ಕನ್ನಡ ಸುದ್ದಿ  /  Astrology  /  Daily Astrological Prediction For May 18th 2023 Today S Horoscope Mnk

Horoscope Today: ಈ ರಾಶಿಯವರಿಗೆ ಸ್ತ್ರೀ ಕಂಟಕ, ರಾಜಕೀಯ ಸೇರ ಬಯಸುವವರಿಗೆ ಶುಭದಿನ; ಇಂದಿನ ರಾಶಿ ಭವಿಷ್ಯ ಹೀಗಿದೆ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಗುರುವಾರದ ರಾಶಿಭವಿಷ್ಯ.

ಈ ರಾಶಿಯವರಿಗಿಂದು ಸ್ತ್ರೀ ಕಂಟಕ, ರಾಜಕೀಯ ಸೇರ ಬಯಸುವವರಿಗೆ ಶುಭದಿನ; ಇಂದಿನ ರಾಶಿ ಭವಿಷ್ಯ ಹೀಗಿದೆ
ಈ ರಾಶಿಯವರಿಗಿಂದು ಸ್ತ್ರೀ ಕಂಟಕ, ರಾಜಕೀಯ ಸೇರ ಬಯಸುವವರಿಗೆ ಶುಭದಿನ; ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ವಸಂತ ಋತು- ವೈಶಾಖ - ಮಾಸ - ಕೃಷ್ಣಪಕ್ಷ- ಗುರುವಾರ

ತಿಥಿ: ಚತುರ್ದಶಿ ರಾ.09.05ರವರೆಗೆ ಆನಂತರ ಅಮಾವಾಸ್ಯೆ ಆರಂಭವಾಗುತ್ತದೆ.

ನಕ್ಷತ್ರ: ಅಶ್ವಿನಿ ನಕ್ಷತ್ರವು ಬೆ.07.06 ರವರೆಗೆ ಇದ್ದು ಆನಂತರ ಭರಣಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.05.53

ಸೂರ್ಯಾಸ್ತ: ಸ.6.37

ರಾಹುಕಾಲ: ಮಧ್ಯಾಹ್ನ 01.55 ರಿಂದ ಮಧ್ಯಾಹ್ನ 03.30

ರಾಶಿ ಫಲಗಳು

ಮೇಷ: ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಬಹುದು. ಹೊಸ ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಬಂದು ಬಳಗದಲ್ಲಿ ಸೌಹಾರ್ದ ವಾತಾವರಣ ಇರದು. ವಂಶದ ಹಿರಿಯರನ್ನು ಭೇಟಿ ಮಾಡಲು ಹುಟ್ಟೂರಿಗೆ ಹೋಗುವಿರಿ. ಯಾವುದೇ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಅಭಿನಯ ಬಲ್ಲ ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳು ನಿರಾಸಕ್ತಿಯಿಂದ ಇರುತ್ತಾರೆ. ಕುಟುಂಬದ ಹಿರಿಯರಿಗೆ ಅನಾರೋಗ್ಯ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಬಾರದು. ಭೂವ್ಯವಹಾರ ಒಳ್ಳೆಯದಲ್ಲ. ತಾಯಿಯವರ ಆಶೀರ್ವಾದ ಪಡೆದಲ್ಲಿ ಕೆಲಸ ಕಾರ್ಯಗಳು ಸುಲಲಿತವಾಗೆ ಸಾಗುತ್ತವೆ.

ವೃಷಭ: ನೀರು ಅಥವಾ ವಾಹನದ ಕಂಟಕದಿಂದ ಪಾರಾಗುವಿರಿ. ಸಂಚಾರದಲ್ಲಿಯೇ ದಿನ ಕಳೆಯುತ್ತದೆ. ಪರಸ್ಥಳದಲ್ಲಿ ಸೋದರನ ಜೀವನಕ್ಕೆ ಸಹಾಯ ಮಾಡುವಿರಿ. ಸ್ತ್ರೀಯೊಬ್ಬರ ಕಾರಣದಿಂದ ಕುಟುಂಬದ ಶಾಂತಿ ಕೆಡುತ್ತದೆ. ಉದ್ಯೋಗದಲ್ಲಿ ತೊಂದರೆ ಕಾಣದು. ಸ್ನೇಹಿತರ ಸಹಾಯ ನಿಮಗೆ ದೊರೆಯುತ್ತದೆ. ತಾಯಿಯವರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಸಂಗಾತಿಗೆ ಒಂದು ರೀತಿಯ ಭ್ರಮೆ ಭಯ ಇರುತ್ತದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಹೊರಬರಬೇಕು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಯತ್ನ ಬೇಕು. ಹಣೆಯಲ್ಲಿ ಕೇಸರಿ ಬಣ್ಣದ ತಿಲಕ ಇದ್ದಲ್ಲಿ ಒಳ್ಳೆಯದು.

ಮಿಥುನ: ಸೋದರಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ತಾಯಿಯವರ ಬುದ್ಧಿವಂತಿಕೆಯ ನಿರ್ಧಾರವು ಜೀವನದಲ್ಲಿ ಜಯವನ್ನು ತಂದುಕೊಡುತ್ತದೆ. ಕುಟುಂಬದಲ್ಲಿ ಒಮ್ಮತ ಇರುವುದಿಲ್ಲ. ಉದ್ಯೋಗದಲ್ಲಿ ಉನ್ನತಿ ಇದೆ. ಆದರೆ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ವಾದ ವಿವಾದವನ್ನು ಮಾಡದಿರಿ. ಬೇಸಾಯದಲ್ಲಿ ಲಾಭವಿರುತ್ತದೆ. ಕೃಷಿವಿಜ್ಞಾನದ ವಿದ್ಯಾರ್ಥಿಗಳಿಗೆ ವಿಶೇಷ ಲಾಭವಿದೆ. ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಅತಿಯಾದ ನಿರೀಕ್ಷೆ ಇದ್ದಲ್ಲಿ ನಿರಾಸೆ ಖಂಡಿತ. ಉಪಯೋಸಿದ ವಾಹನಗಳ ಮಾರಾಟದಿಂದ ಹಣಗಳಿಸುವಿರಿ. ಸಂಗಾತಿಯಿಂದ ಹಣವನ್ನು ಪಡೆದಲ್ಲಿ ಹಣದ ತೊಂದರೆ ಕಾಣುತ್ತದೆ.

ಕಟಕ: ಶೀತದ ದೋಷವಿರುತ್ತದೆ. ಅಧಿಕಾರಿವಲಯದವರು ವೃತ್ತಿಯ ಸಲುವಾಗಿ ವಿದೇಶಕ್ಕೆ ತೆರಳುವಿರಿ. ಬುದ್ಧಿವಂತಿಕೆಯ ನಿರ್ಧಾರಗಳು ಜಯವನ್ನು ತಂದುಕೊಡುತ್ತದೆ. ಸಂಗಾತಿಗೆ ತಾಯಿಯವರ ಬಗ್ಗೆ ತಪ್ಪು ಅಭಿಪ್ರಾಯ ಇರುತ್ತದೆ. ತಾಯಿಯವರಿಗೆ ಸಂಬಂಧಿಸಿದ ಆಸ್ತಿಯಲ್ಲಿ ವಿವಾದ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷ ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಕಾಣದು. ಅಶಕ್ತರಿಗೆ ಕಾನೂನು ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಘ ಸಂಸ್ಥೆಯೊಂದನ್ನು ಆರಂಭಿಸುವಿರಿ. ಬೆಳ್ಳಿಯ ನಾಣ್ಯ ಬಳಿ ಇರಲಿ.

ಸಿಂಹ: ಅನಾಥರಿಗೆ ಸಹಾಯ ಮಾಡುವ ಕೆಲಸ ಆರಂಭಿಸುವಿರಿ. ನಿಮ್ಮ ಕೆಲಸಕ್ಕೆ ಸರ್ಕಾರ ಅಥವಾ ಗಣ್ಯವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇಲ್ಲದೆ ಉನ್ನತ ಮಟ್ಟ ತಲುಪುವಿರಿ. ಆಸೆ ಇಲ್ಲದೆ ವೈರಾಗ್ಯದ ಭಾವನೆ ತಾಳುವಿರಿ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾಗಿರುವರು. ರಾಜಕೀಯ ಸೇರುವ ಆಸೆ ಇದ್ದಲ್ಲಿ ಉತ್ತಮ ಅವಕಾಶವೊಂದು ದೊರೆಯಲಿದೆ. ಧೈರ್ಯ, ದರ್ಪ ಮತ್ತು ಹಠದ ಗುಣ ಸೋಲನ್ನು ಒಪ್ಪದಂತೆ ಮಾಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಮನೆಯಲ್ಲಿನ ಹೆಣ್ಣುಮಕ್ಕಳಿಗೆ ಸಹಾಯ ಮಾಡಿದಲ್ಲಿ ಶುಭಪಲಗಳು ದೊರೆಯಲಿವೆ.

ಕನ್ಯಾ: ಉದ್ಯೋಗದ ಕಾರಣ ನಾನಾ ಸ್ಥಳಗಳಿಗೆ ಭೇಟಿ ನೀಡುವಿರಿ. ಕೆಲಸ ಕಾರ್ಯಗಳಲ್ಲಿ ವಿರೋಧಿಗಳ ಅಡ್ಡಿ ಇರುತ್ತದೆ. ಸ್ಥಾನ ಪಲ್ಲಟವಾದ ನಂತರ ಉದ್ಯೋಗದಲ್ಲಿ ಯಶಸ್ಸನ್ನು ಕಾಣುತ್ತಾರೆ. ಆತುರದ ನಿರ್ಧಾರದಿಂದ ತೊಂದರೆ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಸಾಮಾನ್ಯ ಮಟ್ಟದ ಫಲಿತಾಂಶಗಳು ದೊರೆಯುತ್ತದೆ. ಹಠದಿಂದ ತಪ್ಪು ಮಾಡಿ ನಂತರ ಪಶ್ಚಾತ್ತಾಪ ಪಡುವಿರಿ. ತಂದೆಯವರು ಭೂವಿವಾದವನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳು ಸಾಧಾರಣ ಫಲಿತಾಂಶಕ್ಕೆ ತೃಪ್ತಿ ಪಡಬೇಕಾಗುತ್ತದೆ. ಆತ್ಮೀಯರ ಒಡಗೂಡಿ ಮಾಡುವ ವ್ಯಾಪಾರದಲ್ಲಿ ಲಾಭವಿರುತ್ತದೆ. ಹಣಕಾಸಿನ ವ್ಯವಹಾರ ಬೇಡ. ಬಡದಂಪತಿಗಳಿಗೆ ಸಹಾಯ ಮಾಡಿರಿ.

ತುಲಾ: ನಿಮಗೆ ವಿಶೇಷವಾದ ಬುದ್ಧಿವಂತಿಕೆ ಇರುತ್ತದೆ. ಸಮಾಜದಲ್ಲಿ ಗಣ್ಯವ್ಯಕ್ತಿಯ ಸ್ಥಾನ ಮಾನ ದೊರೆಯುತ್ತದೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳ್ಳುವವರೆಗೆ ವಿರಮಿಸುವುದಿಲ್ಲ. ನಯವಾದ ಮಾತು ಕತೆಯಿಂದ ಕೆಲಸ ಸಾಧಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಸ್ವಂತ ವಾಹನವನ್ನು ಕೊಳ್ಳುವಿರಿ. ಕುಟುಂಬದ ಸದಸ್ಯರ ಸಹಾಯ ಸಹಕಾರ ಇರುತ್ತದೆ. ಸರಕಾರದ ನೌಕರಿ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತದೆ. ಗಿಣಿಗಳಿಗೆ ಆಹಾರ ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ವೃಶ್ಚಿಕ: ಮುಂಗೋಪ ಇರುತ್ತದೆ, ಅಸಂಬದ್ದ ಮಾತಿಗೆ ಬೇಸರಗೊಂಡು ಆತ್ಮೀಯರೊಬ್ಬರು ದೂರವಾಗುತ್ತಾರೆ. ತಂದೆಯವರಿಗೆ ಸೇರ ಬೇಕಿದ್ದ ಆಸ್ತಿಯಲ್ಲಿ ವಿವಾದ ಉಂಟಾಗುತ್ತದೆ. ಹೊಂದಾಣಿಕೆಯ ಗುಣ ಇದ್ದಲ್ಲಿ ಮಾತ್ರ ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳು ಗುಂಪಿನಲ್ಲಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರದು. ದಿನದಾಂತ್ಯಕ್ಕೆ ಹಣದ ಕೊರೆತೆ ಉಂಟಾಗುತ್ತದೆ. ಸೋದರ ಸಂಬಂಧಿಗಳಿಂದ ಹಣದ ಸಹಾಯ ದೊರೆಯುತ್ತದೆ. ತಾಯಿಯವರ ಹೆಸರಿನಲ್ಲಿ ನಡೆಸುವ ವ್ಯಾಪಾರದಲ್ಲಿ ಲಾಭವಿದೆ. ದಂತದ ವಸ್ತುವನ್ನು ಬಳಿ ಇಟ್ಟುಕೊಂಡಲ್ಲಿ ತೊಂದರೆ ಉಂಟಾಗುತ್ತದೆ.

ಧನಸ್ಸು: ವಿದ್ಯಾರ್ಥಿಗಳಿಗೆ ಬೃಹತ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರೆಯುತ್ತದೆ. ಬೇರೆಯವರ ಭೂಮಿ ಅಥವಾ ಹಣದ ವಿವಾದವನ್ನು ಸುಲಭವಾಗಿ ಪರಿಹರಿಸುವಿರಿ. ಸಮಾಜ ಸೇವೆಯಲ್ಲಿ ತೊಡಗಿ ಉನ್ನತ ಗೌರವಾದರಗಳು ದೊರೆಯುತ್ತವೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಹಿರಿಯ ಅಧಿಕಾರಿಗಳ ಮೆಚ್ಚುಗೆ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ. ಗೃಹಾಲಂಕಾರಕ್ಕಾಗಿ ಆಕರ್ಷಕ ವಸ್ತುಗಳನ್ನು ಕೊಳ್ಳುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸುವಿರಿ. ಪೂರ್ವ ದಿಕ್ಕಿನಲ್ಲಿರುವ ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ಇಂದಿನ ಕೆಲಸವನ್ನು ಆರಂಭಿಸಿ.

ಮಕರ: ಸೋಮಾರಿಗಳಲ್ಲ ಆದರೆ ಕಷ್ಟವಿಲ್ಲದ ಕೆಲಸವನ್ನು ಮಾಡಬಯಸುವಿರಿ. ಸಂಸಾರದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಅವಶ್ಯಕತೆ ಇದ್ದಲ್ಲಿ ತಾಯಿಯವರಿಂದ ಹಣದ ಸಹಾಯ ದೊರೆಯುತ್ತದೆ. ಸ್ವಂತ ಮನೆಯನ್ನು ಕೊಳ್ಳುವ ಯೋಚನೆ ಈಡೇರುತ್ತದೆ. ಭೂವ್ಯವಹಾರದಲ್ಲಿ ಲಾಭವಿರುತ್ತದೆ. ನಿಮ್ಮ ಮಾತಿಗೆ ಸಮಾಜದಲ್ಲಿ ಗೌರವ ಇರುತ್ತದೆ. ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಕಮೀಷನ್ ವ್ಯವಹಾರವೊಂದನ್ನು ಆರಂಭಿಸುವಿರಿ. ಯಂತ್ರೋಪಕರಣಗಳ ದುರಸ್ಥಿಯಲ್ಲಿ ಉತ್ತಮ ಲಾಭ ದೊರೆಯುತ್ತದೆ. ಧಾರ್ಮಿಕ ಕೇಂದ್ರಗಳ ಆಡಳಿತ ನಿಮಗೆ ದೊರೆಯುತದೆ. ಕೈಯಲ್ಲಿ ಬಂಗಾರ ಅಥವಾ ಬೆಳ್ಳಿಯ ಕಡಗವಿದ್ದಲ್ಲಿ ಶುಭಫಲಗಳು ದೊರೆಯುತ್ತವೆ.

ಕುಂಭ: ನೀವು ಹೇಳಿದ್ದೆಲ್ಲಾ ನಡೆಯಬೇಕೆಂಬ ಹಠ ನಿಮ್ಮಲ್ಲಿರುತ್ತದೆ. ಬದಲಾಗದ ಮನಸ್ಸಿನಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುವವರೆಗೂ ರಹಸ್ಯವನ್ನು ಕಾಪಾಡುವಿರಿ. ಸೋದರನ ಜೊತೆಗಿನ ಮನಸ್ತಾಪವು ಕೊನೆಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಅವಶ್ಯವಿದ್ದಲ್ಲಿ ಉದ್ಯೋಗವನ್ನು ಬದಲಿಸಿರಿ. ತಂದೆಯವರು ದೊಡ್ಡಮಟ್ಟದ ವ್ಯಾಪಾರದಲ್ಲಿ ಯಶಸ್ಸನ್ನು ಕಾಣುವರು. ಯಾವುದೇ ಕೆಲಸವನ್ನು ಮುಂದೂಡದಿರಿ. ಸಾಲದ ವ್ಯವಹಾರ ಬೇಡ. ಅತಿಯಾದ ನಿಧಾನದ ನಡಿಗೆ ಬೇಡ. ಮರದ ವಸ್ತುವನ್ನು ಬಳಿಯಲ್ಲಿ ಇಟ್ಟುಕೊಳ್ಳದಿರಿ.

ಮೀನ: ಯಾವುದೇ ವಿಚಾರವೆಂದರೂ ಹೆಚ್ಚಿನ ಪ್ರಯತ್ನದಿಂದ ಯಶಸ್ಸನ್ನು ಗಳಿಸಬಹುದು. ಅದೃಷ್ಟವಿದೆ. ನಿಮ್ಮ ಕುಟುಂಬದ ಸದಸ್ಯರ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳ ಆಶೋತ್ತರಗಳು ಸುಲಭವಾಗಿ ನೆರವೇರಲಿವೆ. ಹಣಕಾಸಿನ ತೊಂದರೆ ಬಾರದು. ಉದ್ಯೋಗದಲ್ಲಿ ನಿಮ್ಮಿಚ್ಚೆಯಂತೆ ಎಲ್ಲವೂ ನಡೆಯುತ್ತದೆ. ಸ್ವಂತ ಉದ್ಧಿಮೆಯನ್ನು ಆರಂಭಿಸಿ ಹಲವರ ಜೀವನಕ್ಕೆ ಆಧಾರವಾಗುವಿರಿ. ಕಂಪ್ಯೂಟರ್ ಆಧಾರಿತ ಸಂಸ್ಥೆ ಇದ್ದಲ್ಲಿ ವಿದೇಶದ ಸಹಕಾರ ಲಭಿಸುತ್ತದೆ. ದೊಡ್ಡ ವಾಹನವನ್ನು ಕೊಳ್ಳುವಿರಿ. ದುಬಾರಿ ಬೆಲೆಯ ಮನೆಯನ್ನು ಕೊಳ್ಳುವಿರಿ. ವಂಶದ ಗೌರವ ಕಾಪಾಡುವ ಕೆಲಸದಿಂದ ಎಲ್ಲರ ಮನ ಸೆಳೆಯುವಿರಿ. ಚಿನ್ನವನ್ನು ಹಳದಿ ಬಟ್ಟೆಯಲ್ಲಿ ಸುತ್ತಿಡಿ.

ವಿಭಾಗ