ಕನ್ನಡ ಸುದ್ದಿ  /  Astrology  /  Daily Astrological Prediction For June 5th 2023 Today S Horoscope Mnk

Horoscope Today: ಸೇವಿಸುವ ಆಹಾರದ ಮೇಲೆ ಹಿಡಿತವಿರಲಿ, ಉದರ ಬಾಧೆ ಕಾಡಬಹುದು, ಹಣಕಾಸಿನ ವಿಚಾರದಲ್ಲಿ ವಿವಾದ; ಹೀಗಿದೆ ದಿನ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ? ಎಂಬುದನ್ನು ನೋಡೋಣ.

ಸೇವಿಸುವ ಆಹಾರದ ಮೇಲೆ ಹಿಡಿತವಿರಲಿ, ಉದರ ಬಾಧೆ ಕಾಡಬಹುದು, ಹಣಕಾಸಿನ ವಿಚಾರದಲ್ಲಿ ವಿವಾದ; ದಿನ ಭವಿಷ್ಯ
ಸೇವಿಸುವ ಆಹಾರದ ಮೇಲೆ ಹಿಡಿತವಿರಲಿ, ಉದರ ಬಾಧೆ ಕಾಡಬಹುದು, ಹಣಕಾಸಿನ ವಿಚಾರದಲ್ಲಿ ವಿವಾದ; ದಿನ ಭವಿಷ್ಯ

ದಿನದ ಪಂಚಾಂಗ

ಸಂವತ್ಸರ: ಶ್ರೀ ಶೋಭಕೃತು ನಾಮ ಸಂವತ್ಸರ, ಆಯಣ: ಉತ್ತರಾಯಣ, ಋತು: ಗ್ರೀಷ್ಮ ಋತು, ಮಾಸ: ಜ್ಯೇಷ್ಠ ಮಾಸ, ಪಕ್ಷ: ಕೃಷ್ಣ ಪಕ್ಷ, ದಿನ: ಸೋಮವಾರ, ತಿಥಿ: ಪಾಡ್ಯ ಬೆ.07.26 ಉಪರಿ ಬಿದಿಗೆ ಇರುತ್ತದೆ, ನಕ್ಷತ್ರ: ಮೂಲ ನಕ್ಷತ್ರವು ರಾ.03.14ರವರೆಗೆ ಇದ್ದು ನಂತರ ಪೂರ್ವಾಷಾಡ ನಕ್ಷತ್ರವು ಆರಂಭವಾಗುತ್ತದೆ., ರಾಹುಕಾಲ: ಬೆ.07.34 ರಿಂದ ಬೆ.09.10, ಸೂರ್ಯೋದಯ: ಬೆ.05.52, ಸೂರ್ಯಾಸ್ತ: ಸ.06.45

ರಾಶಿ ಭವಿಷ್ಯ

ಮೇಷ

ತಂದೆಯವರಿಗೆ ವಿಶೇಷ ಗೌರವ ದೊರೆಯಲು ಕಾರಣರಾಗುವಿರಿ. ಬೇರೆಯವರಿಗೆ ಕಷ್ಟ ಎನಿಸುವ ಕೆಲಸಗಳನ್ನು ಸುಲಭವಾಗಿ ಮಾಡುವಿರಿ. ಸದಾಕಾಲ ಹಿರಿಯ ವ್ಯಕ್ತಿಗಳ ಸಹವಾಸದಲ್ಲಿ ಇರುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಹಣದ ತೊಂದರೆ ಕಾಣದು. ಯಾವ ವಿಚಾರವನ್ನು ಸುಲಭವಾಗಿ ಒಪ್ಪುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರ ಸುಗಮವಾಗಿ ನಡೆಯುತ್ತದೆ. ಕುಟುಂಬದಲ್ಲಿ ನಡೆಯಬೇಕಿದ್ದ ವಿವಾಹವು ಮುಂದೆ ಹೋಗಬಹುದು. ಹಣಕಾಸಿನ ವ್ಯವಹಾರದಲ್ಲಿ ವಿವಾದ ಎದುರಾಗಬಹುದು. ಹಳದಿ ಬಟ್ಟೆಯನ್ನು ಧರಿಸಿದಲ್ಲಿ ಉತ್ತಮ ಫಲಗಳನ್ನು ಪಡೆಯುವಿರಿ.

ವೃಷಭ

ಮಾಡದ ತಪ್ಪಿಗೆ ಟೀಕೆಯನ್ನು ಕೇಳಬೇಕಾಗುವುದು. ನಿಮ್ಮಿಂದ ಸಹಾಯ ಪಡೆದವರು ನಿಮಗೆ ಪ್ರತ್ಯುಪಕಾರ ಮಾಡಲಾರರು. ಹವ್ಯಾಸಿ ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ. ಉದ್ಯೋಗದಲ್ಲಿ ಬಹು ಮುಖ್ಯ ವಿಷಯವೊಂದು ನಿಧಾನಗತಿಯಲ್ಲಿ ಸಾಗುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುವವರಿಗೆ ಉತ್ತಮ ಆದಾಯ ವಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮಟ್ಟದ ಬಂಡವಾಳವನ್ನು ಹೂಡುವ ಮುನ್ನ ಯೋಚಿಸಿ. ಪಾಲುಗಾರಿಕೆ ವ್ಯವಹಾರ ಮಾಡದಿರಿ. ಭೂವ್ಯವಹಾರ ಬೇಡ. ಕಂಚಿನ ಪದಾರ್ಥವನ್ನು ಧಾರ್ಮಿಕ ಕೇಂದ್ರಕ್ಕೆ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಮಿಥುನ

ತಿಂಡಿ ತಿನಿಸುಗಳ ವ್ಯಾಪಾರದಿಂದ ಅಧಿಕ ಲಾಭವನ್ನು ಗಳಿಸುವಿರಿ . ನದೀ ಸ್ನಾನಕ್ಕೆ ಪರಸ್ಥಳಕ್ಕೆ ತೆರಳುವಿರಿ ಕುಟುಂಬದಲ್ಲಿ ಮಂಗಳ ಕಾರ್ಯ ನಡೆಯಲಿದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಆರೋಗ್ಯದ ಕಡೆ ಗಮನವಿರಲಿ. ಹೃದಯತಹ ಒಳ್ಳೆಯವರಾದರು ಹಠದಿಂದ ವರ್ತಿಸುವಿರಿ. ಬರವಣಿಗೆಗೆ ಸಂಬಂಧಿಸಿದ ತರಬೇತಿಯನ್ನು ನೀಡುವ ಉಪವೃತ್ತಿ ಆರಂಭಿಸುವಿರಿ. ಕುಟುಂಬರಲ್ಲಿ ಬೇಸರದ ಸನ್ನಿವೇಶ ಬರಬಹುದು. ಹೊಸ ವಾಹನವನ್ನು ಕೊಳ್ಳುವಿರಿ. ಸಾಲದ ವ್ಯವಹಾರ ಬೇಡ. ಕತ್ತಿನಲ್ಲಿ ತಾಮ್ರದ ನಾಣ್ಯವನ್ನು ಧರಿಸಿ ದಿನದ ಕೆಲಸ ಆರಂಭಿಸಿ.

ಕಟಕ

ಆತಂಕದ ಮನೋಭಾವನೆ ಇರುತ್ತದೆ. ಉದ್ಯೋಗವು ಸುಲಲಿತವಾಗಿ ಸಾಗುವುದು. ಹಿರಿಯ ಅಧಿಕಾರಿಗಳ ಮೆಚ್ಚುಗೆಯನ್ನು ಪಡೆಯುವಿರಿ. ಪ್ರಖ್ಯಾತ ಸಂಸ್ಥೆಯೊಂದರಲ್ಲಿ ಉದ್ಯೋಗದ ಅವಕಾಶ ದೊರೆಯುತ್ತದೆ. ವೈಭವದ ಜೀವನ ನಡೆಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ವಿಚಾರಗಳನ್ನು ಅಭ್ಯಾಸ ಮಾಡುತ್ತಾರೆ. ಬರೀ ಮಾತಿನಿಂದಲೇ ಯಾವುದೇ ಕಾರ್ಯವನ್ನು ಸಾಧಿಸಬಲ್ಲಿರಿ. ಕುಟುಂಬದ ಹಿರಿಯರ ಆದೇಶವನ್ನು ಪಾಲಿಸಬೇಕಾಗುತ್ತದೆ. ಸ್ವಂತ ಮನೆ ಅಥವಾ ಜಮೀನನ್ನು ಕೊಳ್ಳುವ ನಿರ್ಧಾರವನ್ನು ಮಾಡುವಿರಿ. ಎಮ್ಮೆಗೆ ಆಹಾರವನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಸಿಂಹ

ನಿಮ್ಮ ವಿಶ್ವಾಸಕ್ಕೆ ಎಲ್ಲರೂ ಮನ ಸೋಲುವರು. ಹೊಸ ವಾಹನ ಕೊಳ್ಳುವಿರಿ. ಭೂ ವಿವಾದವನ್ನು ಬುದ್ದಿವಂತಿಕೆಯಿಂದ ಪರಿಹರಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯುತ್ತಾರೆ. ಜನರಿಗೆ ಮಾರ್ಗದರ್ಶನ ನೀಡುವ ಸೇವಾ ವೃತ್ತಿಯನ್ನು ಮಾಡುವಿರಿ. ಬಹು ನಿರೀಕ್ಷಿತ ವಿಶೇಷ ಅವಕಾಶವನ್ನು ದೊರೆಯುತ್ತದೆ. ವೈದ್ಯ ವೃತ್ತಿಯಲ್ಲಿ ಇರುವವರಿಗೆ ವಿಶೇಷ ಗೌರವ ಲಭ್ಯವಾಗುತ್ತದೆ. ಪಾಲುಗಾರಿಕೆ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯಲ್ಲಿ ಧರಿಸಿ ದಿನದ ಕೆಲಸ ಪ್ರಾರಂಭಿಸಿ.

ಕನ್ಯಾ

ಸ್ಥಿರವಾದ ಮನಸ್ಸಿರುವುದಿಲ್ಲ. ತಂದೆಯ ಅಥವಾ ಗಣ್ಯ ವ್ಯಕ್ತಿಯೊಬ್ಬರ ಸಹಾಯ ಸಹಕಾರ ನಿಮಗಿರುತ್ತದೆ. ಸೋದರನ ಜೊತೆಯಲ್ಲಿ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಕುಟುಂಬದಲ್ಲಿ ಮತ್ತು ಸಂಬಂಧಿಕರರಲ್ಲಿ ವಿಶೇಷ ಗೌರವಾದರಗಳು ಲಭಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭ ವರ್ತಮಾನವನ್ನು ದೊರೆಯಲಿದೆ. ಬಳಸಿದ ವಾಹನಗಳ ಮಾರಾಟದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸ್ಥಿರವಾದ ಆರೋಗ್ಯಕ್ಕಾಗಿ ದೈಹಿಕ ವ್ಯಾಯಾಮ ಆರಂಭಿಸುವಿರಿ. ನಿಮ್ಮ ತಂದೆಯವರಿಗೆ ಇಷ್ಟವೆನಿಸುವ ತಿಂಡಿ ತಿನಿಸನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ತುಲಾ

ಆತುರ ಪಡದೆ ಸಂಯಮದಿಂದ ವರ್ತಿಸಿದರೆ ಜಯ ಖಂಡಿತ. ಮಾತನಾಡುವ ಮುನ್ನ ಒಮ್ಮೆ ಯೋಚಿಸಿ ಮಾತನಾಡಿ. ಸೋದರ ಆಸೆಯೊಂದನ್ನು ನೆರವೇರಿಸಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ಆತುರ ಪಡದೆ ಮುಂದುವರೆದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳಲ್ಲಿ ಸಂಶಯದ ಭಾವನೆ ಬಾರದಿದ್ದಲ್ಲಿ ಯಾವುದೇ ಹಿನ್ನಡೆ ಉಂಟಾಗದು. ಭೂ ವ್ಯವಹಾರದಲ್ಲಿಎಚ್ಚರಿಕೆ ಇರಲಿ. ಇರುವ ಮನೆಯ ಮೇಲೆ ಮಹಡಿ ಕಟ್ಟುವ ಸಾಧ್ಯತೆ ಇರುತ್ತದೆ. ಧಾರ್ಮಿಕ ಕಾರ್ಯವೊಂದನ್ನು ಮಾಡುವಿರಿ. ನೀಲಿ ಬಟ್ಟೆಯನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ವೃಶ್ಚಿಕ

ನಗು ಮತ್ತು ಸಹನೆ ಎಲ್ಲಾ ಸಮಸ್ಯೆಗಳಿಗೂ ನಿಖರವಾದ ಪರಿಹಾರ ಆಗುತ್ತದೆ. ತಪ್ಪು ಮಾಹಿತಿಗಳನ್ನು ನಂಬಿದರೆ ಮನಸ್ಸಿಗೆ ನೆಮ್ಮದಿ ಇರದು. ಉದ್ಯೋಗದಲ್ಲಿ ಕೊಂಚ ಮಟ್ಟದ ಅಡ್ಡಿ ಆತಂಕಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಹಠ ಬಿಟ್ಟು ಅಭ್ಯಾಸದಲ್ಲಿ ಮುಂದುವರೆಯಬೇಕು. ವ್ಯಾಪಾರದಲ್ಲಿಅಲ್ಪಮಟ್ಟದ ಗೆಲುವು ನಿಮ್ಮದಾಗುತ್ತದೆ. ಕುಟುಂಬದ ಸದಸ್ಯರ ನೆರವಿನಿಂದ ಮುಂದೆ ಬರುವಿರಿ. ವ್ಯವಹಾರದಲ್ಲಿ ಧನಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ. ವಂಶದ ಆಸ್ತಿಯಲ್ಲಿನ ಪಾಲು ದೊರೆಯುತ್ತದೆ. ಮನೆಯ ಅಂಗಳದಲ್ಲಿ ಇರುವ ಒಣಗಿದ ಗಿಡಗಳನ್ನು ಶುದ್ದಗೊಳಿಸಿ ದಿನದ ಕೆಲಸ ಆರಂಭಿಸಿ.

ಧನಸ್ಸು

ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸಿದರೆ ಗೆಲುವು ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಬದಲಾವಣೆಗಳು ಕಂಡು ಬರುತ್ತದೆ. ಬಹು ರಾಷ್ಟ್ರೀಯ ಸಂಸ್ಥೆಯಿಂದ ಉದ್ಯೋಗದ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಅಧ್ಯಯನದಲ್ಲಿ ಮಗ್ನರಾಗುತ್ತಾರೆ. ಒಂದಕ್ಕಿಂತಲೂ ಹೆಚ್ಚಿನ ಕೆಲಸವನ್ನು ಮಾಡಬಲ್ಲ ಚಾತುರ್ಯ ತೋರುವಿರಿ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಧನಲಾಭ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರಿಗೂ ಸಾಕ್ಷಿದಾರರಾಗಿ ಇರಬೇಡಿ. ಹಿರಿಯ ಸೋದರ ಅಥವಾ ಸೋದರಿಯಿಂದ ಹಣಕಾಸಿನ ನೆರವು ದೊರೆಯುತ್ತದೆ. ಗುರುಸೇವೆಯಿಂದ ದಿನದ ಕೆಲಸವನ್ನು ಆರಂಭಿಸುವುದು ಒಳ್ಳೆಯದು.

ಮಕರ

ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಮುಂದುವರೆಯುವಿರಿ. ಅತಿಯಾದ ಜವಾಬ್ದಾರಿಯಿಂದ ವಿಶ್ರಾಂತಿ ಇಲ್ಲದಂತಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗುತ್ತವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ವಾಹನಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ಲಾಭವಿದೆ. ವಿದೇಶಿ ವಿನಿಮಯದಲ್ಲಿ ಲಾಭವಿದೆ. ರಕ್ಷಣಾ ತಂತ್ರಗಳ ತರಬೇತಿ ನೀಡುವವರಿಗೆ ಸಮಾಜದಲ್ಲಿ ಗೌರವ ಮತ್ತು ಉತ್ತಮ ಆದಾಯ ದೊರೆಯುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಹಸುವಿಗೆ ಮೇವನ್ನು ಹಾಕಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಕುಂಭ

ಯಾವುದೇ ವಿಚಾರದಲ್ಲಿಯೂ ಶೀಘ್ರವಾಗಿ ತೀರ್ಮಾನವನ್ನು ತೆಗೆದುಕೊಂಡರೆ ಹಿನ್ನಡೆಗೆ ಕಾರಣವಾಗುವುದು. ನಿಮ್ಮ ಮನದಲ್ಲಿರುವ ವಿಚಾರವನ್ನು ಆತ್ಮೀಯರ ಜೊತೆಯಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಖ್ಯಾತಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಕ್ಕೆ ತಕ್ಕಂತೆ ಫಲವನ್ನು ಪಡೆಯುತ್ತಾರೆ. ತಂದೆಯವರ ಮಾರ್ಗದರ್ಶನದಲ್ಲಿ ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ. ಭೂ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಹಣಕಾಸಿನ ವ್ಯವಹಾರದಲ್ಲಿ ದುಡುಕದಿರಿ. ಮನೆಯಲ್ಲಿರುವ ಮಕ್ಕಳಿಗೆ ಸಿಹಿ ತಿನಿಸು ನೀಡಿ ದಿನದ ಕೆಲಸವನ್ನು ಆರಂಭಿಸಬಹುದು.

ಮೀನ

ಕೆಲಸ ಕಾರ್ಯಗಳು ಸುಲಭವಾಗಿ ಕೈಗೂಡುವವು. ಸಮಾಜದಲ್ಲಿನ ನಾಯಕತ್ವವು ನಿಮಗೆ ದೊರೆಯುತ್ತದೆ. ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಫಲಿತಾಂಶಗಳು ದೊರೆಯುತ್ತವೆ. ಮಗಳ ಸಂಸಾರದಲ್ಲಿನ ವಿವಾದಕ್ಕೆ ಪರಿಹಾರ ಸೂಚಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುವುದರ ಬದಲು ಅಧ್ಯಯನದಲ್ಲಿ ತೊಡಗಬೇಕು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಜನಸೇವೆಗಾಗಿ ಸಂಘ ಸಂಸ್ಥೆಯಿಂದ ಆರಂಭಿಸುವಿರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರ ಒಳ್ಳೆಯದಲ್ಲ. ಅವಶ್ಯಕತೆ ಇರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ದಿನಕ್ಕೆ ದಿನದ ಕೆಲಸ ಆರಂಭಿಸಿ.

ವಿಭಾಗ