ಈ ರಾಶಿಯವರಿಗೆ ಪ್ರಮೋಷನ್‌ ಭಾಗ್ಯದೊಂದಿಗೆ ಆರ್ಥಿಕ ಲಾಭ; ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ-daily horoscope today for 10th august astrological prediction aries to pisces zodiac signs rashi bhavishya ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರಿಗೆ ಪ್ರಮೋಷನ್‌ ಭಾಗ್ಯದೊಂದಿಗೆ ಆರ್ಥಿಕ ಲಾಭ; ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ

ಈ ರಾಶಿಯವರಿಗೆ ಪ್ರಮೋಷನ್‌ ಭಾಗ್ಯದೊಂದಿಗೆ ಆರ್ಥಿಕ ಲಾಭ; ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ

Horoscope Today: ಆಗಸ್ಟ್‌ 10ರ ಶನಿವಾರವಾದ ಇಂದು ನಿಮ್ಮ ದಿನವು ಹೇಗಿರಲಿದೆ? ಯಾವ ರಾಶಿಯವರಿಗೆ ಶುಭಫಲಗಳಿವೆ? ಯಾರ ಅದೃಷ್ಟ ಕೈಗೂಡಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ದ್ವಾದಶ ರಾಶಿಗಳ ಇಂದಿನ ಫಲಾಫಲ ಹೇಗಿದೆ ನೋಡಿ.

ಈ ರಾಶಿಯವರಿಗೆ ಪ್ರಮೋಷನ್‌ ಭಾಗ್ಯದೊಂದಿಗೆ ಆರ್ಥಿಕ ಲಾಭ; ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ
ಈ ರಾಶಿಯವರಿಗೆ ಪ್ರಮೋಷನ್‌ ಭಾಗ್ಯದೊಂದಿಗೆ ಆರ್ಥಿಕ ಲಾಭ; ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ

ಮೇಷ ರಾಶಿ: ಈ ದಿನ ನೀವು ರೋಗ-ರುಜಿನಗಳಿಂದ ಮುಕ್ತರಾಗುತ್ತೀರಿ. ಯಾವುದೇ ಪ್ರಮುಖ ಕೆಲಸ ಮಾಡುವ ಸಲುವಾಗಿ ನೀವು ಹಣವನ್ನು ಸಂಗ್ರಹಿಸಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಮಾನಸಿಕ ಆಯಾಸ ದೂರವಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ಜನರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆರ್ಥಿಕ ಪ್ರಗತಿ ಸಾಧ್ಯತೆಗಳಿವೆ.

ವೃಷಭ ರಾಶಿ: ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆ ಮಾಡಬಹುದು. ಕೆಲಸದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ನಿಮಗೆ ಹೆಚ್ಚು ಅಗತ್ಯವಿರುವಾಗ ಕುಟುಂಬದ ಬೆಂಬಲ ಸಿಗುತ್ತದೆ. ಪತ್ರಾರ್ಜಿತ ಆಸ್ತಿ ಪಡೆಯುವ ಸಾಧ್ಯತೆಯಿದೆ ಅಥವಾ ಅದನ್ನು ಉಡುಗೊರೆಯಾಗಿ ಪಡೆಯುವ ಸಾಧ್ಯತೆಯಿದೆ.

ಮಿಥುನ ರಾಶಿ: ಇಂದು ನೀವು ಸದೃಢರಾಗಿರುತ್ತೀರಿ. ಆರ್ಥಿಕವಾಗಿ ಬಲಗೊಳ್ಳುವ ಸಕಾರಾತ್ಮಕ ಲಕ್ಷಣಗಳಿವೆ. ಕೆಲಸದ ವಿಚಾರದಲ್ಲಿ ಆತಂಕಕಾರಿ ಪರಿಸ್ಥಿತಿ ಇರುತ್ತದೆ. ಮನೆ ಅಥವಾ ಆಸ್ತಿ ನಿರೀಕ್ಷೆಗಿಂತ ಕಡಿಮೆ ಆದಾಯವನ್ನು ನೀಡುವ ಸಾಧ್ಯತೆಯಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಬೇಕಾಗುತ್ತದೆ.

ಕರ್ಕಾಟಕ ರಾಶಿ: ನೀವು ಶೀಘ್ರದಲ್ಲೇ ಅನಾರೋಗ್ಯದಿಂದ ಮುಕ್ತರಾಗುವಿರಿ. ವೈದ್ಯಕೀಯ ಅಥವಾ ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದವರು ಇಂದು ಆರ್ಥಿಕ ಪ್ರಯೋಜನ ಪಡೆಯುತ್ತಾರೆ. ದೀರ್ಘಕಾಲದಿಂದ ಬಾಕಿ ಇರುವ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಕುಟುಂಬಕ್ಕೆ ಬೆಂಬಲ ಸಿಗಲಿದೆ. ಇಂದು ನೀವು ಆಸ್ತಿ ಅಥವಾ ಏನನ್ನಾದರೂ ಉಡುಗೊರೆಯಾಗಿ ಪಡೆಯಬಹುದು. ವೃತ್ತಿಜೀವನದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ.

ಸಿಂಹ ರಾಶಿ: ಇಂದು ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಜಾಗರೂಕರಾಗಿರಿ. ಆರ್ಥಿಕ ಬಜೆಟ್ ಮಾಡದವರು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರಮೋಶನ್‌ ವಿಚಾರದಲ್ಲಿ ಕೆಲವರು ಅದೃಷ್ಟಶಾಲಿಯಾಗಿರುತ್ತಾರೆ. ವೃತ್ತಿಜೀವನಕ್ಕೆ ಸಂಬಂಧಿಸಿದ ಉತ್ತಮ ಅವಕಾಶಗಳು ಕಾಣಬಹುದು. ಕುಟುಂಬದ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುವಿರಿ.

ಕನ್ಯಾ ರಾಶಿ: ಕೌಟುಂಬಿಕ ರಂಗದಲ್ಲಿ ವಿಷಯಗಳು ತುಂಬಾ ಅಸ್ಥಿರವಾಗಲಿವೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮನೆಮದ್ದು ಉಪಯುಕ್ತವಾಗಿವೆ. ಆರ್ಥಿಕ ವಿಚಾರಗಳು ಶೀಘ್ರದಲ್ಲೇ ಉತ್ತಮಗೊಳ್ಳಬಹುದು. ವೃತ್ತಿ ರಂಗದಲ್ಲಿ ಅಸ್ಥಿರ ಪರಿಸ್ಥಿತಿ ಇರುತ್ತದೆ. ಉತ್ತಮ ಬೆಲೆಗೆ ಹೊಸ ಆಸ್ತಿಯನ್ನು ಖರೀದಿಸುವ ಅವಕಾಶ ಪಡೆಯುತ್ತೀರಿ. ನೀವು ಸ್ನೇಹಿತನನ್ನು ಭೇಟಿಯಾಗಬಹುದು.

ತುಲಾ ರಾಶಿ: ಈ ದಿನ ಜೂಜಾಟ ಮತ್ತು ಬೆಟ್ಟಿಂಗ್‌ನಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ. ಹಣದ ನಷ್ಟದ ಸುಳಿವುಗಳಿವೆ. ದೈನಂದಿನ ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ನೀವು ಕೌಟುಂಬಿಕ ರಂಗದಲ್ಲಿ ಉತ್ತಮ ವ್ಯಕ್ತಿಗಳಾಗುತ್ತೀರಿ. ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ನೀವು ಯಾರೊಂದಿಗಾದರೂ ಪ್ರವಾಸಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ಆಸ್ತಿ ಖರೀದಿಸಲು ಅಥವಾ ಮಾರಾಟ ಮಾಡಲು ಯೋಚಿಸುತ್ತಿರುವವರಿಗೆ ಇಂದು ಉತ್ತಮ ದಿನ. ಶೈಕ್ಷಣಿಕ ರಂಗದಲ್ಲಿ ಯಾವುದೇ ಹೆಜ್ಜೆ ಇಡಲು ಯೋಚಿಸುತ್ತಿದ್ದರೆ, ಇದು ಉತ್ತಮ ದಿನ.

ವೃಶ್ಚಿಕ ರಾಶಿ: ನಿಮಗಾಗಿ ಸಮಯ ತೆಗೆದುಕೊಳ್ಳಿ. ಹೂಡಿಕೆ ಮಾಡುವ ಮೊದಲು ನೀವು ಎರಡು ಬಾರಿ ಯೋಚಿಸಬೇಕು. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬಹುದು. ಇದು ನಿಮ್ಮ ಪ್ರತಿಭೆಯನ್ನು ತೋರಿಸಲು ನಿಮಗೆ ಅವಕಾಶ ನೀಡುತ್ತದೆ. ಆರ್ಥಿಕ ರಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ಹಣ ಹರಿದು ಬರುತ್ತದೆ.

ಧನು ರಾಶಿ: ಮೊದಲಿಗಿಂತ ಹೆಚ್ಚು ಸದೃಢರಾಗಿರುತ್ತೀರಿ. ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಉತ್ತಮ ಆದಾಯ ತಂದುಕೊಡುತ್ತವೆ. ಕೆಲಸದ ಸ್ಥಳದಲ್ಲಿ ತಪ್ಪನ್ನು ಸರಿಪಡಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಇದು ನಿರಾಶೆಗೆ ಕಾರಣವಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಷ್ಟದ ಹಂತವನ್ನು ಎದುರಿಸುತ್ತಿರುವ ಜನರು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಉತ್ತಮವಾಗಿರುತ್ತೀರಿ.

ಮಕರ ರಾಶಿ: ಹಣ ಗಳಿಸುವ ಮೂಲಕ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಕುಟುಂಬಕ್ಕೆ ಬೆಂಬಲ ಸಿಗಲಿದೆ. ಬಾಸ್ ನಿಮ್ಮ ಕಾರ್ಯಗಳಿಂದ ಸಂತೋಷಪಡುತ್ತಾರೆ. ಕುಟುಂಬ ವಿವಾದವನ್ನು ಪರಿಹರಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯದ ನಿರ್ಧಾರವು ನಿಮ್ಮ ಪರವಾಗಿ ಬರಬಹುದು.

ಕುಂಭ ರಾಶಿ: ಆರ್ಥಿಕವಾಗಿ ಸುರಕ್ಷಿತವಾಗಿರಲು ನೀವು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ನೀವು ಚೆನ್ನಾಗಿ ಹೊಂದಿಕೊಳ್ಳಲು ಯಾರಾದರೂ ನಿಮ್ಮನ್ನು ಬೆಂಬಲಿಸಬಹುದು. ನಿಮ್ಮ ಸಂಗಾತಿ ಅಥವಾ ಪ್ರೇಮಿಯನ್ನು ಲಘುವಾಗಿ ಪರಿಗಣಿಸಬೇಡಿ. ಇಂದು ಕೆಲವರಿಗೆ ವಿದೇಶಕ್ಕೆ ಹೋಗಲು ಅವಕಾಶಗಳು ಸಿಗಲಿವೆ.

ಮೀನ ರಾಶಿ: ಈ ದಿನ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅನಿರೀಕ್ಷಿತ ಮೂಲದಿಂದ ಹಣ ಬರಲಿದೆ. ಉದ್ಯೋಗ ಮಾಡುವ ಜನರಿಗೆ ಹೊಸ ಆಯ್ಕೆಗಳು ಸಿಗುತ್ತವೆ. ಆಸ್ತಿಯ ರೂಪದಲ್ಲಿ ಹೊಸದನ್ನು ಪಡೆಯುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.