ಡಿಸೆಂಬರ್ ತಿಂಗಳ ಭವಿಷ್ಯ: ಮನಸ್ಸಿನ ಆಸೆಗಳು ಪೂರ್ಣಗೊಳ್ಳುತ್ತವೆ, ತಪ್ಪು ನಿರ್ಧಾರಗಳಿಂದ ಖರ್ಚು ಹೆಚ್ಚಾಗುತ್ತೆ
ಡಿಸೆಂಬರ್ 2024 ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಮೇಷದಿಂದ ಕಟಕದವರಿಗೆ 4 ರಾಶಿಯವರಿಗೆ ಡಿಸೆಂಬರ್ ತಿಂಗಳ ಭವಿಷ್ಯ ಇಲ್ಲಿದೆ.
ಡಿಸೆಂಬರ್ 2024 ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.
ಮೇಷ ರಾಶಿ
ಜೀವನದಲ್ಲಿ ವಿಶೇಷವಾಗಿ ಸ್ತ್ರೀಯರಿಗೆ ಪ್ರಗತಿ ದೊರೆಯುತ್ತದೆ. ಹಣಕಾಸಿನ ತೊಂದರೆ ಕಡಿಮೆ ಆಗಲಿದೆ. ಉದ್ಯೋಗದಲ್ಲಿ ಧನಾತ್ಮಕವಾದ ಚಿಂತನೆ ಮತ್ತು ಬದಲಾವಣೆಗಳು ಕಂಡುಬರಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯಲು ಯತ್ನಿಸುವಿರಿ. ಆರಂಭಿಸುವ ಕಾರ್ಯಗಳನ್ನು ಶಾಂತ ಚಿತ್ತದಿಂದ ಪೂರ್ಣಗೊಳಿಸುವಿರಿ. ವಿರೋಧಿಗಳು ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನೀವು ಉದ್ಯಮಿಯಾಗಿದ್ದಲ್ಲಿ ಉನ್ನತ ಯಶಸ್ಸನ್ನು ಗಳಿಸುವಿರಿ. ವಿದೇಶದಲ್ಲಿ ಅಧ್ಯಯನ ಮುಂದುವರೆಸುವ ಆಸೆ ಇದ್ದವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ದಂಪತಿಗಳ ನಡುವೆ ಅನಗತ್ಯ ವಾದ ವಿವಾದಗಳು ಇರಲಿವೆ. ವಿವಾಹದ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಅನಿವಾರ್ಯ ಎಂದರೂ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತ ಧನಲಾಭ ಇರುತ್ತದೆ. ದೊರೆವ ಆದಾಯದಲ್ಲಿಯೇ ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ಆಪತ್ಕಾಲದಲ್ಲಿ ಆತ್ಮೀಯರ ಮಾರ್ಗದರ್ಶನ ದೊರೆಯುತ್ತದೆ. ಕೈಕಾಲುಗಳಲ್ಲಿ ಊತವು ಕಾಣುತ್ತದೆ. ಕುಟುಂಬದ ಹಿರಿಯರು ನಿಮ್ಮನ್ನು ಕಾಣಲು ಆಗಮಿಸಲ್ಲಿದ್ದಾರೆ. ಸಾಕುಪ್ರಾಣಿಗಳ ಮೇಲೆ ವಿಶೇಷ ಅಕ್ಕರೆ ತೋರುವಿರಿ
ವೃಷಭ ರಾಶಿ
ನಿಮ್ಮ ಮನಸ್ಸಿನ ಆಸೆ ಆಕಾಂಕ್ಷಿಗಳು ಕೈಗೂಡುತ್ತವೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶವನ್ನು ಪಡೆಯುವಿರಿ. ಹಠದ ಸ್ವಭಾವವನ್ನು ಬಿಟ್ಟರೆ ನಿಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಗಳು ಉಂಟಾಗುತ್ತವೆ. ಸದಾ ಕಾಲ ಧನಾತ್ಮಕ ಚಿಂತನೆಗಳನ್ನು ಮಾಡುವಿರಿ. ನಿಮ್ಮದಲ್ಲದ ವಿಚಾರಗಳಲ್ಲಿ ಪಾಲ್ಗೊಳ್ಳುವುದಿಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗುತ್ತಾರೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಮನೆ ಮಾಡಿರುತ್ತವೆ. ಕುಟುಂಬದ ಹಿರಿಯರ ನಡುವೆ ಅಭಿಪ್ರಾಯಗಳಿರುತ್ತವೆ. ದಾಂಪತ್ಯ ಜೀವನದಲ್ಲಿ ಬೇಸರದ ಸನ್ನಿವೇಶ ಎದುರಾಗಲಿದೆ. ಆದಾಯದ ತೊಂದರೆ ಇರುವುದಿಲ್ಲ. ಆದರೆ ಅನಿರೀಕ್ಷಿತ ಖರ್ಚು ವೆಚ್ಚಗಳು ನಿಮ್ಮ ಮನಸ್ಸನ್ನು ಬೇಸರಗೊಳಿಸುತ್ತದೆ. ಕಣ್ಣಿಗೆ ಸಂಬಂಧಿಸಿದ ದೋಷ ಉಂಟಾಗುತ್ತದೆ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ತೀರ್ಮಾನಗಳು ಯಶಸ್ಸನ್ನು ನೀಡುತ್ತದೆ. ನಿಮಗೆ ಇಷ್ಟ ಎನಿಸುವಂತಹ ಒಡವೆ ವಸ್ತುಗಳನ್ನು ಖರೀದಿಸುವಿರಿ. ಪ್ರಯತ್ನಪೂರ್ವಕವಾಗಿ ಪ್ರವಾಸದಿಂದ ದೂರ ಉಳಿಯುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ದೈಹಿಕ ವ್ಯಾಯಾಮವನ್ನು ಅವಲಂಬಿಸುವಿರಿ. ಆತ್ಮೀಯ ಸ್ನೇಹಿತರೊಬ್ಬರ ಜೊತೆಯಲ್ಲಿ ಜಗಳವಾಡುವಿರಿ.
ಮಿಥುನ ರಾಶಿ
ಉದ್ಯೋಗದಲ್ಲಿ ಬೇರೆಯವರ ಪಾತ್ರವು ಅಧಿಕವಾಗಿರುತ್ತದೆ. ಇದರಿಂದ ನಿಮ್ಮ ಪ್ರಗತಿಗೆ ಅಲ್ಪ ಪ್ರಮಾಣದ ಹಿನ್ನಡೆ ಉಂಟಾಗುತ್ತದೆ. ನಿಮ್ಮ ಹೊಸ ಯೋಜನೆಗಳಿಗೆ ಸಹೋದ್ಯೋಗಿಗಳಿಂದ ಸಹಕಾರವು ಲಭ್ಯವಾಗುತ್ತದೆ. ಹೆಚ್ಚಿನ ಪ್ರಯತ್ನಪಟ್ಟರೆ ನಿಮ್ಮ ಮನದ ಆಸೆಗಳು ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನಮಾನಗಳು ನಿಮಗೆ ದೊರೆಯಲಿವೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವವರೆಗೂ ನಿಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಅನಿರೀಕ್ಷಿತವಾದ ಖರ್ಚು ವೆಚ್ಚಗಳು ನಿಮ್ಮನ್ನು ಭಾವಿಸುತ್ತದೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣವು ಕಂಡುಬರುವುದಿಲ್ಲ.
ದಂಪತಿ ನಡುವೆ ಹಣಕಾಸಿನ ವಿಚಾರದಲ್ಲಿ ಅಸಮಾಧಾನವಿರುತ್ತದೆ. ಕೊರತೆಯಿಂದ ಮುಖ್ಯವಾದ ಕೆಲಸ ಒಂದನ್ನು ಮುಂದೂಡುವಿರಿ. ಉತ್ತಮ ಆದಾಯವಿದ್ದರೂ ಸಣ್ಣ ಪ್ರಮಾಣದ ಹಣವನ್ನು ಸಹ ಮಾಡಲು ವಿಫಲರಾಗುವಿರಿ. ನೀರು ಅಥವಾ ಆಹಾರ ಸೇವನೆಯಿಂದ ಸೋಂಕು ಉಂಟಾಗಬಹುದು. ನರ ಮತ್ತು ಸ್ನಾಯುವಿನ ಎಳೆತದ ತೊಂದರೆ ಇರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ರೀತಿಯ ಉದ್ಯೋಗವನ್ನು ಮಾಡುವಿರಿ. ತಂದೆಯವರ ಹಣದಲ್ಲಿನ ಪಾಲು ದೊರೆಯುತ್ತದೆ. ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ.
ಕಟಕ ರಾಶಿ
ತಕ್ಷಣ ಎನ್ನಲಾಗದೆ ಹೋದರು ಕ್ರಮೇಣವಾಗಿ ಯಶಸ್ಸನ್ನು ಕಾಣುವಿರಿ. ಅನಾವಶ್ಯಕವಾಗಿ ಎಲ್ಲರೊಂದಿಗೆ ವಾದ ವಿವಾದದಲ್ಲಿ ತೊಡಗುವಿರಿ. ದುಡುಕಿನಿಂದ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ. ತಪ್ಪು ನಿರ್ಧಾರಗಳಿಂದ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ಪಾಲುಗಾರಿಕೆಯ ವ್ಯಾಪಾರ ಇದ್ದಲ್ಲಿ ನಿಧಾನ ಗತಿಯ ಲಾಭವು ದೊರೆಯುತ್ತದೆ. ಸುಳ್ಳನ್ನು ಹೇಳಿ ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಜನರು ಸುತ್ತಮುತ್ತಲು ಇರುತ್ತಾರೆ. ಎಚ್ಚರಿಕೆ ವಹಿಸದಿದ್ದಲ್ಲಿ ಆಪತ್ತನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ತೀರ್ಮಾನಗಳಿಗೆ ದೊಡ್ಡ ಮನ್ನಣೆ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಇರುವುದಿಲ್ಲ. ಆದರೆ ಪಾಲುಗಾರಿಕೆಯ ವ್ಯಾಪಾರವಿದ್ದಲ್ಲಿ ಎಚ್ಚರಿಕೆ ವಹಿಸಬೇಕು.
ಕುಟುಂಬದಲ್ಲಿ ಬಹು ದಿನಗಳಿಂದ ಇದ್ದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವಿರಿ. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ತುಂಬಿರುತ್ತದೆ. ಸಣ್ಣಪುಟ್ಟ ಕೆಲಸದಿಂದಲೂ ಹೆಚ್ಚಿನ ಲಾಭವನ್ನು ನಿರೀಕ್ಷಿಸುವಿರಿ. ದೈಹಿಕ ನಿಶಕ್ತಿಯು ಕ್ರಮೇಣವಾಗಿ ಮರೆಯಾಗುವುದು. ಉತ್ತಮ ಆರೋಗ್ಯ ಇರುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕ್ರಮೇಣವಾಗಿ ಹೊಸತನಕ್ಕೆ ಹೊಂದಿಕೊಂಡು ನಡೆಯುವಿರಿ. ವಿದ್ಯಾರ್ಥಿಗಳು ಆತಂಕದ ಮನೋಭಾವನೆಯಿಂದ ಹೊರ ಬಂದಲ್ಲಿ ಮಾತ್ರ ಉತ್ತಮ ಯಶಸ್ಸು ದೊರೆಯಲು ಸಾಧ್ಯ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ