ಕುಟುಂಬದ ಜವಾಬ್ದಾರಿ ಹೆಚ್ಚಾಗುವ ಜೊತೆಗೆ ಅನಾವಶ್ಯಕ ಖರ್ಚುಗಳಿವೆ; ಧನು ಸೇರಿ 4 ರಾಶಿಯವರ ಡಿಸೆಂಬರ್ ಮಾಸ ಭವಿಷ್ಯ
ಡಿಸೆಂಬರ್ ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಧನು ರಾಶಿಯಿಂದ ಮೀನದವರಿಗೆ 4 ರಾಶಿಯವರಿಗೆ ಡಿಸೆಂಬರ್ ತಿಂಗಳ ಭವಿಷ್ಯ ಇಲ್ಲಿದೆ.
ಡಿಸೆಂಬರ್ 2024 ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.
ಧನು ರಾಶಿ
ಕುಟುಂಬದಲ್ಲಿ ಬೇಸರ ಮತ್ತು ಒತ್ತಡದ ವಾತಾವರಣವು ನಿರ್ಮಾಣಗೊಳ್ಳುತ್ತದೆ. ನಿಮ್ಮಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿರುತ್ತದೆ. ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧರಾಗದೆ ತೊಂದರೆಗೆ ಸಿಲುಕುವಿರಿ. ಆದರೆ ಕ್ರಮೇಣವಾಗಿ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಮನಸ್ಸಿಟ್ಟು ಕೆಲಸ ಮಾಡಿದರೆ ಆರ್ಥಿಕ ಪ್ರಗತಿ ಉಂಟಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ನಿಮ್ಮ ವಿರೋಧಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ವಿರುದ್ಧ ಜಯಗಳಿಸುವಿರಿ. ನಿಮ್ಮಿಂದ ಸಹಾಯ ಪಡೆದವರು ನಿಮ್ಮ ವಿರುದ್ಧ ಯೋಜನೆ ರೂಪಿಸುತ್ತಾರೆ. ದಂಪತಿ ನಡುವೆ ಉತ್ತಮ ಮನೋಭಾವನೆ ಇರುತ್ತದೆ.
ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಅನುಕೂಲ ಪಡೆಯಲಿದ್ದಾರೆ. ಕೋಪದಲ್ಲಿ ಕೈಗೊಂಡ ನಿರ್ಧಾರಗಳಿಂದ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ದೇಹದ ತೂಕವು ಹೆಚ್ಚಾಗುವ ಸಾಧ್ಯತೆಗಳಿವೆ. ಕೇವಲ ಆಹಾರ ಕ್ರಮವನ್ನು ಅನುಸರಿಸಿದಲ್ಲಿ ಆರೋಗ್ಯವನ್ನು ಉಳಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮೊದಲ ಸ್ಥಾನ ಗಳಿಸುತ್ತಾರೆ. ಬೇರೆಯವರಿಂದ ಹಣದ ಸಹಾಯವನ್ನು ನಿರೀಕ್ಷಿಸುವುದಿಲ್ಲ. ನಿಮಗೆ ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಬಲ್ಲಿರಿ. ನಿಮ್ಮ ಕುಟುಂಬಕ್ಕೆ ಸೇರಿದ ಹಳೆಯ ಮನೆಯನ್ನು ನವೀಕರಣಗೊಳಿಸುವಿರಿ. ಕಾನೂನಿನ ಹೋರಾಟ ಒಂದರಲ್ಲಿ ಜಯ ಲಭಿಸುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
ಮಕರ ರಾಶಿ
ಉತ್ತಮ ಪ್ರಯತ್ನದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಸಹೋದರ ಅಥವಾ ಸೋದರಿಯ ಜೀವನದಲ್ಲಿ ಶಾಂತಿ ನೆಮ್ಮದಿ ಮರುಕಳಿಸುತ್ತದೆ. ಆದಾಯವಿಲ್ಲದ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಸಮಾಜ ಸೇವೆ ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮಧ್ಯಮಗತಿಯ ಪ್ರಗತಿ ಕಂಡು ಬರಲಿದೆ. ಆತುರಕ್ಕೆ ಒಳಗಾಗದೆ ಸಮಯವನ್ನು ಅರ್ಥ ಮಾಡಿಕೊಂಡು ಮುಂದುವರೆಯುವುದು ಲಾಭಕರವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.
ವಿದ್ಯಾರ್ಥಿಗಳು ದೊಡ್ಡಮಟ್ಟದ ಯಶಸ್ಸನ್ನು ಗಳಿಸುತ್ತಾರೆ. ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ದೊರೆಯುವ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದಿಲ್ಲ. ಸದಾಕಾಲ ಸಂತೋಷ ಸಂಭ್ರಮದಿಂದ ಇರಲು ಪ್ರಯತ್ನಿಸುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಅವಶ್ಯಕತೆ ಇದ್ದಲ್ಲಿ ನಿಮ್ಮ ತಂದೆ ಅಥವಾ ತಾಯಿಯಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ಮಾತನಾಡುವ ಭರದಲ್ಲಿ ತಪ್ಪು ಹೇಳಿಕೆಯನ್ನು ನೀಡುವಿರಿ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರ ಇದ್ದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ದೂರವಾಗುವಿರಿ. ಹಣಕಾಸಿಗೆ ತೊಂದರೆ ಇರುವುದಿಲ್ಲ. ಬರುವ ಆದಾಯದಲ್ಲಿ ಉತ್ತಮ ಯೋಜನೆ ರೂಪಿಸಿದಲ್ಲಿ ಹಣ ಉಳಿತಾಯ ಮಾಡಬಹುದು.
ಕುಂಭ ರಾಶಿ
ಅನಾವಶ್ಯಕವಾದ ಬಿರುಸಿನ ಮಾತುಗಳು ವಿರೋಧಿಗಳನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಕಂಡುಬರುವುದಿಲ್ಲ. ರೀತಿ ನೀತಿಗಳನ್ನು ಬೇರೆಯವರ ಮೇಲೆ ಬಲವಂತವಾಗಿ ಹೇಳಲು ಪ್ರಯತ್ನಿಸುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ದಿನ ಕಳೆದಂತೆ ಕ್ರಮೇಣವಾಗಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಸಾಧಿಸುವಿರಿ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವ ಮನಸ್ಸು ಇರುವುದಿಲ್ಲ. ಬೇರೆಯವರ ಒತ್ತಡಕ್ಕೆ ಮಣಿದು ಯೋಜನೆಗಳನ್ನು ರೂಪಿಸುವಿರಿ. ಅನಿರೀಕ್ಷಿತವಾದ ಖರ್ಚು ವೆಚ್ಚಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಕಾರ್ಯ ಸಾಧಿಸಲು ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಾಗುತ್ತದೆ. ಬೇರೆಯವರ ಸಹಾಯ ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಮಾಡಲಾರರಿ. ನಿಮ್ಮತಪ್ಪು ನಿರ್ಧಾರಗಳಿಂದ ಕುಟುಂಬದಲ್ಲಿ ಅಸ್ವಾಭಾವಿಕ ಸಮಸ್ಯೆಗಳು ಕಂಡುಬರಲಿವೆ. ಕೋಪ ತಾಪವಿಲ್ಲದೆ ನಯವಾದ ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತೀರಿ. ಆರೋಗ್ಯದ ಸಮಸ್ಯೆ ಕಾಡಿದರು ತೊಂದರೆಯಾಗದು. ಹಣಕಾಸಿನ ವಿಚಾರದಲ್ಲಿ ಕಿರಿಕಿರಿ ವಾತಾವರಣ ಎದುರಾಗಲಿದೆ. ಮಕ್ಕಳ ಜೊತೆ ಮನರಂಜನೆಗಾಗಿ ಪರಸ್ಥಳಕ್ಕೆ ತೆರಳುವಿರಿ. ಅನಾವಶ್ಯಕವಾದ ಖರ್ಚು ವೆಚ್ಚಗಳನ್ನು ಇಷ್ಟಪಡುವುದಿಲ್ಲ.
ಮೀನ ರಾಶಿ
ತಲೆನೋವು ಅಥವಾ ತಲೆ ತಿರುಗುವಿಕೆ ನಿಮ್ಮನ್ನು ಕಾಡಲಿದೆ. ಉತ್ತಮ ಆಯದಾಯವಿದ್ದರೂ ಹಣವನ್ನುಉಳಿಸಲು ಸಾಧ್ಯವಾಗುವುದಿಲ್ಲ. ಅನಾವಶ್ಯಕವಾದ ಖರ್ಚು ವೆಚ್ಚಗಳು ಎದುರಾಗಲಿವೆ. ಆರಂಭಿಸಿದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಲಿವೆ. ಕುಟುಂಬದ ಜವಾಬ್ದಾರಿಯು ಹೆಚ್ಚುತ್ತದೆ. ಉದ್ಯೋಗದಲ್ಲಿ ಅನುಪಯುಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒತ್ತಾಯಪೂರ್ವಕವಾಗಿ ಬೇರೆಯವರ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.
ಏಕಾಗ್ರತೆಯು ಕಡಿಮೆಯಾಗುವ ಕಾರಣ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಆದರೆ ಗುರು ಹಿರಿಯರ ಸಲಹೆ ದೊರೆಯುತ್ತದೆ. ಕುಟುಂಬದಲ್ಲಿನ ಒತ್ತಡವು ಕಡಿಮೆಯಾಗುವುದಿಲ್ಲ. ನಿಮ್ಮ ನೆರೆಹೊರೆಯವರನ್ನು ಅನಾವಶ್ಯಕವಾಗಿ ಅನುಮಾನಿಸುವಿರಿ. ನೀವು ನಂಬಿದವರ ಬಗ್ಗೆ ಬೇಸರ ಉಂಟಾಗುತ್ತದೆ. ಅವಿವಾಹಿತರಿಗೆ ವಿವಾಹದ ಬಗ್ಗೆ ಹೊಸ ಆಶಾ ಭಾವನೆ ಮೂಡುತ್ತದೆ. ನಿಮಗೆ ಉಷ್ಣದ ತೊಂದರೆ ಇರಲಿದೆ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ವ್ಯವಹರಿಸುವ ವೇಳೆ ಶಾಂತಿಯಿಂದ ಇರುವುದು ಒಳ್ಳೆಯದು. ವಾಹನಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ