭ

ಸಂಪ್ರದಾಯಬದ್ದ ಕೆಲಸವೊಂದನ್ನು ಆರಂಭಿಸುವಿರಿ. ಸಹಾಯ ಮಾಡಲು ಹಿಂಜರಿಯುವುದಿಲ್ಲ. ನೇರವಾದ ನಿಷ್ಠುರದ ನಡೆ ನುಡಿ ಇರುತ್ತದೆ. ಉದ್ಯೋಗದಲ್ಲಿ ವಿರೋಧಿಗಳು ಇರುತ್ತವೆ. ಮಗಳಿಗೆ ವಿವಾಹ ಯೋಗವಿರುತ್ತದೆ. ವೈದ್ಯಕ್ಷೇತ್ರ ಅಥವಾ ಸಂಗೀತ ಕ್ಷೇತ್ರದಲ್ಲಿ ಹೆಚ್ಚುವರಿ ಅವಕಾಶವೊಂದು ದೊರೆಯುತ್ತದೆ. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರಗಳಲ್ಲಿ ಆದಾಯದ ತೊಂದರೆ ಬಾರದು. ಹವ್ಯಾಸಕ್ಕಾಗಿ ಕತೆ ಕವನಗಳನ್ನು ಬರೆಯುವವರಿಗೆ ಆಶ್ಚರ್ಯದ ಆಹ್ವಾನವೊಂದು ದೊರೆಯುತ್ತದೆ. ಹಿರಿಯರ ಮತ್ತು ಸಮಾಜದ ಗಣ್ಯವ್ಯಕ್ತಿಯೊಬ್ಬರ ಸಹಾಯ ದೊರೆಯುತ್ತದೆ. ಗೋ ಗ್ರಾಸದ ನಂತರ ದಿನದ ಕೆಲಸ ಆರಂಭಿಸುವಿರಿ.

ಮಿಥುನ

ದುಬಾರಿ ವಸ್ತ್ರಗಳನ್ನು ಕೊಳ್ಳುವಿರಿ. ಸ್ಥಿಮಿತದ ಮನಸ್ಸು ಇರುವುದಿಲ್ಲ. ಸುಗಂಧ ದ್ರವ್ಯಗಳ ಮಾರಾಟದಲ್ಲಿ ಆದಾಯವಿರುತ್ತದೆ. ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಹೋಟೆಲ್ ವ್ಯಾಪಾರದಿಂದ ಉತ್ತಮ ಆದಾಯ ಗಳಿಸುವಿರಿ. ಉದ್ಯೋಗದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗುತ್ತವೆ. ಪುಣ್ಯ ನದಿ ಸ್ನಾನ ಮಾಡಲು ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಮನೆಯಲ್ಲಿ ದೇವತಾಕಾರ್ಯವೊಂದನ್ನು ಆಚರಿಸುವಿರಿ. ಹಟದ ಸ್ವಭಾವ ಇರುತ್ತದೆ. ಬರವಣಿಗೆಯನ್ನು ಸುಂದರವಾಗಿಸುವ ತರಬೇತಿ ನೀಡುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಇರುತ್ತವೆ. ಪಕ್ಷಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿ.

ಕಟಕ

ಬಿಡುವಿಲ್ಲದ ಕೆಲಸವಿರುತ್ತದೆ. ಸಿಡುಕಿನಿಂದ ವರ್ತಿಸಿದರೂ ಒಳ್ಳೆಯ ಮನಸ್ಸಿರುತ್ತದೆ. ಬಟ್ಟೆ ಹೊಲಿಗೆ ಯಂತ್ರದಂತದ ವ್ಯಾಪಾರದಲ್ಲಿ ಲಾಭವಿರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿವಾಹದ ಮಾತುಕತೆ ನಡೆಯುತ್ತದೆ. ಗೃಹಾಲಂಕಾರದ ವೈಭವಯುತ ಪದಾರ್ಥಗಳನ್ನು ಕೊಳ್ಳುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗುತ್ತಾರೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಸಂತಸದಿಂದ ದಿನ ಕಳೆಯುವಿರಿ. ಬುದ್ಧಿವಂತಿಕೆಯ ಮಾತುಕತೆಯಿಂದಲೇ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಸಾಕು ಪ್ರಾಣಿಗಳ ಮಾರಾಟದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಾಲದ ವ್ಯವಹಾರ ಬೇಡ. ಪಾರಿವಾಳಗಳಿಗೆ ಆಹಾರ ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ಸಿಂಹ

ಚಿಕ್ಕ ಪುಟ್ಟ ವಿಚಾರಗಳಿಗೂ ಸಿಡುಕಿನಿಂದ ವರ್ತಿಸುವಿರಿ. ಮಾಡುವ ಪ್ರತಿ ಕೆಲಸದಲ್ಲಿಯೂ ಅಧಿಕಾರಿಯ ಸ್ಥಾನಮಾನ ಪಡೆಯುವಿರಿ. ಉದ್ಯೋಗದಲ್ಲಿ ನಿರೀಕ್ಷಿಸಿದ ಬದಲಾವಣೆಗಳು ಉಂಟಾಗದು. ಸಂಗಾತಿಯ ಒಡನೆ ದೀರ್ಘಕಾಲದ ಪ್ರವಾಸ ಹೊರಡುವಿರಿ. ಆಡುವ ಮಾತನ್ನು ವಿರೋಧಿಸುವ ಧೈರ್ಯ ಯಾರಿಗೂ ಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಬೋಧನಾ ಕೇಂದ್ರವನ್ನು ಆರಂಭಿಸಿ, ಯಶಸ್ಸನ್ನು ಗಳಿಸುವಿರಿ. ವಂಶದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಧಾರ್ಮಿಕ ಗುರುಗಳ ಆಶೀರ್ವಾದ ಪಡೆದ ನಂತರ ದಿನದ ಕೆಲಸ ಆರಂಭಿಸಿ.

ಕನ್ಯಾ

ಧೃಡವಾದ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಆರಂಭಿಸಿದಲ್ಲಿ ಜಯ ದೊರೆಯಬಹುದು. ಒಳ್ಳೆಯ ಮಾತಿನಿಂದ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ನೆರವಿನಿಂದ ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ತೊಂದರೆ ಇರದು. ವಾಣಿಜ್ಯ ಸಂಸ್ಥೆಯ ನಿರ್ವಹಣೆಯಲ್ಲಿ ಹೆಚ್ಚಿನ ಆದಾಯ ಇರುತ್ತದೆ. ಮನೆಯನ್ನು ನವೀಕರಿಸುವ ಕೆಲಸವನ್ನು ಆರಂಭಿಸುವಿರಿ. ದಿನವಿಡೀ ಸಂತೋಷ ದಿಂದ ಕಳೆಯುವಿರಿ. ಯಾವುದೇ ಹೊಸ ಕೆಲಸವನ್ನು ಆರಂಭಿಸುವ ಮನವಿರುವುದಿಲ್ಲ. ಕರಿ ನಾಯಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ತುಲಾ

ಸಮಯಕ್ಕೆ ತಕ್ಕಂತೆ ವರ್ತಿಸಬಲ್ಲ ಬುದ್ಧಿವಂತಿಕೆ ಇರುತ್ತದೆ. ಮಾಡುವ ಕೆಲಸದಲ್ಲಿ ಸುಲಭಗತಿಯಲ್ಲಿ ಯಶಸ್ಸನ್ನು ಕಾಣುವಿರಿ. ಉದ್ಯೋಗದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಇರುತ್ತದೆ. ಹಣದ ತೊಂದರೆ ಇರದು. ಅವಶ್ಯಕತೆ ಇದ್ದವರಿಗೆ ಹಣದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ವಿಶ್ರಾಂತಿ ಮತ್ತು ಮನರಂಜನೆಯಲ್ಲಿ ದಿನ ಕಳೆಯುತ್ತಾರೆ. ಆತ್ಮೀಯರ ಸಹಭಾಗಿತ್ವದಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಎಲ್ಲರೊಂದಿಗೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಬಿಡುವಿಲ್ಲದ ಕೆಲಸದ ಮಧ್ಯೆ ವಿಶ್ರಾಂತಿಯ ಅವಶ್ಯಕತೆಯೂ ಇರುತ್ತದೆ. ಸಹೋದ್ಯೋಗಿಗಳಿಗೆ ಸಹಾಯ ಮಾಡಿದಲ್ಲಿ ದಿನವಿಡೀ ಸಂತಸದಿಂದ ಇರಬಹುದು.

ವೃಶ್ಚಿಕ

ಅಧಿಕಾರಯುತ ನಡೆನುಡೆಯಿಂದ ಸ್ವಂತ ಕೆಲಸಗಳನ್ನೂ ಬೇರೆಯವರು ಪೂರ್ಣಗೊಳಿಸುವರು. ಉದ್ಯೋಗದಲ್ಲಿ ಮಾನಸಿಕ ಒತ್ತಡ ಇರುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಕೋಪ ತಾಪವನ್ನು ಕಡಿಮೆಮಾಡಿದಲ್ಲಿ ಕುಟುಂಬದವರ ಸಹಾಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ತಾನೆಂಬ ಭಾವನೆಯಿಂದ ಹೊರಬರಬೇಕು. ವ್ಯಾಪಾರ ವ್ಯವಹಾರದಲ್ಲಿ ಕೊಂಚ ಏರಿಳಿತ ಉಂಟಾಗಬಹುದು. ಅನಿವಾರ್ಯವಾಗಿ ಬೇರೆಯವರಿಂದ ಹಣದ ಸಹಾಯ ಪಡೆಯಬೇಕಾಗುವುದು. ಮನೆಯಲ್ಲಿನ ಹಿರಿಯರ ಮಾರ್ಗದರ್ಶನದಲ್ಲಿ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಗೋಸೇವೆ ಮಾಡಿದ ನಂತರ ದಿನದ ಕೆಲಸ ಆರಂಭಿಸಿ.

ಧನಸ್ಸು

ಅದೃಷ್ಟವಂತರು. ಆದರೆ ದೊರೆವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಕ್ಲಿಷ್ಟಕರವಾದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಲ್ಲಿರಿ. ಕುಟುಂಬದ ಜೊತೆಯಲ್ಲಿ ಮನಸ್ಸಂತೋಷಕ್ಕಾಗಿ ಲಘು ಪ್ರಯಾಸಕ್ಕೆ ತೆರಳುವಿರಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರಿಸುವ ಅವಕಾಶ ದೊರೆಯುತ್ತದೆ. ಶಾಲಾ ಕಾಲೇಜುಗಳ ನಿರ್ವಹಣೆಯ ಜವಾಬ್ದಾರಿಯು ದೊರೆಯುತ್ತದೆ. ಹಣಕಾಸಿನ ತೊಂದರೆ ಕಾಣದು. ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಕೃಷಿ ಭೂಮಿಯನ್ನು ಕೊಂಡು ವ್ಯವಸಾಯದಲ್ಲಿ ದೊರೆಯುತ್ತದೆ. ಪಾಲುಗಾರಿಕೆಯ ವ್ಯವಹಾರ ಒಳ್ಳೆಯದಲ್ಲ. ಹೊಸ ಬಟ್ಟೆಯನ್ನು ನೀಡಿ ದಿನವನ್ನು ಆರಂಭಿಸಿ.

ಮಕರ

ಅವಿರತ ಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ವಿದ್ಯಾರ್ಥಿಗಳು ನಿದ್ದೆ, ವಿಶ್ರಾಂತಿಯಿಂದ ದೂರ ಉಳಿಯಬೇಕು. ಸೋದರರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರದ ಬಗ್ಗೆ ಮಾತುಕತೆ ನಡೆಸುವಿರಿ. ಮುದ್ರಣಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ವ್ಯಾಪಾರದಲ್ಲಿ ಆದಾಯವಿರುತ್ತದೆ. ಅಂತರ್ಜಾಲದ ಮೂಲಕ ಮಾಡುವ ವ್ಯಾಪಾರಕ್ಕೆ ಅಡಿಪಾಯ ಹಾಕುವಿರಿ. ವಂಶಕ್ಕೆ ಸೇರಿದ ಮನೆಯೊಂದನ್ನು ನವೀಕರಿಸುವಿರಿ. ಹಣಕಾಸಿನ ವ್ಯವಹಾರದಲ್ಲಿಎಚ್ಚರಿಕೆ ಇರಲಿ. ಮಾತನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಕೂಲಿ ಕಾರ್ಮಿಕರಿಗೆ ಸಹಾಯ ಮಾಡಿದ ನಂತರ ದಿನದ ಕೆಲಸ ಆರಂಭಿಸಿ.

ಕುಂಭ

ಮನದ ವಿಚಾರವನ್ನು ಸುಲಭವಾಗಿ ಯಾರಿಗೂ ಹೇಳಲಾರಿರಿ. ಯಾವುದೇ ವಿಚಾರದಲ್ಲಿಯೂ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಲಾರಿರಿ. ಪ್ರಯತ್ನಪೂರ್ವಕವಾಗಿ ಉದ್ಯೋಗ ಬದಲಿಸುವಿರಿ. ಹುದುಗಿರುವ ವಿಶೇಷವಾದ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭದಿನವಾಗಲಿದೆ. ಮನೆಯಲ್ಲಿ ಚಿಕ್ಕದಾದ ಚೊಕ್ಕ ಕಾರ್ಯಕ್ರಮವೊಂದು ನಡೆಯಲು ಕಾರಣರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ದೊಡ್ಡಮಟ್ಟದ ಲಾಭವನ್ನು ಗಳಿಸುವಿರಿ. ಪೂಜಾ ಸಾಮಗ್ರಿಗಳ ವ್ಯಾಪಾರವನ್ನು ಆರಂಭಿಸುವಿರಿ. ಸಾಲದ ವ್ಯವಹಾರದಲ್ಲಿ ತೊಂದರೆ ಉಂಟಾಗುತ್ತದೆ. ಪುಟ್ಟ ಮಕ್ಕಳಿಗೆ ಬೆಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಮೀನ

ಕೈಹಿಡಿದ ಕೆಲಸಗಳಲ್ಲಿ ಸುಲಭ ರೀತಿಯ ಯಶಸ್ಸನ್ನು ಗಳಿಸುವಿರಿ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ವಂಶಕ್ಕೆ ಸೇರಿದ ಭೂವಿವಾದವನ್ನು ಮಾತು ಕತೆಯಿಂದ ಸುಖಾಂತ್ಯಗೊಳಿಸುವಿರಿ. ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳು ಪ್ರಖ್ಯಾತ ಸಂಸ್ಥೆಯಲ್ಲಿ ಉದ್ಯೋಗಾವಕಾಶವನ್ನು ಪಡೆಯುತ್ತಾರೆ. ಆರೋಗ್ಯದ ಬಗ್ಗೆ ಗಮನ ಇರಬೇಕು. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಲಾಭ ಇರದು. ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿನಿಸನ್ನು ಮಕ್ಕಳಿಗೆ ನೀಡಿ ದಿನದ ಕೆಲಸವನ್ನು ಆರಂಭಿಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.