Kannada News  /  Astrology  /  Daily Astrological Prediction For May 26th 2023 Today S Horoscope Mnk
ಅತಿಯಾದ ಚಿಂತೆಯಿಂದ ಈ ರಾಶಿಯವರಿಗೆ ಹೆಚ್ಚಾಗಲಿದೆ ರಕ್ತದೊತ್ತಡ; ತಾಳ್ಮೆ ನಿಮ್ಮನ್ನು ಉಳಿಸುತ್ತದೆ: ಇಂದಿನ ದಿನ ಭವಿಷ್ಯ
ಅತಿಯಾದ ಚಿಂತೆಯಿಂದ ಈ ರಾಶಿಯವರಿಗೆ ಹೆಚ್ಚಾಗಲಿದೆ ರಕ್ತದೊತ್ತಡ; ತಾಳ್ಮೆ ನಿಮ್ಮನ್ನು ಉಳಿಸುತ್ತದೆ: ಇಂದಿನ ದಿನ ಭವಿಷ್ಯ

Horoscope Today: ಅತಿಯಾದ ಚಿಂತೆಯಿಂದ ಈ ರಾಶಿಯವರಿಗೆ ಹೆಚ್ಚಾಗಲಿದೆ ರಕ್ತದೊತ್ತಡ; ತಾಳ್ಮೆ ನಿಮ್ಮನ್ನು ಉಳಿಸುತ್ತದೆ: ಇಂದಿನ ದಿನ ಭವಿಷ್ಯ

26 May 2023, 5:30 ISTHT Kannada Desk
26 May 2023, 5:30 IST

ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಇಂದು ವಿವಿಧ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದು, ಅವರ ಪಾಲಿಗೆ ಶುಭ ದಿನವಾಗಲಿದೆ. ಈ ಜಗತ್ತಿನ ನಿಯಮದಂತೆ ಎಲ್ಲರಿಗೂ ಒಳಿತೇ ದೊರಕಿದರೆ ಕೆಡಕಿಗೆ ಏನರ್ಥ. ಕೆಲವು ರಾಶಿಯವರಿಗೆ ಇಂದು ಕೆಟ್ಟ ಸುದ್ದಿಯೂ ಎದುರಾಗಬಹುದು. ಬನ್ನಿ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ.

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ಗ್ರೀಷ್ಮ ಋತು - ಜ್ಯೇಷ್ಠ ಮಾಸ - ಶುಕ್ಲ ಪಕ್ಷ- ಶುಕ್ರವಾರ

ತಿಥಿ: ಸಪ್ತಮಿ ರಾ.04.53 ರವರೆಗೆ ಆನಂತರ ಅಷ್ಟಮಿ ಆರಂಭವಾಗುತ್ತದೆ.

ನಕ್ಷತ್ರ: ಆಶ್ಲೇಷ ನಕ್ಷತ್ರವು ಸ.06.44 ರವರೆಗೆ ಇದ್ದು ಆನಂತರ ಮಖ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ. 05.52

ಸೂರ್ಯಾಸ್ತ: ಸ. 6.40

ರಾಹುಕಾಲ: ಬೆ.10.44 ರಿಂದ ಮ.12.20

ರಾಶಿ ಫಲಗಳು

ಮೇಷ

ಎಲ್ಲಾ ಕೆಲಸ ಕಾರ್ಯಗಳಲ್ಲಿ ಮಗಳ ಸಹಾಯ ಸಹಕಾರ ಇರುತ್ತದೆ. ಸೋಲು ಗೆಲುವನ್ನು ಸಮಾನ ಭಾವನೆಯಿಂದ ಸ್ವೀಕರಿಸುವಿರಿ. ಸಮಯವನ್ನು ವ್ಯರ್ಥಮಾಡದೆ ಯಾವುದಾರೊಂದು ಕೆಲಸದಲ್ಲಿ ಮಗ್ನರಾಗುವಿರಿ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗದು. ಸುತ್ತ ಮುತ್ತಲಿರುವವರ ಸಂತೋಷಕ್ಕೆ ಕಾರಣರಾಗುವಿರಿ. ವ್ಯಾಪಾರ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಿದರೂ ತೊಂದರೆ ಆಗದು. ನೂತನ ವ್ಯಾಪಾರಾದಿಗಳ ಬಗ್ಗೆ ಆಸಕ್ತಿ ತೋರುವುದಿಲ್ಲ. ಮನೆಯಲ್ಲಿನ ಪೂಜಾಸ್ಥಳವನ್ನು ಶುಚಿಗೊಳಿಸಿದ ನಂತರ ದಿನದ ಕೆಲಸ ಆರಂಭಿಸಿ.

ವೃಷಭ

ಬಿಡುವಿಲ್ಲದ ಕೆಲಸದ ಕಾರಣ ವಿಶ್ರಾಂತಿ ಬೇಕೆನಿಸುತ್ತದೆ. ಬುದ್ಧಿವಂತಿಕೆಯ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ತೊಂದರೆ ಇರದು. ಬಡ್ತಿ ದೊರೆತು ದೂರದ ಊರಿಗೆ ತೆರಳುವಿರಿ. ವಿದ್ಯಾರ್ಥಿಗಳು ಹಠದ ಸ್ವಭಾವವನ್ನು ಬಿಡಬೇಕು. ಬಂಧು ಬಳಗದವರ ಜೊತೆಯ ಹಣಕಾಸಿನ ವ್ಯವಹಾರದಲ್ಲಿ ಜಯಗಳಿಸುವಿರಿ. ಮೃದುವಾದ ಆಹಾರ ಮತ್ತು ಹಣ್ಣಿನ ರಸದ ವ್ಯಾಪಾರದಲ್ಲಿ ಲಾಭಗಳಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಬಾರದು. ಆರೋಗ್ಯದ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಆಸ್ತಿಯು ದೊರೆಯುತ್ತದೆ. ಪೂರ್ವ ದಿಕ್ಕಿಗೆ ಮಖ ಮಾಡಿ ತುಳಸಿಗಿಡಕ್ಕೆ ನೀರು ಹಾಕಿದ ನಂತರ ದಿನದ ಕೆಲಸವನ್ನುಆರಂಭಿಸಿ.

ಮಿಥುನ

ಒಂದೇ ಮನಸ್ಸಿನ್ನಿಂದ ಮಾಡುವ ಕೆಲಸದಲ್ಲಿ ಸುಲಭ ಜಯ ದೊರೆಯುತ್ತದೆ. ಉತ್ತಮ ಆದಾಯ ಇರುವ ವೇಳೆ ಹಣ ಉಳಿಸಲು ಪ್ರಯತ್ನಿಸಿ. ಕೃಷಿಕರಿಗೆ ಸರಕಾರದ ಸಹಾಯ ದೊರೆಯುತ್ತದೆ. ಯಾರನ್ನೂ ನಂಬುವುದಿಲ್ಲ. ಸಂಚಾರ ಸಂಬಂಧಿ ಉದ್ಯೋಗ ದೊರೆಯುತ್ತದೆ. ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಯನ್ನುಆರಂಭಿಸುವಿರಿ. ವಿದ್ಯಾರ್ಥಿಗಳು ವಿಶೇಷ ಅಧ್ಯಯನದಲ್ಲಿ ತಲ್ಲೀನರಾಗುತ್ತಾರೆ. ಮನೆಗೆ ವೈಭವಯುತ ಅಲಂಕಾರದ ಪದಾರ್ಥಗಳನ್ನು ಕೊಳ್ಳುವಿರಿ. ಶೀತ ವಾಯುವಿನ ದೋಷವಿರುತ್ತದೆ. ವಿವಾಹಯೋಗವಿದೆ. ಸಾಲದ ವ್ಯವಹಾರ ಬೇಡ. ಬಲಗೈಯಲ್ಲಿ ಶುಭ ಚಿನ್ಹೆಯಿರುವ ಬಂಗಾರದ ಉಂಗುರ ಧರಿಸಿ ಕೆಲಸವನ್ನು ಆರಂಭಿಸಿ.

ಕಟಕ

ಕುಟುಂಬಕ್ಕೆ ಸಂಬಂಧಿಸಿದ ಮುಖ್ಯವಾದ ಕೆಲಸವೊಂದು ಅಪೂರ್ಣಗೊಳ್ಳಲಿದೆ. ಬೇಸರದ ಕಾರಣ ವೃತ್ತಿಯನ್ನು ಬದಲಾಯಿಸುವಿರಿ. ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ವಿದ್ಯಾಭ್ಯಾಸದಲ್ಲಿನ ತೊಡಕುಗಳು ದೂರವಾಗಲಿವೆ. ಆತುರದಿಂದ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದಿರಿ. ವಂಶದ ಆಸ್ತಿಪಾಲಿನಲ್ಲಿ ವಿರೋಧವಿರುತ್ತದೆ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ಬೇಸಾಯದಲ್ಲಿ ಹಣಗಳಿಕೆ ಇರುತ್ತದೆ. ನೀರು ಅಥವ ಹಣ್ಣಿನ ರಸದ ವ್ಯಾಪಾರದಲ್ಲಿ ಲಾಭವಿದೆ. ಗಂಟಲಿನ ಸೋಂಕು ಇರುತ್ತದೆ. ಅನಿವಾರ್ಯವಾಗಿ ಬೇರೆಯವರಿಂದ ಹಣವನ್ನು ಪಡೆಯುವಿರಿ. ಬಿಳಿಬಟ್ಟೆ ಧರಿಸಿದಲ್ಲಿ ದಿನದ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. .

ಸಿಂಹ

ಸಿಡುಕುತನಕ್ಕೆ ಹೆದರಿ ಆಪ್ತರೂ ನಿಮ್ಮೊಡನೆ ಮಾತನಾಡಲು ಹೆದರುತ್ತಾರೆ. ಸತ್ಪುರುಷರ ಹಾದಿಯಲ್ಲಿ ನಡೆಯುವಿರಿ. ಚರ್ಮದ ದೋಷ ಇರುತ್ತದೆ. ವಿನಾಕಾರಣ ವಾದ ವಿವಾದಗಳಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಯಾಗಿ ಬಡ್ತಿ ದೊರೆಯುತ್ತದೆ. ಕುಟುಂಬದ ಅವ್ಯವಸ್ಥೆಗೆ ಕಾರಣರಾಗುವಿರಿ. ವಿದ್ಯಾರ್ಥಿಗಳು ಹೊಂದಾಣಿಕೆಯ ಗುಣವನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಅಧೀನದಲ್ಲಿ ಮಾಡುವ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಮೌನವಾಗಿದಷ್ಟೂ ಒಳ್ಳೆಯದು. ತಂದೆಯವರ ಜೊತೆಯಲ್ಲಿ ವ್ಯಾಪಾರ ವ್ಯವಹಾರದ ಬಗ್ಗೆ ಮಾತು ಕತೆ ನಡೆಸುವಿರಿ. ಸಿದ್ಧಪುರುಷರ ಆಶೀರ್ವಾದ ಪಡೆದ ನಂತರ ದಿನದ ಕೆಲಸ ಆರಂಭಿಸಿ.

ಕನ್ಯಾ

ಭೂವ್ಯವಹಾರದಲ್ಲಿ ಲಾಭವಿದೆ. ತಂದೆಯವರ ಹಠದ ಗುಣದಿಂದಾಗಿ ಕುಟುಂಬದಲ್ಲಿ ಬೇಸರವಿರುತ್ತದೆ. ಒಳ್ಳೆಯ ಮನಸ್ಸಿದ್ದರೂ ಯೋಚಿಸದೆ ಮಾತನಾಡುವಿರಿ. ಉದ್ಯೋಗದಲ್ಲಿ ಸ್ಥಿರತೆಯ ಕೊರತೆ ಇರುತ್ತದೆ. ಚಾಡಿ ಮಾತುಗಳನ್ನು ಕೇಳದಿರಿ. ಸೋದರಿಯ ಜೀವನದಲ್ಲಿ ವಿವಾದವಿರುತ್ತದೆ. ಬೇರೆಯವರಿಗೆ ಬುದ್ಧಿ ಹೇಳುವುದನ್ನೇ ಉದ್ಯೋಗವಾಗಿರಿಸುವಿರಿ. ಹಣಕಾಸಿನ ಲೆಕ್ಕಾಚಾರಕ್ಕೆ ಸಂಬಂಧಿಸಿದ ಉಪ ವೃದ್ಧಿಯನ್ನು ಆರಂಭಿಸಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಅಧ್ಯಾಪಕರ ಸಹಕಾರ ದೊರೆಯುತ್ತದೆ. ರಕ್ತದ ಒತ್ತಡವಿರುವವರು ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಸೋದರರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಮಾಡಬಹುದು. ಐದು ತೆಂಗಿನಕಾಯಿಗಳನ್ನು ದಾನನೀಡಿ ದಿನದ ಕೆಲಸ ಆರಂಭಿಸಿ.

ತುಲಾ

ಅನಾವಶ್ಯಕ ಓಡಾಟದಲ್ಲಿ ದಿನಗಳೆಯುವಿರಿ. ಜೀವನದಲ್ಲಿ ಯಾವುದೇ ತೊಂದರೆ ಬಾರದು. ಅದೃಷ್ಟವಶಾತ್ ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಾಣದು. ಹೆಚ್ಚಿನ ಆದಾಯಕ್ಕಾಗಿ ವೃತ್ತಿಯನ್ನು ಬದಲಾಯಿಸುವಿರಿ. ವಾದ ವಿವಾದಗಳನ್ನು ಬಗೆಹರಿಸಲು ಶಾಂತಿ ಸಭೆಗಳನ್ನು ಏರ್ಪಡಿಸುವಿರಿ. ವಾಣಿಜ್ಯ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಇರುವುದಿಲ್ಲ. ಗೃಹಾಲಂಕಾರ ಪದಾರ್ಥಗಳ ವ್ಯಾಪಾರದಿಂದ ಲಾಭವಿರುತ್ತದೆ. ಭೂವಿವಾದ ಇರುತ್ತದೆ. ಹೊಸ ಬಟ್ಟೆಗೆ ನೀರು ಚಿಮುಕಿಸಿ ಧರಿಸಿ.

ವೃಶ್ಚಿಕ

ಯಾರ ಮರ್ಜಿಗೂ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಕೆಲಸದ ಒತ್ತಡದಿಂದಾಗಿ ರಕ್ತದ ಒತ್ತಡದಲ್ಲಿ ಏರಿಳಿತ ಉಂಟಾಗುತ್ತದೆ. ಎಲ್ಲರನ್ನೂ ಅನುಮಾನದಿಂದ ನೋಡುವಿರಿ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ. ವಿನಾಕಾರಣ ವಾದ ವಿವಾದಗಳಲ್ಲಿ ತೊಡಗುವಿರಿ. ಉದ್ಯೋಗದಲ್ಲಿ ಪರಿಪೂರ್ಣತೆ ಇರುವುದಿಲ್ಲ. ವಿದ್ಯಾರ್ಥಿಗಳು ಸಾಧಾರಣ ಯಶಸ್ಸನ್ನು ಗಳಿಸುವರು. ಅಂತರ್ಜಾಲದ ಮುಖಾಂತರ ಮಾಡುವ ವ್ಯಪಾರದಲ್ಲಿ ಲಾಭ ದೊರೆಯುತ್ತದೆ. ಆಹಾರ ಅಥವಾ ಔಷಧಿಯ ವ್ಯಾಪಾರದಲ್ಲಿ ಅದಾಯ ಇರುತ್ತದೆ. ಅವಶ್ಯಕತೆ ಇದ್ದವರಿಗೆ ಅಕ್ಕಿ ಬೆಲ್ಲವನ್ನು ದಾನ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಧನಸ್ಸು

ಸಂಸಾರದ ಕಷ್ಟ ನಷ್ಟಗಳು ಕಡಿಮೆ ಆಗಲು ಕಾರಣರಾಗುವಿರಿ. ಸಂತಾನ ಭಾಗ್ಯವಿದೆ. ಉತ್ತಮ ಪ್ರಯತ್ನಗಳು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ನೀಡುತ್ತದೆ. ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಶುಭವಿದೆ. ಬೇರೆಯವರ ತಪ್ಪುಗಳನ್ನು ಸರಿಮಾಡುವುದೇ ಕೆಲಸವಾಗಿಬಿಡುತ್ತದೆ. ವಿದ್ಯಾರ್ಥಿಗಳು ಉನ್ನತ ಮಟ್ಟ ತಲುಪುವಿರಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆಯನ್ನು ಗಳಿಸಲು ಎರಡಕ್ಕಿಂತಲೂ ಹೆಚ್ಚಿನ ಉದ್ಯೋಗ ಮಾಡುವಿರಿ. ಬೇಸರ ಕಳೆಯಲು ಮನರಂಜನಾ ಸ್ಥಳಗಳಿಗೆ ಭೇಟಿ ನೀಡುತ್ತದೆ. ಕಪ್ಪು ಅಥವಾ ನೀಲಿ ಬಣ್ಣವನ್ನು ಇಂದು ಉಪಯೋಗಿಸಬಾರದು.

ಮಕರ

ದುಡುಕುತನದಿಂದ ವರ್ತಿಸದೆ ಬುದ್ಧಿವಂತಿಕೆಯಿಂದ ತೊಂದರೆಯಿಂದ ಹೊರಬರುವಿರಿ. ಮನೆಯ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆ. ಆದರೆ ಸದಾ ಚುರುಕಿನಿಂದ ವರ್ತಿಸುವಿರಿ. ಪ್ರತ್ಯುಪಕಾರ ಬಯಸದೆ ಜನಸೇವೆಯಲ್ಲಿ ನಿರತರಾಗುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಕಬ್ಬಿಣ ಅಥವಾ ಇನ್ನಿತರ ಲೋಹಗಳ ವ್ಯಾಪಾರದಲ್ಲಿ ಲಾಭವಿದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಗುರಿ ತಲುಪಲಿದ್ದಾರೆ. ಪಾಲುಗಾರಿಕೆಯ ವ್ಯಾಪಾರ ಆರಂಭಿಸಿದರೂ ನಿಮ್ಮ ನಿರ್ಧಾರವೇ ಅಂತಿಮವಾಗುತ್ತದೆ. ಬಲಗೈಯಲ್ಲಿ ಬೆಳ್ಳಿ ಬಳೆ ಅಥವಾ ಕಡಗವನ್ನು ಧರಿಸಿದಲ್ಲಿ ಒಳ್ಳೆಯದು.

ಕುಂಭ

ಯಾವ ಕೆಲಸವನ್ನೂ ಸುಲಭವಾಗಿ ಮಾಡುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು ಇರುವುದಿಲ್ಲ. ಮನದಲ್ಲಿನ ವಿಚಾರವನ್ನು ಯಾರಿಗೂ ಹೇಳುವುದಿಲ್ಲ. ಮಾತೆ ಬಂಡವಾಳ. ವಿದ್ಯಾರ್ಥಿಗಳು ಪ್ರಯಾಸದಿಂದ ಅಧ್ಯಯನದಲ್ಲಿ ನಿರತರಾಗುತ್ತಾರೆ. ಉದ್ಯೋಗದಲ್ಲಿ ವಿವಾದದ ಕ್ಷಣಗಳು ಎದುರಾಗುತ್ತವೆ. ಸಮಾಜದ ಗಣ್ಯವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ಹಳೆಯ ಮನೆಯನ್ನು ನವೀಕರಿಸುವಿರಿ. ಗಂಟಲಿನ ತೊಂದರೆ ನಿಮ್ಮನ್ನು ಕಾಡಲಿದೆ. ಭೂವ್ಯಹಾರದಲ್ಲಿ ಮಧ್ಯಸ್ಥಿಕೆಯನ್ನು ವಹಿಸಿ ಉತ್ತಮ ಲಾಭಾಂಶವನ್ನು ಪಡೆಯುವಿರಿ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಶುಭ ಫಲಗಳನ್ನು ಪಡೆಯಲು ತಾಮ್ರದ ಲೋಟದಲ್ಲಿ ನೀರನ್ನು ಕುಡಿಯಿರಿ.

ಮೀನ

ಎದುರಾಗುವ ತೊಂದರೆ ತಾಪತ್ರಯಗಳಿಂದ ಕುಟುಂಬದ ಸದಸ್ಯರ ಸಹಾಯದಿಂದ ಪಾರಾಗುವಿರಿ. ಸಾಮಾಜಿಕ ಕಳಕಳಿಯಿಂದ ಸಂಘ ಸಂಸ್ಥೆಯನ್ನು ಸ್ಥಾಪಿಸುವಿರಿ. ಎರಡು ರೀತಿಯ ಉದ್ಯೋಗವನ್ನು ಮಾಡುವಿರಿ. ವೃತ್ತಿಕ್ಷೇತ್ರದಲ್ಲಿ ಅಧಿಕಾರಿಯತ ಸ್ಥಾನ ಮಾನ ದೊರೆಯುತ್ತದೆ. ವ್ಯಾಪಾರದಲ್ಲಿ ಲಾಭವಿರುತ್ತದೆ. ನೀರಾವರಿ ಭೂಮಿ ಇದ್ದಲ್ಲಿ ಹಣ್ಣು ಮತ್ತು ತರಕಾರಿ ಬಿತ್ತನೆಗೆ ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ತೆರಳುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ತಂದೆಯವರು ಹಣದ ಸಹಾಯ ಮಾಡುತ್ತಾರೆ. ಅರಳಿಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ವಿಭಾಗ