ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮನೆಗೆ ಅತಿಥಿಗಳ ಆಗಮನದಿಂದ ಖರ್ಚು ಹೆಚ್ಚಾಗುವ ಸಾಧ್ಯತೆ, ಉದ್ಯೋಗದಲ್ಲಿ ಮಾನಸಿಕ ಒತ್ತಡ; ಇಂದಿನ ದಿನ ಭವಿಷ್ಯ

Horoscope Today: ಮನೆಗೆ ಅತಿಥಿಗಳ ಆಗಮನದಿಂದ ಖರ್ಚು ಹೆಚ್ಚಾಗುವ ಸಾಧ್ಯತೆ, ಉದ್ಯೋಗದಲ್ಲಿ ಮಾನಸಿಕ ಒತ್ತಡ; ಇಂದಿನ ದಿನ ಭವಿಷ್ಯ

ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಇಂದು ವಿವಿಧ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದು, ಅವರ ಪಾಲಿಗೆ ಶುಭ ದಿನವಾಗಲಿದೆ. ಈ ಜಗತ್ತಿನ ನಿಯಮದಂತೆ ಎಲ್ಲರಿಗೂ ಒಳಿತೇ ದೊರಕಿದರೆ ಕೆಡಕಿಗೆ ಏನರ್ಥ. ಕೆಲವು ರಾಶಿಯವರಿಗೆ ಇಂದು ಕೆಟ್ಟ ಸುದ್ದಿಯೂ ಎದುರಾಗಬಹುದು. ಬನ್ನಿ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ.

ಮನೆಗೆ ಅತಿಥಿಗಳ ಆಗಮನದಿಂದ ಖರ್ಚು ಹೆಚ್ಚಾಗುವ ಸಾಧ್ಯತೆ, ಉದ್ಯೋಗದಲ್ಲಿ ಮಾನಸಿಕ ಒತ್ತಡ; ಇಂದಿನ ದಿನ ಭವಿಷ್ಯ
ಮನೆಗೆ ಅತಿಥಿಗಳ ಆಗಮನದಿಂದ ಖರ್ಚು ಹೆಚ್ಚಾಗುವ ಸಾಧ್ಯತೆ, ಉದ್ಯೋಗದಲ್ಲಿ ಮಾನಸಿಕ ಒತ್ತಡ; ಇಂದಿನ ದಿನ ಭವಿಷ್ಯ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ- ಗ್ರೀಷ್ಮ ಋತು - ಜ್ಯೇಷ್ಠ ಮಾಸ- ಶುಕ್ಲ ಪಕ್ಷ- ಸೋಮವಾರ

ತಿಥಿ: ನವಮಿ ಬೆ.08.30 ರವರೆಗೆ ಇದ್ದು ಆನಂತರ ದಶಮಿ ಆರಂಭವಾಗುತ್ತದೆ.

ನಕ್ಷತ್ರ: ಉತ್ತರ ನಕ್ಷತ್ರವು ರಾ.01.41 ರವರೆಗೆ ಇದ್ದು ಆನಂತರ ಹಸ್ತ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.05.52

ಸೂರ್ಯಾಸ್ತ: ಸ.6.40

ರಾಹುಕಾಲ: ಬೆ.07.32 ರಿಂದ ಬೆ.09.08

ರಾಶಿ ಫಲಗಳು

ಮೇಷ

ತಂದೆಯಿಂದ ಅನುಕೂಲತೆಗಳು ದೊರೆಯುತ್ತವೆ. ಸೋದರನ ಉನ್ನತಿಗೆ ಕಾರಣರಾಗುವಿರಿ. ಬುದ್ಧಿವಂತಿಕೆಯಿಂದ ಯಾವುದೇ ರೀತಿಯ ತೊಂದರೆಗಳಿಂದ ಪಾರಾಗುವಿರಿ. ಸಂಗಾತಿಯಿಂದ ಭೂಮಿಯ ಒಡೆತನ ಲಭಿಸುತ್ತದೆ. ಅಲ್ಪ ಪ್ರಮಾಣದ ಲೇವಾದೇವಿ ವ್ಯವಹಾರದಿಂದ ಲಾಭವಿದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಗುರಿ ಸಾಧಿಸುತ್ತಾರೆ. ವಿಶ್ರಾಂತಿ ಇಲ್ಲದ ದುಡಿಮೆ ಬೇಸರಕ್ಕೆ ಕಾರಣವಾಗುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ಇರುತ್ತದೆ. ಮಾನಸಿಕ ಒತ್ತಡವಿಲ್ಲದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯಿರಿ. ಓಡಾಡಲು ಸಾಧ್ಯವಾಗದವರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ.

ವೃಷಭ

ಪರಿಚಿತರು ತಮಗೆ ಅರಿವಿಲ್ಲದಂತೆ ಸಮಸ್ಯೆಯನ್ನು ಉಂಟುಮಾಡುತ್ತಾರೆ. ಮಧ್ಯಸ್ಥಿಕೆಯ ವ್ಯವಹಾರ ತೊಂದರೆಗೆ ಕಾರಣವಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಬಾರದು. ವಿದ್ಯಾರ್ಥಿಗಳು ಮನಸ್ಸಿಟ್ಟು ಅಧ್ಯಯನದಲ್ಲಿ ತೊಡಗಬೇಕು. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಕೊಂಚ ಮಟ್ಟಿನ ಹಿನ್ನಡೆ ಇರುತ್ತದೆ. ವಾಸ ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ವ್ಯಾಪಾರವನ್ನು ಆರಂಭಿಸಿದಲ್ಲಿ ಲಾಭವಿರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಕಪ್ಪು ನಾಯಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ.

ಮಿಥುನ

ನೆಚ್ಚಿನ ಅತಿಥಿಗಳ ಆಗಮನ ಸಂತಸವನ್ನು ನೀಡುತ್ತದೆ. ಕೈ ಹಿಡಿದ ಕೆಲಸ ಕಾರ್ಯಗಳು ನಿರೀಕ್ಷೆಯಂತೆ ಯಶಸ್ಸನ್ನು ಗಳಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಾಯ ಸಹಕಾರ ಲಭಿಸುತ್ತದೆ. ದುಡುಕುತನದಿಂದ ಯಾರನ್ನು ದೂಷಿಸಬೇಡಿ. ನಿಮ್ಮ ಮನಸ್ಸಿನ ಆಸೆಯಂತೆ ಸ್ವಂತ ಮನೆಯನ್ನು ಕಟ್ಟಿಸುವ ಸಾಧ್ಯತೆಗಳಿವೆ. ಕಡಿಮೆ ಬಂಡವಾಳದ ವ್ಯಾಪಾರ ವ್ಯವಹಾರಗಳಿಂದ ಲಾಭವಿದೆ. ವಿದ್ಯಾರ್ಥಿಗಳು ಉತ್ತಮ ಪ್ರಯತ್ನದಿಂದ ಇರರಿಗೆ ಮಾದರಿ ಆಗುತ್ತಾರೆ. ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಯಂತ್ರ ಮಂತ್ರದಲ್ಲಿ ನಂಬಿಕೆ ಇರುತ್ತದೆ.

ಕಟಕ

ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ಹಣದ ವಿಚಾರದಲ್ಲಿ ಸೋದರಿಗೆ ಆತ್ಮೀಯರಿಂದ ತೊಂದರೆ ಆಗಬಹುದು. ಉದ್ಯೋಗದಲ್ಲಿ ಯಾವುದೇ ಅಡಚಣೆ ಕಾಣುವುದಿಲ್ಲ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸಮಯಕ್ಕೆ ತಕ್ಕಂತೆ ವರ್ತಿಸುವ ನೀವು ವಾದ ವಿವಾದಗಳಿಂದ ದೂರ ಉಳಿಯುವಿರಿ.ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯುತ್ತದೆ. ಉತ್ತಮ ಆದಾಯ ಇರುವ ವೇಳೆ ಉಳಿತಾಯದ ಬಗ್ಗೆ ಯೋಚಿಸಿ. ಚಿಕ್ಕಬಂಡವಾಳದ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಪಕ್ಷಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿದ ನಂತರ ಕೆಲಸ ಆರಂಭಿಸಿ.

ಸಿಂಹ

ಹಠದ ಸ್ವಭಾವದಿಂದ ಮನಸ್ಸಿಗೆ ಇಷ್ಟವೆನಿಸುವ ಕೆಲಸಗಳನ್ನು ಮಾಡುವಿರಿ. ಬೇರೆಯವರ ಮೇಲೆ ಅಧಿಕಾರ ಚಲಾಯಿಸದಿರಿ. ಆರಂಭದಲ್ಲಿ ಕೊಂಚ ಅಡೆ-ತಡೆ ಉಂಟಾಗಬಹುದು. ಆತ್ಮ ವಿಶ್ವಾಸವೇ ಜಯದ ಹಾದಿಯನ್ನು ತೋರಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವಿರಿ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮುಂದಿರುತ್ತಾರೆ. ಸರಕಾರ ಅಥವಾ ತಂದೆಯ ಸಹಾಯದಿಂದ ಸಾರಿಗೆ ವ್ಯವಸ್ಥೆಯ ಸಂಸ್ಥೆಯನ್ನು ಆರಂಭಿಸುವಿರಿ. ಕೋಪಕ್ಕೆ ಮನ ಕೊಡದೆ ಸಹನೆಯಿಂದ ಇರುವುದು ಒಳ್ಳೆಯದು. ಸಾಧು ಸತ್ಪುರುಷರ ಆಶೀರ್ವಾದ ಪಡೆದು ಕೆಲಸವನ್ನು ಆರಂಭಿಸಿ.

ಕನ್ಯಾ

ಆರೋಗ್ಯದ ಬಗ್ಗೆ ಗಮನ ಇರಲಿ. ಮುಖ್ಯವಾಗಿ ಕಲುಷಿತ ಆಹಾರದ ಸೇವನೆಯಿಂದ ತೊಂದರೆ ಆಗಬಹುದು. ಸ್ಥಿರವಾದ ಮನಸ್ಸು ನೆಮ್ಮದಿಯನ್ನು ಕೊಡುತ್ತದೆ. ಉದ್ಯೋಗದಲ್ಲಿ ಕೇವಲ ಮಾನಸಿಕ ಒತ್ತಡ ಹೆಚ್ಚಬಹುದು .ವಿದ್ಯಾರ್ಥಿಗಳು ಕೊಂಚ ಪರಿಶ್ರಮದಿಂದಲೇ ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ. ವ್ಯಾಪಾರದ ವಿಚಾರದಲ್ಲಿ ಸಹನೆ ಸಂಯದ ಅವಶ್ಯಕತೆ ಇರುತ್ತದೆ. ಹೊಸ ವ್ಯಾಪಾರವನ್ನು ಆರಂಭಿಸುವ ಬದಲು ಸ್ನೇಹಿತರ ವ್ಯಾಪಾರದ ಪಾಲುದಾರರಾಗಿ. ಸರ್ಕಾರದ ಪರವಾನಿಗೆ ಪಡೆದು ಮಾಡುವ ಜನೋಪಕಾರಿ ಸೇವೆಯಿಂದ ಲಾಭವಿದೆ. ಮನೆಯರ ಹಿರಿಯರಿಂದ ಐದುರೂಪಾಯಿಯ ನಾಣ್ಯವನ್ನು ಪಡೆದು ಬಳಿಯಲ್ಲಿರಲಿ.

ತುಲಾ

ಮನಸ್ಸಿಗೆ ಇಷ್ಟವಾದದ್ದನ್ನು ಪಡೆಯುವಿರಿ. ಎಲ್ಲರ ಸಂತಸಕ್ಕೆ ಕಾರಣರಾಗುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಾಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಸಂತಸದಿಂದ ಮುಗಿಸುತ್ತಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಜನೋಪಯೋಗಿ ಕೆಲಸಗಳಿಗೆ ಬೇಕಾಗುವ ಹಣವನ್ನು ಚಿಕ್ಕಪುಟ್ಟ ವ್ಯಾಪಾರ ವ್ಯವಹಾರಗಳಿಂದ ಸಂಪಾದಿಸುವಿರಿ. ಕೇವಲ ಕೆಲಸ ಒಂದೇ ಮುಖ್ಯವೆನಿಸದು. ವಿಶ್ರಾಂತಿಯಿಂದ ಮಾತ್ರ ಉತ್ತಮ ಆರೋಗ್ಯ ಗಳಿಸಲು ಸಾಧ್ಯ. ಪರಸ್ಥಳದಲ್ಲಿ ಭೂಲಾಭ ಇರುತ್ತದೆ. ಸಾಲದ ವ್ಯವಹಾರ ಬೇಡಿ. ಬಲಗೈಯಲ್ಲಿ ಬೆಳ್ಳಿಯ ಕಡಗ ಇರಲಿ.

ವೃಶ್ಚಿಕ

ಪ್ರತಿಯೊಂದು ವಿಚಾರದಲ್ಲಿಯೂ ಲೆಕ್ಕಾಚಾರದ ಭಾವನೆ ಇರುತ್ತದೆ. ಮಧ್ಯಸ್ಥಿಕೆಯ ವಿಚಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ಅಲ್ಪಮಟ್ಟಿನ ಹಿನ್ನಡೆ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಹಳೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಯೋಗ ಪ್ರಾಣಾಯಾಮವನ್ನು ಅವಲಂಬಿಸುವಿರಿ. ಹೊಸ ವ್ಯಾಪಾರ ವ್ಯವಹಾರಕ್ಕೆ ಇದು ಸುಸಂದರ್ಭ ಅಲ್ಲ. ತಂದೆಯವರ ಆರೋಗ್ಯದ ವಿಚಾರವಾಗಿ ಹಣದ ಅವಶ್ಯಕತೆಯಿದೆ. ಹಳದಿ ಅಥವಾ ಕೇಸರಿ ಬಣ್ಣದ ವಸ್ತ್ರ ಧರಿಸುವುದರಿಂದ ಶುಭಫಲಗಳಿವೆ.

ಧನಸ್ಸು

ಗುರು ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಕ್ರಿಷ್ಟಕರವಾದ ಕೆಲಸ ಕಾರ್ಯಗಳನ್ನು ಮಾಡಬಲ್ಲಿರಿ. ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತವೆ. ನಿಮ್ಮ ಅಧೀನದಲ್ಲಿ ಕೆಲಸ ಮಾಡುವ ಸದಸ್ಯರು ಸನ್ನಡತೆಯನ್ನು ತೋರುತ್ತಾರೆ ಸೋದರಿಯ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಿರಿ. ವಿದ್ಯಾರ್ಥಿಗಳು ಸುಲಭದ ರೀತಿಯಲ್ಲಿ ತಮ್ಮ ಗುರಿಯನ್ನು ತಲುಪುತ್ತಾರೆ. ಸಂಬಂಧ ಅಥವಾ ಪರಿಚಿತರ ಜೊತೆ ವಿವಾಹ ಆಗುತ್ತದೆ. ವಿದ್ಯಾರ್ಥಿಗಳು ಆತಂಕದಿಂದ ಹೊರ ಉಳಿಯುತ್ತಾರೆ. ನೂತನವಾಗಿ ಆರಂಭಿಸುವ ವ್ಯಾಪಾರದಲ್ಲಿ ಲಾಭವಿರುತ್ತದೆ. ಎದ್ದಾಕ್ಷಣ ಕೆಂಪು ಹೂವಿನ ಗಿಡ ಹಾಕಿ ದೈನಂದಿನ ಕೆಲಸ ಆರಂಭಿಸಿರಿ.

ಮಕರ

ಮಾಡುವ ಕೆಲಸವನ್ನು ಗೌರವಿಸುವಿರಿ. ಕಷ್ಟ ನಷ್ಟಗಳನ್ನು ಲೆಕ್ಕಿಸದೆ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಸದಾ ಕಾಲ ನಿರತರಾಗಿರುತ್ತಾರೆ. ತಂದೆಗೆ ಸೇರಿದ ಭೂ ವಿವಾದವನ್ನು ಅಂತ್ಯಗೊಳಿಸುವಿರಿ. ಸೋದರಿಗೆ ವಿಶೇಷ ಐಶ್ವರ್ಯ ಲಭಿಸುತ್ತದೆ. ಹೆಣ್ಣಿನ ತಲೆಮಾರಿನ ಆಸ್ತಿಯು ಲಭಿಸುತ್ತದೆ. ಯಂತ್ರೋಪಕರಣಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಮಾಡುವ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಕೃಷಿ ಕಾರ್ಯದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ದಿನದ ಕೆಲಸ ಆರಂಭಿಸಿರಿ.

ಕುಂಭ

ಹೆಚ್ಚಿನ ಮಟ್ಟದ ಪರಿಪೂರ್ಣ ಪ್ರಯತ್ನದಿಂದ ಮಾತ್ರ ಕೆಲಸ ಕಾರ್ಯದಲ್ಲಿ ಜಯ ಗಳಿಸಲು ಸಾಧ್ಯ. ಉದ್ಯೋಗದಲ್ಲಿ ಸಾಧಾರಣ ಯಶಸ್ಸು ದೊರೆಯುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯ ವಿವಾದ ಇರುತ್ತದೆ. ವಿದ್ಯಾರ್ಥಿಗಳು ಮನದ ಆತಂಕದಿಂದ ಹೊರಬಂದು ಓದಿನಲ್ಲಿ ಮಗ್ನರಾಗುವುದು ಒಳ್ಳೆಯದು. ಮನೆತನದಲ್ಲಿಯೇ ವಿಶೇಷವಾದ ಸ್ಥಾನಮಾನ ದೊರೆಯುವುದು. ಬಹಳ ಸಂಗಾತಿಯ ಸಹಾಯದಿಂದ ವ್ಯಾಪಾರ ಒಂದನ್ನು ಆರಂಭಿಸಬಹುದು. ಬೇರೆಯವರ ವಾದ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ ಸೂಕ್ತ ಸಲಹೆಯನ್ನು ನೀಡುವಿರಿ. ಹೆಚ್ಚಿನಪ್ರಯತ್ನದಿಂದ ಸ್ವಂತ ಭೂಮಿಯನ್ನು ಕೊಳ್ಳಬಹುದು ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸ ಆರಂಭಿಸಿ.

ಮೀನ

ಉತ್ತಮ ಆದಾಯ ಇರುತ್ತದೆ. ಆದರೆ ಹೆಚ್ಚಿನ ಖರ್ಚು ನಿಮ್ಮನ್ನು ಭಾದಿಸುತ್ತದೆ. ಮಾನಸಿಕ ಒತ್ತಡವನ್ನು ಸಹಿಸದೆ ಕೋಪದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಬಾರದು. ಕೆಲವೊಮ್ಮೆ ಕೆಲಸ ಕಾರ್ಯದಲ್ಲಿ ಆತಂಕದ ಸನ್ನಿವೇಶ ಎದುರಾಗಬಹುದು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇರದು. ಉತ್ತಮ ಉದ್ಯೋಗದ ಲಬ್ಧತೆಯು ಇರುತ್ತದೆ. ಆದಾಯ ಮತ್ತು ಖರ್ಚನ್ನು ಸರಿದೂಗಿಸಲು ಕಡಿಮೆ ಬಂಡವಾಳದ ವ್ಯಾಪಾರ ಒಂದನ್ನು ಆರಂಭಿಸುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಬಾರದು. ಆದರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿರಿ. ಅನಾಥಾಶ್ರಮದಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿರಿ.

ವಿಭಾಗ