Kannada News  /  Astrology  /  Daily Astrological Prediction For May 19th 2023 Today S Horoscope Mnk
ಈ ರಾಶಿಯವರಿಗೆ ಕಾಡಲಿದೆ ಉಸಿರಾಟದ ಸಮಸ್ಯೆ, ಬೇರೆಯವರ ಬುದ್ಧಿಮಾತನ್ನೂ ಸ್ವಲ್ಪ ಕೇಳಿ; ಹೀಗಿದೆ ಇಂದಿನ ದಿನ ಭವಿಷ್ಯ
ಈ ರಾಶಿಯವರಿಗೆ ಕಾಡಲಿದೆ ಉಸಿರಾಟದ ಸಮಸ್ಯೆ, ಬೇರೆಯವರ ಬುದ್ಧಿಮಾತನ್ನೂ ಸ್ವಲ್ಪ ಕೇಳಿ; ಹೀಗಿದೆ ಇಂದಿನ ದಿನ ಭವಿಷ್ಯ

Horoscope Today: ಈ ರಾಶಿಯವರಿಗೆ ಕಾಡಲಿದೆ ಉಸಿರಾಟದ ಸಮಸ್ಯೆ, ಬೇರೆಯವರ ಬುದ್ಧಿಮಾತನ್ನೂ ಸ್ವಲ್ಪ ಕೇಳಿ; ಹೀಗಿದೆ ಇಂದಿನ ದಿನ ಭವಿಷ್ಯ

19 May 2023, 5:30 ISTHT Kannada Desk
19 May 2023, 5:30 IST

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

ಇಂದಿನ ಪಂಚಾಂಗ- ಶ್ರೀ ಶೋಭಕೃತುನಾಮ ಸಂವತ್ಸರ - ಉತ್ತರಾಯಣ- ವಸಂತ ಋತು- ವೈಶಾಖ - ಮಾಸ- ಕೃಷ್ಣಪಕ್ಷ- ಶುಕ್ರವಾರ

ತಿಥಿ: ಅಮಾವಾಸ್ಯೆ ರಾ. 08.31ರವರೆಗೆ ಆನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ: ಭರಣಿ ನಕ್ಷತ್ರವು ಬೆ. 06.59 ರವರೆಗೆ ಇದ್ದು ಆನಂತರ ಕೃತ್ತಿಕ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ. 05.53

ಸೂರ್ಯಾಸ್ತ: ಸ. 6.37

ರಾಹುಕಾಲ: ಬೆ.10.44 ರಿಂದ ಮ.12.19

ರಾಶಿ ಫಲಗಳು

ಮೇಷ

ರಾಜಕೀಯ ಪಟುವೂಬ್ಬರ ಸ್ನೇಹ ಇರುತ್ತದೆ. ಜನೋಪಕಾರಿ ಕೆಲಸದಲ್ಲಿ ಭಾಗಿಯಾಗುವಿರಿ. ಅಚಲ ವಿಶ್ವಾಸ ಕೆಲಸಕಾರ್ಯಗಳಲ್ಲಿ ನಿರೀಕ್ಷಿತ ಜಯ ತಂದುಕೊಡುತ್ತದೆ. ಸದಾ ಯಾವುದೋ ವಿಚಾರದ ಚಿಂತೆ ಇರುತ್ತದೆ. ಉದ್ಯೋಗದಲ್ಲಿ ಶುಭವಿದೆ. ಹಿರಿಯ ಅಧಿಕಾರಿಯೊಬ್ಬರ ಜೊತೆ ಮಾತುಕತೆ ನಡೆಯುತ್ತದೆ. ತಂದೆಯ ಜೊತೆಯಲ್ಲಿ ವಿನಾಕಾರಣ ವಾದ ವಿವಾದಗಳಿರುತ್ತವೆ. ವಿದ್ಯಾರ್ಥಿಗಳು ಸಹನೆಯಿಂದ ಎಲ್ಲವನ್ನೂ ಸಾಧಿಸಬಹುದು. ಆದಾಯದಲ್ಲಿ ತೊಂದರೆ ಇಲ್ಲ. ವ್ಯಾಪಾರ ವ್ಯವಹಾರಗಳು ಅವಿಭಾದಿತವಾಗಿ ನಡೆಯಲಿವೆ. ಮನೆಯಲ್ಲಿ ಇರುವ ಮರದ ವಸ್ತುಗಳನ್ನು ಶುಚಿಗೊಳಿಸಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ವೃಷಭ

ಶಾಂತ ಸ್ವಭಾವದವರಾದ ನೀವು ಚಿಕ್ಕ ಪುಟ್ಟ ವಿಚಾರಗಳಿಗೂ ಕೋಪಗೊಳ್ಳುವಿರಿ. ಹೊಸತನ್ನು ನಿರೀಕ್ಷಿಸುತ್ತಾ ಕೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ಹೆಚ್ಚಿದ ಆತ್ಮವಿಶ್ವಾಸದಿಂದ ಸಹೋದ್ಯೋಗಿಗಳನ್ನೂ ಹುರಿದುಂಬಿಸುವಿರಿ. ತಪ್ಪನ್ನು ಮನ್ನಿಸದ ನೀವು ನಿಷ್ಠುರದ ಮಾತುಗಳನ್ನು ಆಡುವಿರಿ. ವಿದ್ಯಾರ್ಥಿಗಳಿಗೆ ಶುಭವಿದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಬಾರದು. ಅವಶ್ಯಕತೆ ಇದ್ದಲ್ಲಿ ಬೇರೆಯವರ ಬುದ್ಧಿಮಾತನ್ನು ಕೇಳಿರಿ. ಆರೋಗ್ಯದ ಕಡೆ ಗಮನ ಇರಲಿ. ನೂತನ ಗೃಹೋಪಯೋಗಿ ವಸ್ತುಗಳ ವ್ಯಾಪಾರ ಮಳಿಗೆ ಆರಂಭಿಸುವಿರಿ. ಅವಶ್ಯಕತೆ ಇದ್ದವರಿಗೆ ಬಿಳಿಬಟ್ಟೆ ಮತ್ತು ಅಕ್ಕಿ ದಾನ ನೀಡಿ ದಿನದ ಕೆಲಸ ಆರಂಭಿಸಿ.

ಮಿಥುನ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಿರುತ್ತದೆ. ದಾರ್ಮಿಕ ಕೆಲಸವೊಂದನ್ನು ಮಾಡುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಖರ್ಚು ವೆಚ್ಚಗಳು ಹೆಚ್ಚಾದಲ್ಲಿ ಕೋಪದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ತೊಂದರೆ ಇಲ್ಲ. ಆದರೆ ಆಡಳಿತಾಧಿಕಾರಿಗಳಿಗೆ ವಿವಾದವೊಂದು ಎದುರಾಗುತ್ತದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಕಡಿಮೆ ಆಗಬಹುದು. ಅರೆಮನಸ್ಸಿನಿಂದ ಕೆಲಸವೊಂದನ್ನು ಆರಂಭಿಸಿ ಯಶಸ್ವಿಯಾಗುವಿರಿ. ಸೋದರಿಗೆ ಹಣದ ಸಹಾಯ ಮಾಡುವಿರಿ. ಕಣ್ಣು ಅಥವಾ ಎದೆಯಲ್ಲಿ ಉರಿತದ ಅನುಭವ ಆಗುತ್ತದೆ. ತೊಂದರೆ ಇಲ್ಲ. ಸೋದರ ಮಾವನವರ ಆಶೀರ್ವಾದ ಪಡೆದು ದೈನಂದಿನ ಕೆಲಸವನ್ನು ಆರಂಭಿಸಿ.

ಕಟಕ

ಸಂಗಾತಿಯ ಮಾತನ್ನು ಹೆಚ್ಚು ಗೌರವಿಸುವಿರಿ. ಹಣದ ವಿಚಾರದಲ್ಲಿ ಅವರ ತೀರ್ಮಾನವೇ ಅಂತಿಮವಾಗುತ್ತದೆ. ಕೆಲಸ ಕಾರ್ಯಗಳನ್ನು ಅಳುಕು ಮನಸ್ಸಿನಿಂದ ಮಾಡುವಿರಿ. ಆತುರದ ಬುದ್ಧಿ ಇರುತ್ತದೆ. ಹಣದ ವಿವಾದವೊಂದು ಕಾನೂನಿನ ಮೂಲಕ ಜಯಗಳಿಸಿ, ಉತ್ತಮ ಆದಾಯ ಗಳಿಸುವಿರಿ. ವಂಶದ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ವಾಯುದೋಷವಿರುತ್ತದೆ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಯನ್ನು ಮಾಡಲಿದ್ದಾರೆ. ದೊಡ್ಡ ಸಂಸ್ಥೆಯೊಂದರ ಆಡಳಿತ ದೊರೆಯುತ್ತದೆ. ಅಂತರ್ರಾಜ್ಯಗಳಿಗೆ ಪ್ರವಾಸ ಆಯೋಜಿಸುವ ವ್ಯಾಪಾರದಲ್ಲಿ ಲಾಭವಿರುತ್ತದೆ. ಕೆಂಪು ಬಣ್ಣದ ವಸ್ತ್ರ ಧರಿಸಿದಲ್ಲಿ ಶುಭಪಲಗಳು ದೊರೆಯುತ್ತವೆ.

ಸಿಂಹ

ಅಧಿಕಾರವಲಯದಲ್ಲಿ ದುಡಿಯುವವರು ಯಶಸ್ಸನ್ನು ಗಳಿಸುವರು. ಸರಕಾರಿ ಅಥವಾ ಸರಕಾರಿ ಅನುದಾನಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ದೊಡ್ಡಮನೆತನದವರ ಜೊತೆ ವಿವಾಹದ ಮಾತಾಗುತ್ತದೆ. ತಂದೆಯವರ ಉದ್ಯೋಗದಲ್ಲಿ ಎದುರಾಗಿದ್ದ ತೊಂದರೆ ಮರೆಯಾಗುತ್ತದೆ. ವಿದ್ಯಾರ್ಥಿ ಜೀವನ ಸುಲಲಿತವಾಗಿ ಸಾಗುತ್ತದೆ. ಜನರಿಗೆ ಉಪಯೋಗವಾಗುವ ಸಂಘವೊಂದನ್ನು ಆರಂಭಿಸುವಿರಿ. ಅಗತ್ಯವಿರುವವರಿಗೆ ಕಾನೂನಿನ ಸಲಹೆಯನ್ನು ನೀಡುವಿರಿ. ಸ್ವಂತ ವ್ಯಾಪಾರದಿಂದ ಉತ್ತಮ ಆದಾಯವಿರುತ್ತದೆ. ದುಡುಕಿ ಯಾರೊಂದಿಗೂ ವಾದವನ್ನು ಮಾಡದಿರಿ. ಸಹನೆಯಿಂದ ಎಲ್ಲವನ್ನೂ ಗೆಲ್ಲಬಲ್ಲಿರಿ. ಧಾರ್ಮಿಕ ಗುರುಗಳ ಆಶೀರ್ವಾದವನ್ನು ಪಡೆದು ದಿನದ ಕೆಲಸ ಆರಂಭಿಸಿ.

ಕನ್ಯಾ

ತೋಟದ ಮನೆ ಕೊಳ್ಳುವ ಆಸೆ ಈಡೇರುತ್ತದೆ. ಯಂತ್ರ ಸಂಬಂಧಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಉಸಿರಾಟದ ತೊಂದರೆ ಇರುತ್ತದೆ. ಭೂವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಚಿಕ್ಕ ಭೂಮಿಯನ್ನು ಮಾರಾಟ ಮಾಡಿ ದೊಡ್ಡ ಮನೆಯನ್ನು ಕೊಳ್ಳುವ ತೀರ್ಮಾನ ಮಾಡುವಿರಿ. ಧೃಡವಾದ ನಿರ್ಧಾರ ತೆಗೆದು ಕೊಳ್ಳಲು ವಿಫಲರಾಗುವಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಮಟ್ಟದ ಫಲಗಳು ದೊರೆಯುತ್ತವೆ. ನೀರಿನ ಜೊತೆ ಚೆಲ್ಲಾಟವಾಡದಿರಿ. ಹಿರಿಯ ಸೋದರನ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಿವಾದ ಇರುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಳದಿವಸ್ತ್ರ ಮತ್ತು ಕಡಲೆಬೇಳೆ ದಾನನೀಡಿ.

ತುಲಾ

ಹಣಕಾಸಿನ ವ್ಯವಹಾರದ ಮಧ್ಯಸ್ಥಿಕೆಯಿಂದ ತೊಂದರೆಯನ್ನು ಅನುಭವಿಸುವಿರಿ. ತಂದೆಯವರಿಗೆ ಸೋದರ ವರ್ಗದವರಿಂದ ತೊಂದರೆ ಇರುತ್ತದೆ. ರಾಜಕೀಯದ ನಂಟು ದೊರೆಯುತ್ತದೆ. ಯಾವುದೇ ಕೆಲಸ ಮಾಡಿದರೂ ಯಶಸ್ಸು ಮತ್ತು ಉನ್ನತ ಅಧಿಕಾರ ದೊರೆಯುತ್ತದೆ. ಯಂತ್ರ ಜ್ಞಾನ ಇದ್ದವರು ಉದ್ಯೋಗವನ್ನು ಗಳಿಸುತ್ತಾರೆ. ವಿದ್ಯಾರ್ಥಿಗಳಿಗೆ ಶುಭವಿದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ಯಾವುದೇ ವಿಚಾರದಲ್ಲಿ ದುಡುಕಿನ ತೀರ್ಮಾನವನ್ನು ತೆಗೆದುಕೊಳ್ಳದಿರಿ. ಯಂತ್ರೋಪಕರಣಗಳ ರಪ್ತು ವ್ಯಾಪಾರದಲ್ಲಿ ಲಾಭವಿರುತ್ತದೆ. ಪಾಲುಗಾರಿಕೆ ವ್ಯಾಪಾರ ಒಳ್ಳೆಯದಲ್ಲ. ಕುಟುಂಬದ ಹಿರಿಯರ ಆಶೀರ್ವಾದವಿಲ್ಲದೆ ಯಾವುದೇ ಕೆಲಸ ಆರಂಭಿಸದಿರಿ.

ವೃಶ್ಚಿಕ

ಹಠ ಮತ್ತು ಛಲದ ಗುಣ ವಿವಾದಕ್ಕೆ ಕಾರಣವಾಗುತ್ತದೆ. ಬುದ್ಧಿವಂತಿಕೆಯಿಂದ ಜೀವನದಲ್ಲಿ ಮುಂದುವರಿಯುವಿರಿ. ಉದ್ಯೋಗದಲ್ಲಿನ ತೊಂದರೆಯು ಕ್ರಮೇಣವಾಗಿ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳು ಸತತ ಅಭ್ಯಾಸದಲ್ಲಿ ತೊಡಗುವುದು ಒಳಿತು. ಸಂಗಾತಿಯ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುತ್ತವೆ. ಭೂವ್ಯವಹಾರದಲ್ಲಿ ಸಾಧಾರಣ ಲಾಭವಿರುತ್ತದೆ. ವಾಸಸ್ಥಳವನ್ನು ಒತ್ತಾಯ ಪೂರ್ವಕವಾಗಿ ಬದಲಾಯಿಸಬೇಕಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅಡ್ಡಿ ಆತಂಕವಿರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಆರಂಭಿಸುವ ವ್ಯಾಪಾರದಲ್ಲಿ ಲಾಭವಿರುತ್ತದೆ. ವಿಧ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ದಿನದ ಕೆಲಸವನ್ನು ಆರಂಭಿಸಿ.

ಧನಸ್ಸು

ಕುಟುಂಬದಲ್ಲಿ ನಲ್ಮೆಯ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು ಆದರೆ ಕೊಂಚ ಅಳುಕು ಸ್ವಭಾವ ಇರುತ್ತದೆ. ಆತ್ಮ ವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಮುಂದುವರಿದಲ್ಲಿ ಯಾವುದೇ ತೊಂದರೆ ಬಾರದು. ಕುಟುಂಬದ ಒಳಗೂ ಹೊರಗೂ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ತೆಗೆದುಕೊಳ್ಳುವ ತೀರ್ಮಾನಗಳನ್ನು ಪದೇ ಪದೇ ಬದಲಿಸದಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಪುಸ್ತಕ ಪ್ರಕಾಶನ ಅಥವಾ ಮಾರಾಟದಲ್ಲಿ ಆದಾಯ ದೊರೆಯುತ್ತದೆ. ಸ್ವತಃ ನಡೆಸುವ ವ್ಯಾಪಾರದಲ್ಲಿ ಲಾಭವಿರುತ್ತದೆ. ವಿದ್ಯಾಗುರುಗಳ ಆಶೀರ್ವಾದವನ್ನು ಪಡೆದು ದಿನದ ಕೆಲಸ ಆರಂಭಿಸಿ.

ಮಕರ

ಸುಖಜೀವನ ನಡೆಸಲು ಹೆಚ್ಚಿನ ಹಣ ಖರ್ಚುಮಾಡುವಿರಿ. ಹೊಸ ಜಮೀನು ಕೊಳ್ಳಲು ಇದು ಸಕಾಲವಲ್ಲ. ಉದ್ಯೋಗದಲ್ಲಿ ಸಾಧಾರಣ ಉನ್ನತಿ ಕಂಡುಬರುತ್ತದೆ. ಆದರೆ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಿರಿ. ಕಷ್ಟಕ್ಕೆ ಹೆದರದ ನೀವು ಯಾವುದೇ ಕೆಲಸ ಮಾಡಬಲ್ಲಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಯಾವುದೇ ವ್ಯವಹಾರದಲ್ಲಿ ಮಧ್ಯವರ್ತಿಯಾಗದಿರಿ. ಲೇವಾ ದೇವಿ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗಬಹುದು. ಉಪಾಯದಿಂದ ಹಣವನ್ನು ಗಳಿಸುವಿರಿ. ಕೂಲಿ ಕಾರ್ಮಿಕರಿಗೆ ಸಹಾಯ ಮಾಡಿದ ನಂತರ ದೈನಂದಿನ ಕೆಲಸ ಆರಂಭಿಸಿ.

ಕುಂಭ

ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದಿರಿ. ಕುಟುಂಬದಲ್ಲಿ ಸುಖ ಸಂತೃಪ್ತಿ ಇರುತ್ತದೆ. ಸೋದರಿಯರ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಉನ್ನತಿ ಇಲ್ಲದೇ ಹೋದರೂ ತೊಂದರೆ ಎದುರಾಗದು. ಯಾವುದೇ ಮೂಲ ವೃತ್ತಿಗೆ ಅವಶ್ಯಕವಾದ ಉಪವೃತ್ತಿಯಲ್ಲಿ ಉತ್ತಮ ಲಾಭವಿರುತ್ತದೆ. ಯಂತ್ರ ವಾಹನದಿಂದ ತೊಂದರೆ ಉಂಟಾಗಬಹುದು. ಕಷ್ಟ ಪಡದೆ ಉಪಾಯದಿಂದ ಸುಲಭ ರೀತಿಯಲ್ಲಿ ಹಣ ಗಳಿಸುವಿರಿ. ಮಧ್ಯವರ್ತಿಗಳು ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಏಕಾಂಗಿಯಾಗಿ ಮಾಡುವ ವ್ಯಾಪಾರ ವ್ಯವಹಾರ ಲಾಭದಾಯಕ. ಭೂವ್ಯವಹಾರ ಬೇಡ. ಹತ್ತಿ ಬಟ್ಟೆಗಳನ್ನು ದಾನ ಮಾಡಿದಲ್ಲಿ ಶುಭಫಲಗಳನ್ನು ಪಡೆಯಬಹುದು.

ಮೀನ

ಉತ್ತಮ ಮಾತು ಕತೆಯಿಂದ ಕೆಲಸಕಾರ್ಯಗಳಲ್ಲಿ ಜಯಗಳಿಸುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಮಕ್ಕಳ ಮುಂದಿನ ಜೀವನಕ್ಕಾಗಿ ಭೂಮಿಯನ್ನುಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ದೃಡವಾದ ಮನಸ್ಸಿರಲಿ. ವಾಹನಕೊಳ್ಳಲು ತಾಯಿಯವರಿಂದ ಹಣದ ಸಹಾಯವನ್ನು ಪಡೆಯುವಿರಿ. ಉದ್ಯೋಗದಲ್ಲಿ ಶುಭವಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಹಣಕಾಸಿನ ವ್ಯವಹಾರದಲ್ಲಿನ ಆದಾಯವು ಕಡಿಮೆಯಾಗುವುದು. ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ನಷ್ಟವಿದೆ. ಲಾಟರಿಯಂತಹ ಹಣದ ಮೂಲಗಳನ್ನು ನಂಬದಿರಿ. ನೀರು ಅಥವಾ ಹಣ್ಣಿನರಸದ ಮಾರಾಟದಲ್ಲಿ ಲಾಭವಿದೆ. ಕೆಂಪು ಮುಖದ ಕೋತಿಗಳಿಗೆ ಆಹಾರ ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ವಿಭಾಗ