ಆತ್ಮೀಯರ ಸಹಾಯದಿಂದ ಅವಿವಾಹಿತರಿಗೆ ಮದುವೆಯಾಗುತ್ತೆ; ಸಿಂಹ ಸೇರಿ 4 ರಾಶಿಯವರ ಡಿಸೆಂಬರ್ ತಿಂಗಳ ಭವಿಷ್ಯ
ಡಿಸೆಂಬರ್ ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಸಿಂಗದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಡಿಸೆಂಬರ್ ತಿಂಗಳ ಭವಿಷ್ಯ ಇಲ್ಲಿದೆ.
ಡಿಸೆಂಬರ್ 2024 ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.
ಸಿಂಹ ರಾಶಿ
ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆತ್ಮೀಯರ ಸಹಾಯ ಸಹಕಾರವು ಸದಾಕಾಲ ದೊರೆಯುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಯು ಮನೆ ಮಾಡಿರುತ್ತದೆ. ಹಠದ ಗುಣದಿಂದಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಬೇರೆಯವರ ಸಲಹೆಯನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ನಿಮ್ಮ ನಿರೀಕ್ಷೆಯಂತೆ ಆದಾಯವು ದೊರೆಯದು. ಬೇರೆಯವರಿಂದ ಬರಬೇಕಿರುವ ಹಣವು ಕಂತಿನ ರೂಪದಲ್ಲಿ ನಿಮ್ಮ ಕೈ ಸೇರಲಿದೆ. ಮನದಲ್ಲಿ ಬೇಸರದ ವಾತಾವರಣ ಇರುತ್ತದೆ. ಕಠಿಣವಾದ ಕೆಲಸ ಕಾರ್ಯಗಳನ್ನು ಸುಲಭವಾಗಿ ಕಾರ್ಯಗತಗೊಳ್ಳುತ್ತದೆ. ನಿಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಅನುಬಂಧ ಇರುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದ ಪ್ರಯತ್ನಿದಿಂದ ಕಾರ್ಯ ಸಾಧಿಸುವಿರಿ.
ಕುಟುಂಬದಲ್ಲಿ ಅನಾವಶ್ಯಕವಾದ ವಿಚಾರಗಳು ಉಂಟಾಗಲಿವೆ. ಬಂಧು ಬಳಗದವರಿಂದ ದೂರ ಉಳಿಯುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಅವಿವಾಹಿತರಿಗೆ ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ, ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತಾರೆ. ಯಾವುದೇ ವಿಚಾರವನ್ನು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಳ್ಳುವಿರಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಸುಲಭವಾಗಿ ಹಂಚಿಕೊಳ್ಳುವುದಿಲ್ಲ.
ಕನ್ಯಾ ರಾಶಿ
ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುವುದಿಲ್ಲ. ಗುರು ಹಿರಿಯರ ಸಹಾಯ, ಸಹಕಾರ ನಿಮಗೆ ದೊರೆಯುತ್ತದೆ. ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶವು ದೊರೆಯುತ್ತದೆ. ಉತ್ತಮ ಪ್ರಯತ್ನದಿಂದ ಮಾತ್ರ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಮಹಿಳೆಯರು ಉದ್ಯಮಿಗಳಾಗಿದ್ದಲ್ಲಿ ಯಶಸ್ಸನ್ನು ಗಳಿಸಬಹುದು. ಮನಸ್ಸಿನಲ್ಲಿ ಯಾವುದೋ ಒಂದು ರೀತಿಯ ಚಿಂತೆಯು ಮನೆ ಮಾಡಿರುತ್ತದೆ. ಸ್ನೇಹಿತರ ಜೊತೆ ಇರುವ ಒಮ್ಮತವು ಸಮಸ್ಯೆಗಳನ್ನು ದೂರ ಮಾಡುತ್ತದೆ.
ವೈವಾಹಿತ ಜೀವನದಲ್ಲಿ ಪ್ರೀತಿ ವಿಶ್ವಾಸವು ತುಂಬಿರುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಜೀರ್ಣಕ್ರಿಯೆಯ ದೋಷವು ನಿಮ್ಮನ್ನು ಕಾಡುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಿರೀಕ್ಷಿತ ಲಾಭವು ದೊರೆಯುತ್ತದೆ. ಹೊಸ ವಾಹನವನ್ನು ಕೊಳ್ಳುವ ಆಸೆ ಈಡೇರಲಿದೆ. ಮಕ್ಕಳ ಸಲುವಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ನವವಿವಾಹಿತರಿಗೆ ಸಂತಾನ ಲಾಭವಿದೆ. ಯಾತ್ರಾ ಸ್ಥಳಕ್ಕೆ ಎಲ್ಲರೊಂದಿಗೆ ಭೇಟಿ ನೀಡುವಿರಿ.
ತುಲಾ ರಾಶಿ
ಹಳೆಯ ವಿಚಾರಗಳನ್ನು ಮರೆತು ಹೊಸ ನಿರೀಕ್ಷೆಯೊಂದಿಗೆ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರುತ್ತದೆ. ಸಣ್ಣಪುಟ್ಟ ವಿಚಾರವಾದರೂ ಅತಿ ಉತ್ಸಾಹದಿಂದ ಕೆಲಸ ನಿರ್ವಹಿಸುವಿರಿ. ಕಠಿಣ ಪರಿಶ್ರಮದ ನಡುವೆಯೂ ವಿದ್ಯಾರ್ಥಿಗಳು ಮಧ್ಯಮ ಗತಿಯ ಫಲಿತಾಂಶವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಕೆಲಸದ ಒತ್ತಡದ ಕಾರಣ ಎದುರಾಗುವ ಸವಾಲುಗಳನ್ನು ಗೆಲ್ಲಲು ಸಾಧ್ಯವಾಗದು. ಬೇರೆಯವರ ಸಹಾಯ ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
ಷೇರು ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸೋದರದ ಜೊತೆಯಲ್ಲಿ ಅನಾವಶ್ಯಕ ವಾದ-ವಿವಾದ ಇರುತ್ತದೆ. ಕುಟುಂಬದಲ್ಲಿ ಹಣಕಾಸಿನ ವಿಚಾರವಾಗಿ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ದಂಪತಿ ನಡುವೆ ಉತ್ತಮ ಅನುಬಂಧ ಕಂಡು ಬರುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಮೂಗು ಅಥವಾ ಕಣ್ಣಿನ ತೊಂದರೆ ನಿಮ್ಮನ್ನು ಕಾಡುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಆತ್ಮೀಯರ ಮನೆಗೆ ತೆರಳುವಿರಿ. ಮನರಂಜನೆಗಾಗಿ ಹೆಚ್ಚಿನ ಹಣವು ವೆಚ್ಚವಾಗುತ್ತದೆ. ಆತುರದ ನಿರ್ಧಾರಗಳು ನಿಮ್ಮ ಜೀವನದ ಹಾದಿಯನ್ನು ಬದಲಿಸುವಂತೆ ಮಾಡುತ್ತದೆ.
ವೃಶ್ಚಿಕ ರಾಶಿ
ಆತ್ಮೀಯರ ಸಹಾಯವಿಲ್ಲದೆ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡುವಲ್ಲಿ ವಿಫಲರಾಗುವಿರಿ. ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಹಠದಗುಣದಿಂದಾಗಿ ಬಂಧು ಬಳಗದವರು ನಿಮ್ಮಿಂದ ದೂರ ಉಳಿಯಲು ಬಯಸುತ್ತಾರೆ. ನಿಮ್ಮಲ್ಲಿರುವ ಬುದ್ಧಿಶಕ್ತಿಗೆ ಸವಾಲೆನಿಸುವ ಕೆಲಸ ಕಾರ್ಯಗಳು ದೊರೆಯುವುದಿಲ್ಲ. ನಿಮ್ಮ ಮನಸ್ಸನ್ನು ಗೆದ್ದವರ ಜೀವನದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವಿರಿ. ಮಕ್ಕಳಿಗೆ ಅನಾರೋಗ್ಯವಿರುತ್ತದೆ. ವಿದ್ಯಾರ್ಥಿಗಳು ಭಯದ ವಾತಾವರಣದಿಂದ ಮುಕ್ತಾರದಲ್ಲಿ ಮಾತ್ರ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಒಮ್ಮೆ ತೀರ್ಮಾನಿಸಿದ ವಿಚಾರವನ್ನು ಬದಲಾಯಿಸುವುದಿಲ್ಲ. ಅತಿಯಾಗಿ ಕೋಪಗೊಳ್ಳುವಿರಿ.
ಸೋಲುವ ವೇಳೆಯಲ್ಲಿ ಅನಾವಶ್ಯಕ ವಾದದಲ್ಲಿ ತೊಡಗುವಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಬಾಳಸಂಗಾತಿ ಮತ್ತು ಮಕ್ಕಳ ಮೇಲೆ ಹೆಚ್ಚಿನ ನಂಬಿಕೆಯನ್ನು ಹೊಂದಿರುವಿರಿ. ನಿಮ್ಮ ಮನಸ್ಸಿಗೆ ಒಪ್ಪುವ ಜನರೊಂದಿಗೆ ವಿವಾಹ ಆಗುವಿರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಮೂಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರುವುದು ಬಲುಮುಖ್ಯ. ನಿಮ್ಮ ಕೆಲಸ ಕಾರ್ಯಗಳನ್ನು ಪೂರೈಸದೆ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಿಲ್ಲ. ಸಂಗೀತ ನಾಟ್ಯಬಲ್ಲ ಕಲಾವಿದರಿಗೆ ವಿಶೇಷ ಅವಕಾಶಗಳು ದೊರೆಯುತ್ತವೆ. ನಿಮಗೆ ಅನುಕೂಲಕರವಾದಂತಹ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡುವಿರಿ. ಬುದ್ಧಿವಂತಿಕೆಯಿಂದ ಬೇರೆಯವರ ಮೂಲಕ ಕೆಲಸ ಸಾಧಿಸುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ