ದಿನ ಭವಿಷ್ಯ: ನವೆಂಬರ್ ತಿಂಗಳ ಮೊದಲ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ, ದೀಪಾವಳಿ ಯಾವ ರಾಶಿಯವರಿಗೆ ಏನು ಬದಲಾವಣೆ ತರಲಿದೆ?
ನವೆಂಬರ್ 1ರ ದಿನ ಭವಿಷ್ಯ: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳ ಬಗ್ಗೆ ವಿವರಿಸಲಾಗಿದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಗ್ರಹದಿಂದ ಆಳಲ್ಪಡುತ್ತದೆ. ಜಾತಕವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಲೆಕ್ಕ ಹಾಕಲಾಗುತ್ತದೆ. ನವೆಂಬರ್ 1, ಶುಕ್ರವಾರದ ರಾಶಿ ಭವಿಷ್ಯ ತಿಳಿಯೋಣ.
ನವೆಂಬರ್ 1ರ ದಿನ ಭವಿಷ್ಯ: ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಅರ್ಪಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ, ಜೀವನದ ಎಲ್ಲಾ ಅಡೆತಡೆಗಳಿಂದ ಮುಕ್ತಿ ಪಡೆಯುತ್ತಾರೆ ಮತ್ತು ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತಾರೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ನವೆಂಬರ್ 1 ರಂದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಶುಭವಾಗಲಿದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ದಿನ ಯಾವ ರಾಶಿಚಕ್ರ ಚಿಹ್ನೆಗಳು ಯಾವ ರೀತಿ ಪ್ರಯೋಜನ ಪಡೆಯಲಿದ್ದಾರೆ ನೋಡೋಣ.
ಮೇಷ ರಾಶಿ: ಕೋಪ ಜಾಸ್ತಿ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಶೈಕ್ಷಣಿಕ ಕಾರ್ಯದಲ್ಲಿ ಗಮನ ಹರಿಸುವಿರಿ. ಮಕ್ಕಳು ಹೆಚ್ಚು ಖುಷಿಯಾಗಿರುತ್ತಾರೆ. ಕುಟುಂಬದ ಹಿರಿಯರಿಂದ ನೀವು ಹಣ ಪಡೆಯಬಹುದು. ಬಟ್ಟೆಗಾಗಿ ಖರ್ಚು ಹೆಚ್ಚಾಗುತ್ತದೆ. ಹೆಚ್ಚಿನ ಶ್ರಮ ಇರುತ್ತದೆ. ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು.
ವೃಷಭ ರಾಶಿ: ನೀವು ಅನಗತ್ಯ ಖರ್ಚುಗಳಿಂದ ತೊಂದರೆಗೊಳಗಾಗಬಹುದು. ಸಂಬಂಧಗಳಲ್ಲಿ ಸಂತೋಷ ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ಬರಬಹುದು. ಆದಾಯ ಹೆಚ್ಚಲಿದೆ. ಸ್ಥಳ ಬದಲಾವಣೆಯೂ ಆಗಬಹುದು. ಬಟ್ಟೆ ಇತ್ಯಾದಿಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ವಾಹನ ಸೌಕರ್ಯ ಹೆಚ್ಚಾಗಬಹುದು. ಜೀವನದಲ್ಲಿ ಕೆಲವೊಂದು ಸಮಸ್ಯೆಗಳೂ ಉದ್ಭವಿಸಬಹುದು.
ಮಿಥುನ ರಾಶಿ: ಕೆಲಸದ ಸ್ಥಳದಲ್ಲಿ ಪ್ರತಿಕೂಲ ಸಂದರ್ಭಗಳಿರಬಹುದು, ತಾಳ್ಮೆಯಿಂದ ಇರಿ. ಕುಟುಂಬದಲ್ಲಿ ಅನಗತ್ಯ ವಾದ ವಿವಾದಗಳನ್ನು ತಪ್ಪಿಸಿ. ನಿರಾಶೆ ಮತ್ತು ಅತೃಪ್ತಿಯ ಭಾವನೆ ಇರುತ್ತದೆ. ವ್ಯಾಪಾರದಲ್ಲಿ ಹೆಚ್ಚಳವಾಗಲಿದೆ. ಪ್ರಯಾಣ ಲಾಭದಾಯಕವಾಗಲಿದೆ. ಇತರರೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ. ನೀವು ಸ್ನೇಹಿತರ ಬೆಂಬಲ ಪಡೆಯುತ್ತೀರಿ. ಆತ್ಮವಿಶ್ವಾಸ ಹೆಚ್ಚಲಿದೆ, ಆದರೆ ಅತಿಯಾದ ಉತ್ಸಾಹದಿಂದ ದೂರವಿರಿ.
ಕರ್ಕ ರಾಶಿ: ನೀವು ಪ್ರವಾಸಕ್ಕೆ ಹೋಗಬಹುದು. ಕೆಲಸದ ಸ್ಥಳದಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಮನಸ್ಸಿನಲ್ಲಿ ಭರವಸೆ ಮತ್ತು ಹತಾಶೆಯ ಭಾವನೆಗಳು ಇರಬಹುದು. ನೀವು ಸ್ನೇಹಿತರಿಂದ ಬೆಂಬಲ ಪಡೆಯುತ್ತೀರಿ. ಆದಾಯದ ಮೂಲಗಳು ಅಭಿವೃದ್ಧಿ ಹೊಂದಬಹುದು. ಸಂಪತ್ತು ವೃದ್ಧಿಯಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಆರೋಗ್ಯ ನೋಡಿಕೊಳ್ಳಿ. ನಿಮ್ಮ ಸಂಗಾತಿಯಿಂದ ಬೆಂಬಲ ಪಡೆಯುತ್ತೀರಿ.
ಸಿಂಹ ರಾಶಿ: ನೀವು ಕೆಲವು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು, ಆದರೆ ಜಲಾಶಯಗಳು ಮತ್ತು ನದಿಗಳಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ. ಮಾನಸಿಕ ಶಾಂತಿಗಾಗಿ ಪ್ರಯತ್ನಿಸಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನವು ನೋವಿನಿಂದ ಕೂಡಿರಬಹುದು. ವ್ಯಾಪಾರದಲ್ಲಿ ಹೆಚ್ಚಳವಾಗಲಿದೆ. ಪ್ರಯಾಣ ಲಾಭದಾಯಕವಾಗಲಿದೆ. ನೀವು ಕೆಲವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು.
ಕನ್ಯಾ ರಾಶಿ: ಆತ್ಮವಿಶ್ವಾಸ ಹೆಚ್ಚಿರುತ್ತದೆ, ಆದರೆ ಮನಸ್ಸು ಖುಷಿಯಿಂದ ಇರುವುದಿಲ್ಲ. ಕುಟುಂಬದಿಂದ ಬೆಂಬಲ ಸಿಗಲಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಿತ್ರರ ನೆರವಿನಿಂದ ಆದಾಯ ಹೆಚ್ಚಾಗಬಹುದು. ಪ್ರವಾಸಕ್ಕೆ ಹೋಗಬಹುದು.
ತುಲಾ ರಾಶಿ: ತಾಳ್ಮೆಯಿಂದಿರಿ, ಕೋಪ ಕಡಿಮೆ ಮಾಡಿಕೊಳ್ಳಿ. ಪೂರ್ಣ ವಿಶ್ವಾಸ ಇರುತ್ತದೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸ ತೆರಳುವಿರಿ. ಅತಿಯಾದ ಉತ್ಸಾಹದಿಂದ ದೂರವಿರಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಅನಗತ್ಯ ವಾದಗಳಿಂದ ದೂರವಿರಿ. ಪ್ರಗತಿಯ ಅವಕಾಶಗಳು ಇರಬಹುದು. ಆದಾಯ ಹೆಚ್ಚಲಿದೆ. ಅಪಘಾತ ಸಂಭವಿಸುವ ಸಾಧ್ಯತೆಗಳಿವೆ.
ವೃಶ್ಚಿಕ ರಾಶಿ: ತಾಳ್ಮೆಯಿಂದಿರಿ. ಅತಿಯಾದ ಕೋಪವನ್ನು ತಪ್ಪಿಸಿ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಸ್ನೇಹಿತರು, ಸಹೋದರರಿಂದ ಬೆಂಬಲ ಪಡೆಯಬಹುದು.
ಧನಸ್ಸು ರಾಶಿ: ಆದಾಯ ಕಡಿಮೆಯಾಗಿ ಖರ್ಚು ಹೆಚ್ಚಾಗುತ್ತದೆ. ಮಾನಸಿಕ ತೊಂದರೆ ಇರುತ್ತದೆ. ತಾಳ್ಮೆಯಿಂದ ಇರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಕುಟುಂಬದಲ್ಲಿ ಸಂತೋಷ ಕಡಿಮೆಯಾಗಬಹುದು. ಭರವಸೆ ಮತ್ತು ನಿರಾಶೆಯ ಮಿಶ್ರ ಭಾವನೆಗಳು ಇರುತ್ತದೆ.
ಮಕರ ರಾಶಿ: ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಮನಸ್ಸಿಗೆ ಸ್ವಲ್ಪ ತೊಂದರೆಯಾಗಬಹುದು. ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿ ಹೆಗಲು ಏರಬಹುದು. ಹೆಚ್ಚಿನ ಶ್ರಮ ಇರುತ್ತದೆ. ಯಾವುದೇ ಆಸ್ತಿ ಮೂಲದಿಂದ ಹಣ ಪಡೆಯಬಹುದು. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಕುಂಭ ರಾಶಿ: ಧರ್ಮದ ಬಗ್ಗೆ ಶ್ರದ್ಧೆ ಇರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲಸದ ವ್ಯಾಪ್ತಿ ಹೆಚ್ಚಾಗಬಹುದು. ಹೆಚ್ಚಿನ ಶ್ರಮ ಇರುತ್ತದೆ. ಆದಾಯ ಹೆಚ್ಚಾಗುತ್ತದೆ, ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಗಾತಿಯ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಖರ್ಚುಗಳು ಅಧಿಕವಾಗುತ್ತದೆ.
ಮೀನ ರಾಶಿ: ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಹಾದಿ ಸುಗಮವಾಗಲಿದೆ. ಕೆಲಸದ ಹೊರೆ ಹೆಚ್ಚಾಗಲಿದೆ. ವಾಹನ ಸೌಕರ್ಯ ಇರಲಿದೆ. ಅನಗತ್ಯ ಚಿಂತೆಗಳಿಂದ ದೂರ ಇರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.