Kannada News  /  Astrology  /  Daily Astrological Prediction For May 28th 2023 Today S Horoscope Mnk

Horoscope Today: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸಂಗಾತಿ ಸಹಾಯದಿಂದ ಆಸ್ತಿ ಖರೀದಿ ಸಾಧ್ಯತೆ; ಹೀಗಿದೆ ಇಂದಿನ ದಿನ ಭವಿಷ್ಯ

ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸಂಗಾತಿ ಸಹಾಯದಿಂದ ಆಸ್ತಿ ಖರೀದಿ ಸಾಧ್ಯತೆ; ಹೀಗಿದೆ ಇಂದಿನ ದಿನ ಭವಿಷ್ಯ
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸಂಗಾತಿ ಸಹಾಯದಿಂದ ಆಸ್ತಿ ಖರೀದಿ ಸಾಧ್ಯತೆ; ಹೀಗಿದೆ ಇಂದಿನ ದಿನ ಭವಿಷ್ಯ

ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಇಂದು ವಿವಿಧ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದು, ಅವರ ಪಾಲಿಗೆ ಶುಭ ದಿನವಾಗಲಿದೆ. ಈ ಜಗತ್ತಿನ ನಿಯಮದಂತೆ ಎಲ್ಲರಿಗೂ ಒಳಿತೇ ದೊರಕಿದರೆ ಕೆಡಕಿಗೆ ಏನರ್ಥ. ಕೆಲವು ರಾಶಿಯವರಿಗೆ ಇಂದು ಕೆಟ್ಟ ಸುದ್ದಿಯೂ ಎದುರಾಗಬಹುದು. ಬನ್ನಿ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ.

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ಗ್ರೀಷ್ಮ ಋತು- ಜ್ಯೇಷ್ಠ ಮಾಸ- ಶುಕ್ಲ ಪಕ್ಷ- ಭಾನುವಾರ

ಟ್ರೆಂಡಿಂಗ್​ ಸುದ್ದಿ

ತಿಥಿ: ಅಷ್ಟಮಿ ಬೆ.06.51 ರವರೆಗೆ ಇದ್ದು ಆನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ: ಪುಬ್ಬ ನಕ್ಷತ್ರವು ರಾ.11.39 ರವರೆಗೆ ಇದ್ದು ಆನಂತರ ಉತ್ತರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.05.52

ಸೂರ್ಯಾಸ್ತ: ಸ.6.40

ರಾಹುಕಾಲ: ಸ.05.08 ರಿಂದ ಸ.06.44

ರಾಶಿ ಫಲಗಳು

ಮೇಷ

ಬಹುದಿನದಿಂದ ಉಳಿದಿದ್ದ ಕೆಲಸವೊಂದು ಕೈಗೂಡುವುದಿ. ಹೊಸ ಕೆಲಸಗಳನ್ನು ಆರಂಭಿಸುವ ಮುನ್ನ ಅಪೂರ್ಣಗೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಹಣದ ಕೊರತೆ ಇರದು. ಉದ್ಯೋಗದಲ್ಲಿ ಯಾರನ್ನೂ ಟೀಕಿಸದಿರಿ. ವಿದ್ಯಾರ್ಥಿಗಳು ಓದಿನಲ್ಲಿ ಮಗ್ನರಾಗುತ್ತಾರೆ. ರೈತರಿಗೆ ಸಂತಸದ ದಿನ. ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗದು. ಪರಿಸ್ಥಿಯ ಒತ್ತಡಕ್ಕೆ ಒಳಗಾಗಿ ಯಾವುದೇ ನಿರ್ದಾರವನ್ನು ತೆಗೆದುಕೊಳ್ಳದಿರಿ. ಯೋಗ ಪ್ರಾಣಾಯಾಮದ ತರಗತಿ ನಡೆಸುವವರಿಗೆ ಸಮಾಜದ ವಿಶೇಷ ಗೌರವಾದರಗಳು ಲಭಿಸುತ್ತವೆ. ಆರೋಗ್ಯದ ಬಗ್ಗೆ ಗಮನವಿರಲಿ. ಇರುವೆಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ವೃಷಭ

ಎಲ್ಲವೂ ತಿಳಿದಿದೆ ಎಂಬ ಭಾವನೆ ಬೇಡ. ತಪ್ಪು ನಿರ್ಧಾರದಿಂದ ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಕಣ್ಣೆನ ತೊಂದರೆ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ. ಕುಟುಂಬದಲ್ಲಿ ತಪ್ಪು ಕಲ್ಪನೆಯಿಂದ ವಾದ ವಿವಾದವಿರುತ್ತದೆ. ಭೂವಿವಾದವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ತಂದೆಯವರ ಸಹಾಯ ನಿಮಗಿರುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ವಿದ್ಯೆಗಿಂತಲೂ ಬುದ್ಧಿಶಕ್ತಿ ದೊಡ್ಡ ವಿಪತ್ತಿನಿಂದ ಕಾಪಾಡುತ್ತದೆ. ಉದ್ಯೋಗದಲ್ಲಿ ತೊಂದರೆ ಇರದು. ವಿದ್ಯಾರ್ಥಿಗಳು ಉನ್ನತ ಮಟ್ಟ ತಲುಪಲಿದ್ದಾರೆ. ಬೆಲ್ಲ ಮತ್ತು ಗೋಧಿಯನ್ನು ಧಾರ್ಮಿಕ ಕೇಂದ್ರಕ್ಕೆ ನೀಡುವುದು ಒಳಿತು.

ಮಿಥುನ

ಅದೃಷ್ಟವಿದೆ. ದೊರೆವ ಅವಕಾಶಗಳನ್ನು ಸಮರ್ಥಕವಾಗಿ ಬಳಸಿಕೊಳ್ಳಿರಿ. ಹಣಕಾಸಿನ ತೊಂದರೆ ಬಾರದು. ಮಾತಿನಲ್ಲಿ ನಯವಿರಲಿ. ಭೂವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಮನರಂಜನೆಯನ್ನು ಕಡಿಮೆ ಮಾಡುವುದು ಒಳಿತು. ಕಾನೂನು ಚೌಕಟ್ಟಿನಲ್ಲಿ ಮಾಡುವ ಲೇವಾ ದೇವಿ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಖರ್ಚು ಹೆಚ್ಚಾದಲ್ಲಿ ಸಹನೆ ಮರೆತು ಉದ್ವೇಗದಿಂದ ವರ್ತಿಸುವಿರಿ. ಆಭರಣವನ್ನು ಕೊಳ್ಳುವಿರಿ. ಸ್ವಂತ ಹಣದಲ್ಲಿ ಕೊಂಡ ಬೆಳ್ಳಿ ಬಳಿ ಇರಲಿ.

ಕಟಕ

ಭಯವಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗಿ. ಕುಟುಂಬದಲ್ಲಿ ಪರಸ್ಪರ ಸಹಕಾರ ಇರುತ್ತದೆ. ಯಾವ ಕೆಲಸವೂ ಅಸಾಧ್ಯವಲ್ಲ. ಆದರೆ ಆತುರದಿಂದ ಕೆಲಸದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಮನೆಯನ್ನು ಬದಲಾಯಿಸುವ ವಿಚಾರ ಮುಂದೆ ಹೋಗುತ್ತದೆ. ಉದ್ಯೋಗದಲ್ಲಿ ತೊಂದರೆ ಇರದು. ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯುತ್ತವೆ. ವಿವಾದವೊಂದರಲ್ಲಿ ಕಾನೂನಿನ ಮೂಲಕ ಜಯಗಳಿಸುವಿರಿ. ದಂಪತಿಗಳ ನಡುವೆ ನಂಬುಗೆಯ ಕೊರತೆ ಇರುತ್ತದೆ. ಆತ್ಮೀಯರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವ ಮಾತಾಗುತ್ತದೆ. ಹೈನುಗಾರಿಕೆ ಒಳ್ಳೆಯದು. ಕಷ್ಟದಲ್ಲಿರುವ ಪ್ರಾಣಿಗಳಿಗೆ ನೆರವಾಗಿ ದಿನದ ಕೆಲಸ ಆರಂಭಿಸಿ.

ಸಿಂಹ

ಕುಟುಂಬದ ಸದಸ್ಯರ ಜೊತೆಯಲ್ಲಿ ದೀರ್ಘಕಾಲಸ ಪ್ರವಾಸಕ್ಕೆ ಹೊರಡುವಿರಿ. ಉದ್ಯೋಗದಲ್ಲಿ ಬಿಗುವಿನ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ಹಠದಿಂದಾಗಿ ವ್ಯಾಸಂಗದಲ್ಲಿ ಮುಂದಿರುತ್ತಾರೆ. ಕೃಷಿಭೂಮಿಯನ್ನು ಕೊಳ್ಳುವಿರಿ. ಸರ್ಕಾರಿ ಉದ್ಯೋಗ ದೊರೆಯುತ್ತದೆ ಅಥವಾ ಸರಕಾರದ ಅನುದಾನಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಭೂವ್ಯವಹಾರದಲ್ಲಿ ತೊಂದರೆ ಇರುತ್ತದೆ. ಉಳಿದ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಕಣ್ಣಿನ ದೋಷ ಇರುತ್ತದೆ. ಹಣಕಾಸಿನ ಲೆಕ್ಕಾಚಾರ ಸಂಸ್ಥೆಯನ್ನು ಆರಂಭಿಸುವಿರಿ. ವಾಸಸ್ಥಳ ಬದಲಿಸುವ ಸಾಧ್ಯತೆ ಇರುತ್ತದೆ. ಗುರುಗಳ ಆಶೀರ್ವಾದ ಪಡೆದ ನಂತರ ದಿನದ ಕೆಲಸ ಆರಂಭಿಸಿ.

ಕನ್ಯಾ

ಸ್ಥಿರವಾದ ಮನಸ್ಸಿರದು. ಭೂವಿವಾದವೊಂದು ಕಾನೂನಿನ ಸಹಾಯದಿಂದ ಬಗೆಹರಿಯುತ್ತದೆ. ಸಂಗಾತಿಯ ಸಹಾಯದಿಂದ ಸ್ಥಿರಾಸ್ಥಿಯನ್ನು ಕೊಳ್ಳುವಿರಿ. ಕುಟುಂಬದಲ್ಲಿ ಹೊಂದಾಣಿಕೆ ಇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ಉನ್ನತ ಮಟ್ಟ ತಲುಪುವರು. ಹಣದ ಕೊರತೆಯಿಂದ ಹೊರಬರಲು ಸಣ್ಣಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಸೋದರಿಗೆ ವಿಶೇಷವಾದ ಐಶ್ವರ್ಯ ದೊರೆಯುತ್ತದೆ. ಆತ್ಮೀಯರೊಂದಿಗೆ ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ವಿವಾಹ ಯೋಗವಿದೆ. ವಿದೇಶ ಪ್ರಯಾಣ ಮಾಡಬಹುದು. ಸಾಲದ ವ್ಯವಹಾರ ಬೇಡ. ಹಿರಿ ಸೋದರ ಅಥವಾ ಸೋದರಿಯ ಆಶೀರ್ವಾದ ಪಡೆದು ಕೆಲಸವನ್ನು ಆರಂಭಿಸಿದರೆ ಜಯ ಶತಸಿದ್ಧ.

ತುಲಾ

ವಿಶ್ರಾಂತಿ ಇಲ್ಲದೆ ಕೆಲಸವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಉದ್ಯೋಗದಲ್ಲಿ ಆತಂಕದ ಪರಿಸ್ಥಿತಿ ಎದುರಾದರೂ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ಹೊರಬರಬೇಕು. ಸ್ನೇಹಿತರ ಜೊತೆಯಲ್ಲಿ ಉತ್ತಮ ಸಂಬಂಧವಿರುತ್ತದೆ. ಅವಶ್ಯಕತೆ ಇದ್ದಲ್ಲಿ ವೃತ್ತಿಯನ್ನು ಬದಲಿಸಬಹುದು. ಲೆಕ್ಕಾಚಾರ ಸಂಸ್ಥೆಯಲ್ಲಿ ಮಧ್ಯಸ್ಥಿಕೆಯ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ ಸಂಸಾರದಲ್ಲಿ ಹಣಕಾಸಿನ ವಿವಾದವೊಂದು ಎದುರಾಗುತ್ತದೆ. ಪಾಲುಗಾರಿಕೆಯ ವ್ಯವಹಾರ ಒಳ್ಳೆಯದು. ಭೂವ್ಯವಹಾರ ಬೇಡ. ಮನೆಯ ಮುಂಬಾಗಿಲಿನಲ್ಲಿ ಇರುವ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸ ಆರಂಭಿಸಿ.

ವೃಶ್ಚಿಕ

ಯಾರ ಮಾತನ್ನೂ ಸುಲಭವಾಗಿ ಒಪ್ಪುವುದಿಲ್ಲ. ಮಾನಸಿಕ ನೆಮ್ಮದಿ ಇರುವುದಿಲ್ಲ. ಚಿಕ್ಕ ಪುಟ್ಟ ವಿಚಾರಗಳನ್ನು ಅತಿ ಗಂಭೀರವಾಗಿ ಪರಿಗಣಿಸುವಿರಿ. ದಂಪತಿಗಳ ನಡುವೆ ಹೊಂದಾಣಿಕೆಯ ಕೊರತೆ ಇರುತ್ತದೆ. ಮಾಡುವ ತಪ್ಪಿಗೆ ಬೇರೆಯವರನ್ನು ದೂರುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮನಸ್ಸಿಟ್ಟು ಓದಿನಲ್ಲಿ ತೊಡಗಬೇಕಾಗುತ್ತದೆ. ಪಾಲುಗಾರಿಕೆಯ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಕಿರಿಸೋದರನ ಜೊತೆಯಲ್ಲಿ ಮಾಡುವ ವ್ಯಾಪಾರದಲ್ಲಿ ಲಾಭವಿರುತ್ತದೆ. ಹಸುವಿಗೆ ಹುಲ್ಲನ್ನು ನೀಡಿ ದಿನದ ಕೆಲಸ ಆರಂಭಿಸಿ.

ಧನಸ್ಸು

ತ್ವರಿತಗತಿಯಲ್ಲಿ ಅವಶ್ಯಕವಾದ ತೀರ್ಮಾನಗಳನ್ನು ತೆಗೆದುಕೊಳ್ಳಿರಿ. ಧೈರ್ಯ ಮತ್ತು ಕ್ಷಮಾಗುಣ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಜಯವನ್ನು ನೀಡುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಸಂಗಾತಿಯನ್ನು ಕಾರಣವಿಲ್ಲದೆ ಅನುಮಾನಿಸುವಿರಿ. ಭೂಮಿ ಅಥವಾ ಮನೆಯನ್ನು ಕೊಳ್ಳುವ ಯೋಜನೆ ಮಾಡುವಿರಿ. ಜನಸೇವೆ ಮಾಡುವ ಹಂಬಲ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಮನೆಯ ಮುಂದಿನ ಭಾಗದಲ್ಲಿ ಕಸ ಇರದಂತೆ ಎಚ್ಚರವಹಿಸಿ.

ಮಕರ

ಬುದ್ಧಿವಂತರು. ಆದರೆ ಸಮಯಕ್ಕೆ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹಿಂಜರಿಕೆ ಇರುವುದಿಲ್ಲ. ಕಷ್ಟ ಪಟ್ಟು ದುಡಿಯುವಿರಿ. ಉದ್ಯೋಗದಲ್ಲಿ ತೊಂದರೆ ಇರುವುದಿಲ್ಲ. ಕುಟುಂಬದವರ ಜೊತೆಯಲ್ಲಿ ಹಣದ ವ್ಯವಹಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಹೊರಬರಬೇಕು. ವಂಶಕ್ಕೆ ಸೇರಿದ ಪುರಾತನ ಗೃಹವನ್ನು ನವೀಕರಣಗೊಳಿಸಲು ಹಣವನ್ನು ಖರ್ಚು ಮಾಡುವಿರಿ. ಭೂ ಖರೀದಿಯ ವಿಚಾರದಲ್ಲಿ ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ತಾಯಿಗೆ ತವರಿನ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಆಲದ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ಕುಂಭ

ಸಂತಸವನ್ನು ಎಲ್ಲರೊಂದಿಗೆ ಹಂಚುವ ನೀವು ನೋವನ್ನು ಮರೆ ಮಾಚುವಿರಿ. ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತದೆ. ಯಶಸ್ಸನ್ನು ಗಳಿಸುವವರೆಗೂ ಮಾಡುವ ಕೆಲಸದಿಂದ ಹಿಂಜರಿಯುವುದಿಲ್ಲ. ತಂದೆಯವರಿಗೆ ಸ್ವಂತ ಆಸ್ತಿ ದೊರೆವ ಸಾಧ್ಯತೆಗಳಿವೆ. ತಂದೆಯವರಿಂದ ಕೆಲಸ ಕಾರ್ಯಗಳಲ್ಲಿ ಉತ್ತಮ ಸಹಕಾರ ದೊರೆಯುತ್ತದೆ. ಉದ್ಯೋಗದಲ್ಲಿ ಶುಭ ವರ್ತಮಾನವೊಂದು ದೊರೆಯಲಿದೆ. ವಿದ್ಯಾರ್ಜನೆಯಲ್ಲಿ ಮುಂದೆ ಇರುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಂಬಿಕೆ ಇರುವುದಿಲ್ಲ. ಜನರ ಕಷ್ಟ ನಷ್ಟಗಳನ್ನು ಅರಿತು ಅವರಿಗೆ ನೆರವಾಗುವಿರಿ. ಸಾಲದ ವ್ಯವಹಾರ ಬೇಡ. ಹಸಿರುಬಣ್ಣದಿಂದ ದೂರವಿದ್ದಲ್ಲಿ ಶುಭಫಲಗಳು ದೊರೆಯುತ್ತವೆ.

ಮೀನ

ಎಲ್ಲರನ್ನೂ ಗೌರವ ಪ್ರೀತಿಯಿಂದ ಆದರಿಸುವಿರಿ. ವಾದ ವಿವಾದಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸ ಬಲ್ಲಿರಿ. ಜನಸೇವೆಯಲ್ಲಿ ದಿನಪೂರ್ತಿ ಕಳೆಯುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳಿಗೆ ಬೃಹತ್ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುತ್ತದೆ. ಸ್ವಂತ ವ್ಯಾಪಾರ ವಹಿವಾಟುಗಳಲ್ಲಿ ಅಧಿಕ ಲಾಭವನ್ನು ನಿರೀಕ್ಷಿಸುವುದಿಲ್ಲ. ಕೃಷಿಯಲ್ಲಿ ಆಸಕ್ತಿ ಇರುತ್ತದೆ. ತಂದೆ ಅಥವಾ ಮಕ್ಕಳ ಜೊತೆಯಲ್ಲಿ ವ್ಯಾಪಾರವನ್ನು ಆರಂಭಿಸುವಿರಿ. ಸಂಗೀತ ನಾಟ್ಯ ಬಲ್ಲವರಿಗೆ ಅಂತಾರಾಷ್ಟೀಯ ಮಟ್ಟದಲ್ಲಿ ಅವಕಾಶಗಳನ್ನು ಪಡೆಯುತ್ತಾರೆ. ಕಾಲಿನ ಸಮಸ್ಯೆ ಇರುವವರಿಗೆ ಕುಡಿಯಲು ಹಾಲು ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ವಿಭಾಗ