ಕನ್ನಡ ಸುದ್ದಿ  /  Astrology  /  Daily Astrological Prediction For May 27th 2023 Today S Horoscope Mnk

Horoscope Today: ಗುಟ್ಟಾಗಿ ಕೆಲಸ ಸಾಧಿಸುವಿರಿ, ಆರೋಗ್ಯ ಕೈ ಕೊಡುವ ಮುನ್ಸೂಚನೆ ದಕ್ಕಲಿದೆ; ಇಂದಿನ ದಿನ ಭವಿಷ್ಯ ಹೀಗಿದೆ

ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಇಂದು ವಿವಿಧ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದು, ಅವರ ಪಾಲಿಗೆ ಶುಭ ದಿನವಾಗಲಿದೆ. ಈ ಜಗತ್ತಿನ ನಿಯಮದಂತೆ ಎಲ್ಲರಿಗೂ ಒಳಿತೇ ದೊರಕಿದರೆ ಕೆಡಕಿಗೆ ಏನರ್ಥ. ಕೆಲವು ರಾಶಿಯವರಿಗೆ ಇಂದು ಕೆಟ್ಟ ಸುದ್ದಿಯೂ ಎದುರಾಗಬಹುದು. ಬನ್ನಿ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ.

ಗುಟ್ಟಾಗಿ ಕೆಲಸ ಸಾಧಿಸುವಿರಿ, ಆರೋಗ್ಯ ಕೈ ಕೊಡುವ ಮುನ್ಸೂಚನೆ ದಕ್ಕಲಿದೆ; ಇಂದಿನ ದಿನ ಭವಿಷ್ಯ ಹೀಗಿದೆ
ಗುಟ್ಟಾಗಿ ಕೆಲಸ ಸಾಧಿಸುವಿರಿ, ಆರೋಗ್ಯ ಕೈ ಕೊಡುವ ಮುನ್ಸೂಚನೆ ದಕ್ಕಲಿದೆ; ಇಂದಿನ ದಿನ ಭವಿಷ್ಯ ಹೀಗಿದೆ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ಗ್ರೀಷ್ಮ ಋತು- ಜ್ಯೇಷ್ಠ ಮಾಸ - ಶುಕ್ಲ ಪಕ್ಷ- ಶನಿವಾರ

ತಿಥಿ: ಅಷ್ಟಮಿ ದಿನಪೂರ್ತಿ ಇರುತ್ತದೆ.

ನಕ್ಷತ್ರ: ಮಖ ನಕ್ಷತ್ರವು ರಾ.09.17 ರವರೆಗೆ ಇದ್ದು ಆನಂತರ ಪುಬ್ಬ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ. 05.52

ಸೂರ್ಯಾಸ್ತ: ಸ.6.40

ರಾಹುಕಾಲ: ಬೆ.09.08 ರಿಂದ ಬೆ.10.44

ರಾಶಿ ಫಲಗಳು

ಮೇಷ

ಅಪರೂಪದ ಪ್ರತಿಭೆಯ ಅನಾವರಣಕ್ಕೆ ವೇದಿಕೆಯೊಂದು ದೊರೆಯಲಿದೆ. ತಾಯಿಗೆ ಕೃಷಿ ಭೂಮಿಯೊಂದು ಉಡುಗೊರೆಯಾಗಿ ಬರಲಿದೆ. ಬಟ್ಟೆಯ ತಯಾರಿಕೆಯಲ್ಲಿ ಆದಾಯವಿರುತ್ತದೆ. ಕೇಳುವುದೆಲ್ಲಾ ನಿಜ ಎಂದು ನಂಬದಿರಿ. ಉದ್ಯೋಗದಲ್ಲಿ ತೊಂದರೆ ಇರದು. ವಿದ್ಯಾರ್ಥಿಗಳು ಹಠದಿಂದ ಕಲಿಯುವಿಕೆಯಲ್ಲಿ ಮುಂದೆ ಇರುತ್ತಾರೆ. ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಗತ್ಯತೆ ಪೂರೈಸುವಷ್ಟು ಆದಾಯ ಇರುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ವಿವಾಹದ ಮಾತುಕತೆ ನಡೆಯಬಹುದು. ತಂದೆಯವರಿಂದ ಹಣವನ್ನು ಬಳಿಯಲ್ಲಿ ಇಟ್ಟುಕೊಂಡಲ್ಲಿ ಯಾವುದೇ ತೊಂದರೆ ಬಾರದು.

ವೃಷಭ

ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ತಂದೆಗೆ ಸೋದರ ವರ್ಗದಲ್ಲಿ ಮನಸ್ತಾಪ ಇರುತ್ತದೆ. ಕುಟುಂಬದಲ್ಲಿ ಉದ್ವೇಗದ ವಾತಾವರಣ ಇರುತ್ತದೆ. ಕುಟುಂಬದ ಭೂಮಿಯೊಂದು ವಿವಾದಕ್ಕೆ ಈಡಾಗುತ್ತದೆ. ರಾಜಕೀಯದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ಆತಂಕದಿಂದ ಹೊರಬರಬೇಕು. ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ನಿರೂಪಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರದು. ಮಧ್ಯವರ್ತಿಯಾಗಿ ಹಣದ ವ್ಯವಹಾರದಲ್ಲಿ ಹಣವನ್ನು ಸಂಪಾದಿಸುವಿರಿ. ಕಂತಿನ ವ್ಯಾಪಾರದಲ್ಲಿ ಲಾಭವಿರುತ್ತದೆ. ಸಾಧು ಸಂತರ ಆಶೀರ್ವಾದ ಪಡೆದ ನಂತರ ದಿನದ ಕೆಲಸವನ್ನು ಆರಂಭಿಸಿ.

ಮಿಥುನ

ಮಾಡಿದ ಕೆಲಸವನ್ನು ಪದೇಪದೆ ಮಾಡುವ ಕಾರಣ ಕೆಲಸದಲ್ಲಿ ಹಿನ್ನೆಡೆ ಉಂಟಾಗುವ ಸಾಧ್ಯತೆಯಿರುತ್ತದೆ. ವ್ಯಾಪಾರ ವ್ಯವಹಾದಲ್ಲಿ ಆದಾಯಕ್ಕೆ ತೊಂದರೆ ಇರದು. ಸಿಡುಕುತನ ಕಡಿಮೆ ಮಾಡಿರಿ. ಮನಸ್ಸು ಎಷ್ಟೇ ಒಳ್ಳೆದಾದರೂ ದುಡುಕಿ ಮಾತನಾಡುವ ಕಾರಣ ತೊಂದರೆಯನ್ನು ಎದುರಿಸಬೇದಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಅನಿವಾರ್ಯವಾಗಿ ಜಮೀನೊಂದನ್ನು ಮಾರಾಟ ಮಾಡಿ ಮನೆಕೊಳ್ಳುವ ಮಾತನಾಡುವಿರಿ. ಸೋದರನಿಂದ ಹಣದ ಸಹಾಯ ದೊರೆಯುತ್ತದೆ. ಸ್ವಂತ ಬಳಕೆಗೆ ನಾಲ್ಕುಚಕ್ರದ ವಾಹನವನ್ನು ಕೊಳ್ಳುವಿರಿ. ಪೂಜಾಸ್ಥಳಕ್ಕೆ ಬಾದಾಮಿ ನೀಡಿದ ನಂತರ ದಿನದ ಕೆಲಸವನ್ನು ಆರಂಬಿಸಿ.

ಕಟಕ

ಜವಾಬ್ದಾರಿಯಿಂದ ಕೈಹಿಡಿದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಸದಾ ಕಾಲ ಯಾವುದಾದರೊಂದು ಕೆಲಸದಲ್ಲಿ ತಲ್ಲೀನರಾಗುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ರಾಜಕೀಯ ಪ್ರವೇಶಿಸುವ ಆಶಯ ಇದ್ದಲ್ಲಿ ಅವಕಾಶವೊಂದು ನಿಮ್ಮದಾಗುತ್ತದೆ. ತರಕಾರಿ ಬೆಳೆಯುವುದರಿಂದ ಅಥವಾ ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ವ್ಯವಸಾಯಕ್ಕೆ ಅವಶ್ಯಕವಾದ ಯಂತ್ರೋಪಕರಣಗಳ ಸರಬರಾಜಿನಲ್ಲಿ ಹಣಗಳಿಸುವಿರಿ. ಐದು ನಾಣ್ಯಗಳನ್ನು ಜೇಬಿಗಿಳಿಸಿ ದಿನದ ಕಾರ್ಯವನ್ನು ಆರಂಭಿಸಿ.

ಸಿಂಹ

ಯಾರ ಮಾತನ್ನೂ ಒಪ್ಪುವುದಿಲ್ಲ. ಪ್ರತಿ ವಿಷಯದಲ್ಲಿಯೂ ನಿಮ್ಮ ಮಾತೇ ಅಂತಿಮ ಆಗಲಿದೆ. ಸ್ವಗೃಹ ಭೂಲಾಭವಿದೆ. ತಂದೆಯವರ ಸಹಾಯ ದೊರೆಯುತ್ತದೆ. ತಂದೆಯವರ ಹಠದ ಗುಣದಿಂದ ಕುಟುಂಬದಲ್ಲಿ ಬಿಗುವಿನ ವಾತಾವರಣ ಇರುತ್ತದೆ. ವೃತ್ತಿಕ್ಷೇತ್ರದಲ್ಲಿ ಯಾವುದೇ ತೊಂದರೆ ಎದುರಾಗದು. ಹಣದ ಲೆಕ್ಕಾಚಾರ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅಪರೂಪದ ಕಲೆಯೊಂದು ಒಲಿಯಲಿದೆ. ಮೂರನೆಯವರ ಕಾರಣ ಮನೆಯಲ್ಲಿ ವಾದ ವಿವಾದಗಳು ಉಂಟಾಗಲಿವೆ. ಸಾಲದ ವ್ಯವಹಾರ ಮಾಡದಿರಿ. ಹಳದಿ ಬಟ್ಟೆ ಬಳಿ ಇದ್ದಲ್ಲಿ ಒಳ್ಳೆಯದು.

ಕನ್ಯಾ

ಅತಿಯಾಗಿ ಮಾತನಾಡದಿರಿ. ತಪ್ಪು ಮಾಹಿತಿಯನ್ನು ನಂಬಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ. ಉದ್ಯೋಗದಲ್ಲಿ ತೊಂದರೆ ಕಾಣದು. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಸಿನಿಂದ ವ್ಯಾಸಂಗದಲ್ಲಿ ತೊಡಗಿಸಿಕೊಳ್ಳಿ. ಸೋದರನಿಗೆ ದೂರದ ಸ್ಥಳದಲ್ಲಿ ವೃತ್ತಿ ದೊರೆಯುತ್ತದೆ. ಲೇಖಕರು ಮತ್ತು ಕವಿಗಳಿಗೆ ಗೌರವಾದರಗಳು ಲಭಿಸುತ್ತವೆ. ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸದಿರಿ. ತಂದೆಯವರ ವ್ಯಾಪಾರದಲ್ಲಿ ಭಾಗಿಯಾದಲ್ಲಿ ಅನುಕೂಲ ಉಂಟಾಗಲಿದೆ. ಹಣದ ವಿವಾದವೊಂದು ಎದುರಾಗಲಿದೆ. ಸೋದರಿಯ ಜೀವನದಲ್ಲಿನ ವಿವಾದವು ಕೊನೆಗೊಳ್ಳುತ್ತವೆ. ಅರಳಿಮರಕ್ಕೆ ನೀರನ್ನು ಹಾಕಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ತುಲಾ

ವಿಶ್ರಾಂತಿ ಇಲ್ಲದೆ ದುಡಿಯುವಿರಿ. ಸಮಾಜಸೇವೆಯಲ್ಲಿ ತೊಡಗುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವರು. ಬೃಹತ್ ಯಂತ್ರೋಪಕರಣಗಳ ಸರಬರಾಜಿನಲ್ಲಿ ಹೆಚ್ಚಿನ ಲಾಭಾಂಶ ಇರುತ್ತದೆ. ಕುಟುಂಬದಲ್ಲಿ ವಿರಸವಿರುತ್ತದೆ. ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಆದಾಯದ ದೃಷ್ಠಿಯಿಂದ ಹಣ್ಣಿನ ರಸದ ವ್ಯಾಪಾರವನ್ನು ಆರಂಭಿಸುವಿರಿ. ಮಗಳು ಅಥವ ಸೋದರಿಯ ವಿವಾಹದ ಮಾತುಕತೆ ನಡೆಯುತ್ತದೆ. ಪುರಾತನ ಮನೆಯ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ವಾಣಿಜ್ಯ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಬಲಗೈಯಲ್ಲಿ ತಾಮ್ರದ ಕಡಗವನ್ನು ಧರಿಸಿ.

ವೃಶ್ಚಿಕ

ಕೈಹಿಡಿದ ಕೆಲಸ ಕಾರ್ಯಗಳು ಯಶಸ್ವಿ ಆಗುತ್ತವೆ. ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ವಂಶದ ಮನೆಯ ವಿಚಾರದಲ್ಲಿ ವಿವಾದವೊಂದು ಎದುರಾಗಲಿದೆ. ಹೆಚ್ಚಿನ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಗುರಿ ತಲುಪಲು ಸಾಧ್ಯ. ವಾಣಿಜ್ಯ ಸಂಸ್ಥೆಗೆ ಅಗತ್ಯವಾದ ಯಂತ್ರೋಪಕರಣಗಳ ಮಾರಾಟದಲ್ಲಿ ಲಾಭವಿರುತ್ತದೆ. ಅನಾವಶ್ಯಕ ವಾದ ವಿವಾದಗಳಿಂದ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ನೀರಿನ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ಮಾಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಧನಸ್ಸು

ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ. ಅನಾವಶ್ಯಕ ಕೋಪಕ್ಕೆ ಒಳಗಾಗುವಿರಿ. ಅದೃಷ್ಟವಿದೆ. ಪ್ರೀತಿ ವಿಶ್ವಾಸದಿಂದ ಎಲ್ಲರ ಜೊತೆ ಬೆರೆತಲ್ಲಿ ಮಹದಾಸೆಯೊಂದು ನೆರವೇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತನ್ಮಯರಾಗುತ್ತಾರೆ. ಹಣದ ಆಸೆ ಇರದು. ಆದರೆ ಜೀವನಕ್ಕೆ ಸಾಕಾಗುವಷ್ಟು ಹಣವನ್ನು ಗಳಿಸುವಿರಿ. ವಂಶಾಧಾರಿತ ವೃತ್ತಿಯನ್ನು ಮುಂದುವರಿಸುವಿರಿ. ಧಾರ್ಮಿಕ ಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸುವಿರಿ. ಮಿತಿ ಇಲ್ಲದ ಸೇವನೆಯಿಂದ ಅಜೀರ್ಣದ ತೊಂದರೆ ಉಂಟಾಗುತ್ತದೆ. ಸೋದರಿಯ ಕುಟುಂಬದಲ್ಲಿ ಅಶಾಂತಿ ಇರುತ್ತದೆ. ತಾಯಿಯ ಆಶೀರ್ವಾದ ಇಲ್ಲದೆ ಯಾವುದೇ ಕೆಲಸ ಮಾಡಲಾರಿರಿ.

ಮಕರ

ಸಮಯಕ್ಕೆ ತಕ್ಕಂತೆ ವರ್ತಿಸುವ ಕಾರಣ ಸುಖಜೀವನ ನಡೆಸುವಿರಿ. ವಾಹನಗಳ ದುರಸ್ಥಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ಅದಾಯವಿರುತ್ತದೆ. ಆಸ್ತಿಯ ವಿವಾದ ಇರುತ್ತದೆ. ಕೈಕಾಲುಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಾಸಸ್ಥಳವನ್ನು ಬದಲಾಯಿಸುವಿರಿ. ಸ್ನೇಹಿತರೊಬ್ಬರು ಹಣದ ಸಹಾಯ ಮಾಡುತ್ತಾರೆ. ಎಲ್ಲರನ್ನೂ ಅನುಮಾನದ ದೃಷ್ಠಿಯಲ್ಲಿ ನೋಡುವಿರಿ. ಮನೆಯಲ್ಲಿ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ. ತಾಯಿಯವರ ಜೊತೆಯಲ್ಲಿ ಪಾಲುಗಾರಿಕೆಯಲ್ಲಿ ಹಾಲಿನ ವ್ಯಾಪಾರ ಆರಂಭಿಸುವಿರಿ. ಕೂಲಿ ಕಾರ್ಮಿಕರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಕುಂಭ

ಕೇವಲ ಸುಲಭವಾದ ಕೆಲಸಗಳನ್ನು ಮಾತ್ರ ಆಯ್ಕೆ ಮಾಡುವಿರಿ. ಯಾರ ಜೊತೆಯಲ್ಲಿಯೂ ಸ್ನೇಹ ಪ್ರೀತಿಯಿಂದ ಇರುವುದಿಲ್ಲ. ಪ್ರತಿ ತಪ್ಪಿಗೂ ಬೇರೆಯವರನ್ನು ದೂರುವುದಿಲ್ಲ. ಗುಟ್ಟಾಗಿ ಕೆಲಸ ಸಾಧಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನೀರಿನ ಜೊತೆಯಲ್ಲಿ ಚೆಲ್ಲಾಟ ಆಡದಿರಿ. ಭೂವಿವಾದ ಇರುತ್ತದೆ. ವ್ಯಾಪಾರ ಮತ್ತು ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ವ್ಯಾಯಾಮ ಶಾಲೆ, ಈಜುಕೊಳ ಮುಂತಾದ ಆರೋಗ್ಯಕ್ಕೆ ಸಂಬಂಧಿಸಿದ ಸೇವಾಧಾರಿತ ಉದ್ಯಮದಿಂದ ಧನಲಾಭವಿದೆ. ಮಕ್ಕಳಿಗೆ ಹೊಟ್ಟೆನೋವಿನ ತೊಂದರೆ ಉಂಟಾಗಬಹುದು. ದೃಷ್ಠಿದೋಷ ಉಳ್ಳವರಿಗೆ ಸಹಾಯ ಮಾಡುವ ಮೂಲಕ ದಿನದ ಕೆಲಸವನ್ನು ಆರಂಭಿಸಿ.

ಮೀನ

ಯಾವುದೇ ಕೆಲಸವನ್ನು ಅರೆ ಮನಸ್ಸಿನಿಂದ ಮಾಡುವಿರಿ. ಹಿರಿಯರ ಹೆಸರಿನಲ್ಲಿದ್ದ ಆಸ್ತಿ ಮತ್ತು ಹಣದ ಪಾಲು ದೊರೆಯುವುದಿಲ್ಲ. ಹಣದ ಕೊರತೆ ಕಾಣದು. ಮಾತಿನಿಂದಲೇ ಕೆಲಸ ಕಾರ್ಯಗಳನ್ನು ಸಾಧಿಸಬಲ್ಲಿರಿ. ಉದ್ಯೋಗದಲ್ಲಿ ತೊಂದರೆ ಇರದು. ವಿದ್ಯಾರ್ಥಿಗಳು ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತಾರೆ. ಕುಟುಂಬದಲ್ಲಿ ಒಮ್ಮತ ಇರುತ್ತದೆ. ಜಗಳ ಕದನಗಳನ್ನು ಇಷ್ಟಪಡದೆ ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವಿರಿ. ಕೃಷಿಯಲ್ಲಿ ಆಸಕ್ತಿ ಇರುತ್ತದೆ. ಆಹಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಮನೆಗೆ ಐಷಾರಾಮಿ ವಸ್ತುಗಳನ್ನು ಕೊಳ್ಳುವಿರಿ. ಮನೆಮುಂದಿನ ಅಂಗಳವನ್ನು ಶುಚಿಗೊಳಿಸಿದ ನಂತರ ಕೆಲಸವನ್ನು ಆರಂಭಿಸಿ.

ವಿಭಾಗ