Kannada News  /  Astrology  /  Daily Astrological Prediction For May 22th 2023 Today S Horoscope Mnk
ಗೆಲುವೇ ನಿಮ್ಮ ಹವ್ಯಾಸವಾಗಲಿದೆ, ಚಿಕ್ಕ ತಪ್ಪು ದೊಡ್ಡ ವಿವಾದಕ್ಕೆ ಕಾರಣವಾಗಬಹುದು, ಹೀಗಿದೆ ಇಂದಿನ ದಿನ ಭವಿಷ್ಯ
ಗೆಲುವೇ ನಿಮ್ಮ ಹವ್ಯಾಸವಾಗಲಿದೆ, ಚಿಕ್ಕ ತಪ್ಪು ದೊಡ್ಡ ವಿವಾದಕ್ಕೆ ಕಾರಣವಾಗಬಹುದು, ಹೀಗಿದೆ ಇಂದಿನ ದಿನ ಭವಿಷ್ಯ

Horoscope Today: ಗೆಲುವೇ ನಿಮ್ಮ ಹವ್ಯಾಸವಾಗಲಿದೆ, ಚಿಕ್ಕ ತಪ್ಪು ದೊಡ್ಡ ವಿವಾದಕ್ಕೆ ಕಾರಣವಾಗಬಹುದು, ಹೀಗಿದೆ ಇಂದಿನ ದಿನ ಭವಿಷ್ಯ

22 May 2023, 5:30 ISTHT Kannada Desk
22 May 2023, 5:30 IST

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ.

ರಾಶಿ ಫಲಗಳು

ಮೇಷ

ಅನಾವಶ್ಯಕವಾಗಿ ಸಮಯವನ್ನು ವ್ಯರ್ಥಮಾಡಲು ಇಷ್ಟ ಪಡುವುದಿಲ್ಲ. ತಂದೆಯವರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಭೂವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಯಂತ್ರ ಅಥವಾ ವಾಹನದಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಕಟ್ಟಡ ಕಟ್ಟಲು ಬೇಕಾದ ಲೋಹದ ಪದಾರ್ಥಗಳ ಸರಬರಾಜಿನಲ್ಲಿ ಒಳ್ಳೆಯ ಲಾಭಾಂಶ ದೊರೆಯುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನದ ಅವಕಾಶ ದೊರೆಯುತ್ತದೆ. ಮಾತಿನಿಂದ ವಿವಾದ ಉಂಟಾಗುತ್ತದೆ. ನೆಮ್ಮದಿಯ ಜೀವನ ಇರುತ್ತದೆ. ಹಾಳಾಗಿರುವ ಬೆಳ್ಳಿ ಪಾತ್ರೆಗಳನ್ನು ಬಳಸಿದರೆ ತೊಂದರೆ ಇರುತ್ತದೆ.

ವೃಷಭ

ಯಾರ ಮಾತಿಗೂ ಗೌರವ ನೀಡದೆ ಜೀವನದಲ್ಲಿ ಮುಂದುವರಿಯುವಿರಿ. ಈ ವರ್ತನೆ ಕುಟುಂಬದ ಸದಸ್ಯರ ಬೇಸರಕ್ಕೆ ಕಾರಣವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಸೋದರನ ಭೂವ್ಯವಹಾರದಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ತೊಂದರೆ ಇರದು. ವಾಣಿಜ್ಯ ವ್ಯವಹಾರದ ವಿದ್ಯಾರ್ಥಿಗಳು ವಿಶೇಷವಾದ ಸಾಧನೆ ಮಾಡುತ್ತಾರೆ. ಸರ್ಕಾರದ ಅನುದಾನದಡಿ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವಿರಿ. ಮನೆತನಕ್ಕೆ ಸೇರಿದ ಹಳೆಯ ಮನೆಯನ್ನು ನವೀಕರಣಗೊಳಿಸಲು ನಿರ್ಧರಿಸುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದು ನಡೆಯಲಿದೆ. ರಾಜಕೀಯ ಪ್ರವೇಶಕ್ಕೆ ರಹದಾರಿ ದೊರೆಯುತ್ತದೆ. ಹಣೆಯಲ್ಲಿ ತಿಲಕವಿದ್ದಲ್ಲಿ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.

ಮಿಥುನ

ತೆಗೆದುಕೊಳ್ಳುವ ತೀರ್ಮಾನಗಳನ್ನು ಪದೇಪದೆ ಬದಲಿಸುವಿರಿ. ಕೊಂಚ ಸ್ವಾರ್ಥದ ಗುಣ ಸ್ವಭಾವ ಇರುತ್ತದೆ. ಅನುಕೂಲಕ್ಕೆ ತಕ್ಕಂತೆ ಮನಸ್ಸನ್ನು ಬದಲಾಯಿಸಬಲ್ಲಿರಿ. ಉದ್ಯೋಗದಲ್ಲಿ ಅಧಿಕಾರಯುತ ಸ್ಥಾನ ಮಾನ ದೊರೆಯುತ್ತದೆ. ಕಣ್ಣಿನ ದೋಷ ಇರುತ್ತದೆ. ಕತೆಗಾರರಾದಲ್ಲಿ ಖ್ಯಾತ ಪ್ರಕಾಶನದಲ್ಲಿ ಅವಕಾಶ ದೊರೆಯುತ್ತದೆ. ಸೋದರರ ಜೊತೆಯಲ್ಲಿ ಹಣ್ಣಿನ ವ್ಯಾಪಾರವನ್ನು ಆರಂಭಿಸುವಿರಿ. ಚಿಕ್ಕ ಪುಟ್ಟ ತಪ್ಪುಗಳನ್ನೂ ದೊಡ್ಡವಿವಾದವನ್ನಾಗಿ ಮಾಡುವಿರಿ. ಸಾಲದ ವ್ಯವಹಾರ ಮಾಡದಿರಿ. ಕರಿಎಳ್ಳು ಮತ್ತು ನೀಲಿ ಬಟ್ಟೆಯನ್ನು ದಾನ ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಕಟಕ

ಅಳುಕುಭಾವನೆ ಬೇಡ. ಆದರೆ ಚಿಕ್ಕ ಪುಟ್ಟಕೆಲಸಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆಯಿದೆ. ಆತುರದಿಂದ ವಿವಾದದಲ್ಲಿ ಸಿಲುಕುವಿರಿ. ವೃತ್ತಿ ಬದಲಾವಣೆ ಮಾಡುವಿರಿ. ವಿವೇಚನೆ ಇಲ್ಲದೆ ಮಾತನಾಡುವಿರಿ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಛಾಯಾಚಿತ್ರಕಲೆಯನ್ನು ಬಲ್ಲವರಿಗೆ ಮಹತ್ತರ ಅವಕಾಶವೊಂದು ದೊರೆಯುತ್ತದೆ. ಸೋದರನಿಗೆ ವಾಹನದಿಂದ ತೊಂದರೆ ಆಗಬಹುದು. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಕುಟುಂಬಕ್ಕೆ ಸೇರಿದ ಕಾನೂನು ಪ್ರಕ್ರಿಯೆಯಲ್ಲಿ ಜಯ ದೊರೆಯುತ್ತದೆ. ತಂದೆಯ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕಪ್ಪುನಾಯಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಸಿಂಹ

ಗೆಲುವನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುವಿರಿ. ವಾಹನಗಳ ಬಿಡಿ ಭಾಗಗಳ ವ್ಯಾಪಾರ ಸಂಸ್ಥೆಯಲ್ಲಿ ವೃತ್ತಿಲಾಭವಿದೆ. ಉಪಯೋಗಿಸಿದ ವಾಹನಗಳ ಮಾರಾಟದಲ್ಲಿ ಲಾಭವಿದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಕುಟುಂಬದ ಐಕ್ಯತೆಗಾಗಿ ದುಡಿಯುವಿರಿ. ಜೀವನದ ನಿರ್ವಹಣೆಗಾಗಿ ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಬಿಡುವಿಲ್ಲದ ಕೆಲಸ ಇರುತ್ತದೆ. ಹೆಚ್ಚಿದ ಜವಾಬ್ದಾರಿ ನೆಮ್ಮದಿಯಿಲ್ಲದಂತೆ ಮಾಡುತ್ತದೆ. ಅನಾರೋಗ್ಯವಿರುತ್ತದೆ. ವೃಥಾತಿರುಗಾಟ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಮಾನ ದೊರೆಯುತ್ತದೆ. ಯಾರನ್ನೂ ನಿಂದಿಸಬೇಡಿ. ಹಳದಿ ಬಟ್ಟೆಯಲ್ಲಿ ಸುತ್ತಿದ ಐದು ಚಿನ್ನದ ಬಣ್ಣದ ನಾಣ್ಯಗಳು ಬಳಿಯಲ್ಲಿರಲಿ.

ಕನ್ಯಾ

ಭೂವಿಚಾರದಲ್ಲಿ ತಂದೆಗೆ ವಿರೋಧ ಉಂಟಾಗುತ್ತದೆ. ಹಿರಿಯ ಸೋದರನ ಪಾಲುಗಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಗಳು ಅಥವಾ ಸೋದರಿಯ ಮಾತುಕತೆ ನಡೆಯುತ್ತದೆ. ತಾಯಿಯವರ ಆರೋಗ್ಯದ ಬಗ್ಗೆ ಗಮನ ಇರಲಿ. ದೇಶ ವಿದೇಶಗಳನ್ನು ಸುತ್ತುವ ಯೋಚನೆ ಮಾಡುವಿರಿ. ಹಣದ ವಿಚಾರದಲ್ಲಿ ತೊಂದರೆ ಉಂಟಾಗಬಹುದು. ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಕಾನೂನಿನ ಆದೇಶದ ಅನ್ವಯ ಹಣ ಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ಸೋದರನಿಗೆ ಹಣವನ್ನು ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ತುಲಾ

ಯಾವುದೇ ಅಂಜಿಕೆ ಇಲ್ಲದೆ ಜೀವನದಲ್ಲಿ ಮುಂದುವರಿಯುವಿರಿ. ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳು ಆರಂಭವಾಗಲಿವೆ. ಯಾವುದೇ ಕೆಲಸವಾಗಲಿ ಗೌರವದಿಂದ ನೋಡುವಿರಿ. ಹೆಚ್ಚಿನ ಪ್ರಯತ್ನದಿಂದ ಜೀವನದಲ್ಲಿ ಮುಂದೆ ಬರುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವಿರಿ. ಬಂಧುಗಳ ಜೊತೆಯಲ್ಲಿ ಹಣದ ವಿವಾದ ಉಂಟಾಗುತ್ತದೆ. ಭೂವಿಚಾರದಲ್ಲಿ ಲೆಕ್ಕ ಪತ್ರವನ್ನು ಸರಿಯಾಗಿ ಪರಿಶೀಲಿಸಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗದು. ಸಾರ್ವಜನಿಕರ ಸೇವೆಯಲ್ಲಿ ನಿರತರಾಗುವಿರಿ. ವಂಶದ ಹಿರಿಯರ ಹೆಸರಿನಲ್ಲಿ ದಾನ ಧರ್ಮ ಮಾಡಿ ಕೆಲಸ ಆರಂಭಿಸಿ.

ವೃಶ್ಚಿಕ

ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ಶತೃತ್ವ ಉಂಟಾದರೂ, ಸುಶಿಕ್ಷಿತವಾಗುವಿರಿ. ಶ್ರಮದ ಕಾಲದಲ್ಲಿ ಆತ್ಮೀಯರ ಸಲಹೆ ಸೂಚನೆ ದೊರೆಯುತ್ತದೆ. ದುಡುಕಿನ ಮಾತುಕತೆ ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತದೆ. ವಿದ್ಯಾರ್ಥಿಗಳು ಪ್ರಯಾಸದಿಂದ ಮುಂದುವರಿಯುತ್ತಾರೆ. ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ಹಠದ ಗುಣ ಇರದು. ಉಷ್ಣವಾಯುವಿನ ದೋಷ ಇರುತ್ತದೆ. ಸಂಗಾತಿಯ ಸಹಾಯದಿಂದ ವೈಭವಯುತ ಜೀವನ ನಡೆಸುವಿರಿ. ಅನಿರೀಕ್ಷಿತ ಧನಲಾಭ ಇರುತ್ತದೆ. ಗೋವಿಗೆ ಆಹಾರ ನೀಡಿದ ನಂತರ ದೈನಂದಿನ ಕೆಲಸ ಆರಂಭಿಸಿ.

ಧನಸ್ಸು

ಕುಟುಂಬದಲ್ಲಿ ಸಾಮರಸ್ಯದ ಕೊರೆತೆ ಇರದು. ಅನಿರೀಕ್ಷಿತ ಧನಲಾಭವಿದೆ. ವೈಭವದ ವಾಹನ ಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಧುನಿಕ ತಂತ್ರಜ್ಞಾನದ ಸಂಸ್ಥೆಯಲ್ಲಿ ವಿದ್ಯಾರ್ಥಿ ದೆಶೆಯಲ್ಲಿಯೇ ಉದ್ಯೋಗ ಲಭಿಸುತ್ತದೆ. ಕುಟುಂಬದ ವಿವಾಹವು ಮುಂದೂಡಲ್ಪಡುತ್ತದೆ. ಮನದಲ್ಲಿ ಬೇಸರವಿರುತ್ತದೆ. ಉದ್ಯೋಗದಲ್ಲಿ ಯಾವುದೆ ತೊಂದರೆ ಇರದು. ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಉದರಾಮ್ಲದ ತೊಂದರೆ ಇರುತ್ತದೆ. ತಂದೆಗೆ ಸಂಬಂಧಿಸಿದ ವಿವಾದವೊಂದನ್ನು ಬಗೆಹರಿಸುವಿರಿ. ಕ್ರೀಡಾ ಸ್ಪರ್ಧಿಗಳಿಗೆ ಅವಕಾಶಗಳು ದೊರೆಯುತ್ತವೆ. ಕೆಂಪು ಬಣ್ಣವನ್ನು ಧರಿಸಿದಲ್ಲಿ ದಿನದ ಕೆಲಸ ಸುಗಮವಾಗಿ ಸಾಗುತ್ತದೆ.

ಮಕರ

ಜಮೀನು ಅಥವಾ ಹೊಸ ಮನೆಯನ್ನು ಕೊಳ್ಳುವಿರಿ. ಸೋದರನಿಗೆ ವಿದೇಶದಲ್ಲಿ ಉದ್ಯೋಗ ದೊರೆವ ಸಾಧ್ಯತೆ ಇದೆ. ಸಂಗಾತಿಯ ಜೊತೆಯಲ್ಲಿ ಆಹಾರಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಆರಂಭಿಸುವಿರಿ. ಭೂವಿವಾದವೊಂದು ಇರುತ್ತದೆ. ಖ್ಯಾತ ವಿದ್ಯಾಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕೃಷಿಭೂಮಿಯನ್ನು ಕೊಳ್ಳುವಿರಿ. ಅಂತರ್ಜಾಲದ ಮುಖಾಂತರ ವ್ಯಾಪಾರವನ್ನು ಆರಂಭಿಸುವಿರಿ. ಸೋದರಿಯ ಜೀವನದಲ್ಲಿ ವಿರಸದ ಸನ್ನಿವೇಶ ಎದುರಾಗುತ್ತದೆ. ಹಣದ ಕೊರತೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಜೇನುತುಪ್ಪ ಸೇವಿಸಿ ನೀರು ಕುಡಿದ ನಂತರ ದಿನದ ಕೆಲಸ ಆರಂಭಿಸುವಿರಿ.

ಕುಂಭ

ಖನಿಜಯುಕ್ತ ನೀರಿನ ತಯಾರಿಕಾ ಸಂಸ್ಥೆಯನ್ನು ಆರಂಭಿಸುವಿರಿ. ಕಷ್ಟ ಪಟ್ಟು ದುಡಿಯುವುದನ್ನು ಇಚ್ಚಿಸದೆ ಕಮೀಷನ್ ಏಜೆನ್ಸಿಯನ್ನು ಆರಂಭಿಸುವಿರಿ. ಹಣಕಾಸಿನ ಕೊರತೆ ಕಂಡುಬರದು. ಪರಸ್ಥಳದಲ್ಲಿ ಅಭಿವೃದ್ದಿ ಇರುತ್ತದೆ. ಹಣಕಾಸಿನ ವಿವಾದಗಳಲ್ಲಿ ಮಧ್ಯವರ್ತಿಯಾಗಿ ಹಣವನ್ನು ಗಳಿಸುವಿರಿ. ವಿದ್ಯಾರ್ಥಿಗಳು ಯಾವುದೆ ಕ್ಲಿಷ್ಟಕರವಾದ ವಿಚಾರವನ್ನು ಅರ್ಥಮಾಡಿಕೊಳ್ಳಬಲ್ಲರು. ಬೋಧನಾಕೇಂದ್ರವನ್ನು ಆರಂಭಿಸಿ ಜನರ ಸಹಕಾರವನ್ನು ಪಡೆಯುವಿರಿ. ಗಣ್ಯವ್ಯಕ್ತಿಗಳ ಸಹಾಯದಿಂದ ಜನಪರ ಸಂಘವನ್ನು ಆರಂಭಿಸುವಿರಿ. ಪಾಲುಗಾರಿಕೆ ವ್ಯಾಪಾರ ಲಾಭ ನೀಡದು. ಗಿಣಿಗೆ ಆಹಾರ ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಮೀನ

ಜಲಚರಗಳ ವ್ಯಾಪಾರದಲ್ಲಿ ಲಾಭವಿದೆ. ಪಶುಸಂಗೋಪನೆಯಲ್ಲಿ ನೆಮ್ಮದಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳ ಸಹಕಾರವಿರುತ್ತದೆ. ದೃಡಚಿತ್ತದ ಅವಶ್ಯಕತೆ ಇದೆ. ಯಾವುದೂ ಅಸಾಧ್ಯವಲ್ಲ. ಸತತವಾಗಿ ಮನಸ್ಸಿನ ವಿಚಾರಗಳನ್ನು ಬದಲಾಯಿಸುವ ಕಾರಣ ಕೆಲಸ ಕಾರ್ಯಗಳಲ್ಲಿ ತೊಡಕು ಉಂಟಾಗುತ್ತವೆ. ಹಣದ ತೊಂದರೆ ಬಾರದು. ಮುಂದಾಲೋಚನೆಯಿಂದ ಹಣದ ಉಳಿತಾಯಕ್ಕೆ ಯೋಜನೆಯನ್ನು ರೂಪಿಸುವಿರಿ. ಶೀತದ ತೊಂದರೆ ಕಾಡುತ್ತದೆ. ಯೋಗ ಪ್ರಾಣಾಯಾಮದ ತರಬೇತಿಕೇಂದ್ರವನ್ನು ಆರಂಭಿಸಿ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸುವಿರಿ. ಪಾರಿವಾಳಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದಲ್ಲಿ ಶುಭವಿದೆ.

ವಿಭಾಗ